ಬೆಂಗಳೂರು: ಕ್ರಿಕೆಟ್ ಪ್ರಿಯರು ಬಹುನಿರೀಕ್ಷೆಯಿಂದ ಎದುರು ನೋಡುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಆರಂಭಕ್ಕೆ ಇನ್ನು ಕೇವಲ ಎರಡು ವಾರಗಳ ಸಮಯ ಮಾತ್ರವೇ ಬಾಕಿಯಿದೆ. ಈ ಬಾರಿ ಮೊತ್ತ ಮೊದಲ ಬಾರಿ ಭಾರತ ಟೂರ್ನಿಯ ಸಂಪೂರ್ಣ ಆತಿಥ್ಯ ವಹಿಸಿಕೊಂಡಿದ್ದು, ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆಯಲಿರುವ ಟೂರ್ನಿಯಲ್ಲಿ ಜಗತ್ತಿನ 10 ಶ್ರೇಷ್ಠ ತಂಡಗಳು ವಿಶ್ವಕಪ್ ಸಲುವಾಗಿ ಕಾದಾಟ ನಡೆಸಲಿವೆ.
ಉದ್ಘಾಟನಾ ಪಂದ್ಯದಲ್ಲಿ ಕಳೆದ ಬಾರಿಯ ಫೈನಲಿಸ್ಟ್ಸ್ ಇಂಗ್ಲೆಂಡ್ (ಚಾಂಪಿಯನ್ಸ್) ಮತ್ತು ನ್ಯೂಜಿಲೆಂಡ್ (ರನ್ನರ್ಸ್‌ಅಪ್) ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕಾದಾಟ ನಡೆಸಲಿವೆ, ಆತಿಥೇಯ ಭಾರತ ತಂಡ ಆಸ್ಟ್ರೇಲಿಯಾ ಎದುರು ಅ.8ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಪೈಪೋಟಿ ನಡೆಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
ಈವರೆಗೆ ಒಟ್ಟು 12 ಆವೃತ್ತಿಗಳು ನಡೆದಿವೆ
1975ರಲ್ಲಿ ಏಕದಿನ ಕ್ರಿಕೆಟ್‌ನ ಮೊತ್ತ ಮೊದಲ ವಿಶ್ವಕಪ್ ಟೂರ್ನಿ ಕ್ರಿಕೆಟ್ ಜನಕರ ನಾಡು ಇಂಗ್ಲೆಂಡ್‌ನಲ್ಲಿ ಆಯೋಜನೆಯಾಯಿತು. ಆಗ ಏಕದಿನ ಕ್ರಿಕೆಟ್ ಪಂದ್ಯಗಳನ್ನು ತಲಾ 60 ಓವರ್‌ಗಳೊಂದಿಗೆ ಆಡಲಾಗುತ್ತಿತ್ತು. ಮೊದಲ ಮೂರು ಆವೃತ್ತಿಗಳಿಗೆ ಇಂಗ್ಲೆಂಡ್ ಆತಿಥ್ಯ ವಹಿಸಿತ್ತು. 1987ರಲ್ಲಿ ಮೊದಲ ಬಾರಿ ಇಂಗ್ಲೆಂಡ್‌ನಿಂದ ಆಚೆ ಟೂರ್ನಿ ನಡೆಸಲಾಯಿತು.
ಇಂಗ್ಲೆಂಡ್, ಪಾಕಿಸ್ತಾನ ಮತ್ತು ಭಾರತದ ಜಂಟಿ ಆತಿಥ್ಯದಲ್ಲಿ ನಾಲ್ಕನೇ ಆವೃತ್ತಿಯ ವಿಶ್ವಕಪ್ ನಡೆಯಿತು. ಇದೇ ಆವೃತ್ತಿಯಲ್ಲಿ ಓವರ್‌ಗಳನ್ನು 50 ಓವರ್‌ಗಳಿಗೆ ಇಳಿಸಲಾಯಿತು. ಅಂದಿನಿಂದ ಇಂದಿನವರೆಗೆ 50 ಓವರ್‌ಗಳ ವಿಶ್ವಕಪ್ ಟೂರ್ನಿಯನ್ನು ಪ್ರತಿ 4 ವರ್ಷಗಳಿಗೆ ಒಮ್ಮೆ ನಡೆಸುತ್ತಾ ಬರಲಾಗಿದೆ.
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ಅತ್ಯಂತ ಯಶಸ್ವಿ ತಂಡವಾಗಿದೆ. 1987ರಲ್ಲಿ ಮೊದಲ ಬಾರಿ ಆಲನ್ ಬಾರ್ಡರ್ ಸಾರಥ್ಯದಲ್ಲಿ ಟ್ರೋಫಿ ಗೆದ್ದ ಆಸ್ಟ್ರೇಲಿಯಾ ತಂಡ, 1999ರಿಂದ 2007ರವರೆಗೆ ವಿಶ್ವಕಪ್ ಗೆಲುವಿಮ ಹ್ಯಾಟ್ರಿಕ್ ಸಾಧನೆ ಮೆರೆದು ವಿಶ್ವ ದಾಖಲೆ ನಿರ್ಮಿಸಿತು. ನಂತರ 2015ರಲ್ಲಿ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದ ಜಂಟಿ ಆತಿಥ್ಯದಲ್ಲಿ ವಿಶ್ವಕಪ್ ನಡೆದಾಗ ಮನೆಯಂಗಣದಲ್ಲಿ ಟ್ರೋಫಿ ಗೆದ್ದು ಬೀಗುವ ಒಟ್ಟಾರೆ 5 ಬಾರಿ ಚಾಂಪಿಯನ್ಸ್ ಪಟ್ಟ ಗೆಲ್ಲುವ ಮೂಲಕ ಅತ್ಯಂತ ಯಶ್ವಿ ತಂಡ ಎನಿಸಿಕೊಂಡಿದೆ.ಬೇರೆ ಯಾವ ತಂಡಗಳೂ ಕೂಡ 2ಕ್ಕಿಂತ ಹೆಚ್ಚು ಬಾರಿ ಟ್ರೋಫಿ ಗೆದ್ದಿಲ್ಲ.
1975 – ಆಸ್ಟ್ರೇಲಿಯಾ vs ವೆಸ್ಟ್ ಇಂಡೀಸ್, ವಿಂಡೀಸ್‌ಗೆ 17 ರನ್ ಜಯ
1979 – ಇಂಗ್ಲೆಂಡ್ vs ವೆಸ್ಟ್ ಇಂಡೀಸ್, ವಿಂಡೀಸ್‌ಗೆ 92 ರನ್ ಗೆಲುವು
1983 – ವೆಸ್ಟ್ ಇಂಡೀಸ್ vs ಭಾರತ, ಭಾರತಕ್ಕೆ 43 ರನ್ ಜಯ.
1987 – ಆಸ್ಟ್ರೇಲಿಯಾ vs ಪಾಕಿಸ್ತಾನ, ಆಸ್ಟ್ರೇಲಿಯಾಗೆ 7 ರನ್ ಗೆಲುವು
1992 – ಪಾಕಿಸ್ತಾನ vs ಇಂಗ್ಲೆಂಡ್, ಪಾಕಿಸ್ತಾನಕ್ಕೆ 22 ರನ್ ಜಯ
1996 – ಶ್ರೀಲಂಕಾ vs ಆಸ್ಟ್ರೇಲಿಯಾ, ಶ್ರೀಲಂಕಾಕ್ಕೆ 7 ವಿಕೆಟ್ ಗೆಲುವು
1999 – ಆಸ್ಟ್ರೇಲಿಯಾ vs ಪಾಕಿಸ್ತಾನ, ಆಸ್ಟ್ರೇಲಿಯಾಗೆ 8 ವಿಕೆಟ್ ಜಯ
2003 – ಆಸ್ಟ್ರೇಲಿಯಾ vs ಭಾರತ, ಆಸ್ಟ್ರೇಲಿಯಾಗೆ 125 ರನ್ ಗೆಲುವು
2007 – ಆಸ್ಟ್ರೇಲಿಯಾ vs ಶ್ರೀಲಂಕಾ, ಆಸ್ಟ್ರೇಲಿಯಾಗೆ 53 ರನ್ ಜಯ
2011 – ಭಾರತ vs ಶ್ರೀಲಂಕಾ, ಭಾರತಕ್ಕೆ 6 ವಿಕೆಟ್ ಗೆಲುವು
2015 – ಆಸ್ಟ್ರೇಲಿಯಾ vs ನ್ಯೂಜಿಲೆಂಡ್, ಆಸ್ಟ್ರೇಲಿಯಾಗೆ 7 ವಿಕೆಟ್ ಜಯ
2019 – ಇಂಗ್ಲೆಂಡ್ vs ನ್ಯೂಜಿಲೆಂಡ್, ಬೌಂಡರಿ ಎಣಿಕೆಯಲ್ಲಿ ಇಂಗ್ಲೆಂಡ್ ಗೆದ್ದಿತು
ವಿಶ್ವಕಪ್ ಗೆದ್ದಿರುವ ತಂಡಗಳು
ಆಸ್ಟ್ರೇಲಿಯಾ – 5 ಬಾರಿ ಚಾಂಪಿಯನ್ಸ್ (1987, 1999, 2003, 2007, 2015), 2 ಬಾರಿ ರನ್ನರ್ಸ್‌ಅಪ್ (1975, 1996).
ಭಾರತ – 2 ಬಾರಿ ಚಾಂಪಿಯನ್ಸ್ (1983, 2011), 1 ಬಾರಿ ರನ್ನರ್ಸ್‌ಅಪ್ (2003).
ವೆಸ್ಟ್ ಇಂಡೀಸ್ – 2 ಬಾರಿ ಚಾಂಪಿಯನ್ಸ್ (1975, 1979), 1 ಬಾರಿ ರನ್ನರ್ಸ್‌ಅಪ್ (1983).
ಇಂಗ್ಲೆಂಡ್ – 1 ಬಾರಿ ಚಾಂಪಿಯನ್ಸ್ (2019), 3 ಬಾರಿ ರನ್ನರ್ಸ್‌ಅಪ್ (1979, 1987, 1992).
ಪಾಕಿಸ್ತಾನ – 1 ಬಾರಿ ಚಾಂಪಿಯನ್ಸ್ (1992), 1 ಬಾರಿ ರನ್ನರ್ಸ್‌ಅಪ್ (1999).
ಶ್ರೀಲಂಕಾ – 1 ಬಾರಿ ಚಾಂಪಿಯನ್ಸ್ (1996), 2 ಬಾರಿ ರನ್ನರ್ಸ್ ಅಪ್ (2007, 2011)
ಬೆಂಗಳೂರು: ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ ಭಾಷೆ ಕಲಿಸಬೇಕು. ಇಲ್ಲದೇ ಹೋದರೆ ಅಂತಹ ಶಾಲೆಗಳ ಮೇಲೆ ಕ್ರಮ…
ಹನೂರು: ತಾಲೂಕಿನ ಮಿಣ್ಯಂ ಗ್ರಾಮದಿಂದ ಹನೂರಿಗೆ ಆಗಮಿಸುತ್ತಿದ್ದ ಪ್ರಯಾಣಿಕರಿಗೆ ಅರಣ್ಯ ವ್ಯಾಪ್ತಿಯಲ್ಲಿ ಹುಲಿರಾಯ ದರ್ಶನ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ…
ಬೆಳಗಾವಿ: ಆದಷ್ಟು ಬೇಗ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಾಗುತ್ತದೆ ಎಂದು ಸಚಿವ ರಹೀಂ ಖಾನ್ ತಿಳಿಸಿದರು. ವಿಧಾನಪರಿಷತ್ ಕಲಾಪದಲ್ಲಿ…
ಮಂಡ್ಯ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ಮಂಡ್ಯ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರು ಅದ್ಧೂರಿಯಾಗಿ ಆಚರಣೆ ಮಾಡಿದರು. ಮದ್ದೂರಿನಲ್ಲಿ ಮಾಜಿ…
ಬೆಳಗಾವಿ: ಕೋಳಿ ಮೊಟ್ಟೆ ಸೇವಿಸಿದರೆ ಕ್ಯಾನ್ಸರ್ ಬರುವ ವದಂತಿ ಎಲ್ಲೆಡೆ ಹಬ್ಬಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ…
ಮಳವಳ್ಳಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಮಳವಳ್ಳಿಯಲ್ಲಿ ನಡೆಯಲಿರುವ ಸುತ್ತೂರಿನ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವ ಯೋಗಿಗಳರವರ 1066ನೇ ಜಯಂತಿ…