ಕ್ರೀಡೆ

ಏಕದಿನ ಪಂದ್ಯ : 99 ರನ್‌ಗೆ ಸೌತ್ ಆಫ್ರಿಕಾವನ್ನು ಕ್ಲೀನ್‌ ಬೋಲ್ಡ್‌ ಮಾಡಿದ ಭಾರತ

ಹೊಸದಿಲ್ಲಿ: ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಏಕದಿನ ಸರಣಿ ಅಂತಿಮ ಘಟ್ಟ ತಲುಪಿದೆ. ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದ ಫಲಿತಾಂಶ ಸರಣಿ ಯಾರಿಗೆ ಅನ್ನೋದು ನಿರ್ಧರಿಸಲಿದೆ. ಈ ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾ ಅದ್ಭುತ ಬೌಲಿಂಗ್ ದಾಳಿ ಸಂಘಟಿಸಿದೆ. ಇದರ ಪರಿಣಾಮ ಸೌತ್ ಆಫ್ರಿಕಾ ಕೇವಲ 99 ರನ್‌ಗೆ ಆಲೌಟ್ ಆಗಿದೆ. ಅಂತಿಮ ಪಂದ್ಯದಲ್ಲಿ ಬೃಹತ್ ಮೊತ್ತ ಪೇರಿಸಿ ಟೀಂ ಇಂಡಿಯಾವನ್ನು ಕಟ್ಟಿಹಾಕುವ ಲೆಕ್ಕಾಚಾರದಲ್ಲಿದ್ದ ಸೌತ್ ಆಫ್ರಿಕಾಗೆ ಟೀಂ ಇಂಡಿಯಾ ಬೌಲರ್‌ಗಳು ಶಾಕ್ ನೀಡಿದ್ದಾರೆ. ಆರಂಭದಲ್ಲಿ ವಾಶಿಂಗ್ಟನ ಸುಂದರ್ ಹಾಗೂ ಮೊಹಮ್ಮದ್ ಸಿರಾಜ್ ದಾಳಿ ಆರಂಭಿಸಿದರೆ, ಬಳಿಕ ಕುಲ್ದೀಪ್ ಯಾದವ್ ಹಾಗೂ ಶಹಬಾಜ್ ಅಹಮ್ಮದ್ ದಾಳಿಗೆ ಸೌತ್ ಆಫ್ರಿಕಾ ಪರದಾಡಿತು. ಸೌತ್ ಆಫ್ರಿಕಾ ಏಕದಿನದಲ್ಲಿ ಸಿಡಿಸಿದ ನಾಲ್ಕನೇ ಅತೀ ಕಡಿಮೆ ಮೊತ್ತ ಅನ್ನೋ ಅಪಖ್ಯಾತಿಗೆ ಸೌತ್ ಆಫ್ರಿಕಾ ಗುರಿಯಾಗಿದೆ.

ಏಕದಿನದಲ್ಲಿ ಸೌತ್ ಆಫ್ರಿಕಾದ ಕಡಿಮೆ ಮೊತ್ತ
69 ರನ್ vs ಆಸ್ಟ್ರೇಲಿಯಾ,1993
83 ರನ್ vs ಇಂಗ್ಲೆಡ್, 2008
117 ರನ್ vs ಭಾರತ, 1999
83 ರನ್ vs ಇಂಗ್ಲೆಂಡ್, 2022
99 ರನ್ vs ಭಾರತ, 2022

ಟಾಸ್ ಸೋತು ಬ್ಯಾಟಿಂಗ್ ಇಳಿದ ಸೌತ್ ಆಫ್ರಿಕಾ 7ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡಿತು. ಆರಂಭಿಕ ಕ್ವಿಂಟನ್ ಡಿಕಾಕ್ 6 ರನ್ ಸಿಡಿಸಿ ಔಟಾದರು. ಜ್ಯಾನ್‌ಮನ್ ಮಲನ್ 15 ರನ್ ಸಿಡಿಸಿ ನಿರ್ಗಮಿಸಿದರು. ರೀಜಾ ಹೆಂಡ್ರಿಕ್ಸ್ 3 ರನ್ ಸಿಡಿಸಿ ಔಟಾದರೆ, ಆ್ಯಡಿನ್ ಮರ್ಕ್ರಮ್ 9 ರನ್ ಗಳಿಸಿ ನಿರ್ಗಮಿಸಿದರು. ಆದರೆ ಹೆನ್ರಿಚ್ ಕಾಲ್ಸೆನ್ ಹೋರಾಟ ನೀಡಿದರು.

ಹೆನ್ರಿಚ್‌ಗೆ ಯಾರಿಂದಲೂ ಉತ್ತಮ ಸಾಥ್ ಸಿಗಲಿಲ್ಲ. ನಾಯಕ ಡೇವಿಡ್ ಮಿಲ್ಲರ್ ಕೇವಲ 7ರನ್ ಸಿಡಿಸಿ ಔಟಾದರು. ಆ್ಯಂಡಿಲ್ ಫೆಲುಕ್‌ವಾಯೋ 5 ರನ್ ಸಿಡಿಸಿ ಔಟಾದರು. ಏಕಾಂಗಿ ಹೋರಾಟ ನೀಡಿದ ಹೆನ್ರಿಚ್ 34 ರನ್ ಕಾಣಿಕೆ ನೀಡಿದರು. ಮಾರ್ಕೋ ಜಾನ್ಸೆನ್ 14 ರನ್ ಸಿಡಿಸಿದರು. ಅಂತಿಮವಾಗಿ ಸೌತ್ ಆಫ್ರಿಕಾ 27.1 ಓವರ್‌ಗಳಲ್ಲಿ 99ರನ್ ಸಿಡಿಸಿ ಆಲೌಟ್ ಆಯಿತು.

ಟೀಂ ಇಂಡಿಯಾ ಪರ ಕುಲ್ದೀಪ್ ಯಾದವ್ 4 ವಿಕೆಟ್ ಕಬಳಿಸಿದರು. ಇನ್ನು ವಾಶಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್ ಹಾಗೂ ಶಹಬಾಜ್ ಅಹಮ್ಮದ್ ತಲಾ 2 ವಿಕೆಟ್ ಕಬಳಿಸಿದರು.

andolana

Recent Posts

ಶಿಥಿಲಾವಸ್ಥೆಯಲ್ಲಿರುವ ಆಸ್ಪತ್ರೆ ಕಟ್ಟಡಗಳು, ಕಾಂಪೌಂಡ್‌ಗಳ ಪರಿಶೀಲನೆಗೆ ಆದೇಶ: ಡಾ. ಶರಣ‌ ಪ್ರಕಾಶ್ ಪಾಟೀಲ್

ಬೆಂಗಳೂರು: ನಮ್ಮ ವೈದ್ಯಕೀಯ ಶಿಕ್ಷಣ ಇಲಾಖೆಯಡಿಯಲ್ಲಿ ಬರುವ ಎಲ್ಲಾ ಆಸ್ಪತ್ರೆಯ ಕಟ್ಟಡಗಳನ್ನು ಹಾಗೂ ಕಾಂಪೌಂಡ್‌ಗಳನ್ನು ಪರಿಶೀಲನೆ ನಡೆಸಿ ಅಧ್ಯಯನ ವರದಿ…

20 mins ago

ಹನೂರು: ಕಾಡುಹಂದಿ ದಾಳಿ: ಮುಸುಕಿನ ಜೋಳ ನಾಶ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಎಂಟಿ ದೊಡ್ಡಿ ಗ್ರಾಮದ ಜಮೀನೊಂದರಲ್ಲಿ ಬೆಳೆದಿದ್ದ ಮುಸುಕಿನ ಜೋಳವನ್ನು…

2 hours ago

ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ

ಕಲಬುರ್ಗಿ: ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದಲ್ಲಿ ಸಿಎಂ…

2 hours ago

ನಾಳೆ ಬುದ್ಧ ಪೂರ್ಣಿಮೆ: ಬೆಂಗಳೂರಿನಲ್ಲಿ ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ

ಬೆಂಗಳೂರು: ಬುದ್ಧ ಪೂರ್ಣಿಮೆಯ ಹಿನ್ನೆಲೆಯಲ್ಲಿ ನಾಳೆ(ಮೇ.1ರಂದು) ಬೆಂಗಳೂರು ನಗರದಾದ್ಯಂತ ಮಾಂಸ ಮಾರಾವನ್ನು ನಿಷೇಧಿಸಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಆದೇಶ ಹೊರಡಿಸಿದೆ.…

3 hours ago

ಪತ್ನಿಯನ್ನು ಕೊಡಲಿಯಿಂದ ಹೊಡೆದು ಸಾಯಿಸಿ ಪೊಲೀಸರಿಗೆ ಶರಣಾದ ಪತಿ

ಮೈಸೂರು: ಸಣ್ಣ ವಿಚಾರಕ್ಕೆ ಆರಂಭವಾದ  ಕೌಟುಂಬಿಕ ಕಲಹವೊಂದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮೈಸೂರಿನ ಹಳೆ ಕೆಸರೆ ಗ್ರಾಮದಲ್ಲಿ ನಡೆದಿದೆ. ಕೆಲಸ…

4 hours ago

ನಾಳೆಗೆ 60 ದಿನಗಳ ಡೆಡ್‌ಲೈನ್‌ ಅಂತ್ಯ: ಸಂಕಷ್ಟದಲ್ಲಿ ಡೊನಾಲ್ಡ್‌ ಟ್ರಂಪ್‌

ವಾಷಿಂಗ್ಟನ್‌: ಅಮೇರಿಕಾ ಮತ್ತು ಇರಾನ್‌ ನಡುವಿನ ಮಿಲಿಟರಿ ಸಂಘರ್ಷ ಈಗ ನಿರ್ಣಾಯಕ ಘಟ್ಟಕ್ಕೆ ಬಂದು ತಲುಪಿದೆ. ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌…

4 hours ago