ಕ್ರೀಡೆ

T20 worldcup: ಅಮೇರಿಕಾ ತಂಡದಲ್ಲಿ ಸ್ಥಾನ ಪಡೆದ ಕನ್ನಡಿಗ

ನವದೆಹಲಿ: ಇದೇ ಜೂನ್‌ 1 ರಿಂದ ಆರಂಭವಾಗಲಿರುವ ಟಿ20 worldcup ನಲ್ಲಿ ಸ್ಪರ್ಧಿಸಲಿರುವ ಅಮೇರಿಕಾ ತಂಡದಲ್ಲಿ ಕನ್ನಡಿಗನೊಬ್ಬ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡದ ಖ್ಯಾತ ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ ಗೆಳೆಯ, ಲೇಖಕ ಪ್ರದೀಪ್‌ ಕೆಂಜಿಗೆ ಅವರ ಪುತ್ರ ನಾಸ್ತುಷ್‌ ಕೆಂಜಿಗೆ ಅವರು ಅಮೇರಿಕಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಇವರನ್ನು ಒಳಗೊಂಡಂತೆ ಅಮೇರಿಕಾ ತಂಡ ನಾಯಕನೂ ಸಹಾ ಭಾರತೀಯರೇ ಆಗಿದ್ದಾರೆ. ವಿಶ್ವಕಪ್‌ನಲ್ಲಿ ಅಮೇರಿಕಾ ತಂಡದ ಸಾರಥ್ಯವನ್ನು ಮೊನಾಂಕ್‌ ಪಟೇಲ್‌ ವಹಿಸಲಿದ್ದಾರೆ. ಉಳಿದಂತೆ ಹರ್ಮೀತ್‌ ಸಿಂಗ್‌, ಜೆಸ್ಸಿ ಸಿಂಗ್‌, ಮಿಲೀಂದ್‌ ಕುಮಾರ್‌, ನಿತೀಶ್‌ ಕುಮಾರ್‌, ಸೌರಭ್‌ ನೇತ್ರಾವಲ್ಕರ್‌ ಎಲ್ಲರೂ ಭಾರತೀಯು ಮೂಲದವರೇ ಆಗಿದ್ದಾರೆ.

ನ್ಯೂಜಿಲೆಂಡ್‌ ಆಲ್‌ರೌಂಡರ್‌ಗೆ ಅಮೇರಿಕಾ ತಂಡದಲ್ಲಿ ಅವಕಾಶ: ನ್ಯೂಜಿಲೆಂಡ್‌ ಪರವಾಗಿ ಅಂತರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡಿದ್ದ ಕೋರಿ ಆಂಡರ್‌ಸನ್‌ ಅವರು ಈ ಬಾರಿ ಅಮೇರಿಕಾ ತಂಡವನ್ನು ಪ್ರತಿನಿಧಿಸಲಿದ್ದಾರೆ. ಆಂಡರ್ಸನ್‌ ಅಂತರಾಷ್ಟ್ರೀಯ ಟಿ20 ಯಲ್ಲಿ ಈವರೆಗೆ 33 ಪಂದ್ಯಗಳನ್ನು ಆಡಿದ್ದು, 568 ರನ್‌ ಗಳಿಸಿದ್ದಾರೆ.

ವಾಸು ವಿ ಹೊಂಗನೂರು

ಮೂಲತಃ ಚಾಮರಾಜನಗರ ಜಿಲ್ಲೆಯ ಹೊಂಗನೂರು ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಪದವಿಯಲ್ಲಿ ಪತ್ರಿಕೋದ್ಯಮ ವಿಭಾಗ ಆಯ್ದುಕೊಂಡು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2020ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಪತ್ರಿಕೋದ್ಯಮದಲ್ಲಿ 3 ವರ್ಷಗಳ ಅನುಭವವಿದ್ದು, ಕಳೆದ ಒಂದು ವರ್ಷದಿಂದ ಆಂದೋಲನ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ 6 ತಿಂಗಳಿನಿಂದ ಆಂದೋಲನ ಡಿಜಿಟಲ್‌ ವಿಭಾಗದಲ್ಲಿ ತೊಡಗಿಸಿಕೊಂಡಿದ್ದೇನೆ. ಕ್ರಿಕೆಟ್‌ ಮೇಲೆ ಎಲ್ಲಿಲ್ಲದ ಪ್ರೀತಿಯಿದ್ದು, ಪ್ರವಾಸ, ಇತಿಹಾಸ ಅಧ್ಯಯನ ಕಡೆ ಒಲವು ಹೆಚ್ಚು. ಪತ್ರಿಕಾ ರಂಗದಲ್ಲಿ ಕ್ರೀಡಾ ವಿಭಾಗದಲ್ಲಿ ಹೆಚ್ಚು ಆಸಕ್ತಿ ಇದೆ‌. ಮೊಬೈಲ್‌ ನಂಬರ್:‌ 9620318288

Recent Posts

ಪಂಚ ಗ್ಯಾರಂಟಿಯಿಂದ ಅಭಿವೃದ್ಧಿ ಆಗಿದೆಯೇ?: ತಜ್ಞರಿಂದ ಸಮೀಕ್ಷೆಗೆ ವಿಶ್ವನಾಥ್‌ ಒತ್ತಾಯ

ಮೈಸೂರು: ಪಂಚ ಗ್ಯಾರಂಟಿಗಳನ್ನು ನೀಡಿದ ನಂತರ ರಾಜ್ಯದಲ್ಲಿ ಅಭಿವೃದ್ಧಿ ಆಗಿದೆಯೋ ಇಲ್ಲವೋ ಎಂಬ ಬಗ್ಗೆ ಸಮೀಕ್ಷೆ ನಡೆಸಲು ತಜ್ಞರ ಸಮಿತಿ…

51 mins ago

3.40 ಕೋಟಿ ಹಣ ಎಟಿಎಂಗೆ ಹಾಕದೇ ವಂಚನೆ: ಸಿಎಂಎಸ್‌ ಕಂಪನಿಯ ಇಬ್ಬರ ವಿರುದ್ಧ ಎಫ್‌ಐಆರ್‌

ಹಾಸನ: ಎಟಿಎಂಗೆ ಹಣ ಹಾಕದೇ ವಂಚನೆ ಮಾಡಿದ್ದ ಸಿಎಂಎಸ್‌ ಕಂಪನಿಯ ಇಬ್ಬರು ಸಿಬ್ಬಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಬಡಾವಣೆ ಪೊಲೀಸ್‌…

1 hour ago

ಸ್ನೇಹಮಯಿ ಕೃಷ್ಣ ಬಂಧನದ ಹಿಂದೆ ಸಿಎಂ ಹಾಗೂ ದೊಡ್ಡ ಕೈವಾಡ: ಪ್ರಹ್ಲಾದ್‌ ಜೋಶಿ ಆರೋಪ

ಕಲಬುರ್ಗಿ: ಸಿಸಿಬಿಯಿಂದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಬಂಧನದ ಹಿಂದೆ ಸಿಎಂ ದೊಡ್ಡ ಕೈವಾಡವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌…

1 hour ago

ಕೋರ್ಟ್‌ ಆದೇಶದ ಬೆನ್ನಲ್ಲೇ ಎಲ್ಲಾ ದೇಶಗಳಿಗೆ ಶೇ.10ರಷ್ಟು ಸುಂಕ ಆದೇಶಕ್ಕೆ ಟ್ರಂಪ್‌ ಸಹಿ

ವಾಷಿಂಗ್ಟನ್:‌ ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಲ್ಲಾ ದೇಶಗಳ ಆಮದುಗಳ ಮೇಲೆ ತಾತ್ಕಾಲಿಕವಾಗಿ 10% ಸುಂಕವನ್ನು ಘೋಷಿಸಿದ್ದಾರೆ. ಸುಪ್ರೀಂಕೋರ್ಟ್‌ ರದ್ದುಗೊಳಿಸಿದ…

2 hours ago

ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಳ: ಸಾರ್ವಜನಿಕರಿಗೆ ಮಹತ್ವದ ಪ್ರಕಟಣೆ

ಬೆಂಗಳೂರು: ರಾಜ್ಯದಲ್ಲಿ ಬೇಸಿಗೆಯ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದ್ದು, ಬಿಸಿಲಿನ ಅಲೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ…

2 hours ago

ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಒಣಹವೆ ಮುಂದುವರಿದಿದ್ದು, ಕೆಲವು ಭಾಗದಲ್ಲಿ ಇಂದು ಸಂಜೆಯ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ…

2 hours ago