ನವದೆಹಲಿ: ಗುಜರಾತ್ನ ಅಹಮದಾಬಾದ್ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣ ಅಭಿಮಾನಿಗಳ ಹಾಜರಾತಿಯಿಂದ ವಿಶ್ವದಾಖಲೆ ಪುಟ ಸೇರಿದೆ. 2022ರ ಇಂಡಿಯನ್ ಪ್ರೀಮಿಯರ್ ಲೀಗ್ನ(ಐಪಿಎಲ್) ಫೈನಲ್ ಪಂದ್ಯದಲ್ಲಿ ಅತಿಹೆಚ್ಚು ಅಭಿಮಾನಿಗಳು ಕ್ರೀಡಾಂಗಣಕ್ಕೆ ಹಾಜರಾಗಿದ್ದು, ಇದು ಗಿನ್ನೆಸ್ ದಾಖಲೆಯಾಗಿದೆ.
ವಿಶ್ವದಲ್ಲಿಯೇ ಅತಿದೊಡ್ಡ ಕ್ರೀಡಾಂಗಣವೆಂದು ಗುರುತಿಸಿಕೊಂಡಿರುವ ಗುಜರಾತ್ನ ಅಹಮದಾಬಾದ್ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣ ಅಭಿಮಾನಿಗಳ ಹಾಜರಾತಿಯಿಂದ ಇದೀಗ ವಿಶ್ವದಾಖಲೆ ಪುಟ ಸೇರಿದ್ದು, ಮೇ 29 ರಂದು ನಡೆದ ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ಪಂದ್ಯ ನೋಡಲು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂಗೆ 101,566 ಮಂದಿ ಹಾಜರಾಗಿದ್ದರು. ಇದು ಟಿ20 ಕ್ರಿಕೆಟ್ನ ಇತಿಹಾಸದಲ್ಲೇ ಹಾಜರಾದ ಅತಿ ದೊಡ್ಡ ಅಭಿಮಾನಿಗಳ ಸಂಖ್ಯೆಯಾಗಿದೆ.ವಿಶ್ವದಾಖಲೆಗೆ ಸೇರಿದ ಮಾಹಿತಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಕಾರ್ಯದರ್ಶಿ ಜಯ್ ಶಾ ಅವರು ಪುರಸ್ಕಾರದ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದಾರೆ.
ನವದೆಹಲಿ: 13 ವರ್ಷಗಳ ಹಿಂದಿನ ಪ್ರಕರಣವೊಂದರಲ್ಲಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ದೆಹಲಿ ಪೊಲೀಸರು ನೋಟಿಸ್…
ಬೆಂಗಳೂರು: ದೀಪಾವಳಿ ಸಂಭ್ರಮದ ಬೆನ್ನಲ್ಲೇ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಹೆಚ್ಚಾಗಿದೆ. ನಗರದ ವಾಯು ಗುಣಮಟ್ಟ ಸೂಚ್ಯಂಕ, ಅಂದರೆ ಎಕ್ಯೂಐ, 186ಕ್ಕೆ ತಲುಪಿದೆ.…
ಬೆಂಗಳೂರು: ನಿಮ್ಮ ರೇಷನ್ ಕಾರ್ಡ್ಗೆ ಇನ್ನೂ ಇ-ಕೆವೈಸಿ ಮಾಡಿಸಿಲ್ವಾ? ಹಾಗಿದ್ದರೆ ಗಮನಿಸಿ. ಇ-ಕೆವೈಸಿ ಮಾಡಿಸಲು ಇಂದೇ ಕೊನೆಯ ದಿನ! ಈಗಾಗಲೇ…
ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇವಿಯ ಸಾರ್ವಜನಿಕ ದರ್ಶನಕ್ಕೆ ಇಂದು, ನವೆಂಬರ್ 10, ಕೊನೆಯ ದಿನ. ಕೊನೆಯ ದಿನವಾದ್ದರಿಂದ…
ಈ ದೀಪ ಪ್ರೀತಿಯ ರೂಪ ನಾನೊಂದು ದೀಪ ಹಚ್ಚುತ್ತೇನೆ ನಮ್ಮೊಳಗಿನ ಅಜ್ಞಾನ, ಅಹಂ ಅಂಧಕಾರವೆಲ್ಲಾ ಅಳಿದು, ಸುಜ್ಞಾನದ ಬೆಳಕು ಬೆಳಗಲಿಯೆಂದು…
೨೦೨೫-೨೬ ರ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಕೊಡಮಾಡುವ ಸ್ವಚ್ಛ ಸರ್ವೇಕ್ಷಣ್ ರಾಷ್ಟ್ರೀಯ ಪ್ರಶಸ್ತಿಗೆ ಮೈಸೂರು ಭಾಜನವಾಗಿರುವುದು…