ಬೆಂಗಳೂರು : ಮಹಾರಾಜ ಟ್ರೋಫಿ ಟಿ20 ಲೀಗ್ ನಲ್ಲಿ ಮೈಸೂರು ವಾರಿಯರ್ಸ್ ಮತ್ತೊಂದು ಗೆಲುವು ಸಾಧಿಸಿದೆ. ಪ್ರತಿಕೂಲ ಹವಾಮಾನದಿಂದಾಗಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಮೈಸೂರು ವಾರಿಯರ್ಸ್ ತಂಡವು 33 ರನ್ (ವಿಜೆಡಿ ವಿಧಾನ) ಗೆಲುವು ದಾಖಲಿಸಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮೈಸೂರು ವಾರಿಯರ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 185 ರನ್ ಕಲೆಹಾಕಿತು.
ಸಿಎ ಕಾರ್ತಿಕ್ (62) ಅರ್ಧ ಶತಕದಿಂದ ಬಲದಿಂದ ಮೈಸೂರು ಬೃಹತ್ ಮೊತ್ತ ಕಲೆಹಾಕಿತು. ಮತ್ತೊಂದೆಡೆ ಮನೋಜ್ ಭಾಂಡಗೆ (28) ಮತ್ತು ಜೆ ಸುಚಿತ್ (31) ತಂಡಕ್ಕೆ ಆಸರೆಯಾದರು. ಮೈಸೂರು ವಾರಿಯರ್ಸ್ 20 ಓವರ್‌ಗಳಲ್ಲಿ 185 ರನ್ ಕೆಲೆಹಾಕುವ ಮೂಲಕ ಬೆಂಗಳೂರಿಗೆ ಸ್ಪರ್ಧಾತ್ಮಕ ಮೊತ್ತವನ್ನು ನೀಡಿತು
ಬೆಂಗಳೂರು ಪರ ಶುಭಾಂಗ್ ಹೆಗ್ಡೆ (4/23) ಮತ್ತು ರಿಶಿ ಬೋಪಣ್ಣ (2/19) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಮೈಸೂರು ನೀಡಿದ 185 ರನ್ ಬೆನ್ನತ್ತಿದ ಬೆಂಗಳೂರು ನಾಯಕ ಮಯಾಂಕ್ ಅಗರ್ವಾಲ್ (2) ಬೇಗನೆ ಕಳೆದುಕೊಂಡಿತು. ಸೂರಜ್ ಅಹುಜಾ ಕೇವಲ 20 ಎಸೆತಗಳಲ್ಲಿ 31 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಬೇರಾರಿಂದಲೂ ನಿರೀಕ್ಷಿತ ಆಟ ಕಂಡು ಬರಲಿಲ್ಲ.
ಬೆಂಗಳೂರು 11.1 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 85 ರನ್‌ಗಳಿ ಸಂಕಷ್ಟಕ್ಕೆ ಸಿಲುಕಿತ್ತು. ಇದೇ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಮಳೆಯಿಂದಾಗಿ ಪಂದ್ಯ ರದ್ದಾಯಿತು, ವಿಜೆಡಿ ನಿಯಮದಡಿ ವಾರಿಯರ್ಸ್ 33 ರನ್‌ಗಳಿಂದ ಜಯ ಸಿಕ್ಕಿತು.
ಸಂಕ್ಷಿಪ್ತ ಸ್ಕೋರ್ :
ಮೈಸೂರು ವಾರಿಯರ್ಸ್: 20 ಓವರ್‌ಗಳಲ್ಲಿ 185/7 ಸಿಎ ಕಾರ್ತಿಕ್ 62(43), ಜಗದೀಶ ಸುಚಿತ್ 31*( 14), ಮನೋಜ್ ಭಾಂಡಗೆ 28(12) ಶುಭಾಂಗ್ ಹೆಗ್ಡೆ 4/23, ರಿಷಿ ಬೋಪಣ್ಣ 2/19, ಕುಮಾರ್ ಎಲ್ ಆರ್ 1/62
ಬೆಂಗಳೂರು ಬ್ಲಾಸ್ಟರ್ಸ್ : 11.1 ಓವರ್‌ಗಳಲ್ಲಿ 85/5, ಜಸ್ವಂತ್ ಆಚಾರ್ಯ 19(22), ಶುಭಾಂಗ್ ಹೆಗ್ಡೆ 13(8), ಸೂರಜ್ ಅಹುಜಾ 31(20), ಅಜಿತ್ ಕಾರ್ತಿಕ್ 2/16, ಜೆ ಸುಚಿತ್ 2/8, ಶ್ರೀಶಾ ಆಚಾರ್ 1/20
ಪಂದ್ಯ ಶ್ರೇಷ್ಠ : ಸಿಎ ಕಾರ್ತಿಕ್
ಭಾರತಕ್ಕೆ ಭೇಟಿ ನೀಡಿದ್ದ ರಷ್ಯಾ ದೇಶದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಅತ್ಯಂತ ಭವ್ಯ ರೀತಿಯಲ್ಲಿ ಸ್ವಾಗತ ನೀಡಿ, ಆ…
ಪಿಎಂ ಕುಸುಮ್ ಬಿ ಯೋಜನೆಯಡಿ ಸೋಲಾರ್ ಪಂಪ್ ಸೆಟ್‌ಗೆ ಶೇ.80 ಸಬ್ಸಿಡಿ ನೀಡಲಾಗುತ್ತಿದೆ. ಈ ಯೋಜನೆಯಲ್ಲಿ ನೀರಾವರಿಗೆ ಸಾಂಪ್ರದಾಯಿಕ ವಿದ್ಯುತ್…
ಶನಿವಾರ, ಭಾನುವಾರ, ಸೋಮವಾರವೂ ಬಲಿ; ಹುಲಿ ದಾಳಿ ಎಂದು ಬಿಸಲವಾಡಿ, ಸಾಗಡೆ ಗ್ರಾಮಗಳ ರೈತರ ಆರೋ ಚಾಮರಾಜನಗರ: ತಾಲ್ಲೂಕಿನ ಬಿಸಲವಾಡಿ…
ರಾಜ್ಯ ಸರ್ಕಾರದಿಂದ ಅನುದಾನ ವಿಳಂಬ; ಚಿಕಿತ್ಸೆಗಾಗಿ ಬೆಂಗಳೂರು, ಮೈಸೂರಿನ ಆಸ್ಪತ್ರೆಗೆ ಅಲೆಯುತ್ತಿರುವ ರೋಗಿಗಳು ಮಂಡ್ಯ: ಕ್ಯಾನ್ಸರ್ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ…
ಜೀಪ್ ವ್ಯವಸ್ಥೆ ಮಾಡುವಂತೆ ತಹಸಿಲ್ದಾರ್‌ಗೆ ಮನವಿ ಮಾಡಿದ ಬಿಇಒ ಹನೂರು: ಹನೂರು ಶೈಕ್ಷಣಿಕ ವಲಯದ ಪಚ್ಚೆದೊಡ್ಡಿ ಗ್ರಾಮದ ಶಾಲೆಗೆ ಕ್ಷೇತ್ರ…
ಮಂಜು ಕೋಟೆ ಪ್ರತಿನಿತ್ಯ ಅಧಿಕಾರಿಗಳ ಬಳಿ ಅಲೆದಾಡುತ್ತಿರುವ ನೌಕರರು; ಕುಟುಂಬ ನಿರ್ವಹಣೆಗೆ ಪರದಾಟ ಎಚ್.ಡಿ.ಕೋಟೆ: ಪಟ್ಟಣದ ಪುರಸಭೆಯ ಪೌರಕಾರ್ಮಿಕರು ಮತ್ತು…