ಮೈಸೂರು: ಮಹಾರಾಜ ಟ್ರೋಫಿ (ಕೆಎಸ್‌ಸಿಎ) ಟಿ20 2024ರ ಪಂದ್ಯಾವಳಿಗೆ ಎಲ್ಲಾ ಸಿದ್ದತೆಗಳು ಭರದಿಂದ ಸಾಗುತ್ತಿವೆ. ಇದೇ ಆಗಸ್ಟ್ 15 ರಿಂದ ಆರಂಭವಾಗಲಿರುವ ಮಹಾರಾಜ ಟ್ರೋಫಿ 2024ರ ಪಂದ್ಯಾವಳಿ ಆರಂಭಕ್ಕೂ ಮುನ್ನಾ ಇಂದು (ಶುಕ್ರವಾರ, ಆ.1) ನಗರದ ಮಾನಸ ಗಂಗೋತ್ರಿಯಲ್ಲಿನ ಗ್ಲೇಡ್ಸ್ ಮೈದಾನದಲ್ಲಿ ಮೈಸೂರು ವಾರಿಯರ್ಸ್ ತಂಡ ತನ್ನ ಅಭ್ಯಾಸ ಆರಂಭಿಸಿದೆ.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಗಸ್ಟ್ 15 ರಿಂದ ಸೆಪ್ಟೆಂಬರ್ 1 ವರೆಗೆ ಈ ಟೂರ್ನಿ ನಡೆಯಲಿದ್ದು, ಇದಕ್ಕಾಗಿ ಮೈಸೂರಿನಲ್ಲಿ ಸಮರಭ್ಯಾಸ ನಡೆಸುತ್ತಿದ್ದಾರೆ.
ಇಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ರ ವರೆಗೆ ಅಭ್ಯಾಸ ನಡೆಸಿದ ವಾರಿಯರ್ಸ್ ತಂಡ ಹೆಡ್ ಕೋಚ್ ಅನುಪಸ್ಥಿತಿಯಲ್ಲಿ ಅಭ್ಯಾಸ ನಡೆಸಿದ್ದಾರೆ. ಇನ್ನು ಅನುಭವಿ ಆಲ್ ರೌಂಡರ್ ಗೌತಮ್, ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಕಾರಣಾಂತರಗಳಿಂದ ಅಭ್ಯಾಸಕ್ಕೆ ಆಗಮಿಸಿಲ್ಲ.
ಈ ಪಂದ್ಯಾವಳಿಯಲ್ಲಿ ಮೈಸೂರು ವಾರಿಯರ್ಸ್ ತಂಡವು ಹುಬ್ಬಳ್ಳಿ ಟೈಗರ್ಸ್, ಬೆಂಗಳೂರು ಬ್ಲಾನ್ಸರ್ನ್, ಮಂಗಳೂರು ಡ್ರಾಗನ್ಸ್, ಗುಲ್ಬರ್ಗಾ ಮಿಸ್ಟಿಕ್ಸ್, ಮತ್ತು ಶಿವಮೊಗ್ಗ ಲಯನ್ಸ್ ಸೇರಿದಂತೆ ಐದು ತಂಡಗಳ ವಿರುದ್ಧ ಆಡಲಿದೆ.
ಮೈಸೂರು ವಾರಿಯರ್ಸ್ ತಂಡದ ಅಟಗಾರರ ಹೆಸರುಗಳು ಹೀಗಿವೆ:
1. ಕಾರ್ತಿಕ್.ಸಿ ಅಜಿತ್
2. ಕಾರ್ತಿಕ್.ಎಸ್.ಯು
3. ಕರುಣ್ ನಾಯರ್
4. ಸಮಿತ್ ದ್ರಾವಿಡ್
5. ಹರ್ಷಿಲ್ ಧರ್ಮನಿ
6. ಮನೋಜ್ ಭಾಂಡಗೆ
7. ಜಗದೀಶ ಸುಚಿತ್
8. ಗೌತಮ ಕೃಷ್ಣಪ್ಪ
9. ವಿದ್ಯಾಧರ ಪಾಟೀಲ
10. ವೆಂಕಟೇಶ ಎಂ
11. ಗೌತಮ ಮಿಶ್ರಾ
12. ಧನುಷ್ಯ ಗೌಡ
13. ದೀಪಕ್ ದೇವಾಡಿಗ
14. ಸುಮಿತ್ ಕುಮಾರ್
15. ಸ್ಮಯನ್ ಶ್ರೀವಾಸ್ತವ
16. ಜಾಸ್ಪರ್ ಇ ಜಿ
17. ಸರ್ಫರಾಜ್ ಅಶ್ರಫ್
18. ಪ್ರಸಿದ್ಧ ಕೃಷ್ಣ
ನವೀನ್ ಡಿಸೋಜ ಜಿಲ್ಲೆಯಲ್ಲಿ ಸು.೧೭೪,೧೧೪ ಕುಟುಂಬಗಳು, ಗಣತಿ ಕಾರ್ಯಕ್ಕೆ ಗುರುತು, ೭,೩೭೯ ಕುಟುಂಬಗಳಿಂದ ಸ್ವಯಂ ಗಣತಿ ಮಡಿಕೇರಿ: ನಮ್ಮ ಗಣತಿ,…
ಮಹೇಂದ್ರ ಹಸಗೂಲಿ ಗುಂಡ್ಲುಪೇಟೆಯಲ್ಲಿ ೩೫ರಿಂದ ೪೦ ಡಿಗ್ರಿ ಉಷ್ಣಾಂಶ, ಬಿಸಿಗಾಳಿಗೆ ಹೈರಾಣಾದ ಜನರು ಗುಂಡ್ಲುಪೇಟೆ: ಬೇಸಿಗೆಯ ಬಿಸಿಲಿನ ತಾಪ ದಿನೇದಿನೇ…
ಮಧುಕರ ಮಳವಳ್ಳಿ (ಈ ಲೇಖನಕ್ಕೆ ಕೃತಕ ಬುದ್ಧಿಮತ್ತೆಯ ಚಿತ್ರ ಬಳಸಲಾಗಿದೆ) ಹಬ್ಬಕ್ಕೆ ಯಾರಿಗೆ ತಾನೆ ಹೊಸ ಬಟ್ಟೆ ಇಷ್ಟ ಇಲ್ಲ…
ಭಾರತಿ ಬಿ.ವಿ. ಅವನೆದುರು ಮಾನ ತೆಗೆದ ಸೈಕಲ್ಲಿನ ಸಹವಾಸ ನನಗೆ ಮತ್ತೆ ಬೇಕೆನ್ನಿಸಲಿಲ್ಲ ನಾವೆಲ್ಲ ‘ನಟರಾಜ ಸರ್ವೀಸ್’ನಲ್ಲೇ ಬದುಕು ಕಳೆದವರು.…
ಶುಭಾ ಖಟಾವಕರ ಮ್ಹೆತ್ರಸ್ ನೇಪಾಳದ ಕನಸುಗಣ್ಣಿನ ಯುವಜನಾಂಗದ ಈ ಹೊಸ ಸರ್ಕಾರ ಈಗ ಇಟ್ಟಿರುವ ಹೆಜ್ಜೆಗಳು ಯಶಸ್ವಿಯಾದರೆ ದಕ್ಷಿಣ ಏಷ್ಯಾದಲ್ಲಿ…
ಪಂಪ ಪ್ರಶಸ್ತಿ ಪಡೆಯುತ್ತಿರುವ ಮಹಾದೇವರಿಗೆ ಎಲ್ಲಾ ಮನೆಗಳ ಜೋತಮ್ಮದೀರು ಹರಸಲಿ ರಾಜೇಂದ್ರ ಚೆನ್ನಿ ೧ ತಮ್ಮ ಒಟ್ಟು ಬರಹಗಳು ಇಷ್ಟು ಕಡಿಮೆ…