ಬೆಂಗಳೂರು: ಮಹಾರಾಜ ಟ್ರೋಫಿ (ಕೆಎಸ್‌ಸಿಎ) ಟಿ20 2024ರ ಪಂದ್ಯಾವಳಿಯಲ್ಲಿ ಆಡಲಿರುವ ಆಟಗಾರರ ಪಟ್ಟಿಯನ್ನು ಮೈಸೂರು ವಾರಿಯರ್ಸ್ ತಂಡ ಪ್ರಕಟಿಸಿದೆ. ಭಾರತದ ಪ್ರಮುಖ ಅಗರಬತ್ತಿ ತಯಾರಕರು ಮತ್ತು ಮೈಸೂರು ವಾರಿಯರ್ನನ ಮಾಲೀಕರಾಗಿರುವ ಎನ್‌ಆರ್ ಗ್ರೂಪ್, ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 2024ರಲ್ಲಿ ಮೈಸೂರು ವಾರಿಯರ್ಸ್ ತಂಡದ ಪರವಾಗಿ ಅಡಲು 18 ಅಟಗಾರರ ಜೊತೆ ಒಪ್ಪಂದ ಮಾಡಿಕೊಂಡಿದೆ.
ಚಿನ್ನಸ್ವಾಮಿ ಕ್ರೀಡಾಂಗಣದ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ಗುರುವಾರ (ಜು.25 ನಡೆದ ಹರಾಜು ಪ್ರಕ್ರಿಯೆಯಲ್ಲಿ ಆಟಗಾರರನ್ನು ಆಯ್ಕೆ ಮಾಡಲಾಗಿದ್ದು, ಈ ಆಟಗಾರರರು ಆಗಸ್ಟ್ 15 ರಿಂದ ಸೆಪ್ಟೆಂಬರ್ ರವರೆಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಮಹಾರಾಜ ಟ್ರೋಫಿಯ ಮೂರನೇ ಆವೃತ್ತಿಯಲ್ಲಿ ಮೈಸೂರು ತಂಡದ ಪರವಾಗಿ ಆಡಲಿದ್ದಾರೆ.
ಹರಾಜು ಪ್ರಕ್ರಿಯೆ ಬಳಿಕ ಮಾತನಾಡಿದ ಮೈಸೂರು ವಾರಿಯರ್ಸ್ ಮಾಲೀಕ ಅರ್ಜುನ್ ರಂಗ, “ಮಹಾರಾಜ ಟ್ರೋಫಿಯ ಮೂರನೇ ಆವೃತ್ತಿಯಲ್ಲಿ ಮೈಸೂರು ವಾರಿಯರ್ಸ್ ತಂಡದ ಪರವಾಗಿ ಆಡಲು ರಾಜ್ಯದ ಅತ್ಯುತ್ತಮ ಆಟಗಾರರನ್ನು ಆಯ್ಕೆ ಮಾಡಿರುವುದು ನಮಗೆ ಖುಷಿ ಕೊಟ್ಟಿದೆ. ಈ ವರ್ಷ ನಾವು ಪ್ರಶಸ್ತಿ ಗೆಲ್ಲುವ ನಂಬಿಕೆ ಇದೆ” ಎಂದು ಹೇಳಿದರು.
ಮೈಸೂರು ವಾರಿಯರ್ಸ್ ಮಾಲೀಕರು ಮತ್ತು ರಂಗ ಸನ್ಸ್ ಏರೋಸ್ಪೇಸ್ ಸಿಇಓ ಶ್ರೀ ಪವನ್ ರಂಗ ಮಾತನಾಡಿ, “ಆಯ್ಕೆಗೊಂಡಿರುವ ಆಟಗಾರರು ಎನ್‌ಆರ್ ಗ್ರೂಪ್ ಅಧೀನದ ಮೈಸೂರು ವಾರಿಯರ್ಸ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲಿದ್ದಾರೆ ಎಂಬ ಭರವಸೆ ನಮಗಿದೆ” ಎಂದು ಹೇಳಿದರು.
ಈ ಪಂದ್ಯಾವಳಿಯಲ್ಲಿ ಮೈಸೂರು ವಾರಿಯರ್ಸ್ ತಂಡವು ಹುಬ್ಬಳ್ಳಿ ಟೈಗರ್ಸ್, ಬೆಂಗಳೂರು ಬ್ಲಾನ್ಸರ್ನ್, ಮಂಗಳೂರು ಡ್ರಾಗನ್ಸ್, ಗುಲ್ಬರ್ಗಾ ಮಿಸ್ಟಿಕ್ಸ್, ಮತ್ತು ಶಿವಮೊಗ್ಗ ಲಯನ್ಸ್ ಸೇರಿದಂತೆ ಐದು ತಂಡಗಳ ವಿರುದ್ಧ ಆಡಲಿದೆ.
ಮೈಸೂರು ವಾರಿಯರ್ಸ್ ತಂಡದ ಅಟಗಾರರ ಹೆಸರುಗಳು ಹೀಗಿವೆ:
ಕ್ರಮ ಸಂಖ್ಯೆ
ಮೈಸೂರು ವಾರಿಯರ್ಸ್
1. ಕಾರ್ತಿಕ್.ಸಿ ಅಜಿತ್
2. ಕಾರ್ತಿಕ್.ಎಸ್.ಯು
3. ಕರುಣ್ ನಾಯರ್
4. ಸಮಿತ್ ದ್ರಾವಿಡ್
5. ಹರ್ಷಿಲ್ ಧರ್ಮನಿ
6. ಮನೋಜ್ ಭಾಂಡಗೆ
7. ಜಗದೀಶ ಸುಚಿತ್
8. ಗೌತಮ ಕೃಷ್ಣಪ್ಪ
9. ವಿದ್ಯಾಧರ ಪಾಟೀಲ
10. ವೆಂಕಟೇಶ ಎಂ
11. ಗೌತಮ ಮಿಶ್ರಾ
12. ಧನುಷ್ಯ ಗೌಡ
13. ದೀಪಕ್ ದೇವಾಡಿಗ
14. ಸುಮಿತ್ ಕುಮಾರ್
15. ಸ್ಮಯನ್ ಶ್ರೀವಾಸ್ತವ
16. ಜಾಸ್ಪರ್ ಇ ಜಿ
17. ಸರ್ಫರಾಜ್ ಅಶ್ರಫ್
18. ಪ್ರಸಿದ್ಧ ಕೃಷ್ಣ
ಕೋಲ್ಕತ್ತಾ : ಇಲ್ಲಿನ ವಿಮಾನ ನಿಲ್ದಾಣದಲ್ಲಿ ಫುಟ್ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ ಅವರನ್ನು ನೋಡಲು ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಸೇರಿದ್ದರು.…
ನ್ಯೂಯಾರ್ಕ್ : ಭಾರತದ ಮೇಲೆ ಡೊನಾಲ್ಡ್ ಟ್ರಂಪ್ ಹೇರಿರುವ ಶೇ.50 ಪ್ರತಿಸುಂಕವನ್ನು ಅಂತ್ಯಗೊಳಿಸಲು ಅಮೆರಿಕದ ಮೂವರು ಸಂಸದರು ನಿಲುವಳಿ ಮಂಡಿಸಿದ್ದಾರೆ.…
ಹಾಸನ : ಕರ್ತವ್ಯದ ವೇಳೆ ಲಾರಿ ಡಿಕ್ಕಿಯಾಗಿ KSRTC ಬಸ್‌ನ ಚೆಕ್ಕಿಂಗ್ ಇನ್ಸ್ಪೆಕ್ಟರ್ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಆಲೂರು…
ಶೇ.30ರಷ್ಟು ಉತ್ಪಾದನೆ ಕುಸಿತ ; ಉತ್ತರ ಕೊಡಗಿನ ಭಾಗದಲ್ಲಿ ಹೆಚ್ಚಿನ ಬೆಳೆ ನಷ್ಟ ನವೀನ್ ಡಿಸೋಜ ಮಡಿಕೇರಿ: ಈ ಬಾರಿಯ…
ಭೇರ್ಯ ಮಹೇಶ್ ಕೆ.ಆರ್.ನಗರ : ಭತ್ತದ ನಾಡು ಎಂದೇ ಪ್ರಖ್ಯಾತಿ ಹೊಂದಿರುವ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳಲ್ಲಿ ಇದೀಗ ಭತ್ತದ…
ದೊಡ್ಡ ಕವಲಂದೆ : ಗಬ್ಬೆದ್ದು ನಾರುತ್ತಿರುವ ಚರಂಡಿಯ ಕೊಳಚೆ ನೀರಿನಿಂದ ಗ್ರಾಮ ಸ್ಥರಿಗೆ ಸಾಂಕ್ರಾಮಿಕ ರೋಗಗಳು ಹರಡು ತ್ತಿದ್ದು, ಗ್ರಾಮ…