ಬೆಂಗಳೂರು : ಮೈಸೂರು ವಾರಿಯರ್ಸ್ ತಂಡವು ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಸೋಲಿಸುವ ಮೂಲಕ ಹುಬ್ಬಳ್ಳಿ ಅಜೇಯ ಓಟಕ್ಕೆ ಲಗಾಮು ಹಾಕಿದೆ. ಜತೆಗೆ ಸತತ ನಾಲ್ಕನೇ ಗೆಲುವು ಸಾಧಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟ್ ವಾಡಿದ ಹುಬ್ಬಳ್ಳಿ ಟೈಗರ್ಸ್ ತಂಡವು ಆರಂಭಿಕ ದಾಂಡಿಗ ಲುವ್ನಿತ್ ಸಿಸೋಡಿಯಾ (೬೩ ಎಸೆತಗಳಲ್ಲಿ ೧೦೫ ರನ್) ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ನಿಗದಿತ ೨೦ ಓವರ್‌ಗಳಲ್ಲಿ ೭ ವಿಕೆಟ್ ಕಳೆದುಕೊಂಡು ೧೮೫ ರನ್ ಕಲೆಹಾಕಿತು. ಬೃಹತ್ ಮೊತ್ತ ಬೆನ್ನತ್ತಿದ ಮೈಸೂರು ವಾರಿಯರ್ಸ್, ಆರಂಭಿಕ ಬ್ಯಾಟರ್ ಆರ್.ಸಮರ್ಥ್ ಅವರ ಸಮರ್ಥ ಆಟದೊಂದಿಗೆ ೭ ಎಸೆತಗಳು ಬಾಕಿ ಇರುವಂತೆಯೇ ೬ ವಿಕೆಟ್‌ಗಳ ಜಯ ದಾಖಲಿಸಿತು.
ಹುಬ್ಬಳ್ಳಿ ಪರ ಆರಂಬಿಕ ದಾಂಡಿಗ ಸಿಸೋಡಿಯಾ ಶತಕಕ್ಕೆ ನಾಯಕ ಮನೀಶ್ ಪಾಂಡೆ ೩೩(೨೧) ಸಾಥ್ ನೀಡಿದರು. ಪ್ರವೀಣ್ ದುಬೆ ೧೬(೬), ನಾಗ ಭರತ್ ೧೨(೧೭) ಆಟದಿಂದ ತಂಡವು ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು. ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ವಾರಿಯರ್ಸ್‌ನ ಸಿಎ ಕಾರ್ತಿಕ್ ೪ ಓವರ್ ಬೌಲಿಂಗ್ ವಾಡಿ ೫೦ ರನ್ ನೀಡಿ ಪ್ರಮುಖ ೪ ವಿಕೆಟ್ ಕಬಳಿಸಿದರು. ಶಶಿಕುವಾರ್, ಮನೋಜ್ ಬಾಂಗಡೆ ತಲಾ ೧ ವಿಕೆಟ್ ಪಡೆದರು.
ಬೃಹತ್ ಮೊತ್ತ ಚೇಸ್ ವಾಡಿದ ವಾರಿಯರ್ಸ್‌ಗೆ ಆರಂಭಿಕ ದಾಂಡಿಗ ಆರ್.ಸಮರ್ಥ್ ಉತ್ತಮ ಆರಂಭ ಒದಗಿಸಿದರು, ೪೨ ಎಸೆತಗಳಲ್ಲಿ ೩ ಸಿಕ್ಸರ್ ಮತ್ತು ೬ ಬೌಂಡರಿ ಮೂಲಕ ೭೩ ರನ್ ಕಲೆಹಾಕಿ ತಂಡದ ಗೆಲುವಿಗೆ ಕಾರಣರಾದರು. ನಾುಂಕ ಕರುಣ್ ನಾುಂರ್ ೪೧(೨೫) ಉತ್ತಮ ಇನ್ನಿಂಗ್ಸ್ ಕಟ್ಟಿದರು. ಅಂತಿಮ ಐದು ಓವರ್‌ಗಳಲ್ಲಿ ೪೨ ರನ್‌ಗಳ ಅಗತ್ಯವಿದ್ದಾಗ, ಶೋಯಬ್ ವ್ಯಾನೇಜರ್ (೨೧*) ಮತ್ತು ಶಿವಕುವಾರ್ ರಕ್ಷಿತ್ (೨೨*) ಅವರ ಜೊತೆಯಾಟದಿಂದ ೧೮.೫ ಓವರ್‌ಗಳಲ್ಲಿ ಆರು ವಿಕೆಟ್‌ಗಳು ಬಾಕಿ ಇರುವಂತೆಯೇ ತಂಡ ಜಯದ ಮಂದಹಾಸ ಬೀರಿತು.
ಸಂಕ್ಷಿಪ್ತ ಸ್ಕೋರ್ :
ಹುಬ್ಬಳ್ಳಿ ಟೈಗರ್ಸ್ : ೨೦ ಓವರ್‌ಗಳಲ್ಲಿ ೧೮೫-೭: ಲುವಿನಿತ್ ಸಿಸೋಡಿಯಾ ೧೦೫(೬೩), ಮನೀಶ್ ಪಾಂಡೆ ೩೩(೨೧), ಪ್ರವೀಣ್ ದುಬೆ೧೬(೬) ಸಿಎ ಕಾರ್ತಿಕ್ ೪-೫೦, ಶಶಿಕುವಾರ್ ೧-೨೫, ಮನೋಜ್ ಭಾಂಡಗೆ ೧-೨೮
ಮೈಸೂರು ವಾರಿಯರ್ಸ್ : ೧೮.೫ ಓವರ್‌ಗಳಲ್ಲಿ ೧೮೮-೪: ಆರ್. ಸಮರ್ಥ್ ೭೩(೪೨), ಕರುಣ್ ನಾಯರ್ ೪೧(೨೫), ಸಿಎ ಕಾರ್ತಿಕ್ ೨೯(೧೮) ಪ್ರವೀಣ್ ದುಬೆ ೩-೩೮.
ಪಂದ್ಯಶ್ರೇಷ್ಠ : ಆರ್. ಸಮರ್ಥ್
ಬೆಂಗಳೂರು : ನಾಳೆಯಿಂದ ಐಪಿಎಲ್ ಪಂದ್ಯಾವಳಿಗಳು ಆರಂಭವಾಗಲಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸಂಬಂಧಪಟ್ಟ…
ಮದ್ದೂರು : ಖಾಸಗಿ ಶಾಲೆ ಬಸ್ ಮತ್ತು ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿ, 14 ವಿದ್ಯಾರ್ಥಿಗಳ ಜತೆಗೆ 6…
ಹನೂರು : ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ…
ಎಚ್.ಡಿ.ಕೋಟೆ : ರಾಜ್ಯದಲ್ಲಿ ಜಾತ್ಯತೀತ ಜನತಾದಳ-ಬಿಜೆಪಿಯ ಮೈತ್ರಿಯ ಸರ್ಕಾರ ಅಧಿಕಾರಕ್ಕೆ ಬಂದು ಜನಪರ ಆಡಳಿತ ನೀಡುವ ದಿನಗಳು ಹತ್ತಿರವಾಗುತ್ತಿವೆ ಎಂದು…
ಬೆಂಗಳೂರು : ದಾವಣಗೆರೆ ಉಪಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಾದಿಕ್ ಪೈಲ್ವಾನ್ ತಾವು ಕಣದಿಂದ ಹಿಂದೆ ಸರಿದಿರುವುದಾಗಿ ಘೋಷಿಸಿದ್ದಾರೆ.…
ಬೆಂಗಳೂರು : ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲಿ ರಾಜ್ಯ ಸರ್ಕಾರವು ಅತ್ಯಂತ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪದ್ಧತಿಯಲ್ಲಿ ಆಮೂಲಾಗ್ರ…