ಟೀಂ ಇಂಡಿಯಾದ ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಎಂಎಸ್‌ಡಿ (ಮಹೇಂದ್ರ ಸಿಂಗ್ ಧೋನಿ) ಅವರು ಕುಟುಂಬದೊಂದಿಗೆ ಸಮಯ ಕಳೆಯಲು ವಿದೇಶಕ್ಕೆ ಹಾರಿದ್ದಾರೆ.
ಹೌದು, ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೊಷಿಸಿರುವ ಮಾಸ್ಟರ್ ಮೈಂಡ್ ಧೋನಿ ಅವರು ಸದ್ಯ ಐಪಿಎಲ್‌ನಿಂದ ಹೊರಬಂದು ಫ್ಯಾಮಿಲಿಯೊಂದಿಗೆ ಸಮಯ ಕಳೆಯುತ್ತಿದ್ದಾರೆ.
2024ರ 17ನೇ ಐಪಿಎಲ್ ಸೀಸನ್‌ನಲ್ಲಿ ಸಿಎಸ್‌ಕೆ (ಚೆನ್ನೈಸೂಪರ್ ಕಿಂಗ್ಸ್) ತಂಡ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. 2023ರ ಸೀಸನ್‌ನ ವಿನ್ನರ್ ಆಗಿದ್ದ ಸಿಎಸ್‌ಕೆ ಈ ಬಾರಿ ಕ್ವಾಲಿಫೈಯರ್ ಕೂಡಾ ಆಗಲಿಲ್ಲ. ನಿರ್ಣಾಯಕ ಹಂತದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಹೀನಾಯವಾಗಿ ಸೋತು ಲೀಗ್‌ನಿಂದ ಹೊರಬಿದ್ದಿತ್ತು.
ಇದೆಲ್ಲದರ ನಡುವೆ ಧೋನಿ ಐಪಿಎಲ್‌ನಿಂದಲೂ ನಿವೃತ್ತಿ ಹೊಂದುತ್ತಾರೆ ಎಂದು ಎಲ್ಲರೂ ಊಹಿಸಿದ್ದರು. ಇದಕ್ಕೆ ಉತ್ತರ ನೀಡಿದ್ದ ಧೋನಿ, ಇನ್ನು 9 ತಿಂಗಳ ಕಾಲಾವಕಾಶ ಇದ್ದು, ಕಾದು ನೋಡಬೇಕಿದೆ ಎಂದು ಹೇಳುವ ಮೂಲಕ ಇನ್ನೊಂದು ಸೀಸನ್ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆಯೇ ಅಥವಾ ಇಲ್ಲವೇ ಎಂಬ ಕುತೂಹಲಕ್ಕೆ ಎಡೆಮಾಡಿಕೊಟ್ಟಿದ್ದಾರೆ.
ಇದೆಲ್ಲದರ ನಡುವೆ ಸದ್ಯ ಕುಟುಂಬದೊಂದಿಗೆ ವಿದೇಶಕ್ಕೆ ಹಾರಿರುವ ಎಂಎಸ್ ಧೋನಿ ಅಲ್ಲಿ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಸದ್ಯ ಧೋನಿ ಜರ್ಮನಿ, ಇಟಲಿ ಭಾಗಗಳಲ್ಲಿ ಪ್ರವಾಸ ಕೈಗೊಂಡಿದ್ದು, ಅಲ್ಲಿ ಸೌಂದರ್ಯವನ್ನು ಸವಿಯುವ ಮೂಲಕ ಕ್ರಿಕೆಟ್‌ನಿಂದ ಹೊರ ಬಂದಿದ್ದಾರೆ.
ಧೋನಿ ಅವರು ಎಲ್ಲೇ ಸುತ್ತಾಡಿದರು ಆ ಬಗ್ಗೆ ಅವರು ಎಲ್ಲಿಯೂ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ. ಆದರೆ ಅವರ ಪತ್ನಿ ಸಾಕ್ಷಿ ಧೋನಿ ಇದಕ್ಕೆ ತದ್ವಿರುದ್ಧವಾಗಿದ್ದಾರೆ. ಇಟಲಿಯಲ್ಲಿ ಕಳೆಯುತ್ತಿರುವ ಸುಂದರ ಕ್ಷಣಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎಂಎಸ್‌ಡಿ ಅಭಿಮಾನಿಗಳು ಸಾಕ್ಷಿಗೆ ಕೃತಜ್ಞನತೆ ತಿಳಿಸಿದ್ದಾರೆ.
ಮಡಿಕೇರಿ : ದುಬಾರೆ ಶಿಬಿರದ ಸಾಕಾನೆ ತಕ್ಷ ಅನಾರೋಗ್ಯದಿಂದ ಸೋಮವಾರ ರಾತ್ರಿ ಮೃತಪಟ್ಟಿದೆ. ಡಿ.೮ರಂದು ರಾತ್ರಿ ೯.೩೦ರ ಸಮಯದಲ್ಲಿ ತಕ್ಷ…
ಮೈಸೂರು : ಕೇಳಿದ ತಕ್ಷಣ ಹಣ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಸ್ನೇಹಿತನ ಮೇಲೆ ಯುವಕನೊಬ್ಬ ಚಾಕುವಿನಿಂದ ಇರಿದಿರುವ ಘಟನೆ ನಗರದಲ್ಲಿ…
ಮೈಸೂರು : ಲೈಂಗಿಕವಾಗಿ ಸಹಕರಿಸಿದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದು ಮಹಿಳಾ ಉದ್ಯೋಗಿಗೆ ಕಿರುಕುಳ ನೀಡಿದ ಖಾಸಗಿ ಕಾರ್ಖಾನೆ ಮಾಲೀಕನ ವಿರುದ್ದ…
ಮೈಸೂರು : ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಯ ದರ್ಶನ ಹಾಗೂ ಸಮೂಹ ದೇವಾಲಯಗಳ ಸೇವೆಗಳ ಶುಲ್ಕಗಳನ್ನು ಏರಿಸಿರುವ ರಾಜ್ಯ…
ಬೆಳಗಾವಿ : ರಾಜ್ಯದಲ್ಲಿ 545 ಪಿಎಸ್ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಈಗಾಗಲೇ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಮೂರು ತಿಂಗಳ…
ಬೆಂಗಳೂರು : ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ತಿಂಗಳಲ್ಲಿ ಒಂದು ದಿನದ ವೇತನ ಸಹಿತ ರಜೆ ಸೌಲಭ್ಯ ಒದಗಿಸುವಂತೆ…