Categories: ಕ್ರೀಡೆ

ವರ್ಷದ ಬಳಿಕ ಕಮ್‌ಬ್ಯಾಕ್‌ ಮಾಡಿದ ಮಹಮ್ಮದ್ ಶಮಿ

ಮಧ್ಯಪ್ರದೇಶ: ವಿಶ್ವ ಕಪ್‌ ನಂತರ ಗಾಯಗೊಂಡು ಮೈದಾನದಿಂದ ಹೊರಗುಳಿದಿದ್ದ ಶಮಿ ವರ್ಷದ ಬಳಿಕ ರಣಜಿ ಪಂದ್ಯದಲ್ಲಿ ಮಿಂಚಿದ್ದಾರೆ. ಈ ಮೂಲಕ ತಮ್ಮ ಫಿಟ್‌ನೆಸ್‌ ಸಾಬೀತು ಮಾಡಿರುವ ಇವರು ಆಸ್ಟ್ರೇಲಿಯಾದ ಸರಣಿಗೆ ಆಯ್ಕೆಯಾಗುವ ಸಾಧ್ಯತೆ ಇದೆ.

ಇಂದೋರ್‌ನ ಹೋಲ್ಕರ್‌ ಸ್ಟೇಡಿಯಂನಲ್ಲಿ ನಡೆದ ರಣಜಿ ಪಂದ್ಯದಲ್ಲಿ ಬಂಗಾಳ ಪರವಾಗಿ ಆಡಿದ ಮಹಮ್ಮದ್‌ ಶಮಿ ಒಟ್ಟು 7 ವಿಕೆಟ್‌ ಕಬಳಿಸುವ ಮೂಲಕ ಬಂಗಾಳಕ್ಕೆ ಜಯದ ಕಾಣಿಕೆ ನೀಡಿದರು.

ಮಧ್ಯಪ್ರದೇಶ ತಂಡದ ವಿರುದ್ಧ ನಡೆದ ರಣಜಿ ಪಂದ್ಯದಲ್ಲಿ ಬಂಗಾಳ ಮೊದಲ ಇನ್ನಿಂಗ್ಸ್‌ನಲ್ಲಿ 228 ರನ್‌ ಕಲೆಹಾಕಿತ್ತು. ನಂತರ ಬ್ಯಾಟ್‌ ಬೀಸಿದ ಮಧ್ಯ ಪ್ರದೇಶ ತಂಡಕ್ಕೆ ಮಾರಕವಾಗಿ ಪರಿಣಮಿಸಿದ ಶಮಿ ಬಂಗಾಳದ ಪರ 4 ವಿಕೆಟ್‌ ಕಬಳಿಸಿದರು. ಮಧ್ಯಪ್ರದೇಶ ತಂಡವು 167 ರನ್‌ಗಳಿಗೆ ಆಲೌಟ್‌ ಆಯಿತು.

ದ್ವಿತೀಯ ಇನ್ನಿಂಗ್ಸ್‌ನಲ್ಲಿ 226 ರನ್‌ ಕಲೆಹಾಕಿದ ಬಂಗಾಳ, ಮಧ್ಯಪ್ರದೇಶ ತಂಡಕ್ಕೆ 338 ರನ್‌ಗಳ ಗುರಿ ನೀಡಿದರು.

ಬಂಗಾಳ ನೀಡಿದ ಗುರಿಗೆ ಪ್ರತ್ಯುತ್ತರವಾಗಿ ಮಧ್ಯಪ್ರದೇಶ ತಂಡ ಆರಂಭದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. ಆದರೆ ಶಹಬಾಜ್‌ ಅಹ್ಮದ್‌ ಹಾಗೂ ಮಹಮದ್‌ ಶಮಿ ಅವರ ಅನುಭವ ಬೌಲಿಂಗ್‌ ಮುಂದೆ 326 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಬಂಗಾಳದ ಮುಂದೆ ಸೋಲೊಪ್ಪಿಕೊಂಡರು.

ತಂಡದ ಗೆಲುವಿನ ರೂವಾರಿಯಾದ ಮಹಮ್ಮದ್‌ ಶಮಿ ಈ ಪಂದ್ಯದಲ್ಲಿ 44 ಓವರ್‌ಗಳಿಗೆ 156 ರನ್‌ ನೀಡಿ 7 ವಿಕೆಟ್‌ ಕಬಳಿಸಿದರು ಹಾಗೂ ಬ್ಯಾಟಿಂಗ್‌ನಲ್ಲೂ ಮಿಂಚಿದ ಶಮಿ 37ರನ್‌ ಬಾರಿಸುವ ಮೂಲಕ ತಂಡದ ಗೆಲುವಿಗೆ ಕಾಣಿಕೆ ನೀಡಿದ್ದರು.

ಆಂದೋಲನ ಡೆಸ್ಕ್

Recent Posts

ರಣರಂಗದಿಂದ ಪಲಾಯನಕ್ಕೆ ಟ್ರಂಪ್ ಸಿದ್ಧತೆ..!

ಅನಗತ್ಯವಾಗಿ ಮತ್ತು ಅಪ್ರಚೋದಿತವಾಗಿ ಇರಾನ್ ವಿರುದ್ಧ ಯುದ್ಧಕ್ಕಿಳಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಥಿತಿ ಈಗ ಮಹಾಭಾರತದ ಅಭಿಮನ್ಯುವಿನ ಪರಿಸ್ಥಿತಿಯಂತಾಗಿದೆ.…

59 mins ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ವಿರೋಧಿ ಸಿದ್ಧಾಂತದ ರಾಜ್ಯಗಳ ಜತೆ ಬಿಜೆಪಿ ಸೆಣಸಾಟ

೨೦೨೬ರ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ಅಖಾಡ ಈಗ ಸಿದ್ಧವಾಗಿದೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಎನ್‌ಡಿಎ ಮೈತ್ರಿಕೂಟದ ಬಿಜೆಪಿ ಮತ್ತು…

1 hour ago

ಗಂಡಸಿನ ಕೋಪ ಹೊಳೆ ಸಾಗರ… ಹೆಂಗಸಿನ ಕೋಪ ಗುಂಡಿ ನೀರು

ಅನಿಲ್ ಅಂತರಸಂತೆ ಹಳ್ಳಿ ಸೊಗಡಿನ ದೇಸಿ ಕಂಠಸಿರಿಯಲ್ಲಿ ಇವರ ಜಾನ ಪದ ಹಾಡುಗಳನ್ನು ಕೇಳುವುದೇ ಬಲು ಹಿತಕರ. ಮೂಲತಃ ಎಚ್.ಡಿ.ಕೋಟೆ…

1 hour ago

ಒಂದು ಹಸಿ ಅಸಹ್ಯ ಹಾಡಿನ ಕುರಿತು ಇಬ್ಬರು ಬರಹಗಾರ್ತಿಯರು

ಇಂತಹ ಸಂದರ್ಭಗಳಲ್ಲಿ ಮೌನವಾಗಿರುವುದು ಅಪರಾಧದಲ್ಲಿ ಪಾಲುಗಾರರಾದಂತೆಯೇ ಸಂಧ್ಯಾರಾಣಿ, ಲೇಖಕಿ ಮತ್ತು ಚಿತ್ರ ಸಾಹಿತಿ ‘ರ’ ಚಿತ್ರದ ಹಾಡಿನ ಬಗ್ಗೆ ವಿರೋಧ,…

1 hour ago

ಕೆಟ್ಟ ಯುದ್ಧವೊಂದರ ಕೆಲವು ಒಳ್ಳೆಯ ಅಡ್ಡ ಪರಿಣಾಮಗಳು

ಶೇಷಾದ್ರಿ ಗಂಜೂರು ಮಧ್ಯಪ್ರಾಚ್ಯದಿಂದ ಪ್ರತಿನಿತ್ಯ ವಿಸ್ತರಿಸುತ್ತಿರುವ ಉದ್ವಿಗ್ನತೆಯನ್ನು ಗಮನಿಸಿದರೆ, ಇಸ್ರೇಲಿನ ಆಕ್ರಮಣಕಾರಿ ಧೋರಣೆ, ಅಮೆರಿಕದ ಟ್ರಂಪ್ ದುರಾಡಳಿತದ ತರ್ಕರಹಿತ ನಡೆಗಳು…

1 hour ago

ಮಾನವ-ವನ್ಯಪ್ರಾಣಿ ಸಂಘರ್ಷ ನಿವಾರಣೆಗೆ ಕಾರ್ಯತಂತ್ರ

ನವೀನ್ ಡಿಸೋಜ ಮಡಿಕೇರಿ: ವನ್ಯಜೀವಿ-ಮಾನವ ಸಂಘರ್ಷ ತಡೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಕರ್ನಾಟಕ ಮಾನವ -…

1 hour ago