ಮಿಥಾಲಿ ರಾಜ್ ಬೆನ್ನಲ್ಲೇ, ಭಾರತ ಮಹಿಳಾ ಕ್ರಿಕೆಟ್ ತಂಡದ ಇನ್ನೋರ್ವ ಆಟಗಾರ್ತಿ ನಿವೃತ್ತಿ..

ಕೋಲ್ಕತ್ತಾ : ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ್ತಿ ರುಮೇಲಿ ಧಾರ್‌ ಅವರು ತಮ್ಮ ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. ಈ ಮೂಲಕ ತಮ್ಮ ಎಲ್ಲಾ ಅಂತಾರಾಷ್ಟ್ರೀಯ ಕ್ರಿಕಿಟ್‌ ಗೂ ಅವರು ನಿವೃತ್ತಿ ಘೋಷಿಸಿದ್ದಾರೆ.

ನನಗೆ ಪುನರಾವರ್ತಿತ ಗಾಯದ ಸಮಸ್ಯೆಯಿಂದ ಕ್ರಿಕೆಟ್​ ಮುಂದುವರಿಸಲು ಸಾಧ್ಯವಾಗದ ಕಾರಣ 15 ವರ್ಷಗಳ ಕ್ರಿಕೆಟ್​ ಬದುಕಿನಿಂದ ಹಿಂದೆ ಸರಿಯುತ್ತಿದ್ದೇನೆ. ನನ್ನ ವೃತ್ತಿಯಲ್ಲಿ ಸಹಕರಿಸಿದ ಎಲ್ಲರಿಗೂ ಪ್ರೀತಿಯ ಧನ್ಯವಾದಗಳು” ಎಂದು ರುಮೇಲಿ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ನಿವೃತ್ತಿಯ ಮಾಹಿತಿಯನ್ನು ಹೊರಹಾಕಿದ್ದಾರೆ.

ರುಮೇಲಿ ಧಾರ್​ ಅವರು ಟೆಸ್ಟ್​ ಕ್ರಿಕೆಟ್​ನಲ್ಲಿ 29.50 ಸರಾಸರಿಯಲ್ಲಿ 236 ರನ್ ಗಳಿಸಿದ್ದಲ್ಲದೇ, 21.75 ಸರಾಸರಿಯಲ್ಲಿ 8 ವಿಕೆಟ್‌ ಪಡೆದಿದ್ದಾರೆ. ಏಕದಿನದಲ್ಲಿ 19.61 ರ ಸರಾಸರಿಯಲ್ಲಿ 6 ಅರ್ಧ ಶತಕಗಳ ಸಮೇತ 961 ರನ್‌ ಗಳಿಸಿದ್ದರೆ, 27.38 ರ ಸರಾಸರಿಯಲ್ಲಿ 63 ವಿಕೆಟ್‌ ಪಡೆದಿದ್ದಾರೆ. ಟಿ20ಯಲ್ಲಿ ಅಜೇಯ 66 ಅತ್ಯಧಿಕ ರನ್​ ಜೊತೆಗೆ 131 ರನ್ ಗಳಿಸಿ, 13 ವಿಕೆಟ್‌ಗಳನ್ನು ಪಡೆದಿರುವುದು ಅವರ ಸಾಧನೆಯಾಗಿದೆ.

2012ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಮಿಂಚಿ ಧಾರ್‌ ಆಲ್​ರೌಂಡರ್​ ಆಟಗಾರ್ತಿ ಎಂಬುದನ್ನು ಸಾಬೀತು ಮಾಡಿದ್ದರು. ಇದೀಗ ನಿವೃತ್ತಿ ಘೋಷಣೆ ʼಮಾಡಿದ್ದಾರೆ.