ಕ್ರೀಡೆ

ದಿಲ್ಲಿಯಲ್ಲಿ ಮೆಸ್ಸಿ : ಮೋದಿ ಭೇಟಿ ನಿರೀಕ್ಷೆ, ಹ್ಯಾಂಡ್‌ಶೇಕ್‌ಗೆ 1 ಕೋಟಿ ರೂ.!

ಹೊಸದಿಲ್ಲಿ : ಮೂರು ದಿನಗಳ ಕಾಲ ಭಾರತ ಪ್ರವಾಸಕ್ಕೆ ಆಗಮಿಸಿರುವ ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಅವರು ಸೋಮವಾರ ಬೆಳಗ್ಗೆ ಬಂದಿಳಿದಿದ್ದಾರೆ, ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಭದ್ರತೆ, ಉನ್ನತ ಮಟ್ಟದ ಸಭೆಗಳಿಗೆ ಸಿದ್ಧವಾಗಿದೆ.

ತಮ್ಮ ಪ್ರವಾಸದ ಅಂತಿಮ ಹಂತವಾಗಿ ದಿಲ್ಲಿಗೆ ಆಗಮಿಸಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ನಿರೀಕ್ಷೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ,

ಮೆಸ್ಸಿ ಮತ್ತು ಅವರ ಪರಿವಾರವು ಇಂದು ಚಾಣಕ್ಯಪುರಿಯಲ್ಲಿರುವ ದಿ ಲೀಲಾ ಪ್ಯಾಲೇಸ್‌ಗೆ ಭೇಟಿ ನೀಡಲಿದ್ದು, ಅಲ್ಲಿ ಅವರಿಗಾಗಿಯೇ ಸಂಪೂರ್ಣ ಒಂದು ಮಹಡಿಯನ್ನು ಕಾಯ್ದಿರಿಸಲಾಗಿದೆ. ಅರ್ಜೆಂಟೀನಾದ ಮೆಸ್ಸಿ ತಂಡಕ್ಕೆ ಹೋಟೆಲ್‌ನ ಪ್ರೆಸಿಡೆನ್ಸಿ ಸೂಟ್‌ಗಳನ್ನು ನೀಡಲಾಗಿದ್ದು, ಒಂದು ರಾತ್ರಿ ವಾಸ್ತವ್ಯಕ್ಕೆ 3.5 ಲಕ್ಷದಿಂದ 7 ಲಕ್ಷ ರೂ.ಗಳವರೆಗೆ ಇರುತ್ತದೆ ಎಂದು ವರದಿಯಾಗಿದೆ.

ಇದನ್ನು ಓದಿ: ಆರ್.ಟಿ.ವಿಠ್ಠಲಮೂರ್ತಿ ಅವರ ಬೆಂಗಳೂರು ಡೈರಿ : ರಾಜ್ಯ ಕಾಂಗ್ರೆಸ್‌ನ ಗೊಂದಲ, ವರಿಷ್ಠರ ಪ್ಲಾನ್ ವಿಫಲ

ಮೆಸ್ಸಿ ಅವರ ಜೊತೆ ವಿಶೇಷ ಸಂವಾದಕ್ಕೆ ಕೆಲವು ಕಾರ್ಪೊರೇಟ್‌ಗಳು ಫುಟ್‌ಬಾಲ್ ಐಕಾನ್ ಅನ್ನು ಭೇಟಿ ಮಾಡುವ ಅವಕಾಶಕ್ಕಾಗಿ 1 ಕೋಟಿ ರೂ.ವರೆಗೆ ಖರ್ಚು ಮಾಡುತ್ತಿವೆ ಎಂದು ದಿಲ್ಲಿ ಸುದ್ದಿವಾಹಿನಿಗಳು ವರದಿ ಮಾಡಿವೆ. ದೆಹಲಿಯಲ್ಲಿ ಅವರ ಸಂಕ್ಷಿಪ್ತ ಭೇಟಿಯ ಸಮಯದಲ್ಲಿ, ಮೆಸ್ಸಿ ಭಾರತದ ಮುಖ್ಯ ನ್ಯಾಯಾಧೀಶರು, ಹಲವಾರು ಸಂಸದರು ಮತ್ತು ಕ್ರಿಕೆಟಿಗರು ಹಾಗೂ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಪದಕ ವಿಜೇತರು ಸೇರಿದಂತೆ ಭಾರತೀಯ ಕ್ರೀಡಾ ತಾರೆಯರ ಆಯ್ದ ಗುಂಪನ್ನು ಭೇಟಿ ಮಾಡಲಿದ್ದಾರೆ.

ವಿಶ್ವ ಪುಟ್ ಬಾಲ್ ದಿಗ್ಗಜ ಲಿಯೋನಲ್ ಮೆಸ್ಸಿ ನಿನ್ನೆ ಮುಂಬೈನಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೊಲ್ಕರ್ ಹಾಗೂ ಭಾರತದ ಫುಟ್ ಬಾಲ್ ದಂತಕಥೆ ಸುನಿಲ್ ಚೆಟ್ರಿ ಜೊತೆಗೆ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಹಬ್ಬವನ್ನುಂಟು ಮಾಡಿದ್ದರು.

ಆಂದೋಲನ ಡೆಸ್ಕ್

Recent Posts

ಟಿ.ನರಸೀಪುರ: ಜೂಜಾಟದಲ್ಲಿ ಭಾಗಿಯಾಗಿದ್ದ ಐವರ ಬಂಧನ

ಟಿ.ನರಸೀಪುರ: ಜೂಜಾಟದಲ್ಲಿ ಭಾಗಿಯಾಗಿದ್ದ ಐವರನ್ನು ಬಂಧಿಸುವಲ್ಲಿ ಟಿ.ನರಸೀಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಟಿ.ನರಸೀಪುರ ತಾಲ್ಲೂಕಿನ ವಾಟಾಳು ಗ್ರಾಮದಲ್ಲಿ ಘಟನೆ ನಡೆದಿದ್ದು,…

9 mins ago

ಇರಾನ್‌ನಲ್ಲಿ ಕಾಣೆಯಾಗಿದ್ದ US ವಾಯುಪಡೆಯ ಮತ್ತೋರ್ವ ಪೈಲಟ್‌ ರಕ್ಷಣೆ

ವಾಷಿಂಗ್ಟನ್:‌ ಮಧ್ಯಪ್ರಾಚ್ಯದಲ್ಲಿನ ಯುದ್ಧದ ಭೀಕರತೆ 37ನೇ ದಿನವೂ ಮುಂದುವರಿದಿದೆ. ಯುದ್ಧದ ಮಧ್ಯೆಯೂ ಅಮೇರಿಕಾ ಸೇನೆಯಿಂದ ಸುದ್ದಿಯೊಂದು ಹೊರಬಿದ್ದಿದ್ದು, ಇರಾನ್‌ನಲ್ಲಿ ಕಾಣೆಯಾಗಿದ್ದ…

36 mins ago

ಎಚ್‌ಎಸ್‌ಆರ್‌ಪಿ ಅಳವಡಿಕೆ ಕಡ್ಡಾಯ: ಸಾರಿಗೆ ಇಲಾಖೆ ಸ್ಪಷ್ಟನೆ

ಬೆಂಗಳೂರು: ಹಳೆಯ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಕಡ್ಡಾಯವಾಗಿ ಅಳವಡಿಸಬೇಕು ಎಂಬ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಾರಿಗೆ ಇಲಾಖೆ ಸ್ಪಷ್ಟನೆ…

1 hour ago

ಗ್ಯಾರಂಟಿ ಬಿಟ್ಟರೆ ಬೇರೆ ಬಂಡವಾಳ ಇವರಿಗಿಲ್ಲ: ರಾಜ್ಯ ಸರ್ಕಾರದ ವಿರುದ್ಧ ಎಚ್‌ಡಿಕೆ ಕಿಡಿ

ದಾವಣಗೆರೆ: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇರುವ ಏಕೈಕ ಬಂಡವಾಳ ಎಂದರೆ ಐದು ಗ್ಯಾರಂಟಿಗಳು ಮಾತ್ರ. ಅವುಗಳನ್ನು ಕೂಡ ಮನಸ್ಸು ಇಚ್ಛೆ,…

2 hours ago

ಅಹಿಂದ ಹತ್ತಿಕ್ಕಲು ಸಿದ್ದರಾಮಯ್ಯ ಯತ್ನ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪ

ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಮತ್ತು ಕುರ್ಚಿ ಉಳಿಸಿಕೊಳ್ಳಲು ತಮ್ಮನ್ನು ಬೆಳೆಸಿದ್ದ ಅಹಿಂದ ವರ್ಗವನ್ನೇ ಹತ್ತಿಕ್ಕಲು…

2 hours ago

ಹಲವು ಜಿಲ್ಲೆಗಳಲ್ಲಿ ಇಂದು ಕೂಡ ಮಳೆಯ ಆರ್ಭಟ: ಹವಾಮಾನ ಇಲಾಖೆ ಸೂಚನೆ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಸಂಜೆಯ ವೇಳೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾರೀ…

2 hours ago