ಬೆಂಗಳೂರು: ದೇವದತ್ತ ಪಡಿಕ್ಕಲ್ (78*) ಅವರ ಆಕರ್ಷಕ ಅರ್ಧ ಶತಕ ಮತ್ತು ವಿದ್ವತ್ ಕಾವೇರಪ್ಪ ಮತ್ತು ಮನೋಜ್ ಅವರ ಆಕರ್ಷಕ ಬೌಲಿಂಗ್ ನೆರವಿನಿಂದ ಮಹಾರಾಜ ಟ್ರೋಫಿಯಲ್ಲಿ ಗುಲ್ಬರ್ಗ ಮೈಸ್ಟಿಕ್ಸ್ ತಂಡ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 6 ವಿಕೆಟ್ ಗಳ ಜಯ ಗಳಿಸಿದೆ.
ಜಯ ಗಳಿಸಲು 145 ರನ್‌ಗಳ ಅಲ್ಪ ಮೊತ್ತವನ್ನು ಬೆಂಬತ್ತಿದ ಗುಲ್ಬರ್ಗ ಮೈಸ್ಟಿಕ್ಸ್ ದೇವದತ್ತ ಪಡಿಕ್ಕಲ್ ಅವರು ಅಜೇಯ 78 ರನ್ (61 ಎಸೆತ, 7 ಬೌಂಡರಿ 4 ಸಿಕ್ಸರ್) ನೆರವಿನಿಂದ ಇನ್ನೂ 15 ಎಸೆತ ಬಾಕಿ ಇರುವಾಗಲೇ ಗುರಿ ತಲುಪಿತು. ಬೆಂಗಳೂರು ಪರ ಜಗದೀಶ ಸುಚಿತ್ ಹಾಗೂ ರೋನಿತ್ ಮೋರೆ ತಲಾ 1 ವಿಕೆಟ್ ಗಳಿಸಿದರು.
ಸಾಧಾರಣ ಮೊತ್ತ ಗಳಿಸಿದ ಬೆಂಗಳೂರು:
ಗುಲ್ಬರ್ಗ ಮೈಸ್ಟಿಕ್ಸ್‌ನ ವಿದ್ವತ್ ಕಾವೇರಪ್ಪ (31ಕ್ಕೆ 3) ಹಾಗೂ ಮನೋಜ್ ಭಾಂಡಗೆ (23ಕ್ಕೆ3) ಅವರ ಬೌಲಿಂಗ್ ದಾಳಿಗೆ ತತ್ತರಿಸಿದ ಬೆಂಗಳೂರು ಬ್ಲಾಸ್ಟರ್ಸ್ ತಂಡ ಮಹಾರಾಜ ಟ್ರೋಪಿಯಲ್ಲಿ 21ನೇ ಪಂದ್ಯದಲ್ಲಿ 144 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿದೆ.
ಟಾಸ್ ಗೆದ್ದ ಗುಲ್ಬರ್ಗ ಮೈಸ್ಟಿಕ್ಸ್ ನಾಯಕ ಮನೀಶ್ ಪಾಂಡೆ ಪೀಲ್ಡಿಂಗ್ ಆಯ್ಕೆ ಮಾಡಿಕೊಂಡಿರುವುದನ್ನು ತಂಡದ ಬೌಲರ್‌ಗಳು ಉತ್ತಮ ರೀತಿಯಲ್ಲಿಯೇ ಸಮರ್ಥಿಸಿಕೊಂಡರು. ನಿನ್ನೆ ಶತಕ ಸಿಡಿಸಿದ್ದ ಎಲ್.ಆರ್. ಚೇತನ್ ಕೇವಲ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದು ತಂಡದ ರನ್ ಗಳಿಕೆಗೆ ಆರಂಭದಲ್ಲೇ ಕಡಿವಾಣ ಬೀಳುವಂತೆ ಮಾಡಿತು.
ನಾಯಕ ಮಯಾಂಕ್ ಆಗರ್ವಾಲ್ (28) ಅಲ್ಪ ಮೊತ್ತಕ್ಕೆ ಪೆವಿಲಿಯನ್ ಸೇರಿದ್ದು ತಂಡದ ಬೃಹತ್ ಮೊತ್ತದ ಗುರಿಗೆ ಅಡ್ಡಿಯಾಯಿತು. ಕೆ.ವಿ. ಅನೀಶ್ (20), ಶಿವಕುಮಾರ್ ರಕ್ಷಿತ್ (16), ಕ್ರಾಂತಿ ಕುಮಾರ್ (17), ಜಗದೀಶ ಸುಚಿತ್ (17) ಹೀಗೆ ಬೆಂಗಳೂರಿನ ಬ್ಲಾಸ್ಟರ್ಸ್‌ನ ಬ್ಯಾಟ್ಸ್‌ಮನ್‌ಗಳು ಅಲ್ಪ ಮೊತ್ತಕ್ಕೆ ಪೆವಿಲಿಯನ್ ಹಾದಿ ಹಿಡಿದರು.
ಗುಲ್ಬರ್ಗ ಮೈಸ್ಟಿಕ್ಸ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉತ್ತಮ ರೀತಿಯ ಬೌಲಿಂಗ್ ಪ್ರದರ್ಶಿಸಿರುವುದು ಗಮನಾರ್ಹ. ವಿದ್ವತ್ ಕಾವೇರಪ್ಪ ಹಾಗೂ ಮನೋಜ್ ಭಾಂಡಗೆ ಉತ್ತಮ ಬೌಲಿಂಗ್ ಪ್ರದರ್ಶಿಸಿ ಒಟ್ಟು ಆರು ವಿಕೆಟ್ ಹಂಚಿಕೊಂಡರು. ವಿದ್ವತ್ ಕಾವೇರಪ್ಪ 31 ರನ್‌ಗೆ 3 ವಿಕೆಟ್ ಗಳಿಸಿದರೆ, ಮನೋಜ್ ಭಾಂಡಗೆ 23 ರನ್‌ಗೆ 3 ವಿಕೆಟ್ ಗಳಿಸಿ ಬೆಂಗಳೂರಿನ ರನ್ ಗಳಿಕೆಗೆ ಕಡಿವಾಣ ಹಾಕಿದರು. ಹಿಂದೆ ಮೈಸೂರು ವಾರಿಯರ್ಸ್ ಪರ ಆಡುತ್ತಿದ್ದ ಕುಶಲ್ ವಾಧ್ವಾನಿ ಈ ಬಾರಿ ಬೆಂಗಳೂರು ತಂಡದಲ್ಲಿದ್ದು, ಮಹಾರಾಜ ಟ್ರೋಫಿಯ ಮೊದಲ ಪಂದ್ಯದಲ್ಲೇ ಬೆಂಗಳೂರಿನ ನಾಯಕ ಮಯಾಂಕ್ ಅಗರ್ವಾಲ್ ಅವರ ವಿಕೆಟ್ ಕಬಳಿಸಿ ತಂಡಕ್ಕೆ ಉತ್ತಮ ರೀತಿಯಲ್ಲಿ ನೆರವಾದರು. ಮನೋಜ್ ಭಾಂಡಗೆ ಮಧ್ಯಮ ಕ್ರಮಾಂಕದ ಆಟಗಾರರ ವಿಕೆಟ್ ಗಳಿಸಿ ಯಶಸ್ವಿ ಬೌಲರ್ ಎನಿಸಿದರು. ವಾಧ್ವಾನಿ 17 ರನ್‌ಗೆ 2 ವಿಕೆಟ್ ಗಳಿಸುವುದರೊಂದಿಗೆ ಬೆಂಗಳೂರು ಬ್ಲಾಸ್ಟರ್ಸ್ 9 ವಿಕೆಟ್ ನಷ್ಟಕ್ಕೆ 144 ರನ್‌ಗಳ ಸಾಧಾರಣ ಮೊತ್ತ ಪೇರಿಸಿತು.
ಸಂಕ್ಷಿಪ್ತ ಸ್ಕೋರ್:
ಬೆಂಗಳೂರು ಬ್ಲಾಸ್ಟರ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 144 (ಮಯಾಂಕ್ ಅಗರ್ವಾಲ್ 28, ಅನೀಶ್ 20, ಕ್ರಾಂತಿ ಕುಮಾರ್ 17, ಕಾವೇರಪ್ಪ 31ಕ್ಕೆ 3, ಮನೋಜ್ 23ಕ್ಕೆ 3, ಕುಶಾಲ್ ವಾಧ್ವಾನಿ 17 ಕ್ಕೆ 2).
ಗುಲ್ಬರ್ಗ ಮೈಸ್ಟಿಕ್ಸ್: 17.3 ಓವರ್‌ಗಳಲ್ಲಿ 4 ವಿಕೆಟ್‌ಗೆ 150 (ದೇವದತ್ತ ಪಡಿಕ್ಕಲ್ 78*). ಜಸ್ವತ್ ಆಚಾರ್ಯ 18, ಮನೀಶ್ ಪಾಂಡೆ 13, ಕ್ರಾಂತಿ ಕುಮಾರ್ 16ಕ್ಕೆ 1)
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…