ಮೈಸೂರು: ಕೆಎಸ್‌ಸಿಎ ವತಿಯಿಂದ ಆಯೋಜಿಸಲಾಗಿರುವ ಮಹಾರಾಜ ಟ್ರೋಫಿ ಸೀಸನ್ 3ರ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಸೀಸನ್ ಮೂರರ ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಗುಲ್ಬರ್ಗಾ ಮಿಸ್ಟಿಕ್ಸ್ ಕಾದಾಟ ನಡೆಸಲಿದೆ.
ಇನ್ನು ಅದೇ ದಿನ ಎರಡನೇ ಪಂದ್ಯದಲ್ಲಿ ನಮ್ಮ ಮೈಸೂರು ವಾರಿಯರ್ಸ್ ಹಾಗೂ ಶಿವಮೊಗ್ಗ ಲಯನ್ಸ್ ಮುಖಾಮುಖಿಯಾಗಲಿದೆ. ಈ ಎಲ್ಲಾ ಪಂದ್ಯಗಳು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ.
ಮಹಾರಾಜ ಟ್ರೋಫಿ ಸೀಸನ್ 3 ಇದೇ ಆಗಸ್ಟ್ 15ರಿಂದ ಅಂದರೆ ಸ್ವಾತಂತ್ರ್ಯ ದಿನಾಚರಣೆ ದಿನದಂದೇ ಆರಂಭವಾಗಲಿದ್ದು, ಸೆಪ್ಟೆಂಬರ್ 1ರಂದು ಫೈನಲ್ಸ್ ನಡೆಯಲಿದೆ. ಒಟ್ಟಾರೆಯಾಗಿ 33 ಪಂದ್ಯಗಳು (ಸೆಮಿ, ಫೈನಲ್ಸ್ ಸೇರಿ) ನಡೆಯಲಿದೆ.
ಉತ್ತಮ ಲಯದಲ್ಲಿರುವ ಮೈಸೂರು ವಾರಿಯರ್ಸ್ ತಂಡ ಆಗಸ್ಟ್ 15ರಿಂದ ಶಿವಮೊಗ್ಗ ಲಯನ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇನ್ನು ತಂಡಕ್ಕೆ ನಾಯಕರಾಗಿ ಮೂರನೇ ಅವಧಿಗೆ ಕರುನ್ ನಾಯರ್ ನೇಮಕವಾಗಿದ್ದರೇ, ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್, ಕೆ. ಗೌತಮ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ.
ಮಹಾರಾಜ ಟ್ರೋಫಿ ವೇಳಾಪಟ್ಟಿ ಇಂತಿದೆ.
ಆಗಸ್ಟ್ 15
ಬೆಂಗಳೂರು ಬ್ಲಾಸ್ಟರ್ಸ್ vs ಗುಲ್ಬರ್ಗಾ ಮಿಸ್ಟಿಕ್ಸ್- ಮದ್ಯಾಹ್ನ 3ಕ್ಕೆ
ಶಿವಮೊಗ್ಗ ಲಯನ್ಸ್ vs ಮೈಸೂರು ವಾರಿಯರ್ಸ್- ಸಂಜೆ 7:00ಕ್ಕೆ
ಆಗಸ್ಟ್ 16
ಮಂಗಳೂರು ಡ್ರ್ಯಾಗನ್ಸ್ vs ಹುಬ್ಬಳ್ಳಿ ಟೈಗರ್ಸ್- ಮದ್ಯಾಹ್ನ 3:00ಕ್ಕೆ
ಬೆಂಗಳೂರು ಬ್ಲಾಸ್ಟರ್ಸ್ vs ಮೈಸೂರು ವಾರಿಯರ್ಸ್- ಸಂಜೆ 7:00ಕ್ಕೆ
ಆಗಸ್ಟ್ 17
ಶಿವಮೊಗ್ಗ ಲಯನ್ಸ್ vs ಮಂಗಳೂರು ಡ್ರ್ಯಾಗನ್ಸ್ – ಮದ್ಯಾಹ್ನ3:00ಕ್ಕೆ
ಗುಲ್ಬರ್ಗಾ ಮಿಸ್ಟಿಕ್ಸ್ vs ಹುಬ್ಬಳ್ಳಿ ಟೈಗರ್ಸ್- ಸಂಜೆ 7:00ಕ್ಕೆ
ಆಗಸ್ಟ್ 18
ಗುಲ್ಬರ್ಗಾ ಮಿಸ್ಟಿಕ್ಸ್ vs ಮೈಸೂರು ವಾರಿಯರ್ಸ್- ಮದ್ಯಾಹ್ನ3:00ಕ್ಕೆ
ಬೆಂಗಳೂರು ಬ್ಲಾಸ್ಟರ್ಸ್ vs ಶಿವಮೊಗ್ಗ ಲಯನ್ಸ್- ಸಂಜೆ 7:00ಕ್ಕೆ
ಆಗಸ್ಟ್ 19
ಬೆಂಗಳೂರು ಬ್ಲಾಸ್ಟರ್ಸ್ vs ಹುಬ್ಬಳ್ಳಿ ಟೈಗರ್ಸ್- ಮದ್ಯಾಹ್ನ 3:00ಕ್ಕೆ
ಮೈಸೂರು ವಾರಿಯರ್ಸ್ vs ಮಂಗಳೂರು ಡ್ರ್ಯಾಗನ್ಸ್- ಸಂಜೆ 7:00ಕ್ಕೆ
ಆಗಸ್ಟ್ 20
ಶಿವಮೊಗ್ಗ ಲಯನ್ಸ್ vs ಹುಬ್ಬಳ್ಳಿ ಟೈಗರ್ಸ್- ಮದ್ಯಾಹ್ನ 3:00ಕ್ಕೆ
ಗುಲ್ಬರ್ಗಾ ಮಿಸ್ಟಿಕ್ಸ್ vs ಮಂಗಳೂರು ಡ್ರ್ಯಾಗನ್ಸ್- ಸಂಜೆ 7:00ಕ್ಕೆ
ಆಗಸ್ಟ್ 21
ಗುಲ್ಬರ್ಗಾ ಮಿಸ್ಟಿಕ್ಸ್ vs ಶಿವಮೊಗ್ಗ ಲಯನ್ಸ್- ಮದ್ಯಾಹ್ನ 3:00ಕ್ಕೆ
ಮೈಸೂರು ವಾರಿಯರ್ಸ್ vs ಹುಬ್ಬಳ್ಳಿ ಟೈಗರ್ಸ್- ಸಂಜೆ 7:00ಕ್ಕೆ
ಆಗಸ್ಟ್ 22
ಮೈಸೂರು ವಾರಿಯರ್ಸ್ vs ಶಿವಮೊಗ್ಗ ಲಯನ್ಸ್- ಮದ್ಯಾಹ್ನ 3:00ಕ್ಕೆ
ಬೆಂಗಳೂರು ಬ್ಲಾಸ್ಟರ್ಸ್ vs ಮಂಗಳೂರು ಡ್ರ್ಯಾಗನ್ಸ್- ಸಂಜೆ 7:00ಕ್ಕೆ
ಆಗಸ್ಟ್ 23
ಬೆಂಗಳೂರು ಬ್ಲಾಸ್ಟರ್ಸ್ vs ಹುಬ್ಬಳ್ಳಿ ಟೈಗರ್ಸ್- ಮದ್ಯಾಹ್ನ3:00ಕ್ಕೆ
ಮಂಗಳೂರು ಡ್ರ್ಯಾಗನ್ಸ್ vs ಗುಲ್ಬರ್ಗಾ ಮಿಸ್ಟಿಕ್ಸ್- ಸಂಜೆ 7:00ಕ್ಕೆ
ಆಗಸ್ಟ್ 24
ಗುಲ್ಬರ್ಗಾ ಮಿಸ್ಟಿಕ್ಸ್ vs ಮೈಸೂರು ವಾರಿಯರ್ಸ್- ಮದ್ಯಾಹ್ನ 3:00ಕ್ಕೆ
ಶಿವಮೊಗ್ಗ ಲಯನ್ಸ್ vs ಹುಬ್ಬಳ್ಳಿ ಟೈಗರ್ಸ್- ಸಂಜೆ 7:00ಕ್ಕೆ
ಆಗಸ್ಟ್ 25
ಬೆಂಗಳೂರು ಬ್ಲಾಸ್ಟರ್ಸ್ vs ಮೈಸೂರು ವಾರಿಯರ್ಸ್- ಮದ್ಯಾಹ್ನ 3:00ಕ್ಕೆ
ಮಂಗಳೂರು ಡ್ರ್ಯಾಗನ್ಸ್ vs ಶಿವಮೊಗ್ಗ ಲಯನ್ಸ್- ಸಂಜೆ 7:00ಕ್ಕೆ
ಆಗಸ್ಟ್ 26
ಮಂಗಳೂರು ಡ್ರ್ಯಾಗನ್ಸ್ vs ಹುಬ್ಬಳ್ಳಿ ಟೈಗರ್ಸ್- ಮದ್ಯಾಹ್ನ 3:00ಕ್ಕೆ
ಬೆಂಗಳೂರು ಬ್ಲಾಸ್ಟರ್ಸ್ vs ಗುಲ್ಬರ್ಗಾ ಮಿಸ್ಟಿಕ್ಸ್- ಸಂಜೆ 7:00ಕ್ಕೆ
ಆಗಸ್ಟ್ 27
ಗುಲ್ಬರ್ಗಾ ಮಿಸ್ಟಿಕ್ಸ್ vs ಶಿವಮೊಗ್ಗ ಲಯನ್ಸ್- ಮದ್ಯಾಹ್ನ 3:00ಕ್ಕೆ
ಹುಬ್ಬಳ್ಳಿ ಟೈಗರ್ಸ್ vs ಮೈಸೂರು ವಾರಿಯರ್ಸ್- ಸಂಜೆ 7:00ಕ್ಕೆ
ಆಗಸ್ಟ್ 28
ಮಂಗಳೂರು ಡ್ರ್ಯಾಗನ್ಸ್ vs ಮೈಸೂರು ವಾರಿಯರ್ಸ್- ಮದ್ಯಾಹ್ನ 3:00ಕ್ಕೆ
ಬೆಂಗಳೂರು ಬ್ಲಾಸ್ಟರ್ಸ್ vs ಶಿವಮೊಗ್ಗ ಲಯನ್ಸ್- ಸಂಜೆ 7:00ಕ್ಕೆ
ಆಗಸ್ಟ್ 29
ಬೆಂಗಳೂರು ಬ್ಲಾಸ್ಟರ್ಸ್ vs ಮಂಗಳೂರು ಡ್ರ್ಯಾಗನ್ಸ್- ಮದ್ಯಾಹ್ನ 3:00ಕ್ಕೆ
ಗುಲ್ಬರ್ಗಾ ಮಿಸ್ಟಿಕ್ಸ್ vs ಹುಬ್ಬಳ್ಳಿ ಟೈಗರ್ಸ್- ಸಂಜೆ 7:00ಕ್ಕೆ
ಆಗಸ್ಟ್ 30: ಮೊದಲ ಸೆಮಿ ಫೈನಲ್ಸ್ ಪಂದ್ಯ
ಆಗಸ್ಟ್ 31: ಎರಡನೇ ಸೆಮಿ ಫೈನಲ್ಸ್ ಪಂದ್ಯ
ಸೆಪ್ಟೆಂಬರ್ 1: ಫೈನಲ್ಸ್
ಬೆಂಗಳೂರು : ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ಜಾತಿಗಳ ಮೀಸಲಾತಿ ಪ್ರಮಾಣವನ್ನು ಶೇ.56ಕ್ಕೆ ಹೆಚ್ಚಳ…
ಹೊಸದಿಲ್ಲಿ : ಹಿರಿಯ ನಟ ಧರ್ಮೇಂದ್ರ, ದಂತಕಥೆ ಹಿನ್ನೆಲೆ ಗಾಯಕಿ ಅಲ್ಕಾ ಯಾಜ್ಞಿಕ್, ಮಲಯಾಳಂ ಸಿನಿಮಾ ದಿಗ್ಗಜ ಮಮ್ಮುಟ್ಟಿ, ಬಂಗಾಳಿ…
ಹೊಸದಿಲ್ಲಿ : ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಅಪಾಯ ಹೊರಗಿನಿಂದಲ್ಲ, ‘ಆಂತರಿಕ ವ್ಯವಸ್ಥೆ’ಯಿಂದಲೇ ಇದೆ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಉಜ್ಜಲ್…
ಬೆಂಗಳೂರು : ಅಧಿಕಾರಿಗಳು ಜನಪ್ರತಿನಿಧಿಗಳ ದೂರವಾಣಿ ಕರೆಯನ್ನು ಸ್ವೀಕರಿಸಲೇಬೇಕು ಎಂಬ ಸುತ್ತೋಲೆಯನ್ನು ಹೊರಡಿಸುವ ಮೂಲಕ ಸರ್ಕಾರಿ ಅಧಿಕಾರಿಗಳಿಗೆ ರಾಜ್ಯ ಸರ್ಕಾರ…
ಮೈಸೂರು : ಹೊಸದಿಲ್ಲಿಯಲ್ಲಿ ಬುದ್ಧಗಯಾ ವಿಮೋಚನೆ ಐತಿಹಾಸಿಕ ಚಳವಳಿಯಲ್ಲಿ ಬೌದ್ಧ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಬೌದ್ಧ ಚಿಂತಕ,…
ಮೈಸೂರು : ರಥಸಪ್ತಮಿ ಅಂಗವಾಗಿ ನಗರದಲ್ಲಿ ಭಾನುವಾರ ಅರಮನೆ ಸೇರಿದಂತೆ ವಿವಿಧೆಡೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸೂರ್ಯನಿಗೆ ನಮಿಸಲಾಯಿತು.…