ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಎಸ್‌ಅರ್‌ಎಚ್ ವಿರುದ್ಧ ಲಖನೌಗೆ ಹೀನಾಯ ಸೋಲು ಕಂಡಿತು. ಇದು ಐಪಿಎಲ್ ಇತಿಹಾಸದಲ್ಲೇ ಅತೀ ಕಡಿಮೆ ಓವರ್‌ನಲ್ಲಿ ಬೃಹತ್ ಮೊತ್ತ ಒಂದನ್ನು ಚೇಸ್ ಮಾಡಿದ್ದು ಇದೇ ಮೊದಲು.
ಈ ಹೀನಾಯ ಸೋಲು ಕಂಡ ಲಖನೌ ಸೂಪರ್ ಜೈಂಟ್ಸ್ ಮಾಲೀಕ ಸಂಜೀವ್ ಗೋಯಂಕಾ ತಂಡದ ಪ್ರದರ್ಶನದಿಂದ ಬೇಸರಗೊಂಡಿದ್ದಾರೆ. ಮತ್ತು ನಾಯಕ ಕೆ.ಎಲ್ ರಾಹುಲ್ ಜತೆ ಕೋಪದಿಂದ ವರ್ತಿಸುತ್ತಿರುವುದು ಕಂಡು ಬಂದಿದೆ.
ಪಂದ್ಯ ಮುಗಿದ ಬಳಿಕ ತಂಡದ ನೀರಸ ಪ್ರದರ್ಶನಕ್ಕೆ ಸಿಟ್ಟಾದ ಮಾಲೀಕ ಗೋಯಂಕಾ ಡಗ್‌ಔಟ್‌ನಲ್ಲಿ ನಾಯಕ ರಾಹುಲ್ ಜತೆ ಕೋಪದಿಂದಲೇ ಮಾತನಾಡುತ್ತಿರುವುದು ಕಂಡುಬಂದಿದೆ. ಆದರೆ, ಅವರಿಬ್ಬರು ಸಂಭಾಷಣೆ ಏನು ಎಂಬುದರ ಯಾರಿಗೂ ಸ್ಪಷ್ಟತೆ ಸಿಕ್ಕಿಲ್ಲ. ಇನ್ನು ಈ ಇಬ್ಬರ ನಡುವಣ ಮಾತಿನ ಚಕಮಕಿ ವೀಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಇದನ್ನು ನೋಡಿರುವ ನೆಟ್ಟಿಗರು ಈ ಇಬ್ಬರ ನಡುವೆ ಜಗಳ ಆಗಿದೆ ಎಂದು ಹೇಳುತ್ತಿದ್ದಾರೆ.
ಅಸಲಿಗೆ ಸಂಜೀವ್ ಹಾಗೂ ರಾಹುಲ್ ನಡುವಿನ ಮಾತುಕತೆ ಅಸಲಿಯತ್ತೇನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
ಇನ್ನು ಈ ಪಂದ್ಯದಲ್ಲಿ ಲಖನೌ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 166 ರನ್ ಗಳಿಸಿದರೇ, ತಮ್ಮ ತವರಿನಂಗಳದಲ್ಲಿ ಚೇಸ್ ಮಾಡಿದ ಎಸ್‌ಆರ್‌ಎಚ್ ಕೇವಲ 9.4 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ 167 ರನ್ ಚಚ್ಚಿದರು. ಇದು ಐಪಿಎಲ್ ಇತಿಹಾಸದೇ ಇಷ್ಟೊಂದು ರನ್‌ನ್ನು ಕಡಿಮೆ ಓವರ್‌ನಲ್ಲಿ ಚೇಸ್ ಮಾಡಿದ್ದು ಇದೇ ಮೊದಲಾಗಿತ್ತು.
ಬೊಗೋಟಾ: 125 ಜನರನ್ನು ಹೊತ್ತೊಯ್ಯುತ್ತಿದ್ದ ಮಿಲಿಟರಿ ವಿಮಾನವು ಟೇಕಾಫ್ ಕೆಲ ಸಮಯದಲ್ಲಿ ಪತನಗೊಂಡು 66 ಜನರು ಸಾವನ್ನಪ್ಪಿರುವ ಘಟನೆ ಕೊಲಂಬಿಯಾದಲ್ಲಿ…
ಬಾ ಮಳೆಯೇ ಬಾ.. ನೊಂದು - ಬೆಂದು ಬಸವಳಿದ ರೈತನ ಬಾಳಿಗೆ ಹೂವಾಗಿ ಬಾ ಕಾದ ಭೂತಾಯ ಒಡಲಿಂಗೆ ಹನಿ…
ಪಡಿತರ ಮತ್ತು ಪಿಂಚಣಿಗೆ ಬಯೋಮೆಟ್ರಿಕ್ ಕಡ್ಡಾಯವಿರುವಾಗ ಚುನಾವಣೆಯಲ್ಲಿ ಇದಕ್ಕೇಕೆ ವಿನಾಯಿತಿ? ಭಾರತದಂತಹ ವಿಶಾಲ ದೇಶದಲ್ಲಿ. ಶೇ.೨೦ ರಿಂದ ೨೨ ರಷ್ಟು…
ಒಂದನೇ ತರಗತಿ ಪ್ರವೇಶಕ್ಕೆ ಜೂನ್ ೧ಕ್ಕೆ ೬ ವರ್ಷ ಕಡ್ಡಾಯಗೊಳಿಸಿರುವ ನಿಯಮವು, ಕೇವಲ ಕೆಲವೇ ದಿನಗಳ ಅಂತರವಿರುವ ಮಕ್ಕಳ ಒಂದು…
ಕಾಂಗ್ರೆಸ್ ಪಕ್ಷದ ಲೋಕಸಭಾ ಸದಸ್ಯರ ನಡವಳಿಕೆಯನ್ನು ಕುರಿತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಇತ್ತೀಚೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ…
ಬೇಸಿಗೆಯ ರಜೆ ಎಂದರೆ ಮಕ್ಕಳಿಗೆ ಸಂತೋಷದ ಕಾಲ. ಶಾಲೆಯ ಒತ್ತಡದಿಂದ ದೂರವಾಗಿ ಆಟ-ಪಾಠಗಳಲ್ಲಿ ತೊಡಗಿಸಿಕೊಳ್ಳುವ ಸಮಯ. ಆದರೆ ಇತ್ತೀಚಿನ ದಿನಗಳಲ್ಲಿ…