ಪ್ರಸ್ತುತ ನಡೆಯುತ್ತಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಆರನೇ ಲೀಗ್ ಪಂದ್ಯ ನಿನ್ನೆ ( ನವೆಂಬರ್ 24 ) ಡೆಹ್ರಾಡೂನ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಹರ್ಭಜನ್ ಸಿಂಗ್ ನಾಯಕತ್ವದ ಟೈಗರ್ಸ್ ತಂಡ ಇರ್ಫಾನ್ ಪಠಾಣ್ ನಾಯಕತ್ವದ ಭಿಲ್ವಾರಾ ಕಿಂಗ್ಸ್ ತಂಡದ ವಿರುದ್ಧ 89 ರನ್‌ಗಳ ಭರ್ಜರಿ ಗೆಲುವನ್ನು ದಾಖಲಿಸಿತು. ಮಣಿಪಾಲ್ ಟೈಗರ್ಸ್ ತಂಡ 3 ವಿಕೆಟ್ ನಷ್ಟಕ್ಕೆ 211 ರನ್ ಕಲೆಹಾಕಿದರೆ, ಭಿಲ್ವಾರಾ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 122 ರನ್ ಕಲೆಹಾಕಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮಣಿಪಾಲ್ ಟೈಗರ್ಸ್ ತಂಡದ ಪರ ಆರಂಭಿಕರಾಗಿ ರಾಬಿನ್ ಉತ್ತಪ್ಪ ಹಾಗೂ ಚಡ್‌ವಿಕ್ ವಾಲ್ಟನ್ ಕಣಕ್ಕಿಳಿದರು. ಉತ್ತಪ್ಪ 30 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 2 ಬೌಂಡರಿ ಸಹಿತ 51 ನ್ ಬಾರಿಸಿದರೆ, ವಾಲ್ಟನ್ 55 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 9 ಬೌಂಡರಿ ಸಹಿತ ಭರ್ಜರಿ 104 ರನ್ ಬಾರಿಸಿದರು. ಇನ್ನುಳಿದಂತೆ ಹ್ಯಾಮಿಲ್ಟನ್ ಮಸಕಾಡ್ಜಾ 37, ತಿಸಾರಾ ಪೆರೆರಾ 6, ಕೊಲಿನ್ ಡಿ ಗ್ರಾಂಡ್‌ಹೋಮ್ ಅಜೇಯ 1 ಹಾಗೂ ಏಂಜೆಲೋ ಪೆರೆರಾ ಅಜೇಯ 3 ರನ್ ಬಾರಿಸಿದರು. ಭಿಲ್ವಾರಾ ಕಿಂಗ್ಸ್ ಪರ ಕ್ರಿಸ್ಟೋಫರ್ ಬಾರ್ನ್‌ವೆಲ್ 2 ಹಾಗೂ ರಾಹುಲ್ ಶರ್ಮಾ ಒಂದು ವಿಕೆಟ್ ಪಡೆದರು.
ಮಣಿಪಾಲ್ ಟೈಗರ್ಸ್ ನೀಡಿದ ಬೃಹತ್ ಗುರಿಯನ್ನು ಬೆನ್ನತ್ತಲು ಯತ್ನಿಸಿದ ಭಿಲ್ವಾರಾ ಕಿಂಗ್ಸ್ ಪರ ತಿಲಕರತ್ನೆ ದಿಲ್‌ಶಾನ್ 26, ಸೊಲೊಮನ್ ಮೈರ್ 3, ಲೆಂಡ್ಲ್ ಸಿಮನ್ಸ್ ಡಕ್‌ಔಟ್, ರಾಬಿನ್ ಬಿಸ್ಟ್ 9, ಯೂಸುಫ್ ಪಠಾಣ್ 16, ಕ್ರಿಸ್ಟೋಫರ್ ಬಾರ್ನ್‌ವೆಲ್ 16, ಇರ್ಫಾನ್ ಪಠಾಣ್ 5, ಜೆಸಾಲ್ ಕಾರಿಯ 2, ಇಕ್ಬಾಲ್ ಅಬ್ದುಲ್ಲಾ ಅಜೇಯ 10 ಹಾಗೂ ಅನುರೀತ್ ಸಿಂಗ್ ಅಜೇಯ 18 ರನ್ ಗಳಿಸಿದರು. ಮಣಿಪಾಲ್ ಟೈಗರ್ಸ್ ತಂಡದ ಪರ ನಾಯಕ ಇಮ್ರಾನ್ ಖಾನ್ 3 ವಿಕೆಟ್, ಪರ್ವಿಂದರ್ ಅವಾನಾ 2 ವಿಕೆಟ್, ಮಿಚೆಲ್ ಮೆಕ್‌ಕ್ಲೆಗಾನ್, ಪ್ರವೀಣ್ ಗುಪ್ತಾ ಹಾಗೂ ಹರ್ಭಜನ್ ಸಿಂಗ್ ತಲಾ ಒಂದೊಂದು ವಿಕೆಟ್ ಪಡೆದರು.
ಈ ಗೆಲುವಿನೊಂದಿಗೆ ಟೂರ್ನಿಯಲ್ಲಿ ತನ್ನ ಎರಡನೇ ಜಯವನ್ನು ಸಾಧಿಸಿದ ಮಣಿಪಾಲ್ ಟೈಗರ್ಸ್ ತಂಡ ಹೆಚ್ಚು ನೆಟ್ ರನ್ ರೇಟ್ ಪಡೆಯುವ ಮೂಲಕ ತನ್ನಷ್ಟೇ ಅಂಕ ಪಡೆದಿದ್ದ ಅರ್ಬನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…
ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…
ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…
ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…
ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…
ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…