ಡೆಹ್ರಡೂನ್ : ಭರ್ಜರಿ ಬ್ಯಾಟಿಂಗ್ ತೋರಿದ ಇಂಡಿಯಾ ಕ್ಯಾಪಿಟಲ್ಸ್ ತಂಡವು ಸದರ್ನ್ ಸೂಪರ್‌ಸ್ಟಾರ್ ತಂಡದ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಇಲ್ಲಿನ ರಾಜೀವ್‌ಗಾಂಧಿ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎಸ್‌ಎನ್‌ಎಸ್‌ಎಸ್ ನೀಡಿದ್ದ 163 ರನ್ ಗಳ ಗುರಿ ಬೆನ್ನಟ್ಟಿದ ಇಂಡಿಯಾ ಕ್ಯಾಪಿಟಲ್ಸ್ ತಂಡವು 16.4 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 167 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಎಸ್‌ಎನ್‌ಎಸ್‌ಎಸ್ ತಂಡವು ಆರಂಭದಲ್ಲಿಯೇ ಮುನವೀರ (4) ವಿಕೆಟ್ ಕಳೆದುಕೊಂಡಿತು. ಡಿ ಸಿಲ್ವಾ (56) ಆಕರ್ಷಕ ಅರ್ಧ ಶತಕ ಸಿಡಿಸಿ ತಂಡಕ್ಕೆ ಚೇತರಿಕೆ ನೀಡಿದರು. ನಾಯಕ ರಾಸ್ ಟೈಲರ್ (24), ಗೋಸ್ವಾಮಿ (24), ಪವನ್ ನೇಗಿ (12), ಉಪುಲ್ ತರಂಗಾ (19) ತಂಡ 163 ರನ್ ಗುರಿ ಮುಟ್ಟಲು ಸಹಕರಿಸಿದರು.
ಇಂಡಿಯಾ ಕ್ಯಾಪಿಟಲ್ಸ್ ಪರ ರಸ್ಟಿ ತೀರನ್ 2, ನರ್ಸ್ 2, ಕೆ.ಪಿ ಅಪ್ಪಣ್ಣ ಮತ್ತು ಉದಾನಾ ತಲಾ 1 ವಿಕೆಟ್ ಪಡೆದರು.
163 ರನ್‌ಗಳ ಗುರಿ ಬೆನ್ನಟ್ಟಿದ ಇಂಡಿಯಾ ಕ್ಯಾಪಿಟಲ್ಸ್ ನಾಯಕ ಗೌತಮ್ ಗಂಭೀರ್ ಅವರ ವಿಕೆಟ್‌ನ್ನು ಬೇಗನೆ ಕಳೆದುಕೊಂಡಿತು. ನಾಯಕ ಗಂಭೀರ್ ಕೇವಲ ಮೂರು ರನ್‌ಗಳಿಸಿ ಔಟಾದರು. ನಂತರ ಬಂದ ಜ್ಞಾನೇಶ್ವರ್ ಶೂನ್ಯಕ್ಕೆ ಔಟಾಗಿ ಬಂದ ದಾರಿಯಲ್ಲೇ ಹಿಂದಿರುಗಿದರು.
ಆರಂಭಿಕ ಆಟಗಾರ ರಿಕಾರ್ಡೋ ಪೋವೆಲ್ ಹಾಗೂ ಎಡ್ವರ್ಡ್ಸ್ ಅವರ ಜೊತೆಯಾಟ ಇಂಡಿಯಾ ಕ್ಯಾಪಿಟಲ್ಸ್ ತಂಡ ದಿಕ್ಕನ್ನೇ ಬದಲಾಯಿಸಿದರು. ಪೋವೆಲ್ 57 ಎಸೆತಗಳಲ್ಲಿ 6 ಬೌಂಡರಿ ಹಾಗೂ 10 ಸಿಕ್ಸರ್ ಮೂಲಕ 100 ರನ್ ಸಿಡಿsiದರೇ, ಎಡ್ವರ್ಡ್ಸ್ 45 ರನ್ ಗಳಿಸಿ ತಂಡವನ್ನು ಗೆಲುವಿನ ಸನಿಹ ಕೊಂಡ್ಯೋಯ್ದರು. ಕೇವಿನ್ ಪೀಟರ್‌ಸನ್ 4 ರನ್ ಗಳಿಸಿದರು. ಅಂತಿಮವಾಗಿ 16.4 ಓವರ್‌ಗಳಲ್ಲಿ ಕೇವಲ ಮೂರು ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿದರು.
ಎಸ್‌ಎನ್‌ಎಸ್‌ಎಸ್ ಪರ ಸುರಂಗ ಲಕ್ಮಾಲ್ 1 ಪಡೆದರು.
ಪಂದ್ಯ ಶ್ರೇಷ್ಠ : ರಿಕಾರ್ಡೋ ಪೋವೆಲ್
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…