ಲಖನೌ: ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್. ರಾಹುಲ್‌ಗೆ ಎಂದಿಗೂ ನಾಯಕತ್ವದ ಕೊರತೆ ಕಾಡವುದಿಲ್ಲ ಎಂದು ಫೀಲ್ಡಿಂಗ್ ಕೋಚ್ ಜಾಂಟಿ ರೋಡ್ಸ್ ಅಭಿಪ್ರಾಯಪಟ್ಟರು. ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ರಾಹುಲ್ ಅವರು ಅರ್ಧಶತಕ ಬಾರಿಸಿದ ಹಿನ್ನೆಲೆಯಲ್ಲಿ ಈ ಮಾತನ್ನು ಹೇಳಿದ್ದಾರೆ.
ಪಂದ್ಯದಲ್ಲಿ ರಾಹುಲ್ ಅವರು 56 ಎಸೆತಗಳಲ್ಲಿ 74 ರನ್ ಗಳಿಸಿದರು.
ಹಿಂದಿನ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್‌ನ ನಾಯಕತ್ವವನ್ನು ರಾಹುಲ್ ಅವರು ವಹಿಸಿದ್ದರು. ಆ ಸಂದರ್ಭ ರೋಡ್ಸ್ ಕೂಡ ಆ ತಂಡದ ಕ್ಷೇತ್ರರಕ್ಷಣೆಯ ಕೋಚ್ ಆಗಿದ್ದರು.
‘ನಾಯಕನಾಗಿ ಅವರು ಮುಂದೆ ನಿಂತು ತಂಡವನ್ನು ಮುನ್ನಡೆಸುತ್ತಾರೆ. ಇಲ್ಲಿ ವರೆಗಿನ ಐಪಿಎಲ್‌ನ ಎಲ್ಲಾ ಆವೃತ್ತಿಗಳಲ್ಲಿ ರಾಹುಲ್ ಅವರು ಯಶಸ್ವಿಯಾಗಿದ್ದಾರೆ, ಅವರು ಆಟದ ಮೇಲೆ ಪ್ರಾಬಲ್ಯ ಹೊಂದಿರುವ ಬ್ಯಾಟರ್ ಆಗಿದ್ದಾರೆ. ನಾಯಕತ್ವದ ಕೊರತೆ ಅವರನ್ನು ಎಂದಿಗೂ ಕಾಡುವ ವಿಷಯವಲ್ಲ‘ ಎಂದರು.
‘ನಾಯಕತ್ವವನ್ನು ನೀಡಿದಾಗ ಅನೇಕ ಶ್ರೇಷ್ಠ ಬ್ಯಾಟರ್‌ಗಳು ಅದನ್ನು ಸರಿಯಾಗಿ ನಿಭಾಯಿಸುವುದರಲ್ಲಿ ಸೋಲುತ್ತಾರೆ. ಆದರೆ ರಾಹುಲ್ ಆರಂಭಿಕ ಬ್ಯಾಟರ್ ಆಗಿ ಮುನ್ನಡೆಸಿದ್ದಾರೆ. ಅವರ ಆಟ ನೋಡುವುದೇ ಸೊಗಸು ಎಂದು ನಾನು ಭಾವಿಸುತ್ತೇನೆ‘ ಎಂದು ರೋಡ್ಸ್ ಪಂದ್ಯದ ನಂತರದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಪಂಜಾಬ್ ವಿರುದ್ಧ ರಾಹುಲ್ ಅವರನ್ನು ಹೊರತು ಪಡಿಸಿ ಇತರ ಲಖನೌ ಜೋಡಿಯ ಸಾಥ್ ಸಿಕ್ಕಿ ಬ್ಯಾಟರ್‌ಗಳು ಪ್ರಭಾವ ಬೀರಲು ವಿಫಲವಾವಾದರು. ಆದರೂ ರಾಹುಲ್ 19ನೇ ಓವರ್ ವರೆಗೆ ಬ್ಯಾಟಿಂಗ್ ಮಾಡಿದರು. ನಾಯಕನಿಗೆ ಕೊನೆಯ ತನಕಗೆ ಉತ್ತಮ ಜೋಡಿಯ ಸಾಥ್ ಸಿಕ್ಕಿ ಸ್ಕೋರ್ ಹಿಗ್ಗಿಸಬಹುದೆಂದು ಭಾವಿಸಿದೆ‘ ಎಂದು ರೋಡ್ಸ್ ವಿಶ್ಲೇಷಿಸಿದರು.
ರಾಹುಲ್ ಅವರ ಅರ್ಧ ಶತಕದ ಹೊರತಾಗಿಯೂ ಪಂಜಾಬ್ ಕಿಂಗ್ಸ್ ತಂಡ 2 ವಿಕೆಟ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.
ಹನೂರು : ಮಹದೇಶ್ವರ ಬೆಟ್ಟ ರಸ್ತೆಯಲ್ಲಿ ನಡೆದ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಜಿಂಕೆಯೊಂದು ರಸ್ತೆಯಲ್ಲಿಯೇ ಮೃತಪಟ್ಟಿರುವ ಘಟನೆ ಭಾನುವಾರ…
ಹನೂರು : ತಾಲ್ಲೂಕಿನ ದೊಡ್ಡಾಲತ್ತೂರು, ಅಜ್ಜೀಪುರ ಸುತ್ತಮುತ್ತಲೂ ಜಿಎಸ್ಐ ಅಧಿಕಾರಿಗಳು ಚಿನ್ನದ ನಿಕ್ಷೇಪ ಇರುವ ಬಗ್ಗೆ ಅಧ್ಯಯನಕ್ಕೆ ಮುಂದಾಗುತ್ತಿದ್ದಂತೆ ಚಿನ್ನದಾಸೆಗಾಗಿ…
ಮೈಸೂರು : ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂಭ್ರಮಕ್ಕೆ ಮುನ್ನುಡಿಯಾಗಿ ಅರಮನೆ ಫಲಪುಷ್ಪ ಪ್ರದರ್ಶನ ಭಾನುವಾರದಿಂದ ವರ್ಣರಂಜಿತವಾಗಿ ಆರಂಭಗೊಂಡಿದೆ. ಮೈಸೂರು…
ಜೋಹಾನ್ಸ್ಬರ್ಗ್ : ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ನ ಪಶ್ಚಿಮದಲ್ಲಿರುವ ಬೆಕರ್ಸ್ಡಾಲ್ ಪಟ್ಟಣದಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದೆ. ಈ ಸಾಮೂಹಿಕ ಗುಂಡಿನ…
ಎಚ್.ಡಿ.ಕೋಟೆ : ಹುಲಿ ದಾಳಿಯಿಂದ ತತ್ತರಿಸಿರುವ ತಾಲ್ಲೂಕಿನ ಜನತೆಗೆ ಇದೀಗ ಚಿರತೆ ದಾಳಿಯು ನಿದ್ದೆಗೆಡಿಸಿದೆ. ಪಟ್ಟಣದ ವಾರ್ಡ್ ನಂಬರ್ 21ರ…
ಚಾಮರಾಜನಗರ : ತಾಲ್ಲೂಕಿನ ಗಂಗವಾಡಿ ಗ್ರಾಮದ ಬಳಿ ಶನಿವಾರ ರಾತ್ರಿ ಜಮೀನಿನಲ್ಲಿ ಕಟ್ಟಿ ಹಾಕಿದ್ದ ಕರುಗಳ ಮೇಲೆ ಚಿರತೆ ದಾಳಿ…