ಕ್ರೀಡೆ

IPL 2024: ಕೆಕೆಆರ್‌ಗೆ ಆರ್‌ಸಿಬಿ ವಿರುದ್ಧ 1ರನ್‌ಗಳ ರೋಚಕ ಜಯ: ಆರ್‌ಸಿಬಿಗೆ ಸತತ 6ನೇ ಸೋಲು!

ಕೊಲ್ಕತ್ತಾ: ಕೊಲ್ಕತ್ತಾ ನೈಟ್‌ರೈಡರ್ಸ್‌ ತಂಡದ ಶಿಸ್ತುಬದ್ಧ ಬೌಲಿಂಗ್‌ ದಾಳಿಗೆ ಮಂಕಾದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 1ರನ್‌ ಗಳ ಹೀನಾಯ ಸೋಲು ಕಂಡಿದೆ. ಇದು ಆರ್‌ಸಿಬಿಗೆ ಟೂರ್ನಿಯಲ್ಲಿ 6ನೇ ಸೋಲಾಗಿದ್ದು, ಇನ್ನುಳಿದ ಎಲ್ಲಾ ಪಂದ್ಯಗಳನ್ನು ಗದ್ದರೂ ಸಹಾ ಆರ್‌ಸಿಬಿ ಈ ಸೀಸನ್‌ನಿಂದ ಬಹುತೇಕ ಹೊರಬಿದ್ದಂತೆ ಆಗಿದೆ.

ಇಲ್ಲಿನ ಈಡೆನ್‌ ಗಾರ್ಡನ್‌ ಮೈದಾನದಲ್ಲಿ ನಡೆದ ಐಪಿಎಲ್‌ ಸೀಸನ್‌ 17ರ ಆವೃತ್ತಿಯ ಲೀಗ್‌ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಕೆಕೆಆರ್‌ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಕೆಕೆಆರ್‌ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 222ರನ್‌ ಕಲೆಹಾಕಿ 223 ರನ್‌ಗಳ ಗುರಿ ನೀಡಿತು. ಈ ಮೊತ್ತ ಬೆನ್ನತ್ತಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ ಆಲ್‌ಔಟ್‌ ಆಗುವ ಮೂಲಕ 221 ರನ್‌ ಗಳಿಸಿತು.

ಕೆಕೆಆರ್‌ ಇನ್ನಿಂಗ್ಸ್‌: ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಕೆಕೆಆರ್‌ ತಂಡಕ್ಕೆ ಆರಂಭಿಕ ಆಘಾತ ಉಂಟಾಯಿತು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ನರೈನ್‌ ಕೇವಲ 10ರನ್‌ ಗಳಿಗೆ ಸುಸ್ತಾದರು. ಇನ್ನು ಇವರಿಗೆ ಜೊತೆಯಾಗಿ ಇನ್ನಿಂಗ್ಸ್‌ ಆರಂಭಿಸಿದ್ದ ಪಿಲಿಪ್‌ ಸಾಲ್ಟ್‌ 14 ಎಸೆತ ಎದುರಿಸಿ 7 ಬೌಂಡರಿ, 3ಸಿಕ್ಸರ್‌ ಸಹಿತ 48 ರನ್‌ ಬಾರಿಸಿ ನಿರ್ಗಮಿಸಿದರು. ನಂತರ ಬಂದ ರಘುವಂಶಿ 3, ವೆಂಕಟೇಶ್‌ ಅಯ್ಯರ್‌ 16ರನ್‌ ಗಳಿಸಿ ಔಟಾದರು.

ಒಂದೆಡೆ ಭದ್ರವಾಗಿ ನಿಂತು ಇನ್ನಿಂಗ್ಸ್‌ ಕಟ್ಟಿದ ನಾಯಕ ಶ್ರೇಯಸ್‌ ಅಯ್ಯರ್‌ 36 ಎಸೆತಗಳಲ್ಲಿ 7ಬೌಂಡರಿ ಹಾಗೂ 1ಸಿಕ್ಸರ್‌ ಸಹಿತ 50ರನ್‌ ಗಳಿಸಿ ತಂಡಕ್ಕೆ ಆಸರೆಯಾದರು. ಉಳಿದಂತೆ ರಿಂಕು ಸಿಂಗ್‌ 24, ರಸೆಲ್‌ 27 ಹಾಗೂ ರಮಣ್‌ದೀಪ್‌ ಸಿಂಗ್‌ 24 ರನ್‌ ಗಳಿಸಿ ತಂಡದ ಮೊತ್ತ 200 ಗಡಿ ದಾಟಲು ಸಹಕರಿಸಿದರು.

ಆರ್‌ಸಿಬಿ ಪರ ಕ್ಯಾಮರೋನ್‌ ಗ್ರೀನ್‌, ಯಶ್‌ ದಯಾಳ್‌ ತಲಾ ಎರಡೆರೆಡು ವಿಕೆಟ್‌ ಪಡೆದರು. ಸಿರಾಜ್‌ ಹಾಗೂ ಫರ್ಗೂಸನ್‌ ಒಂದೊಂದು ವಿಕೆಟ್‌ ಪಡೆದರು.

ಆರ್‌ಸಿಬಿ ಇನ್ನಿಂಗ್ಸ್‌: ಇನ್ನು ಈ ಬೃಹತ್‌ ಮೊತ್ತ ಬೆನ್ನತ್ತಿದ ಆರ್‌ಸಿಬಿಗೆ ಆರಂಭಿಕ ಆಘಾತ ಉಂಟಾಯಿತು. ನಾಯಕ ಫಾಫ್‌ ಕೇವಲ 7 ಹಾಗೂ ವಿರಾಟ್‌ 18 ರನ್‌ ಕಲೆಹಾಕಿ ಬೇಗನೇ ವಿಕೆಟ್‌ ಒಪ್ಪಿಸಿ ಹೊರ ನಡೆದರು. ನಂತರ ಜತೆಯಾದ ವಿಲ್‌ ಜಾಕ್‌ ಹಾಗೂ ರಜತ್‌ ಪಟಿದರ್‌ ಕೆಕೆಆರ್‌ ಬೌಲರ್‌ಗಳನ್ನು ಕಾಡಿದರು. ವಿಲ್‌ ಜಾಕ್‌ 55(32) ಪಟಿದರ್‌ 52(23) ರನ್‌ ಬಾರಿಸಿ ನಿರ್ಗಮಿಸಿದರು.

ಈ ಇಬ್ಬರ ನಂತರ ಬಂದ ಬೇರಾರಿಂದಲೂ ನಿರೀಕ್ಷಿತ ಆಟ ಕಂಡು ಬರಲಿಲ್ಲ. ಕ್ಯಾಮರೋನ್‌ ಗ್ರೀನ್‌ 6, ಪ್ರಭುದೇಸಾಯ್‌ 24, ಲೋಮರೋರ್‌ 4, ದಿನೇಶ್‌ ಕಾರ್ತಿಕ್‌ 25, ಕೊನೆಯ ಓವರ್‌ನಲ್ಲಿ 21

ಬೇಕಿದ್ದಾಗ ಮಿಚೆಲ್‌ ಸ್ಟಾರ್ಕ್‌ಗೆ ಮೂರು ಸಿಕ್ಸರ್‌ ಬಾರಿಸಿದ ಕರಣ್‌ ಶರ್ಮಾ 20 ರನ್‌ ಗಳಿಸಿ ಹೋರಾಟ ತೋರಿದರು ಗೆಲ್ಲಲು ಆಗಲಿಲ್ಲ. ಅಂತಿಮವಾಗಿ ಕೆಕೆಆರ್‌ ಕೇವಲ 1 ರನ್‌ ಗಳಿಂದ ಆರ್‌ಸಿಬಿ ವಿರುದ್ಧ ಗೆದ್ದು ಬೀಗಿತು.

ಕೆಕೆಆರ್‌ ಪರ ರಸೆಲ್‌ 3 ವಿಕೆಟ್‌, ನರೈನ್‌ ಹಾಗೂ ಹರ್ಷಿತ್‌ ರಾಣಾ ತಲಾ 2 ವಿಕೆಟ್‌, ಸ್ಟಾರ್ಕ್‌ ಮತ್ತು ವರುಣ್‌ ಚಕ್ರವರ್ತಿ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

ಪಂದ್ಯ ಶ್ರೇಷ್ಠ: ಆಂಡ್ರೆ ರಸೆಲ್‌

ವಾಸು ವಿ ಹೊಂಗನೂರು

ಮೂಲತಃ ಚಾಮರಾಜನಗರ ಜಿಲ್ಲೆಯ ಹೊಂಗನೂರು ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಪದವಿಯಲ್ಲಿ ಪತ್ರಿಕೋದ್ಯಮ ವಿಭಾಗ ಆಯ್ದುಕೊಂಡು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2020ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಪತ್ರಿಕೋದ್ಯಮದಲ್ಲಿ 3 ವರ್ಷಗಳ ಅನುಭವವಿದ್ದು, ಕಳೆದ ಒಂದು ವರ್ಷದಿಂದ ಆಂದೋಲನ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ 6 ತಿಂಗಳಿನಿಂದ ಆಂದೋಲನ ಡಿಜಿಟಲ್‌ ವಿಭಾಗದಲ್ಲಿ ತೊಡಗಿಸಿಕೊಂಡಿದ್ದೇನೆ. ಕ್ರಿಕೆಟ್‌ ಮೇಲೆ ಎಲ್ಲಿಲ್ಲದ ಪ್ರೀತಿಯಿದ್ದು, ಪ್ರವಾಸ, ಇತಿಹಾಸ ಅಧ್ಯಯನ ಕಡೆ ಒಲವು ಹೆಚ್ಚು. ಪತ್ರಿಕಾ ರಂಗದಲ್ಲಿ ಕ್ರೀಡಾ ವಿಭಾಗದಲ್ಲಿ ಹೆಚ್ಚು ಆಸಕ್ತಿ ಇದೆ‌. ಮೊಬೈಲ್‌ ನಂಬರ್:‌ 9620318288

Recent Posts

ಮೈಸೂರು| ಕಣ್ಣಿಗೆ ಕಾರದಪುಡಿ ಎರಚಿ ಹಲ್ಲೆ ಬಳಿಕ ಅಪಹರಣ

ಮೈಸೂರು: ಕಣ್ಣಿಗೆ ಕಾರದಪುಡಿ ಎರಚಿ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಿ ಅಪಹರಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ವಿಜಯನಗರ ಮೂರನೇ ಹಂತದಲ್ಲಿ ಈ…

5 mins ago

ಗೋವಾದಲ್ಲಿ ಘೋರ ದುರಂತ: ಬಾಗಾ ಬೀಚ್‌ ಬಳಿ ನೈಟ್‌ ಕ್ಲಬ್‌ನಲ್ಲಿ ಭೀಕರ ಅಗ್ನಿ ಅವಘಡ: 25 ಮಂದಿ ಸಜೀವ ದಹನ

ಗೋವಾ: ಇಲ್ಲಿನ ನೈಟ್‌ ಕ್ಲಬ್‌ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, 25 ಜನ ಸಾವನ್ನಪ್ಪಿದ್ದಾರೆ. ಉತ್ತರ ಗೋವಾದ ಅರ್ಪೋರಾದಲ್ಲಿರುವ ನೈಟ್‌…

6 mins ago

ಓದುಗರ ಪತ್ರ: ಅಮೃತ ಬೇಕರಿ ನಿಲ್ದಾಣದಲ್ಲಿ ಬಸ್ ತಂಗುದಾಣ ನಿರ್ಮಿಸಿ

ಮೈಸೂರಿನ ಶ್ರೀರಾಂಪುರದ ಮಾರ್ಗದಲ್ಲಿ ಬರುವ ಅಮೃತ್ ಬೇಕರಿ ಬಸ್ ನಿಲ್ದಾಣದಲ್ಲಿ ನಿರ್ಮಿಸಲಾಗಿದ್ದ ತಂಗುದಾಣ ಹಾಳಾಗಿದ್ದು, ಬಸ್‌ಗಾಗಿ ಕಾಯುವವರು ರಸ್ತೆಯಲ್ಲಿ ನಿಲ್ಲಬೇಕಾದ…

33 mins ago

ಓದುಗರ ಪತ್ರ:  ತಂಬಾಕು ಉತ್ಪನ್ನ  ಸೆಸ್: ಕಠಿಣ ಕ್ರಮ ಅಗತ್ಯ

ನಿಕೋಟಿನ್, ಪಾನ್ ಮಸಾಲಾ ಮತ್ತು ಇತರೆ ಹೊಗೆ ರಹಿತ ತಂಬಾಕು ಪದಾರ್ಥಗಳ ಮೇಲೆ ಕೇಂದ್ರ ಸರ್ಕಾರ ಪ್ರಸ್ತಾವಿಸಿದ ಆರೋಗ್ಯ ಮತ್ತು…

37 mins ago

ಓದುಗರ ಪತ್ರ:  ಚಾ.ನಗರ-ಮೈಸೂರು ನಡುವೆ ಹೆಚ್ಚಿನ ರೈಲು ಸೌಲಭ್ಯ ಕಲ್ಪಿಸಿ

ಮೈಸೂರಿನಿಂದ ಚಾಮರಾಜನಗರಕ್ಕೆ ಪ್ರತಿನಿತ್ಯ ೬ ರೈಲುಗಳು ಸಂಚರಿಸುತ್ತಿವೆ. ಈಗ ಸಂಚರಿಸುವ ರೈಲುಗಳ ಜೊತೆ ಚಾಮರಾಜನಗರದಿಂದ ಮೈಸೂರಿಗೆ ಬೆಳಿಗ್ಗೆ ೪.೪೦ಕ್ಕೆ ,…

57 mins ago

ಉಪದ್ರವಕಾರಿ ಶ್ವಾನಗಳ ನಿಯಂತ್ರಣಕ್ಕೆ ಪರಿಹಾರ ಕ್ರಮ ಅಗತ್ಯ

ವಸಂತಕುಮಾರ ಮೈಸೂರಮಠ, ಸಾಮಾಜಿಕ ಕಾರ್ಯಕರ್ತರು ಶ್ವಾನ ಮನುಷ್ಯನ ಅತ್ಯತ್ತಮ ಸ್ನೇಹಿತ ಎಂಬುದರಲ್ಲಿ ಸಂದೇಹವಿಲ್ಲ! ಆದರೆ ಅವು ಉಪದ್ರವಕಾರಿ ಯಾದಾಗ ಏನಾದರೂ…

1 hour ago