ಕ್ರೀಡೆ

ಸಿಕ್ಸ್‌5ಸಿಕ್ಸ್‌ ಜತೆಗೆ ಕೈಜೋಡಿಸಿದ KKR; ಕ್ರಿಕೆಟ್ – ಫ್ಯಾಷನ್ ಗೆ ಬಂತು ಹೊಸ ರೂಪ!

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಕ್ರಿಕೆಟ್ ಜಗತ್ತಿನಲ್ಲಿ ಹೊಸ ಅಲೆಯನ್ನು ಸೃಷ್ಟಿಸಲು ಹೊರಟಿದೆ. ಭಾರತದ ಮೊದಲ ಸ್ವದೇಶೀ ತಂಡದ ಉಡುಪು ಮತ್ತು ಸ್ಟ್ರೀಟ್ವೇರ್ ಬ್ರ್ಯಾಂಡ್ಗಳಲ್ಲಿ ಒಂದಾದ ಸಿಕ್ಸ್‌5ಸಿಕ್ಸ್‌ನೊಂದಿಗೆ ಕೆಕೆಆರ್ ಪಾಲುದಾರಿಕೆಯನ್ನು ಪ್ರಾರಂಭಿಸಿದ್ದು, ‘ಅಧಿಕೃತ ಕಿಟ್ ಪಾಲುದಾರ’ನಾಗಿ ಸಹಿ ಹಾಕಿದೆ.

ಸಿಕ್ಸ್‌5ಸಿಕ್ಸ್‌ ತನ್ನ ವಿನ್ಯಾಸಕ್ಕೆ ಹೆಸರು ವಾಸಿಯಾಗಿದ್ದು, ಆನ್-ಫೀಲ್ಡ್ ಜರ್ಸಿಗಳಿಂದ ಟ್ರಾವೆಲ್ ಗೇರ್ ಮತ್ತು ಫ್ಯಾನ್ ಕಲೆಕ್ಷನ್ ಪ್ರತಿಯೊಂದು ಉತ್ಪನ್ನವನ್ನು ಪ್ರದರ್ಶಿಸಿ ಕೆಕೆಆರ್ ತಂಡದ ಅದ್ಭುತವಾದ ಪಯಣವನ್ನು ಸೆರೆಹಿಡಿಯಲಿದೆ. ಸ್ಟೈಲಿಶ್ ಮತ್ತು ಉತ್ತಮ ಗುಣಮಟ್ಟ ಮಾತ್ರವಲ್ಲದೆ ಕೈಗೆಟುಕುವ ಬೆಲೆಯಲ್ಲಿಯೂ ವಿಶೇಷವಾದ ತುಣುಕುಗಳನ್ನು ನೀಡುವ ಮೂಲಕ ಅಭಿಮಾನಿಗಳನ್ನು ತಂಡಕ್ಕೆ ಹತ್ತಿರ ತರುವುದೇ ಇದರ ಉದ್ದೇಶವಾಗಿದೆ. ಕ್ರೀಡೆ ಮತ್ತು ಫ್ಯಾಷನ್ ಅನ್ನು ಒಂದೇ ಸ್ಥಳದಲ್ಲಿ ಒಟ್ಟುಗೂಡಿಸಲಾಗಿದೆ.

ಈ ಬಗ್ಗೆ ಮಾತನಾಡಿದ ಸಿಕ್ಸ್‌5ಸಿಕ್ಸ್‌ನ ಸಹಸ್ಥಾಪಕ ಮತ್ತು ಸೃಜನಾತ್ಮಕ ನಿರ್ದೇಶಕಿ ಅವ್ನಿ ಅನೇಜಾ ‘ನಾವು ಕೋಲ್ಕತ್ತಾ ನೈಟ್ ರೈಡರ್ಸ್ ಜೊತೆ ಸೇರಲು ಉತ್ಸುಕರಾಗಿದ್ದೇವೆ. ನಮ್ಮ ಉದ್ದೇಶ ಕೇವಲ ವಸ್ತ್ರ ವಿನ್ಯಾಸದ ಬಗ್ಗೆ ಅಲ್ಲ, ಆದರೆ ಪ್ರತಿ KKR ಅಭಿಮಾನಿಯ ಮನಸ್ಸಿಗೆ ತಟ್ಟುವಂತಹ ಕಥಾನಾಯಕತೆಯನ್ನು ನಿರ್ಮಿಸುವುದಾಗಿದೆ ಎಂದಿದ್ದಾರೆ.

ನೈಟ್ ರೈಡರ್ಸ್ ಸ್ಪೋರ್ಟ್ಸ್ ಗ್ರೂಪ್ ನ CMO ಬಿಂದಾ ಡೇ ಮಾತನಾಡಿ ‘ಕೆಕೆಆರ್ ನಲ್ಲಿ ನಮ್ಮ ಅಭಿಮಾನಿಗಳು ನಾವು ಮಾಡುವ ಪ್ರತಿಯೊಂದು ಕಾರ್ಯದ ಹೃದಯಭಾಗದಲ್ಲಿದ್ದಾರೆ. ಸಿಕ್ಸ್‌5ಸಿಕ್ಸ್‌ಜೊತೆಗಿನ ಈ ಪಾಲುದಾರಿಕೆಯು ನಮ್ಮ ಯುವ ಫ್ಯಾಶನ್-ಫಾರ್ವರ್ಡ್ ಅಭಿಮಾನಿಗಳ ವರ್ಗಕ್ಕೆ ಇಷ್ಟವಾಗಲಿದೆ. ಕೇವಲ ಮರ್ಚಂಡೈಸ್ ಮಾತ್ರವಲ್ಲ ನಮ್ಮ ಅಭಿಮಾನಿಗಳೊಂದಿಗೆ ಆಳವಾದ ಭಾವನಾತ್ಮಕ ಸಂಪರ್ಕವನ್ನು ಸೃಷ್ಟಿಸುವುದಾಗಿದೆ.

 

 

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಅಧಿಕಾರಿಗಳು ಜನಪ್ರತಿನಿಧಿಗಳ ಕರೆ ಸ್ವೀಕರಿಸಿ : ರಾಜ್ಯ ಸರ್ಕಾರಿ ಅಧಿಕಾರಿಗಳಿಗೆ ಮುಖ್ಯಕಾರ್ಯದರ್ಶಿ ಖಡಕ್ ಸೂಚನೆ

ಬೆಂಗಳೂರು : ಅಧಿಕಾರಿಗಳು ಜನಪ್ರತಿನಿಧಿಗಳ ದೂರವಾಣಿ ಕರೆಯನ್ನು ಸ್ವೀಕರಿಸಲೇಬೇಕು ಎಂಬ ಸುತ್ತೋಲೆಯನ್ನು ಹೊರಡಿಸುವ ಮೂಲಕ ಸರ್ಕಾರಿ ಅಧಿಕಾರಿಗಳಿಗೆ ರಾಜ್ಯ ಸರ್ಕಾರ…

11 mins ago

ಬುದ್ಧಗಯಾ ವಿಮೋಚನಾ ಚಳವಳಿ ಬೆಂಬಲಿಸಿ

ಮೈಸೂರು : ಹೊಸದಿಲ್ಲಿಯಲ್ಲಿ ಬುದ್ಧಗಯಾ ವಿಮೋಚನೆ ಐತಿಹಾಸಿಕ ಚಳವಳಿಯಲ್ಲಿ ಬೌದ್ಧ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಬೌದ್ಧ ಚಿಂತಕ,…

28 mins ago

ಮೈಸೂರಲ್ಲಿ ಸಂಭ್ರಮದ ರಥಸಪ್ತಮಿ

ಮೈಸೂರು : ರಥಸಪ್ತಮಿ ಅಂಗವಾಗಿ ನಗರದಲ್ಲಿ ಭಾನುವಾರ ಅರಮನೆ ಸೇರಿದಂತೆ ವಿವಿಧೆಡೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸೂರ್ಯನಿಗೆ ನಮಿಸಲಾಯಿತು.…

45 mins ago

400 ಕೋಟಿ ಹಣ ಸಾಗಿಸುತ್ತಿದ್ದ ಕಂಟೇನರ್‌ಗಳ ಹೈಜಾಕ್‌ : ಚೋರ್ಲಾ ಘಾಟ್‌ನಲ್ಲಿ ನಡೆದ ದರೋಡೆ ಬಗ್ಗೆ ಎಸ್‌ಪಿ ಹೇಳಿದ್ದಿಷ್ಟು

ಬೆಳಗಾವಿ : ಜಿಲ್ಲೆಯ ಖಾನಾಪುರ ತಾಲೂಕಿನ ಚೋರ್ಲಾ ಘಾಟ್​​ನಲ್ಲಿ ಖತರ್ನಾಕ್ ರಾಬರಿ ಗ್ಯಾಂಗ್ ಒಂದಲ್ಲ, ಎರಡಲ್ಲ ಬರೋಬರಿ 400 ಕೋಟಿ…

1 hour ago

ಮೂವರು ಕನ್ನಡಿಗರು ಸೇರಿದಂತೆ 45 ಮಂದಿಗೆ ಪದ್ಮಶ್ರೀ ಗೌರವ

ಮೂವರು ಕನ್ನಡಿಗರಿವರು ; ಮಂಡ್ಯದ ಅಂಕೇಗೌಡ, ದಾವಣಗೆರೆಯ ಡಾ. ಸುರೇಶ್ ಹನಗವಾಡಿ, ಬೆಂಗಳೂರಿನ ಎಸ್.ಜಿ. ಸುಶೀಲಮ್ಮ ಬೆಂಗಳೂರು : ದೇಶದ…

2 hours ago

ಫೆ.2ರಿಂದ ಬಜೆಟ್ ತಯಾರಿ : ಸಿಎಂ ಸಿದ್ದರಾಮಯ್ಯ

ಮೈಸೂರು : ಮುಂದಿನ ಬಜೆಟ್ ಮಂಡನೆಗೆ ಫೆ.2 ರಿಂದ ಇಲಾಖಾವಾರು ಅಧಿಕಾರಿಗಳ ಸಭೆ ನಡೆಸಿ ತಯಾರಿ ಶುರು ಮಾಡಲಿದ್ದೇನೆ ಎಂದು…

4 hours ago