ಕ್ರೀಡೆ

ಗಂಭೀರ್‌ ಜೊತೆ ಕಿರಿಕ್‌ : ಶ್ರೀಶಾಂತ್‌ ಗೆ ಲೀಗಲ್‌ ನೋಟಿಸ್

ಲೆಜೆಂಡ್ಸ್‌ ಲೀಗ್‌ ಪಂದ್ಯದ ವೇಳೆ ಗೌತಮ್‌ ಗಂಭೀರ್‌ ಅವರ ಜೊತೆ ಕಿರಿಕ್‌ ಮಾಡಿಕೊಂಡಿದ್ದ ಶ್ರೀಶಾಂತ್‌ ಅವರಿಗೆ ಲೆಜೆಂಡ್ಸ್‌ ಲೀಗ್‌ ನ ಆಯೋಜಕರು ಲೀಗಲ್‌ ನೋಟಿಸ್‌ ಮಾಡಿದ್ದಾರೆ.

ಗೌತಮ್‌ ಗಂಭೀರ್‌ ನನ್ನನ್ನು ಫಿಕ್ಸರ್‌ ಅಂತಾ ನಿಂದಿಸಿದ್ದರು ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದ ಶರೀಶಾಂತ್‌ ಗೆ ಇದೀಗ ಲೀಗಲ್‌ ನೋಟಿಸ್‌ ಜಾರಿಯಾಗಿದ್ದು, ವೈರಲ್‌ ಆಗಿರುವ ವಿಡಿಯೋ ಡಿಲಿಟ್‌ ಮಾಡಿದ ನಂತರ ಈ ಪ್ರಕರಣದ ಕುರಿತು ಮಾತು ಕತೆ ನಡೆಸುವುದಾಗಿ ಲೆಜೆಂಡ್ಸ್‌ ಲೀಗ್‌ ನ ಆಯೋಜಕರು ತಿಳಿಸಿದ್ದಾರೆ.

ಲೆಜೆಂಡ್ಸ್‌ ಲೀಗ್‌ ನಲ್ಲಿ ಇಂಡಿಯಾ ಕ್ಯಾಪಿಟಲ್‌ ಹಾಗೂ ಗುಜರಾತ್‌ ಜೈಂಟ್ಸ್‌ ನಡುವಣ ಪಂದ್ಯದ ವೇಳೆ ಗೌತಮ್‌ ಗಂಭೀರ್‌ ಮತ್ತು ಶ್ರೀಶಾಂತ್‌ ನಡುವೆ ವಾಗ್ಯುದ್ಧ ನಡೆದಿತ್ತು. ಇದಾದ ಬಳಿಕ ಶ್ರೀಶಾಣತ್‌ ಅವರು ಗೌತಮ್‌ ಗಂಭೀರ್‌ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವನ್ನು ಹರಿಬಿಟ್ಟಿದ್ದರು. ಆ ವಿಡಿಯೋದಲ್ಲಿ ಗೌತಮ್ ಗಂಭೀರ್‌ ಅವರು ನನ್ನನ್ನು ಫಿಕ್ಸರ್‌ ಎಂದು ಕೂಗಿ ಅವಮಾನಿಸಿದರು. ಅಷ್ಟೇ ಅಲ್ಲದೇ ಅಂಪೈರ್‌ ಇರುವಾಗಲೂ ಕೂಡ ಗಂಭೀರ್‌ ಇದೇ ರೀತಿಯಲ್ಲಿ ನಿಂದಿಸಿ ಅವಮಾನಿಸಿದ್ದರು ಎಂದು ಆರೋಪಿಸಿದ್ದರು.

ಇದೀಗ ಶ್ರೀಶಾಂತ್‌ ಗೆ ಲೀಗಲ್‌ ನೋಟಿಸ್‌ ಜಾರಿಯಾಗಿದ್ದು, ಗಂಭೀರ್‌ ವಿರುದ್ಧ ಆರೋಪಿಸಿರುವ ಎಲ್ಲಾ ವಿಡಿಯೋಗಳನ್ನು ತಕ್ಷಣವೇ ಸಾಮಾಜಿಕ ಜಾಲತಾಣಗಳಿಂದ ಡಿಲೀಟ್‌ ಮಾಡುವಂತೆ ಸೂಚನೆ ನೀಡಲಾಗಿದೆ.

lokesh

Recent Posts

ಚಿರತೆ ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಆತಂಕ

ತಿ.ನರಸೀಪುರ : ತಾಲ್ಲೂಕಿನ ಕೇತಹಳ್ಳಿ ಗ್ರಾಮದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಗ್ರಾಮದಲ್ಲಿ ರಾತ್ರಿ ವೇಳೆ ಚಿರತೆ ಸಂಚರಿಸುತ್ತಿದ್ದುದನ್ನು ಯುವಕರಿಬ್ಬರು…

1 min ago

ಸ್ನೇಹಮಯಿ ಕೃಷ್ಣ ಮನೆಯಲ್ಲಿ ಸಿಸಿಬಿ ಪೊಲೀಸರಿಂದ ತಲಾಶ್‌ ; ಮಹತ್ವದ ದಾಖಲೆ ಲಭ್ಯ

ಮೈಸೂರು : ಈ ಹಿಂದೆ ಎಂಡಿಎ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಡಿ.ಬಿ.ನಟೇಶ್ ಅವರ ವಿರುದ್ಧ ಲಂಚ ನೀಡಿರುವ ಆರೋಪ ಹೊರಿಸಿದ್ದ…

4 mins ago

ಹುಲಿ ಕಳೇಬರ ಪತ್ತೆ ಪ್ರಕರಣ : ಓರ್ವ ಬಂಧನ

ಹನೂರು : ಇಲ್ಲಿನ ಗುಂಡಾಲ್ ಜಲಾಶಯದಲ್ಲಿ ಹುಲಿ ಕಳೇಬರ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.…

14 mins ago

ಮಂಡ್ಯಕ್ಕೆ ಎರಡು ಕೈಗಾರಿಕೆಗಳನ್ನಾದರೂ ತರುತ್ತೇನೆ : ಕೇಂದ್ರ ಸಚಿವ ಎಚ್‌ಡಿಕೆ ಘೋಷಣೆ

ನಾಗಮಂಗಲ : ಮಂಡ್ಯ ಜಿಲ್ಲೆ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಮತ್ತಷ್ಟು ಅಭಿವೃದ್ಧಿ ಹೊಂದಬೇಕಾಗಿದೆ. ಪಕ್ಷಾತೀತವಾಗಿ ನನ್ನನ್ನು ಈ ಕ್ಷೇತ್ರದ ಜನರು…

24 mins ago

ಸಫಾರಿ ಷರತ್ತು ಕಟ್ಟುನಿಟ್ಟಾಗಿ ಜಾರಿಗೆ ತನ್ನಿ ; ಸಚಿವ ಖಂಡ್ರೆ ಸೂಚನೆ

ಮೈಸೂರು : ಮಾನವ-ಹುಲಿ ಸಂಘರ್ಷದ ಹಿನ್ನೆಲೆಯಲ್ಲಿ ಕಳೆದ ನವೆಂಬರ್ 7ರಂದು ಸ್ಥಗಿತಗೊಳಿಸಲಾಗಿದ್ದ ಸಫಾರಿಯನ್ನು ಫೆ.21ರಿಂದ ಷರತ್ತುಬದ್ಧವಾಗಿ ಪುನಾರಂಭಿಸಲು ನಿರ್ಧರಿಸಿದ್ದು, ಈ…

40 mins ago

ಮೈಸೂರು | ನಗರದಲ್ಲಿ ಹೆಚ್ಚಿನ ಸಸಿ ನೆಟ್ಟು ನೀರೆರಿಯಿರಿ : ಅರಣ್ಯ ಸಚಿವ ಖಂಡ್ರೆ

ಮೈಸೂರು : ಮುಂಬರುವ ಮಳೆಗಾಲದಲ್ಲಿ ಮೈಸೂರು ನಗರ, ಜಿಲ್ಲೆಯ ಎಲ್ಲಾ ಪ್ರದೇಶಗಳ ರಸ್ತೆಯ ಬದಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಟ್ಟು…

59 mins ago