ಬೆಂಗಳೂರು: ಪ್ರಥಮಾರ್ಧಲ್ಲಿ ವೈಫಲ್ಯಗೊಂಡು ಅಂಕಗಳಿಸದೆ ಅಚ್ಚರಿ ಮೂಡಿಸಿದ್ದ ಪ್ರದೀಪ್ ನರ್ವಾಲ್ ದ್ವಿತಿಯಾರ್ಧಲ್ಲಿ ಅನುಭವದ ಆಟವಾಡಿ ಅಮೂಲ್ಯ 7 ಅಂಕಗಳನ್ನು ಗಳಿಸುವ ವಿವೋ ಪ್ರೋ ಕಬಡ್ಡಿ ಲೀಗ್‌ನ 9ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ಯುಪಿ ಯೋಧಾಸ್ ತಂಡ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 34-32 ಅಂಕಗಳ ಅಂತರದಲ್ಲಿ ಜಯ ಗಳಿಸಿತು.
ವಿಜೇತ ಯುಪಿ ಯೋಧಾಸ್ ಪರ ಪ್ರದೀಪ್ ನರ್ವಾಲ್ ಹಾಗೂ ಸುರೀಂಧರ್ ಗಿಲ್ (9 ಅಂಕಗಳು) ಜಯದ ರೂವಾರಿ ಎನಿಸಿದರು. ಆಶು ಸಿಂಗ್ ಹಾಗೂ ಶುಭಂ ಕುಮಾರ್ ಸೇರಿ ಟ್ಯಾಕಲ್‌ನಲ್ಲಿ 7 ಅಂಕಗಳನ್ನು ಗಳಿಸಿದರು. ಸೋತ ಪಿಂಕ್ ಪ್ಯಾಂಥರ್ಸ್ ಪರ ಅರ್ಜುನ್ ದೆಶ್ವಾಲ್ ಒಟ್ಟು 8 ರೈಡಿಂಗ್ ಅಂಕಗಳನ್ನು ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ಅನುಭವಿ ಆಟಗಾರ ರಾಹುಲ್ ಚೌಧರಿ ಸಂಪೂರ್ಣ ವಿಫಲರಾಗಿರುವುದು ತಂಡದ ಸೋಲಿಗೆ ಮತ್ತೊಂದು ಕಾರಣವಾಗಿತ್ತು,
ಅತ್ಯಂತ ನಿರ್ಣಾಯಕ ಹಂತದಲ್ಲಿ ಯುಪಿ ಯೋಧಾಸ್ ಆಲೌಟ್ ಆದದ್ದು ಪಂದ್ಯ ಸಮಬಲದತ್ತ ಸಾಗುವಂತೆ ಮಾಡಿತು. ಆದರೆ ಸರೀಂಧರ್ ಗಿಲ್ ರೈಡಿಂಗ್ ಮೂಲಕ ಎರಡು ಅಂಕಗಳನ್ನು ಗಳಿಸಿಯೋಧಾಸ್ ತಂಡಕ್ಕೆ ಮುನ್ನಡೆ ಕಲ್ಪಿಸಿದರು.
ಪ್ರಥಮಾರ್ಧದಲ್ಲಿ ಪ್ಯಾಂಥರ್ಸ್ ಪ್ರಭುತ್ವ: ಯುವ ಆಟಗಾರರ ಜವಾಬ್ದಾರಿ, ಹಿರಿಯ ಆಟಗಾರರ ಸಲಹೆ ಇವುಗಳಿಂದ ಅದ್ಭುತ ಪ್ರದರ್ಶನ ತೋರಿದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಪ್ರಥಮಾರ್ಧದಲ್ಲಿ ಯುಪಿ ಯೋಧಾಸ್ ವಿರುದ್ಧ 15-12 ಅಂತರದಲ್ಲಿ ಮೇಲುಗೈ ಸಾಧಿಸಿತು.
ಇದುವರೆಗೂ ಪ್ರತಿಯೊಂದು ಋತುವಿನಲ್ಲೂ ಅದ್ಭುತ ಪ್ರದರ್ಶನ ತೋರಿ 1300ಕ್ಕೂ ರೈಡಿಂಗ್ ಅಂಗಳನ್ನು ಗಳಿಸಿ ಖ್ಯಾತಿ ಪಡೆದಿದ್ದ ಪ್ರದೀಪ್ ನರ್ವಾಲ್ ಈ ಬಾರಿ ಯು ಪಿ ಯೋಧಾಸ್ ತಂಡದಲ್ಲಿದ್ದು, ಪ್ರಥಮಾರ್ಧದಲ್ಲಿ ತಮ್ಮ ನೈಜ ಪ್ರದರ್ಶನ ತೋರುವಲ್ಲಿ ವಿಫಲರಾದದ್ದು ಕಬಡ್ಡಿ ಪ್ರೇಕ್ಷರಿಗೆ ನಿರಾಸೆಯನ್ನುಂಟು ಮಾಡಿರುವುದು ಸಹಜ. ನಾಲ್ಕು ಪ್ರದೀಪ್ ನರ್ವಾಲ್ ರೈಡ್ ಮಾಡಿದರೂ ಅಂಕ ಎದುರಾಳಿ ತಂಡದ ಪಾಲಾಗಿತ್ತು.
ತಂಡದ ಮಾಲೀಕ ನಟ ಅಭಿಷೇಕ್ ಬಚ್ಚನ್ ಅವರ ಸಮ್ಮುಖದಲ್ಲಿ ಅತ್ಯಂತ ಆತ್ಮವಿಶ್ವಾಸದಿಂದ ಆಡಿದ ಜೈಪುರ ಪಿಂಕ್ ಪ್ಯಾಂಥರ್ಸ್ ಮೊದಲ ರೈಡ್ ಮಾಡಿದ ಪ್ರದೀಪ್ ನರ್ವಾಲ್ ಅವರನ್ನು ಟ್ಯಾಕಲ್ ಮಾಡುವಲ್ಲಿ ಯಶಸ್ವಿಯಾಯಿತು. ಜೈಪುರ ಪಿಂಕ್ ಪ್ಯಾಂಥರ್ಸ್‌ನಲ್ಲಿದ್ದ ಹಿರಿಯ ಅನುಭವಿ ಆಟಗಾರ ರಾಹುಲ್ ಚೌಧರಿ ಕೂಡ ಗಳಿಸಿದ್ದು ಕೇವಲ 1 ಅಂಕ. ಆದರೆ ಯುವ ನಾಯಕ ಸುನಿಲ್ ಕುಮಾರ್ ಅವರ ಮುಂದಾಳತ್ವದಲ್ಲಿ ಅಂಗಳಕ್ಕಿಳಿದ ತಂಡ ಉತ್ತಮ ಪ್ರದರ್ಶನ ನೀಡಿತು. ಯುವ ಆಟಗಾರ ಅಂಕುಶ್ ಟ್ಯಾಕಲ್‌ನಲ್ಲಿ 3 ಅಂಕಗಳನ್ನು ಗಳಿಸಿ ಕಬಡ್ಡಿಯಲ್ಲಿ ಶಕ್ತಿಯ ಜೊತೆಯಲ್ಲಿ ಕೌಶಲ್ಯವೂ ಪ್ರಮುಖ ಎಂಬುದನ್ನು ಸಾಬೀತುಪಡಿಸಿದರು. ರೈಡರ್ ಅರ್ಜುನ್ ದೆಶ್ವಾಲ್ 4 ಅಂಕಗಳನ್ನು ಗಳಿಸಿ ತಂಡದ ಮುನ್ನಡೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಅಭಿಷೇಕ್ ಅವರು ಟ್ಯಾಕಲ್‌ನಲ್ಲಿ ಗಳಿಸಿದ 2 ಅಂಕ ಯುಪಿ ಯೋಧಾಸ್ ಪಡೆಯನ್ನು ನಿಯಂತ್ರಿಸಲು ಸಾಧ್ಯವಾಯಿತು. ಯುಪಿ ಯೋಧಾಸ್ ಪಡೆಯನ್ನು ಆಲೌಟ್ ಮಾಡಿದ ಪಿಂಕ್ ಪ್ಯಾಂಥರ್ಸ್ ಬೋನಸ್ ಅಂಕದೊಂದಿಗೆ ಮುನ್ನಡೆ ಕಂಡುಕೊಂಡಿತು.
ಕೆ.ಬಿ.ರಮೇಶನಾಯಕ ಮೈಸೂರು: ಮಧ್ಯಪ್ರಾಚ್ಯ ದೇಶಗಳ ನಡುವಿನ ಯುದ್ಧದಿಂದಾಗಿ ಪಿಎನ್‌ಜಿ (ಪೈಪ್ಡ್ ನ್ಯಾಚುರಲ್ ಗ್ಯಾಸ್) ಸಂಪರ್ಕ ಹೊಂದಿದ್ದವರ ಮನೆಗಳಲ್ಲಿರುವ ಎಲ್‌ಪಿಜಿ ಸಿಲಿಂಡರ್‌ಗಳನ್ನು…
ಹೆಚ್.ಎಸ್. ದಿನೇಶ್‌ಕುಮಾರ್ ಚುನಾಯಿತ ಪ್ರತಿನಿಧಿಗಳಿಲ್ಲದ ನಗರಪಾಲಿಕೆಯಲ್ಲಿ ಅಧಿಕಾರಿಗಳ ದರ್ಬಾರು ಮೈಸೂರು: ಜವಾಬ್ದಾರಿಯುತ ಹಾಗೂ ಜನರ ಪರ ಆಲೋಚಿಸುವ ಜನಪ್ರತಿನಿಧಿಗಳಿಲ್ಲದಿದ್ದಲ್ಲಿ ಏನೆಲ್ಲಾ…
ಮೊದಲ ಬಾರಿಗೆ ಸಂಪೂರ್ಣ ಡಿಜಿಟೆಲ್ ರೂಪದಲ್ಲಿ ಗಣತಿ ಮೊದಲ ಹಂತ ಏ.೧೫ರವರೆಗೆ; ಏ.೧೬ರಿಂದ ೨ನೇ ಹಂತ ಬೆಂಗಳೂರು: ರಾಷ್ಟ್ರೀಯ ಜನಗಣತಿ…
ಮೈಸೂರು: ಅಡುಗೆ ಅನಿಲ ಸಂಕಷ್ಟವನ್ನು ಎದುರಿಸುತ್ತಿರುವ ಜನತೆಗೆ ರಾಜ್ಯ ಸರ್ಕಾರ ನೀರಿನ ದರ ಹೆಚ್ಚಳದ ಶಾಕ್ ನೀಡಿದೆ. ಏ.೧ರಿಂದ ಜಾರಿಗೆ…
ಬೆಂಡರವಾಡಿ ಕೆರೆಗೆ ಹಾರಿ ಮಂಡ್ಯ ಜಿಲ್ಲೆಯ ವ್ಯಕ್ತಿ ಆತ್ಮಹತ್ಯೆ ಚಾಮರಾಜನಗರ: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ…