ಹೊಸದಿಲ್ಲಿ: ಈ ಬಾರಿಯ ಐಪಿಎಲ್ ಟೂರ್ನಿ ಸೇರಿದಂತೆ ಮುಂದಿನ ಎರಡು ವರ್ಷಗಳ ಐಪಿಎಲ್ ಟೂರ್ನಿಯ(2026 ಮತ್ತು 2027) ದಿನಾಂಕವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು(ಬಿಸಿಸಿಐ) ಶುಕ್ರವಾರ ಪ್ರಕಟಿಸಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಮೂರು ಟೂರ್ನಿಗಳ ದಿನಾಂಕ ಪ್ರಕಟಿಸಿದೆ.
2025ರ ಐಪಿಎಲ್ ಟೂರ್ನಿಯು ಮಾರ್ಚ್ 14ರಿಂದ ಮೇ 25ರವರೆಗೆ ನಡೆಯಲಿದೆ. 2026 ಮತ್ತು 2027ರ ಐಪಿಎಲ್ ಟೂರ್ನಿಯು ಮಾರ್ಚ್ ತಿಂಗಳ 14 ಹಾಗೂ 15 ರಂದು ಆರಂಭವಾಗಲಿದೆ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ಹೇಳಿದೆ.
ಈ ಬಾರಿಯ ಐಪಿಎಲ್ ಟೂರ್ನಿಯ ಹರಾಜು ನ.24ರ ಭಾನುವಾರದಿಂದ ಸೌದಿ ಅರೇಬಿಯಾದ ಜೆದ್ದಾದಲ್ಲಿ ನಡೆಯಲಿದ್ದು, ಈ ಹರಾಜಿನಲ್ಲಿ ದೇಶಿ ಹಾಗೂ ವಿದೇಶಿ ಆಟಗಾರರು ಭಾಗವಹಿಸಲಿದ್ದಾರೆ.
ಈ ಬಾರಿಯ ಐಪಿಎಲ್ ಬಿಡ್ಡಿಂಗ್‌ನಲ್ಲಿ 1500ಕ್ಕೂ ಹೆಚ್ಚು ಆಟಗಾರರು ನೊಂದಾಯಿಸಿಕೊಂಡಿದ್ದು, ಫ್ರಾಂಚೈಸಿಗಳ ಅನಿಸಿಕೆಯ ನಂತರ ಶಾರ್ಟ್‌ಲೀಸ್ಟ್ ಮೂಲಕ ಈ ಸಂಖ್ಯೆಯನ್ನು 574 ಕ್ಕೆ ಇಳಿಸಲಾಗಿದೆ. ಇದರಲ್ಲಿ 366 ದೇಶಿ ಹಾಗೂ 208 ವಿದೇಶಿ ಆಟಗಾರರು ಇದ್ದಾರೆ. ಈ ಹರಾಜಿನಲ್ಲಿ 204 ಸ್ಲಾಟ್‌ಗಳನ್ನು ಫಿಲ್ ಮಾಡಲಿದ್ದು, 70 ವಿದೇಶಿ ಆಟಗಾರರು ಹರಾಜು ಆಗಬೇಕಿದೆ.
ಈ ಬಾರಿಯ ಐಪಿಎಲ್ ಬಿಡ್‌ನಲ್ಲಿ ಬೆನ್ ಸ್ಟೋಕ್ಸ್ ಅವರ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಜೇಮ್ಸ್ ಆಂಡರ್ಸನ್, ಅಮೇರಿಕಾದ ವೇಗದ ಬೌಲರ್ ಸೌರಭ್ ನೇತ್ರಾವಲ್ಕರ್, ಇಟಲಿಯ ವೇಗಿ ಥಾಮಸ್ ಡಾಕ್ರಾ ಅವರ ಹೆಸರು ಪಟ್ಟಿಯಲ್ಲಿ ಇದೆ.
ರೂ 2 ಕೋಟಿ ಮೂಲಬೆಲೆಯಲ್ಲಿ ಭಾರತದ ಆಟಗಾರರಾದ ರಿ಼ಷಭ್ ಪಂತ್, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ಆರ್. ಅಶ್ವಿನ್, ಯಜುವೇಂದ್ರ ಚಾಹಲ್, ಮುಹಮ್ಮದ್ ಶಮಿ, ಸಿರಾಜ್, ಭುವನೇಶ್ವರ್ ಕುಮಾರ್ ಮುಂತಾದವರು ಇದ್ದಾರೆ.
ರೂ 75 ಲಕ್ಷ ಮೂಲಬೆಲೆಯಲ್ಲಿ ಸರ್ಫರಾಜ್ ಖಾನ್ ಮತ್ತು ಪೃಥ್ವಿ ಶಾ ತಮ್ಮ ಹೆಸರು ನೊಂದಾಯಿಸಿಕೊಂಡಿದ್ದು, ಹಿಂದಿನ ಐಪಿಎಲ್‌ನಲ್ಲಿ ʼಅನ್‌ಸೋಲ್ಡ್ʼ ಆಗಿದ್ದರು.
ಬಿಡ್ಡಿಂಗ್‌ಗೆ ಅತಿ ಹೆಚ್ಚು ಹಣ ಉಳಿಸಿಕೊಂಡಿರುವ ತಂಡ
ಈ ಬಾರಿಯ ಐಪಿಎಲ್ ಹರಾಜಿನಲ್ಲಿ, ಇಬ್ಬರು ಅನ್‌ಕ್ಯಾಪ್ಡ್ ಆಟಗಾರರಿಗೆ ರೂ9.5 ಕೋಟಿ ನೀಡಿಲಾಗಿದೆ. ಇನ್ನೂ 110 ಕೋಟಿ ರೂಪಾಯಿಗಳನ್ನು ಉಳಿಸಿಕೊಳ್ಳುವ ಮೂಲಕ ಪಂಜಾಬ್ ಅತ್ಯಂತ ಶ್ರೀಮಂತ ತಂಡ ಎನಿಸಿಕೊಂಡಿದೆ. ಈ ವೇಳೆ 4 ಆರ್‌ಟಿಎಂ ಕಾರ್ಡ್ ಬಳಸಬಹುದಾಗಿದೆ.
ಆರ್‌ಸಿಬಿ 3 ಆಟಗಾರರಿಗೆ 37 ಕೋಟಿ ನೀಡಿದ್ದು, 83 ಕೋಟಿ ರೂಪಾಯಿ ಮೂಲಕ ಆರ್‌ಸಿಬಿ ಬಿಡ್ಡಿಂಗ್ ಪ್ರವೇಶಿಸಲಿದೆ. ಇದರ ಬಳಿ 3 ಆರ್‌ಟಿಎಂ ಕಾರ್ಡ್‌ಗಳಿವೆ.
ಡೆಲ್ಲಿ ಕ್ಯಾಪಿಟಲ್ಸ್ 73 ಕೋಟಿ ಉಳಿಸಿಕೊಂಡಿದೆ. ಉಳಿದಂತೆ ಗುಜರಾತ್ 69 ಕೋಟಿ, ಚೆನ್ನೈ 55 ಕೋಟಿ, ಮುಂಬೈ 45 ಕೋಟಿ, ಸನ್ ರೈಸರ್ಸ್ ಹೈದರಾಬಾದ್ 45 ಕೋಟಿಗಳನ್ನು ಉಳಸಿಕೊಳ್ಳುವ ಮೂಲಕ ಬಿಡ್ಡಂಗ್‌ನಲ್ಲಿ ಪಾಳ್ಗೊಳ್ಳಲು ಕಾತರವಾಗಿವೆ.
ರಾಜಸ್ಥಾನ ಮತ್ತು ಕೆಕೆಆರ್ ತಂಡಗಳು 41 ಕೋಟಿ ಮತ್ತು 51 ಕೋಟಿ ರೂಪಾಯಿ ಮಾತ್ರ ಬಿಡ್ಡಿಂಗ್‌ನಲ್ಲಿ ಬಳಸಬಹುದಾಗಿದ್ದು, ಬಿಸಿಸಿಐ ಹೇಳಿದ ಆರೂ ಸ್ಥಾನಗಳನನ್ನು ಭರ್ತಿಮಾಡಿಕೊಂಡ ತಂಡಗಳಾಗಿವೆ. ಇವರ ಬಳಿ ಯಾವುದೇ ಆರ್‌ಟಿಎಂ ಕಾರ್ಡ್‌ಗಳಿಲ್ಲ.
ಬೆಂಗಳೂರು: ಕೆಂಪೇಗೌಡ ಏರ್ಪೋರ್ಟ್ನಲ್ಲಿ ಇಂದು ಕೂಡ 60 ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿರುವ ಕೆಂಪೇಗೌಡ…
ನಂಜನಗೂಡಿನ ಸದ್ವೈದ್ಯ ಶಾಲಾ ಸಂಸ್ಥಾಪಕರಾಗಿದ್ದ ಬಿ.ವಿ.ಪಂಡಿತರು ಆಯುರ್ವೇದ ಉತ್ಪನ್ನಗಳನ್ನು ರೂಪಿಸಿದ ಹಿರಿಮೆ ಹೊಂದಿದ್ದಾರೆ. ದಂತಧಾವನ ಚೂರ್ಣ (ನಂಜನಗೂಡು ಹಲ್ಲು ಪುಡಿ)…
ಮೈಸೂರಿನಲ್ಲಿ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕ ನಿರ್ಮಾಣ ಹಾಗೂ ಬೇಲೂರಿನಲ್ಲಿ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಅವರ ವಸ್ತು ಸಂಗ್ರಹಾಲಯ…
ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ಇತಿಹಾಸ ಪ್ರಸಿದ್ಧ ಕ್ಷೇತ್ರ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಖಾಸಗಿ ವಾಹನಗಳಿಗೆ ಪ್ರವೇಶವಿರುವುದಿಲ್ಲ. ರಾಜ್ಯ ರಸ್ತೆ ಸಾರಿಗೆ ನಿಗಮದ…
ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ ಆರಂಭವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸದನದಲ್ಲಿ ಯಾವುದೇ ವಿಷಯ, ಜನರ ಸಮಸ್ಯೆ, ಮಸೂದೆಗಳ ಬಗ್ಗೆ ರಚನಾತ್ಮಕ ಚರ್ಚೆ…
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್ ಚಿತ್ರ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದ್ದು, ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.…