ಚೆನ್ನೈ : ಇಲ್ಲಿನ ಎಂಎ ಚಿದಂಬರಂ ಸ್ಟೇಡಿಯಂ ನಲ್ಲಿ ಭಾನುವಾರ ನಡೆದ ಐಪಿಎಲ್ ನ ರೋಚಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 4 ವಿಕೆಟ್ ಗಳ ಜಯಭೇರಿ ಬಾರಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ 4 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು. ಡೆವೊನ್ ಕಾನ್ವೇ 92 ರನ್ (52 ಎಸೆತ) ಭರ್ಜರಿ ಆಟವಾಡಿದರು. ಋತುರಾಜ್ ಗಾಯಕ್ವಾಡ್ 37, ಶಿವಂ ದುಬೆ 28 ರನ್ ಗಳಿಸಿದರು.
ಪಂಜಾಬ್ ಪರ ಅರ್ಶ್‌ದೀಪ್ ಸಿಂಗ್, ಸ್ಯಾಮ್ ಕರನ್, ರಾಜಾ ಮತ್ತು ರಾಹುಲ್ ಚಾಹರ್ ತಲಾ 1 ವಿಕೆಟ್ ಪಡೆದರು.
ಚೆನ್ನೈ ನೀಡಿದ ಬೃಹತ್ ಗುರಿ ಬೆನ್ನಟ್ಟಿದ ಪಂಜಾಬ್ ಕೊನೆಯ ಓವರ್ ವರೆಗೆ ಹೋರಾಟ ಸಂಘಟಿಸಿ 6 ವಿಕೆಟ್ ನಷ್ಟಕ್ಕೆ 201 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಕೊನೆಯ ಓವರ್ ನಲ್ಲಿ 9 ರನ್ ಗಳ ಅಗತ್ಯವಿತ್ತು. ಕ್ರೀಸ್ ನಲ್ಲಿದ್ದ ಸಿಕಂದರ್ ರಜಾ 13(7) ಗೆಲುವು ಸಾಧ್ಯವಾಗಿಸಿದರು.
ಕೊನೆಯ ಎಸೆತದಲ್ಲಿ ಮೂರು ರನ್ ಗಳ ಅಗತ್ಯವಿತ್ತು. ರಜಾ ಮೂರು ರನ್ ಗಳಿಸಿ ಗೆಲುವು ಸಾಧ್ಯವಾಗಿಸಿದರು. ಪ್ರಭಾಸಿಮ್ರಾನ್ ಸಿಂಗ್ 42, ನಾಯಕ ಶಿಖರ್ ಧವನ್ 28, ಲಿಯಾಮ್ ಲಿವಿಂಗ್ಸ್ಟೋನ್ 40, ಸ್ಯಾಮ್ ಕರ್ರಾನ್ 29, ಜಿತೇಶ್ ಶರ್ಮಾ 21 ರನ್ ಗಳ ಕೊಡುಗೆ ನೀಡಿ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು.
ಸಿಎಸ್‌ಕೆ ಪರ ತುಶಾರ್ ದೇಶ್‌ಪಾಂಡೆ 49ಕ್ಕೆ3 ಮತ್ತು ಜಡೇಜಾ 32ಕ್ಕೆ2 ಹೊರತಾಗಿ ಮತ್ತಾರು ಉತ್ತಮ ಪ್ರದರ್ಶನ ನೀಡಲಿಲ್ಲ.
ಪಂಜಾಬ್ ನ ಸಂಘಟಿತ ಹೋರಾಟದಿಂದಾಗಿ, ಚೆನ್ನೈ ತವರಿನಂಗಳದಲ್ಲಿ ಅತಿಹೆಚ್ಚು ರನ್ 201/6 ಚೇಸ್ ಮಾಡಿ ಗೆದ್ದ ತಂಡವಾಗಿ ಹೊರಹೊಮ್ಮಿತು.
ಪಂದ್ಯ ಶ್ರೇಷ್ಠ: ಡೆವೋನ್ ಕಾನ್ವೆ.
ಮೈಸೂರು : ಪ್ರವಾಸಿಗರ ದಂಡೇ ನೆರೆಯುತ್ತಿದ್ದ ಸ್ಥಳದಲ್ಲೇ ಹೀಲಿಯಂ ಬಲೂನ್‌ಗಾಗಿ ಬಳಸುತ್ತಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ,…
ಕೆ.ಆರ್.ಪೇಟೆ : ರಸ್ತೆಯಲ್ಲಿ ರಾಗಿ ಒಕ್ಕಣೆ ಮಾಡುತ್ತಿದ್ದ ಸಂದರ್ಭದಲ್ಲಿ ರಾಗಿಯ ಮೇಲೆ ಕಾರು ಚಲಿಸಿದಾಗ ಕಾರು ಮಗುಚಿ ಬಿದ್ದ ಪರಿಣಾಮ…
ಮೈಸೂರು : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ವಿಜಯನಗರದ ಕೊಡವ…
ಮೈಸೂರು : ಮೈಸೂರು ಜಿಲ್ಲೆಯಾದ್ಯಂತ ಕ್ರೈಸ್ತ ಭಾಂದವರು ಕ್ರಿಸ್‌ಮಸ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ನಗರದ ಐತಿಹಾಸಿಕ…
ಕೆ.ಆರ್.ಪೇಟೆ : ತಾಲ್ಲೂಕಿನ ತೆಂಡೇಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್.ರಾಜು ಅವರು ತಮ್ಮ ಒಂದು ತಿಂಗಳ ವೇತನದಲ್ಲಿ…
ಬೆಂಗಳೂರು : ಸಾರ್ವಜನಿಕ ಸಾರಿಗೆಗಾಗಿ ಬಳಸುವ ವಾಹನಗಳಿಗೆ ತುರ್ತು ನಿರ್ಗಮನದ ಬಾಗಿಲುಗಳು ಇಲ್ಲದೆ ಇದ್ದರೆ ಭೌತಿಕ ಕ್ಷಮತೆಯ ದೃಢೀಕರಣ ಪತ್ರ…