ಕ್ರೀಡೆ

ರೋಹಿತ್‌ ಬ್ಯಾಟಿಂಗ್‌ ಅಬ್ಬರ : ಭರ್ಜರಿ ಗೆಲುವು ದಾಖಲಿಸಿದ ಮುಂಬೈ

ಮುಂಬೈ : 13 ವರ್ಷಗಳ ಸೋಲಿನ ಓಟಕ್ಕೆ ಬ್ರೇಕ್‌ ಹಾಕಿದ ಮುಂಬೈ ಇಂಡಿಯನ್ಸ್‌ ಕೊನೆಗೂ ಐಪಿಎಲ್‌ನ ಮೊದಲ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡಿದೆ. ಆರಂಭಿಕ ಆಟಗಾರರಾದ ರೋಹಿತ್‌ ಶರ್ಮಾ ಮತ್ತು ರಿಯನ್‌ ರಿಕಲ್ಟನ್‌ ಅವರ ಸ್ಫೋಟಕ ಅರ್ಧಶತಕದ ಆಟದ ನೆರವಿನಿಂದ ಕೋಲ್ಕತ್ತಾ ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿದೆ.

ವಾಂಖೇಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಈ ರೋಚಕ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮೊದಲು ಬ್ಯಾಟಿಂಗ್ ಮಾಡಿ 220/4 ರನ್‌ಗಳ ಭಾರೀ ಮೊತ್ತ ಕಲೆಹಾಕಿತು. ತಂಡಕ್ಕೆ ನಾಯಕ ಅಜಿಂಕ್ಯಾ ರಹಾನೆ ಆಸರೆಯಾದರು.

ಈ ಗುರಿ ಬೆನ್ನಟ್ಟಿದ ಮುಂಬೈ ತಂಡ 19.1 ಓವರ್ ಗಳಲ್ಲಿ 224/4 ರನ್‌ಗಳನ್ನು ಗಳಿಸಿ 5 ಎಸೆತಗಳು ಬಾಕಿ ಇರುವಾಗಲೇ ಜಯ ದಾಖಲಿಸಿತು.

ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ತಿಲಕ್‌ ವರ್ಮಾ ಅವರು ಪಂದ್ಯವನ್ನು ಗೆಲುವಿನತ್ತ ಮುನ್ನಡೆಸಿದರು.

 

ಆಂದೋಲನ ಡೆಸ್ಕ್

Recent Posts

ಎಸ್‌ಎಸ್ಎಲ್‌ಸಿ ಪರೀಕ್ಷೆ-1ರ ಮೌಲ್ಯಮಾಪನ ಏಪ್ರಿಲ್.8ರಿಂದ ಪ್ರಾರಂಭ

ಬೆಂಗಳೂರು: ಎಸ್.ಎಸ್.ಎಲ್.ಸಿ ಪರೀಕ್ಷೆ-1ರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಏಪ್ರಿಲ್.8ರಿಂದ ಪ್ರಾರಂಭವಾಗಲಿದೆ. ರಾಜ್ಯದ ಎಲ್ಲಾ 35 ಶೈಕ್ಷಣಿಕ ಜಿಲ್ಲೆಗಳಲ್ಲಿ ಏಕಕಾಲಕ್ಕೆ…

40 mins ago

ಐಪಿಎಲ್‌ ಆಸಕ್ತಿ ಇರೋರು ಕಾಸು ಕೊಟ್ಟು ಟಿಕೆಟ್‌ ತಗೋಳಿ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಶಾಸಕರು ಐಪಿಎಲ್‌ ಟಿಕೆಟ್‌ ಕೇಳೋದು ತಪ್ಪು. ಐಪಿಎಲ್‌ ಆಸಕ್ತಿ ಇರೋರು ಕಾಸು ಕೊಟ್ಟು ಟಿಕೆಟ್‌ ತಗೋಳಿ ಎಂದು ಮಾಜಿ…

41 mins ago

ಇಂದಿನಿಂದ ರಾಜ್ಯದಲ್ಲಿ ಐದು ದಿನ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ಐದು ದಿನಗಳ ಕಾಲ ಗುಡುಗು-ಮಿಂಚು ಸಹಿತ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.…

1 hour ago

ವಿಧಾನಪರಿಷತ್‌ ಸದಸ್ಯತ್ವಕ್ಕೆ ಬಿಹಾರ ಸಿಎಂ ನಿತೀಶ್‌ ಕುಮಾರ್‌ ರಾಜೀನಾಮೆ

ಪಾಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ತಮ್ಮ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತೀಚೆಗೆ ರಾಜ್ಯಸಭೆಗೆ…

1 hour ago

ಕುಶಾಲನಗರ: ಹಿಟ್‌ ಅಂಡ್‌ ರನ್‌ಗೆ ಯುವಕ ಬಲಿ

ಕುಶಾಲನಗರ: ಹಿಟ್‌ ಅಂಡ್‌ ರನ್‌ಗೆ ಯುವಕ ಬಲಿಯಾಗಿರುವ ಘಟನೆ ಬೈಲಕುಪ್ಪೆ ಮುಖ್ಯ ರಸ್ತೆಯಲ್ಲಿ ನಡೆದಿದೆ. ಕಾರು, ಆಟೋ ಹಾಗೂ ಬೈಕ್‌…

2 hours ago

ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಡೀಸೆಲ್‌ ಸಮಸ್ಯೆ ಇಲ್ಲ: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ತಕ್ಷಣಕ್ಕೆ ಡೀಸೆಲ್‌ ಸಮಸ್ಯೆ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಇರಾನ್‌-ಇಸ್ರೇಲ್‌ ಸಂಘರ್ಷ…

3 hours ago