ಕ್ರೀಡೆ

IPL 2025 | ಆರ್‌ಸಿಬಿ ವಿರುದ್ಧ ಗೆದ್ದು ಬೀಗಿದ ಡೆಲ್ಲಿ

ಬೆಂಗಳೂರು: ಕನ್ನಡಿಗ ಕೆ.ಎಲ್‌ ರಾಹುಲ್‌ ಅವರ ಅಜೇಯ ಅರ್ಧಶತಕದಾಟದ ಬಲದಿಂದ ಅತಿಥೇಯ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು 6 ವಿಕೆಟ್‌ಗಳ ಅಂತರದಿಂದ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ, ಟೂರ್ನಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸಿದೆ.

ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ನಡುವೆ ನಡೆದ 18ನೇ ಆವೃತ್ತಿಯ ಐಪಿಎಲ್‌ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 163 ರನ್‌ ಗಳಿಸಿ ಎದುರಾಳಿ ತಂಡಕ್ಕೆ 164 ರನ್‌ ಗಳ ಗುರಿ ನೀಡಿತು. ಈ ಮೊತ್ತ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್‌ 17.5 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 169 ರನ್‌ ಗಳಿಸಿ 6ವಿಕೆಟ್‌ಗಳ ಅಂತರದಿಂದ ಗೆದ್ದು ಬೀಗಿತು.

ಆರ್‌ಸಿಬಿ ಇನ್ನಿಂಗ್ಸ್‌: ಉತ್ತಮ ಆರಂಭದ ನಡುವೆಯೂ ಮಧ್ಯಮ ಕ್ರಮಾಂಕ ದಿಢೀರ್‌ ಕುಸಿತ ಕಂಡ ಕಾರಣ ಡೆಲ್ಲಿ ವಿರುದ್ಧ ಬೃಹತ್‌ ಮೊತ್ತ ಕಲೆಹಾಕುವ ಸೂಚನೆ ನೀಡಿದ್ದ ಆರ್‌ಸಿಬಿ ಕೇವಲ ನೂರೈವತ್ತರ ಗಡಿ ದಾಟಲು ಮಾತ್ರ ಶಕ್ತವಾಯಿತು. ಆರಂಭಿಕ ಆಟಗಾರ ಫಿಲ್‌ ಸಾಲ್ಟ್‌ 37(17), ವಿರಾಟ್‌ ಕೊಹ್ಲಿ 22(14) ರನ್‌ ಬಾರಿಸಿ ಪೆವಿಲಿಯನ್‌ ಸೇರಿದರು. ದೇವ್‌ದತ್‌ ಪಡಿಕ್ಕಲ್‌ 1(8) ಸುಸ್ತಾದರೇ, ಲಿವಿಂಗ್‌ಸ್ಟೋನ್‌ 4(6), ಜಿತೇಶ್ ಶರ್ಮಾ 3(11) ರನ್‌ ಗಳಿಸಿ ಮರಳಿದರು.

ನಾಯಕ ರಜತ್‌ ಪಾಟೀದರ್‌ 25(23), ಕೃನಾಲ್‌ ಪಾಂಡ್ಯ 18(18) ರನ್‌ ಗಳಿಸಿ ಔಟಾದರೇ, ಕೊನೆಯಲ್ಲಿ ಅಬ್ಬರಿಸಿದ ಟಿಮ್‌ ಡೇವಿಡ್‌ ಔಟಾಗದೇ 20 ಎಸೆತಗಳಲ್ಲಿ 37 ರನ್‌ ಬಾರಿಸಿದರು. ಭುವಿ 1(4) ರನ್‌ ಗಳಿಸಿ ಸ್ಕ್ರೀಸ್‌ನಲ್ಲಿ ಉಳಿದರು.

ಡೆಲ್ಲಿ ಪರ ವಿಪ್ರಾಜ್‌ ನಿಗಮ್‌ ಹಾಗೂ ಕುಲ್ದೀಪ್‌ ಯಾದವ್‌ ತಲಾ ಎರಡು ವಿಕೆಟ್‌, ಮುಖೇಶ್‌ ಕುಮಾರ್‌ ಮತ್ತು ಮೋಹಿತ್‌ ಶರ್ಮಾ ತಲಾ ಒಂದೊಂದು ವಿಕೆಟ್‌ ಪಡೆದರು.

ಡೆಲ್ಲಿ ಇನ್ನಿಂಗ್ಸ್‌: ಆರ್‌ಸಿಬಿ ನೀಡಿದ್ದ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಡೆಲ್ಲಿಗೆ ಕನ್ನಡಿಗ ಕೆ.ಎಲ್‌ ರಾಹುಲ್‌ ಆಸರೆಯಾದರು. ರಾಹುಲ್‌ ಅವರು ಅಜೇಯ 53 ಎಸೆತಗಳಲ್ಲಿ 7 ಬೌಂಡರಿ, 6 ಸಿಕ್ಸರ್‌ ಸಹಿತ 93 ರನ್‌ ಬಾರಿಸಿದರೇ, ಸ್ಟಬ್ಸ್‌ 23 ಎಸೆತಗಳಲ್ಲಿ 38 ರನ್‌ ಬಾರಿಸಿ ಡೆಲ್ಲಿಗೆ ಗೆಲುವು ತಂದುಕೊಟ್ಟರು.

ಉಳಿದಂತೆ ಫಾಫ್‌ 2(7), ಫ್ರೆಸರ್‌ ಮೆಕ್‌ಗಾರ್ಕ್‌ 7(6), ಅಭಿಷೇಕ್‌ ಪೂರೆಲ್‌ 7(7) ಮತ್ತು ನಾಯಕ ಅಕ್ಷರ್‌ ಪಟೇಲ್‌ 15(11) ರನ್‌ ಗಳಿಸಿದರು.

ಆರ್‌ಸಿಬಿ ಪರ ಭುವನೇಶ್ವರ್‌ ಕುಮಾರ್‌ ಎರಡು ವಿಕೆಟ್‌, ಯಶ್‌ ದಯಾಳ್‌ ಹಾಗೂ ಸುಯೇಶ್‌ ಶರ್ಮಾ ತಲಾ ಒಂದೊಂದು ವಿಕೆಟ್‌ ಪಡೆದರು.

ಪಂದ್ಯಶ್ರೇಷ್ಠ: ಕೆ.ಎಲ್‌ ರಾಹುಲ್‌

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಮಡಿಕೇರಿ| 20 ಅಡಿ ಆಳದ ಗದ್ದೆಗೆ ಉರುಳಿದ ಕಾರು

ಮಡಿಕೇರಿ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಗದ್ದುಗೆ ಉರುಳಿ ಬಿದ್ದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ…

2 mins ago

ಚಿಕ್ಕಮಗಳೂರಿನಲ್ಲಿ ಕಾಡಾನೆ ಅಟ್ಟಹಾಸ: ಜಿಲ್ಲೆಯ 12 ಗ್ರಾಮಗಳಲ್ಲಿ ನಿಷೇಧಾಜ್ಞೆ

ಚಿಕ್ಕಮಗಳೂರು: ಮಲೆನಾಡಿನ ಭಾಗದಲ್ಲಿ ಕಾಡಾನೆಗಳ ಅಟ್ಟಹಾಸ ಮಿತಿಮೀರಿದ್ದು, ಆನೆ ದಾಳಿಗೆ ಇಬ್ಬರು ಬಲಿಯಾದ ಬೆನ್ನಲ್ಲೇ ಜಿಲ್ಲೆಯ 12 ಭಾಗಗಳಲ್ಲಿ ಜಿಲ್ಲಾಡಳಿತ…

27 mins ago

ರಾಮನಗರ: ಮನೆ ಬೀಗ ಮುರಿದು ಅರ್ಧ ಕೆಜಿ ಚಿನ್ನ ದೋಚಿದ ಕಳ್ಳರು

ರಾಮನಗರ: ಮನೆ ಬೀಗ ಮುರಿದು ಅರ್ಧ ಕೆಜಿ ಚಿನ್ನ ದೋಚಿರುವ ಘಟನೆ ರಾಮನಗರದ ದ್ಯಾವರಸೇಗೌಡನದೊಡ್ಡಿ ಸಮೀಪ ನಡೆದಿದೆ. ಸಾಫ್ಟ್‌ವೇರ್‌ ಉದ್ಯೋಗಿಯಾಗಿರುವ…

1 hour ago

ಜೋಳದ ಫಸಲು ಕಾಯುವ ವೇಳೆ ಕಾಡಾನೆ ದಾಳಿ: ರೈತನಿಗೆ ಗಂಭೀರ ಗಾಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಜಮೀನಿನಲ್ಲಿ ಜೋಳದ ಪಸಲು ಕಾಯುತ್ತಿದ್ದ ರೈತನ ಮೇಲೆ ಕಾಡಾನೆ ದಾಳಿ…

2 hours ago

ಓದುಗರ ಪತ್ರ: ಸ್ವಾಗತಾರ್ಹ ತೀರ್ಪು!

ಅಧಿಕ ಸುಂಕ ಹೇರಿಕೆ ಚಟ ಬ್ರಹ್ಮಾಸ್ತ್ರವಾಗಿತ್ತು ಟ್ರಂಪಣ್ಣನಿಗೆ ವಿವಿಧ ದೇಶಗಳನು ನಿಯಂತ್ರಿಸಲು! ಆದರೀಗ ರದ್ದುಗೊಳಿಸಿದೆ ಅಮೆರಿಕದ ಸುಪ್ರೀಂ ಕೋರ್ಟ್ ಅಽಕ…

2 hours ago

ಓದುಗರ ಪತ್ರ: ಮಕ್ಕಳಿಗೆ ಮೊಬೈಲ್ ನಿಷೇಧದ ಚಿಂತನೆ: ಸ್ವಾಗತಾರ್ಹ

ರಾಜ್ಯದಲ್ಲಿ ೧೬ ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿರುವುದು ಸ್ವಾಗತಾರ್ಹ.…

2 hours ago