ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು (ಮೇ.18) ಸಂಜೆ 7.30ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈಸೂಪರ್ ಕಿಂಗ್ಸ್ ನಡುವೆ ಹೈ-ವೋಲ್ಟೇಜ್ ಕದನಕ್ಕೆ ವೇದಿಕೆ ಸಜ್ಜಾಗಿದೆ.
ಈ ಸೀಸನ್‌ನಲ್ಲಿ ನಾಲ್ಕನೇ ಸ್ಥಾನಕ್ಕೇರಿ ಪ್ಲೇಆಫ್ ಸುತ್ತಿಗೆ ಕ್ವಾಲಿಫೈ ಆಗಲು ಇಂದಿನ ಪಂದ್ಯ ಬಹಳ ಮುಖ್ಯ ಆಗಲಿದ್ದು, ಸಿಎಸ್‌ಕೆ-ಆರ್‌ಸಿಬಿ ನಡುವಣ ಪಂದ್ಯ ಡಿಸೈಡರ್ ಗೇಮ್ ಆಗಿದೆ.
ಸಿಎಸ್‌ಕೆ ಹಾಗೂ ಆರ್‌ಸಿಬಿ ಈವರೆಗೆ 31 ಬಾರಿ ಮುಖಾಮುಖಿಯಾಗಿದ್ದು, 21 ಬಾರಿ ಸಿಎಸ್‌ಕೆ ಗೆದ್ದಿದ್ದರೆ, 10 ಬಾರಿ ಆರ್‌ಸಿಬಿ ವಿಜಯ ದಾಖಲಿಸಿದೆ. ಇನ್ನು ಈ ಸೀಸನ್‌ನಲ್ಲಿ ಸಿಎಸ್‌ಕೆ 13 ಪಂದ್ಯಗಳಲ್ಲಿ 7 ಪಂದ್ಯ ಗೆದ್ದು, 6 ಪಂದ್ಯ ಸೋತು 14 ಪಾಯಿಂಟ್ಸ್ ಪಡೆದು ನಾಲ್ಕನೇ ಸ್ಥಾನದಲ್ಲಿದೆ. ಇತ್ತ 13 ಪಂದ್ಯಗಳನ್ನಾಡಿರುವ ಆರ್‌ಸಿಬಿ 6 ಪಂದ್ಯ ಗೆದ್ದು, 7 ಪಂದ್ಯ ಸೋತು 12 ಅಂಕ ಗಳಿಸಿ 6ನೇ ಸ್ಥಾನದಲ್ಲಿದೆ.
ಸಿಎಸ್‌ಕೆ ಈ ಪಂದ್ಯ ಗೆದ್ದರೆ ನೇರವಾಗಿ ಪ್ಲೇಆಫ್‌ಗೆ ಅರ್ಹತೆ ಪಡೆಯಲಿದೆ. ಅಥವಾ ಮಳೆಯಿಂದ ರದ್ದಾದರೂ ಕೂಡ ಒಂದು ಅಂಕ ಪಡೆದು ಕ್ವಾಲಿಫೈ ಆಗಲಿದೆ.
ಆರ್‌ಸಿಬಿಗೆ ಪ್ಲೇಆಫ್ ಹಾದಿ ಹೀಗಿದೆ: ಸದ್ಯ ನಾಲ್ಕನೇ ಸ್ಥಾನದಲ್ಲಿರುವ ಸಿಎಸ್‌ಕೆ 13 ಪಂದ್ಯಗಳಲ್ಲಿ 7 ಪಂದ್ಯ ಗೆದ್ದು 14 ಪಾಯಿಂಟ್ಸ್‌ನೊಂದಿಗೆ +0.528ರನ್ ರೇಟ್ ಹೊಂದಿದೆ. ಇತ್ತ ಆರ್‌ಸಿಬಿ 13ಪಂದ್ಯದಲ್ಲಿ 6 ಗೆದ್ದು, 12 ಪಾಯಿಂಟ್ಸ್‌ನೊಂದಿಗೆ +0.387 ರನ್ ರೇಟ್ ಗಳಿಸಿದೆ.
ಇತ್ತ ಆರ್‌ಸಿಬಿ ಕೊನೆಯ ಪಂದ್ಯ ಗೆದ್ದ ಮಾತ್ರಕ್ಕೆ ಪ್ಲೇಆಫ್ ಪ್ರವೇಶಿಸುವುದಿಲ್ಲ. ಆರ್‌ಸಿಬಿ ಬಹಳ ಅಂತರದಿಂದ ಗೆಲ್ಲಬೇಕು. ಇಲ್ಲವಾದಲ್ಲಿ ಆರ್‌ಸಿಬಿ ಗೆದ್ದರೂ ಟೂರ್ನಿಯಿಂದ ಹೊರ ಬೀಳುವುದು ನಿಶ್ಚಿತ.
ಆರ್‌ಸಿಬಿ ಈ ಪಂದ್ಯದಲ್ಲಿ ಟಾರ್ಗೆಟ್ ನೀಡಿದ್ದೇ ಆದರೆ ಕನಿಷ್ಟ 18 ರನ್‌ಗಳ ಅಂತರದಿಂದ ಗೆಲುವು ದಾಖಲಿಸಬೇಕು. ಇಲ್ಲ ಚೇಸ್ ಮಾಡಿದರೆ 18.1 ಓವರ್‌ಗಳ ಒಳಗಾಗಿ ಟಾರ್ಗೆಟ್ ಚೇಸ್ ಮಾಡಿ ಗೆಲ್ಲಬೇಕು. ಈ ಪಂದ್ಯದಲ್ಲಿ ವಿಕೆಟ್‌ಗಳ ಮಹತ್ವ ಇರುವುದಿಲ್ಲ.
ಒಟ್ಟಾರೆಯಾಗಿ ಆರ್‌ಸಿಬಿಗೆ ಡೂ ಆರ್ ಡೈ ಪಂದ್ಯ ಇದಾಗಿದ್ದು, ಸಿಎಸ್‌ಕೆ ಮಣಿಸಿ ಪ್ಲೇ ಆಫ್ ತಲುಪಲಿದೆಯಾ ಇಲ್ಲ, ಸೋತು ಟೂರ್ನಿಯಿಂದ ಹೊರ ಬೀಳಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.
ಮಂಜು ಕೋಟೆ ಕುರುಬ ಸಮಾಜದ ಎರಡು ಬಣಗಳ ನಡುವೆ ಉಂಟಾಗಿದ್ದ ಗೊಂದಲ; ಸಿಎಂ ಸಿದ್ದರಾಮಯ್ಯ ಸೂಚನೆಯಂತೆ ಕ್ರಮ ಎಚ್.ಡಿ.ಕೋಟೆ: ಮುಖ್ಯಮಂತ್ರಿ…
೩೫ ಕಡೆಗಳಲ್ಲಿ ಹೈಬ್ರಿಡ್ ಸಿಗ್ನಲ್ ಲೈಟ್; ವಾಹನ ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸ್ ಇಲಾಖೆ ಕ್ರಮ ಮೈಸೂರು: ಭವಿಷ್ಯದಲ್ಲಿ ರಿಂಗ್…
ಕಾಡಂಚಿನ ವ್ಯಾಘ್ರ ಸೆರೆಗೆ ಹಗಲು-ರಾತ್ರಿ ಕಾರ್ಯಾಚರಣೆ ಚಿರತೆ ಸೆರೆಗೆ ತಂತ್ರಜ್ಞಾನ ಬಳಕೆ ಮಾಡಿದ್ದ ಅರಣ್ಯ ಇಲಾS ಮೈಸೂರು: ಕಳೆದ ಎರಡು…
ಹೇಮಂತ್‌ಕುಮಾರ್ ದಾಖಲೆ ಸೃಷ್ಟಿ ; ಹಲವು ಅಚ್ಚರಿಗಳ ತಾಣವಾದ ಮೂರು ದಿನಗಳ ಮೇಳ ಮಂಡ್ಯ: ಮೂರು ದಿನಗಳ ಕಾಲ ವಿ.ಸಿ.ಫಾರಂನಲ್ಲಿ…
ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…