ಬೆಂಗಳೂರು: ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತರಬೇತಿ ಶಿಬಿರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಭಾನುವಾರ ಲಂಡನ್‌ನಿಂದ ಭಾರತಕ್ಕೆ ಬಂದಿಳಿದಿದ್ದರು. ಸೋಮವಾರ ಆರ್‌ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ. ತಮ್ಮ ಎರಡನೇ ಮಗು ಅಕಾಯ್ ಜನನದ ಕಾರಣ ಕೊಹ್ಲಿ ಲಂಡನ್‌ನಲ್ಲಿದ್ದರು.
ಇದೇ ಮಾ.22 ರಿಂದ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17ರ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಗಳು ಮುಖಾಮುಖಿಯಾಗಲಿದೆ.
ಮಗು ಜನನದ ಹಿನ್ನಲೆ ವಿರಾಟ್ ಕೊಹ್ಲಿ ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ ಐದು ಟೆಸ್ಟ್ ಸರಣಿಗೆ ಅಲಭ್ಯರಾಗಿದ್ದರು.
ಇದೇ ಜೂನ್‌ನಿಂದ ಅಮೇರಿಕಾ ಮತ್ತು ಕೆರೆಬಿಯನ್ ನಾಡಿನಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್‌ಗೆ ವಿರಾಟ್ ಕೊಹ್ಲಿಯನ್ನು ಕೈಬಿಡುವ ಬಗ್ಗೆ ಚರ್ಚೆಗಳು ಆರಂಭವಾಗಿದ್ದು, ಈ ಕಾರಣದಿಂದಾಗಿ ಈ ಬಾರಿಯ ಐಪಿಎಲ್ ಪ್ರದರ್ಶನದ ಮೇಲೆ ಎಲ್ಲರ ಗಮನ ನೆಟ್ಟಿದೆ.
ಈ ಹಿಂದಿನ ಆವೃತ್ತಿಯಲ್ಲಿ ಕೊಹ್ಲಿ 2 ಶತಕ ಮತ್ತು 6 ಅರ್ಧಶತಕ ಸೇರಿದಂತೆ ಒಟ್ಟು 639 ರನ್ ಬಾರಿಸಿದ್ದರು.
ಮಂಜು ಕೋಟೆ ಅರಣ್ಯದೊಳಗಿನ ಸಫಾರಿಗೆ ನಿರ್ಬಂಧ ಹೇರಿದ ಬಳಿಕ ಪ್ರವಾಸಿಗರನ್ನು ಸೆಳೆಯಲು ರೆಸಾರ್ಟ್‌ನವರ ಕಸರತ್ತು ಎಚ್.ಡಿ.ಕೋಟೆ: ಅರಣ್ಯದಲ್ಲಿ ಈಗ ಸಫಾರಿ…
ಗಿರೀಶ್ ಹುಣಸೂರು ೨೦೨೬ರ ಜ.೩ರಿಂದ ಮಾ.೩೧ರವರೆಗೆ ನೋಂದಣಿ ಪ್ರಕ್ರಿಯೆ ಮೈಸೂರು: ಸಹಕಾರ ಸಂಘಗಳ ಸದಸ್ಯರ ಪಾಲಿನ ಸಂಜೀವಿನಿಯಂತಿರುವ ‘ಯಶಸ್ವಿನಿ’ ಆರೋಗ್ಯ…
ನೈಸರ್ಗಿಕ ಕೃಷಿ ರೂವಾರಿ ಸುಭಾಷ್ ಪಾಳೇಕರ್ ಸ್ಪಷ್ಟನುಡಿ ಸಂದರ್ಶನ: ರಶ್ಮಿ ಕೋಟಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು…
ಹೊಸ ವರ್ಷಕ್ಕೆ ಕಾಲಿಟ್ಟ ಬಳಿಕ ಕನ್ನಡ ಚಿತ್ರರಂಗದಲ್ಲಿ ಮೊದಲ ದಿನವೇ ತೀರ್ಥರೂಪ ತಂದೆಯವರಿಗೆ ಎಂಬ ಚಿತ್ರ ಬಿಡುಗಡೆಯಾಗಿದೆ. ಈ ಹಿಂದೆ…
ಮಂಡ್ಯ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಿ ಜಿಲ್ಲೆಯಲ್ಲಿನ ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು ಎಂದು…