ಕ್ರೀಡೆ

IPL 2024: ಗುಜರಾತ್‌ ತಂಡದ ನಾಯಕನ ಸ್ಥಾನಕ್ಕೆ ಅಚ್ಚರಿ ಆಯ್ಕೆ!

ನವದೆಹಲಿ : ಮಾಜಿ ಗುಜರಾತ್‌ ತಂಡ ನಾಯಕ ಹಾರ್ದಿಕ್‌ ಪಾಂಡ್ಯ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಮರಳುವ ನಿರ್ಧಾರದ ನಂತರ ಗುಜರಾತ್ ಟೈಟಾನ್ಸ್ ಸೋಮವಾರ ಇಂಡಿಯನ್ ಪ್ರೀಮಿಯರ್ ಲೀಗ್ ನ (ಐಪಿಎಲ್) 2024 ರ ಸೀಸನ್ ಗೆ ನಾಯಕನಾಗಿ ಶುಭಮನ್‌ ಗಿಲ್ ಅವರನ್ನು ನೇಮಕಮಾಡಿದ್ದಾರೆ.

ಪಾಂಡ್ಯ ಅವರ ನಿರ್ಗಮನ ಖಚಿತವಾದ ನಂತರ, 24 ವರ್ಷದ ಆರಂಭಿಕ ಆಟಗಾರ ಗಿಲ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ. ಗಿಲ್ ಕಳೆದ ಋತುವಿನಲ್ಲಿ 890 ರನ್ಗಳೊಂದಿಗೆ ಆರೆಂಜ್‌ ಕ್ಯಾಪ್ ಪಡೆದಿದ್ದರು. ಇದು ವಿರಾಟ್ ಕೊಹ್ಲಿ ಅವರ ಐಪಿಎಲ್‌ ದಾಖಲೆಯಾದ 973 ರನ್ ಗಳ ನಂತರದ ಸ್ಥಾನದಲ್ಲಿದೆ.

ಗುಜರಾತ್ ಟೈಟಾನ್ಸ್ ತಂಡದ ಮುಖ್ಯಸ್ಥ ವಿಕ್ರಮ್ ಸೋಲಂಕಿ ಅವರು ಕಳೆದ ಎರಡು ಋತುಗಳಲ್ಲಿ ತಂಡದ ಯಶಸ್ಸಿಗೆ ಪಾಂಡ್ಯ ಕಾರಣ ಎಂದು ಹೊಗಳಿದ್ದಾರೆ. ಗುಜರಾತ್ ಟೈಟಾನ್ಸ್ ಮೊದಲ ನಾಯಕನಾಗಿ, ಹಾರ್ದಿಕ್ ಪಾಂಡ್ಯ ಫ್ರಾಂಚೈಸಿಗೆ ಎರಡು ಅದ್ಭುತ ಸೀಸನ್‌ಗಳಲ್ಲಿ ಒಂದು ಬಾರಿ ಚಾಂಪಿಯನ್‌ಶಿಪ್‌ ಮತ್ತೊಂದು ಬಾರಿ ಫೈನಲ್ ನಲ್ಲಿ ಸ್ಥಾನ ಪಡೆಯಲು ಕಾರಣವಾಯಿತು” ಎಂದು ಸೋಲಂಕಿ ತಿಳಿಸಿದ್ದಾರೆ.

ಪಾಂಡ್ಯ ಅವರು ಮುಂಬೈ ಸೇರುವ ಬಯಕೆಯನ್ನು ನಾವು ಗೌರವಿಸುತ್ತೇವೆ ಮತ್ತು ಶುಭ ಆರೈಸುತ್ತೇವೆ. ಹಾಗಯೇ ಗಿಲ್‌ ಸಾಮರ್ಥ್ಯವನ್ನು ನಾವು ಕಳೆದೆರೆಡು ಐಪಿಎಲ್‌ ಋತುವಿನಲ್ಲಿ ಗಿಲ್‌ ನೊಂದಿಗೆ ನಿಖಟವಾದ ಸಂಬಂಧ ಹೊಂದಿದ್ದೇವೆ. ಗಿಲ್‌ ಪ್ರಬುದ್ಧತೆ ತಂಡಕ್ಕೆ ಸಹಕರಿಸಲಿದೆ.  ಎಂದು ಸೋಲಂಕಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಅವರ ಪರಿಪಕ್ವತೆ ಮತ್ತು ಕೌಶಲ್ಯವು ಮೈದಾನದಲ್ಲಿನ ಅವರ ಪ್ರದರ್ಶನದಲ್ಲಿ ಸ್ಪಷ್ಟವಾಗಿದೆ. ಶುಭಮನ್ ಅವರಂತಹ ಯುವ ಆಟಗಾರ, ನಾಯಕನ ಚುಕ್ಕಾಣಿ ಹಿಡಿದಿದ್ದಾರೆ. ಅವರೊಂದಿಗೆ ಹೊಸ ಪ್ರಯಾಣವನ್ನು ಪ್ರಾರಂಭಿಸಲು ನಾವು ತುಂಬಾ ಉತ್ಸುಕರಾಗಿದ್ದೇವೆ” ಎಂದು ಜಿಟಿ ಥಿಂಕ್-ಟ್ಯಾಂಕ್ ಮುಖ್ಯಸ್ಥರು ಹೇಳಿದ್ದಾರೆ.

ಗಲ್‌ ಹೇಳಿದ್ದೇನು? : ಗುಜರಾತ್ ಟೈಟಾನ್ಸ್ ನ ನಾಯಕತ್ವವನ್ನು ವಹಿಸಿಕೊಳ್ಳಲು ನನಗೆ ಸಂತೋಷವಾಗಿದೆ ಮತ್ತು ಅಂತಹ ಉತ್ತಮ ತಂಡವನ್ನು ಮುನ್ನಡೆಸಲು ನನ್ನ ಮೇಲಿನ ನಂಬಿಕೆಗಾಗಿ ಫ್ರಾಂಚೈಸಿಗೆ ಧನ್ಯವಾದ ಹೇಳುತ್ತೇನೆ. ನಾವು ಎರಡು ಅಸಾಧಾರಣ ಋತುಗಳನ್ನು ಹೊಂದಿದ್ದೇವೆ ಮತ್ತು ನಮ್ಮ ಉತ್ತೇಜಕ ಬ್ಯಾಂಡ್ ಕ್ರಿಕೆಟ್ರೊಂದಿಗೆ ತಂಡವನ್ನು ಮುನ್ನಡೆಸಲು ನಾನು ಉತ್ಸುಕನಾಗಿದ್ದೇನೆ.,” ಗಿಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

andolanait

Recent Posts

ಪ್ರಧಾನಿ ಮೋದಿ ಸ್ವಾಗತಕ್ಕೆ ಸಜ್ಜಾದ ಆದಿಚುಂಚನಗಿರಿ : ಬಿಗಿ ಪೊಲೀಸ್‌ ಭದ್ರತೆ

ಮಂಡ್ಯ : ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಏಪ್ರಿಲ್ 15) ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಶ್ರೀಕ್ಷೇತ್ರಕ್ಕೆ ಮೊದಲ…

5 hours ago

ಶಾಂತಿ ಒಪ್ಪಂದ ಜೀವಂತ | ಅಮೆರಿಕ-ಇರಾನ್ ಮಾತುಕತೆಗೆ ಸಿದ್ಧತೆ

ವಾಷಿಂಗ್ಟನ್ : ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಅಮೆರಿಕ-ಇರಾನ್ ಮಾತುಕತೆ ವಿಫಲವಾದ ನಂತರ, ಎರಡು ವಾರಗಳ ಕದನ ವಿರಾಮ ಕೊನೆಗೊಳ್ಳುವ ಮೊದಲು,…

6 hours ago

ಐವರು ಸಾಧಕರಿಗೆ ಅಂಬೇಡ್ಕರ್‌ ಪ್ರಶಸ್ತಿ ; ಪ್ರಶಸ್ತಿ ವಿತರಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಅಸ್ಪೃಶ್ಯತೆ ಆಚರಣೆ, ಅಸಮಾನತೆ ವಿರುದ್ಧದ ಹೋರಾಟಗಳಲ್ಲಿ ಪಾಲ್ಗೊಂಡು, ಸಮ ಸಮಾಜ ನಿರ್ಮಾಣದ ಹಾದಿಯಲ್ಲಿ ಛಾಪು ಮೂಡಿಸಿದ ಐವರು…

7 hours ago

ಹಾರ್ಮುಜ್ ಜಲಸಂಧಿ ದಾಟಿದ ಹಡಗುಗಳು ; ಅಮೆರಿಕದ ದಿಗ್ಬಂಧನಕ್ಕೆ ಇರಾನ್ ಸವಾಲು

ಟೆಹ್ರಾನ್‌ : ಅಮೆರಿಕ ಸರ್ಕಾರ ಹೇರಿದ ನೌಕಾ ದಿಗ್ಬಂಧನ ಎದುರಿಸಿ ಇರಾನ್‌ನ ಹಡಗುಗಳು ಹಾರ್ಮುಜ್ ಜಲಸಂಧಿ ದಾಟುವುದನ್ನು ಮುಂದುವರಿಸಿವೆ. ಕನಿಷ್ಠ…

7 hours ago

ಅಂಬೇಡ್ಕರ್‌ ಚಿಂತನೆಗಳ ಬಗ್ಗೆ ಜಾಗೃತಿ ಮೂಡಿಸಿ : ಶಾಸಕ ತನ್ವೀರ್‌ ಸೇಠ್‌

ಮೈಸೂರು : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೋರಾಟದ ಬದುಕು ಮತ್ತು ಅವರು ಪ್ರತಿಪಾದಿಸಿದ ಸಮಾನತೆಯ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ…

8 hours ago

ಚಾ.ನಗರ | ಹೊಸೂರು ಗ್ರಾಮದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ

ಚಾಮರಾಜನಗರ : ತಾಲ್ಲೂಕಿನ ವಿ.ಸಿ.ಹೊಸೂರು ಗ್ರಾಮಸ್ಥರು ತಮ್ಮ ಊರಿಗೆ ಇನ್ನೂ ಪೂರ್ವ ಮುಂಗಾರು ಮಳೆ ಪ್ರವೇಶ ಆಗದ ಹಿನ್ನೆಲೆಯಲ್ಲಿ ಮಳೆಗಾಗಿ…

8 hours ago