ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಲ್‌ರೌಂಡರ್ ಆಟದ ಮುಂದೆ ಮಂಕಾದ ಗುಜರಾತ್ ಟೈಟನ್ಸ್ ತಂಡ 4 ವಿಕೆಟ್‌ಗಳ ಅಂತರದ ಹೀನಾಯ ಸೋಲು ಅನುಭವಿಸಿದೆ.
ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ನ 52ನೇ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಜಿಟಿ ಎದುರಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದದ ಗುಜರಾತ್ ಜೈಂಟ್ಸ್ ನಿಗದಿತ 19.3 ಓವರ್‌ಗಳಲ್ಲಿ ಆಲ್‌ಔಟ್ ಆಗಿ 147ರನ್ ಗಳಿಸಿ ಆರ್‌ಸಿಬಿಗೆ 148 ರನ್‌ಗಳ ಗುರಿ ನೀಡಿತ್ತು. ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಆರ್‌ಸಿಬಿಗೆ ನಾಯಕ ಫಾಫ್ ಡುಪ್ಲೆಸಿ ಅವರ ಅರ್ಧಶತಕದ ನೆರವಿನಿಂದ ಕೇವಲ 13.4 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 152 ರನ್ ಕಲೆ ಹಾಕಿ ಗುರಿ ಮುಟ್ಟಿತು.
ಜಿಟಿ ಇನ್ನಿಂಗ್ಸ್: ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡಕ್ಕೆ ಆರಂಭಿಕ ಆಘಾತ ಉಂಟಾಯಿತು. ನಾಯಕ ಗಿಲ್ 2(7) ಹಾಗೂ ವೃದ್ಧಿಮಾನ್ ಸಾಹಾ 1(7) ರನ್‌ಗಳಿಸಿ ಔಟಾದರು. ಇವರೊಂದಿಗೆ ಸಾಯ್ ಸುದರ್ಶನ್ 6(14) ಕೂಡಾ ಬಂದ ದಾರಿಯಲ್ಲೇ ಹಿಂತಿರುಗಿದರು. ಮಧ್ಯಮ ಕ್ರಮಾಂಕದಲ್ಲಿ ಸ್ವಲ್ಪ ಮಟ್ಟಿಗೆ ಅಬ್ಬರಿಸಿದ ಶಾರುಖ್ ಖಾನ್ 37(24), ಡೇವಿಡ್ ಮಿಲ್ಲರ್ 30(20) ಹಾಗೂ ರಾಹುಲ್ ತೆವಾಟಿಯಾ 35(21) ರನ್ ಗಳಿಸಿ ತಂಡಕ್ಕೆ ಚೇತರಿಕೆಯ ಆಟವಾಡಿದರು.
ಉಳಿದಂತೆ ರಶೀದ್ ಖಾನ್ 18(14), ವಿಜಯ್ ಶಂಕರ್ 10(7), ಸುತಾರ್ 1(2), ಮೋಹಿತ್ ಶರ್ಮಾ ಶೂನ್ಯ ಸುತ್ತಿ ಔಟಾಗುವ ಮೂಲಕ ತಂಡ ಸ್ಪರ್ಧಾತ್ಮಕ ಮೊತ್ತ ಕೂಡಿಸುವಲ್ಲಿ ಸಹಕರಿಸಿದರು.
ಆರ್‌ಸಿಬಿ ಪರ ವೈಶಾಖ್, ಸಿರಾಜ್ ಹಾಗೂ ಯಶ್ ದಯಾಳ್ ತಲಾ 2 ವಿಕೆಟ್ ಪಡೆದರು. ಕ್ಯಾಮರೋನ್ ಗ್ರೀನ್ ಹಾಗೂ ಕರಣ್ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದು ಗಮನ ಸೆಳೆದರು.
ಆರ್‌ಸಿಬಿ ಇನ್ನಿಂಗ್ಸ್: ತವರಿನಂಗಳದಲ್ಲಿ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಆರ್‌ಸಿಬಿಗೆ ನಾಯಕ ಫಾಫ್ ಹಾಗೂ ವಿರಾಟ್ ಕೊಹ್ಲಿ ಬರ್ಜರಿ ಓಪನಿಂಗ್ ನೀಡಿದರು. ಪವರ್ ಪ್ಲೇನಲ್ಲಿ ಜಿಟಿ ಬೌಲರ್‌ಗಳನ್ನು ಈ ಇಬ್ಬರು ಆಟಗಾರರು ಮನಬಂದಂತೆ ದಂಡಿಸಿದರು. ನಾಯಕ ಫಾಫ್ ಕೇವಲ 18 ಎಸೆತಗಳಲ್ಲಿಯೇ ಅರ್ಧಶತಕ ಪೂರೈಸಿದರು. ಇವರು 23 ಎಸೆತ ಎದುರಿಸಿ 10ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 64 ರನ್ ಗಳಿಸಿ ಔಟಾದರು. ಆರ್‌ಸಿಬಿ ಪವರ್ ಪ್ಲೇ ನಲ್ಲಿ ಫಾಫ್ ವಿಕೆಟ್ ಕಳೆದುಕೊಂಡು ಬರೋಬ್ಬರಿ 92 ರನ್ ಪೇರಿಸಿತು.
ಭರ್ಜರಿ ಓಪನಿಂಗ್ ಸಿಕ್ಕರೂ ಆರ್‌ಸಿಬಿಗೆ ಮಧ್ಯಮ ಕ್ರಮಾಂಕ ಕೈಕೊಟ್ಟಿತು. ವಿಲ್ ಜಾಕ್ 1(3), ಪಟಿದರ್ 2(3) ಹಾಗೂ ಗ್ಲೇನ್ ಮ್ಯಾಕ್ಸ್‌ವೆಲ್ 4(3) ಹಾಗೂ ಕ್ಯಾಮರೋನ್ ಗ್ರೀನ್ 1(2) ವಿಕೆಟ್ ಕಳೆದುಕೊಂಡ ಆರ್‌ಸಿಬಿ ಸಂಕಷ್ಟಕ್ಕೆ ಸಿಲುಕಿತು.
ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ಏಕಾಂಗಿ ಹೋರಾಟ ನೀಡಿದ ವಿರಾಟ್ ಕೊಹ್ಲಿ 42(27) ರನ್ ಬಾರಿಸಿ ತಂಡಕ್ಕೆ ನೆರವಾದರು. ಬಳಿಕ ಬಂದ ದಿನೇಶ್ ಕಾರ್ತಿಕ್ 21(12) ಹಾಗೂ ಸ್ವಪ್ನಿಲ್ 15(9) ಪಂದ್ಯವನ್ನು ಮುಗಿಸಿ, ಆರ್‌ಸಿಬಿಗೆ ಜಯ ತಂದುಕೊಟ್ಟರು.
ಗುಜರಾತ್ ಪರ ಲಿಟ್ಲ್ 4 ಹಾಗೂ ನೂರ್ ಅಹ್ಮದ್ 2 ವಿಕೆಟ್ ಪಡೆದರು.
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…