ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 17ನೇ ಆವೃತ್ತಿ ಮುಂದಿನ ವರ್ಷದ ಮಾರ್ಚ್ ತಿಂಗಳ ಮಧ್ಯಂತರದಲ್ಲಿ ಶುರುವಾಗಲಿದೆ ಎಂದು ಖ್ಯಾತ ಕ್ರೀಡಾ ವೆಬ್ ತಾಣ ಕ್ರಿಕ್‌ಬಜ್ ತನ್ನ ವರದಿಯಲ್ಲಿ ತಿಳಿಸಿದೆ. ಇನ್ನು ಈ ಮೆಗಾ ಕ್ರಿಕೆಟ್ ಕದನಕ್ಕೆ ನಾಲ್ಕು ತಿಂಗಳು ಮಾತ್ರ ಬಾಕಿ ಉಳಿದಿದ್ದು ಟೂರ್ನಿ ಆರಂಭಕ್ಕೂ ಮುನ್ನ ಆಟಗಾರರ ಹರಾಜು ಪ್ರಕ್ರಿಯೆ ಸಹ ನಡೆಯಲಿದೆ. ಈ ಬಾರಿಯ ಆಟಗಾರರ ಹರಾಜು ಪ್ರಕ್ರಿಯೆ ದುಬೈನ ಹವೆನ್ ಆಫ್ ಎಲೈಟ್ಸ್‌ನಲ್ಲಿ ಡಿಸೆಂಬರ್ 19ರಂದು ನಡೆಯಲಿದೆ.
ಇನ್ನು ಈ ಹರಾಜಿಗೂ ಮುನ್ನ ಎಲ್ಲಾ ತಂಡಗಳು ತಮ್ಮ ತಂಡದಲ್ಲಿನ ಆಟಗಾರರನ್ನು ಕೈಬಿಡಲು ನವೆಂಬರ್ 26 ಕೊನೆಯ ದಿನಾಂಕ ಎಂದು ಬಿಸಿಸಿಐ ಗಡುವನ್ನೂ ಸಹ ನೀಡಿದೆ. ಹೀಗಾಗಿ ಸದ್ಯ ವಿವಿಧ ತಂಡಗಳು ತಮಗೆ ಯಾವ ಆಟಗಾರರು ಬೇಡವೋ ಅಂತಹ ಆಟಗಾರರನ್ನು ತಂಡದಿಂದ ಕೈಬಿಟ್ಟಿವೆ. ಹಾಗಿದ್ದರೆ ಈ ಬಾರಿಯ ಹರಾಜಿಗೂ ಮುನ್ನ ವಿವಿಧ ಫ್ರಾಂಚೈಸಿಗಳಿಂದ ಬಿಡುಗಡೆಗೊಂಡ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ..
1. ರಾಯಲ್ ಚಾಲೆಂಜರ್ಸ್ ಬೆಂಗಳೂರು: ಆರ್‌ಸಿಬಿ ಫ್ರಾಂಚೈಸಿ ಕೈಬಿಟ್ಟ ಆಟಗಾರರೆಂದರೆ ಹರ್ಷಲ್ ಪಟೇಲ್, ದಿನೇಶ್ ಕಾರ್ತಿಕ್ ಹಾಗೂ ಅನುಜ್ ರಾವತ್.
2. ಚೆನ್ನೈ ಸೂಪರ್ ಕಿಂಗ್ಸ್: ಬೆನ್ ಸ್ಟೋಕ್ಸ್
3. ಸನ್ ರೈಸರ್ಸ್ ಹೈದರಾಬಾದ್: ಹ್ಯಾರಿ ಬ್ರೂಕ್ಸ್
4. ಡೆಲ್ಲಿ ಕ್ಯಾಪಿಟಲ್ಸ್ : ಪೃಥ್ವಿ ಶಾ ಹಾಗೂ ಮನೀಶ್ ಪಾಂಡೆ
5. ರಾಜಸ್ಥಾನ್ ರಾಯಲ್ಸ್: ಜೇಸನ್ ಹೋಲ್ಡರ್, ಕೆಸಿ ಕಾರಿಯಪ್ಪ ಹಾಗೂ ಮುರುಗನ್ ಅಶ್ವಿನ್.
6. ಗುಜರಾತ್ ಟೈಟನ್ಸ್: ದಸುನ್ ಶನಕ, ಯಶ್ ದಯಾಳ್, ಓಡಿಯನ್ ಸ್ಮಿತ್, ಪ್ರದೀಪ್ ಸಾಂಗ್ವಾನ್ ಹಾಗೂ ಉರ್ವಿಲ್ ಪಟೇಲ್.
7. ಕೊಲ್ಕತ್ತಾ ನೈಟ್ ರೈಡರ್ಸ್: ಆಂಡ್ರೆ ರಸೆಲ್, ಎನ್ ಜಗದೀಶನ್, ಲಾಕಿ ಫರ್ಗ್ಯೂಸನ್, ಡೇವಿಡ್ ವೈಸ್ ಹಾಗೂ ಮನ್‌ದೀಪ್ ಸಿಂಗ್.
8. ಲಕ್ನೋ ಸೂಪರ್‌ಜೈಂಟ್ಸ್: ಮಾರ್ಕಸ್ ಸ್ಟೊಯ್ನಿಸ್, ಎವಿನ್ ಲೆವಿಸ್, ಕೈಲ್ ಜೆಮಿಸನ್, ಕೆ ಗೌತಮ್ ಹಾಗೂ ಏಡನ್ ಮಾರ್ಕ್ರಮ್
9. ಮುಂಬೈ ಇಂಡಿಯನ್ಸ್: ಜಯದೇವ್ ಉನಾಡ್ಕತ್, ಇಶಾನ್ ಕಿಶನ್, ಮುರುಗನ್ ಅಶ್ವಿನ್, ರಿಲೆ ಮೆರೆಡಿತ್, ಪಿಯೂಶ್ ಚಾವ್ಲಾ ಹಾಗೂ ಸಂದೀಪ್ ವಾರಿಯರ್.
10. ಪಂಜಾಬ್ ಕಿಂಗ್ಸ್: ಹರ್‌ಪ್ರೀತ್ ಭಾಟಿಯಾ, ರಿಷಿ ಧವನ್, ಭಾನುಕಾ ರಾಜಪಕ್ಸೆ, ಮ್ಯಾಥ್ಯೂ ಶಾರ್ಟ್ ಹಾಗೂ ರಾಜ್ ಅಂಗದ್ ಬಾವಾ.
ಮೈಸೂರು : ಮೈಸೂರು ಸೇರಿದಂತೆ ದಕ್ಷಿಣ ಒಳನಾಡಿನ ನಾಲ್ಕು ಜಿಲ್ಲೆಗಳಲ್ಲಿ ಡಿ.31ರಿಂದ ಎರಡು ದಿನ ಹಗುರವಾಗಿ ಮಳೆಯಾಗುವ ಸಾಧ್ಯತೆ ಇದೆ…
ಹೊಸದಿಲ್ಲಿ : ಮುಂಬರುವ ಕೇಂದ್ರ ಬಜೆಟ್ ಕುರಿತು ಸಂವಾದ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಆರ್ಥಿಕ ತಜ್ಞರು…
ಮಳವಳ್ಳಿ : ತಾಲ್ಲೂಕಿನ ಗಗನಚುಕ್ಕಿ ಜಲಪಾತದ ಆವರಣಕ್ಕೆ ನುಗ್ಗಿದ್ದ ಕಾಡಾನೆಗಳು ಪ್ರವಾಸಿಗರು ಜಲಪಾತ ವೀಕ್ಷಣೆಗೆ ಇಳಿಯುವ ಎರಡು ಕಡೆಗಳಲ್ಲೂ ಹಾಕಲಾಗಿದ್ದ…
ಮೈಸೂರು : ಇನ್ನೇನು ಹೊಸ ವರ್ಷಾಚರಣೆಗೆ ಕೆಲವೇ ದಿನಗಳು ಬಾಕಿ ಇದೆ. ಆದ್ದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಮೈಸೂರು ನಗರ ಪೊಲೀಸ್…
ಬೆಂಗಳೂರು : ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಸೂರು ಕಳೆದುಕೊಂಡವರಿಗೆ ಬೈಯ್ಯಪ್ಪನಹಳ್ಳಿಯಲ್ಲಿ ಪರ್ಯಾಯ ಮನೆ ಹಂಚಿಕೆ ಮಾಡಲು ಸಿಎಂ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ.…
ಚಾಮರಾಜನಗರ : ರಾಷ್ಟ್ರ ಮಟ್ಟದ ಪುರುಷರ ಮೈಕಟ್ಟು ಸ್ಪರ್ಧೆಯಲ್ಲಿ ವಿಜೇತರಾಗುವ ಮೂಲಕ ತಾಲ್ಲೂಕಿನ ಕೋಡಿಮೋಳೆ ಬಸವನಪುರ ಬಿ.ಆರ್.ಹೇಮಂತ್ ಅವರು ಮಿಸ್ಟರ್…