ನವೆಂಬರ್ 26 ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸುವ ಫ್ರಾಂಚೈಸಿಗಳಿಗೆ ತಮ್ಮ ತಂಡದಲ್ಲಿ ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು ಎಂಬುದನ್ನು ಘೋಷಿಸಲು ಕೊನೆಯ ದಿನವಾಗಿತ್ತು. ಅದರಂತೆ ಎಲ್ಲಾ ತಂಡಗಳು ಯಾವ ಆಟಗಾರರನ್ನು ಉಳಿಸಿಕೊಂಡಿದ್ದೇವೆ ಹಾಗೂ ಯಾವ ಆಟಗಾರರನ್ನು ಬಿಡುಗಡೆಗೊಳಿಸಿದ್ದೇವೆ ಎಂಬುದನ್ನು ಘೋಷಿಸಿದವು.
ಅಲ್ಲದೇ ಆಟಗಾರರ ಟ್ರೇಡಿಂಗ್ ಸಹ ನಡೆದಿದ್ದು ವಿವಿಧ ತಂಡಗಳು ಬೇರೆ ತಂಡಗಳಲ್ಲಿದ್ದ ಆಟಗಾರರನ್ನು ವಿನಿಮಯ ಮಾಡಿಕೊಂಡಿವೆ. ಹೀಗೆ ಕೆಲ ಆಟಗಾರರನ್ನು ವಿವಿಧ ಫ್ರಾಂಚೈಸಿಗಳು ಟ್ರೇಡ್ ಮಾಡಿಕೊಂಡರೆ ಇನ್ನೂ ಕೆಲ ಫ್ರಾಂಚೈಸಿಗಳು ಬೇಕಾದ ಆಟಗಾರರನ್ನು ಉಳಿಸಿಕೊಂಡು ಬೇಡವಾದ ಆಟಗಾರರನ್ನು ತಂಡದಿಂದ ಹೊರಹಾಕಿವೆ. ಇನ್ನು ಈ ಪ್ರಕ್ರಿಯೆಗಳಲ್ಲಿ ಕರ್ನಾಟಕದ ಆಟಗಾರರು ಏನಾದರು ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ..
* ಅಭಿನವ್ ಮನೋಹರ್ – ಕಳೆದ ಬಾರಿಯ ಸೀಸನ್‌ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಪ್ರತಿನಿಧಿಸಿದ್ದ ಅಭಿನವ್ ಮನೋಹರ್ ರಿಟೈನ್ ಆಗಿದ್ದು ಮುಂದಿನ ಬಾರಿಯ ಐಪಿಎಲ್‌ನಲ್ಲೂ ಜಿಟಿ ಪರವೇ ಕಣಕ್ಕಿಳಿಯಲಿದ್ದಾರೆ.
* ಪ್ರವೀಣ್ ದುಬೆ – ಕಳೆದ ಬಾರಿ ತಮ್ಮ ತಂಡವನ್ನು ಪ್ರತಿನಿಧಿಸಿದ್ದ ಪ್ರವೀಣ್ ದುಬೆ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ರಿಟೈನ್ ಮಾಡಿಕೊಂಡಿದೆ.
* ಮನೀಶ್ ಪಾಂಡೆ – ಕಳೆದ ಬಾರಿಯ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದಿದ್ದ ಮನೀಶ್ ಪಾಂಡೆ ಅವರನ್ನು ಫ್ರಾಂಚೈಸಿ ಕೈಬಿಟ್ಟಿದೆ.
* ಕೆಸಿ ಕಾರಿಯಪ್ಪ – ಕಳೆದ ಬಾರಿಯ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಕೆಸಿ ಕಾರಿಯಪ್ಪ ತಂಡದಿಂದ ಹೊರಬಿದ್ದಿದ್ದಾರೆ.
* ಪ್ರಸಿದ್ಧ್ ಕೃಷ್ಣ – ಕಳೆದ ಬಾರಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿದ್ದ ಪ್ರಸಿದ್ಧ್ ಕೃಷ್ಣ ಯಶಸ್ವಿಯಾಗಿ ರಿಟೈನ್ ಆಗಿದ್ದಾರೆ.
* ವಿದ್ವತ್ ಕಾವೇರಪ್ಪ – ಕಳೆದ ಬಾರಿ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿದಿದ್ದ ವಿದ್ವತ್ ಕಾವೇರಪ್ಪ ರಿಟೈನ್ ಆಗಿದ್ದಾರೆ.
* ಮಯಾಂಕ್ ಅಗರ್ವಾಲ್ – ಸನ್ ರೈಸರ್ಸ್ ಹೈದರಾಬಾದ್ ಪರ ಆಡಿದ್ದ ಮಯಾಂಕ್ ಅಗರ್ವಾಲ್ ಈ ಬಾರಿ ರಿಟೈನ್ ಆಗಿದ್ದು ಎಸ್‌ಆರ್‌ಎಚ್ ಪರವೇ ಮುಂದುವರೆಯಲಿದ್ದಾರೆ.
* ಕೃಷ್ಣಪ್ಪ ಗೌತಮ್ – ಕಳೆದ ಬಾರಿಯ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡಿದ್ದ ಕೃಷ್ಣಪ್ಪ ಗೌತಮ್ ರಿಟೈನ್ ಆಗಿದ್ದಾರೆ
* ಕೆಎಲ್ ರಾಹುಲ್ – ಕಳೆದ ಬಾರಿ ಲಕ್ನೋ ಸೂಪರ್ ಜೈಂಟ್ಸ್ ಪರ ನಾಯಕನಾಗಿದ್ದ ಕೆಎಲ್ ರಾಹುಲ್ ರಿಟೈನ್ ಆಗಿದ್ದಾರೆ.
* ದೇವದತ್ ಪಡಿಕ್ಕಲ್ – ಕಳೆದ ಬಾರಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ದೇವದತ್ ಈ ಬಾರಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಟ್ರೇಡ್ ಆಗಿದ್ದಾರೆ.
* ಮನೋಜ್ ಭಂಡಗೆ – ಕಳೆದ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದ ಮನೋಜ್ ಭಂಡಗೆ ರಿಟೈನ್ ಆಗಿದ್ದಾರೆ.
ಕಾಡಾನೆಗಳ ಹಾವಳಿಯಿಂದಾಗಿ ಕಾಡಂಚಿನ ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಆನೆಗಳನ್ನು ಕೊಲ್ಲಲು ಅನುಮತಿ ನೀಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ…
ರಾಜ್ಯಸಭೆಯ ಕಲಾಪದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವ ಭರದಲ್ಲಿ ಕೆಲವರು ಅಂಬೇಡ್ಕರ್ ಎನ್ನುವುದನ್ನು ಈಗ ಫ್ಯಾಷನ್…
ದಾ.ರಾ. ಮಹೇಶ್ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…
ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20,21 ಮತ್ತು 22ರಂದು ಮೂರು ದಿನಗಳ ಕಾಲ ಜರುಗಲಿರುವ ಕನ್ನಡ ನುಡಿ ಜಾತ್ರೆ…
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…