ಕ್ರೀಡೆ

IPL 2024: ಗುಜರಾತ್‌ ಟೈಟನ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸುಲಭ ಜಯ

ಅಹ್ಮದಾಬಾದ್:‌ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 17ನೇ ಆವೃತ್ತಿಯ ಐಪಿಎಲ್‌ನ 32ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಗುಜರಾತ್‌ ಟೈಟನ್ಸ್‌ ವಿರುದ್ಧ 6 ವಿಕೆಟ್‌ಗಳ ಗೆಲುವನ್ನು ಸಾಧಿಸಿತು.

ಪಂದ್ಯದಲ್ಲಿ ಟಾಸ್‌ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ಮೊದಲು ಫೀಲ್ಡಿಂಗ್‌ ಆರಿಸಿಕೊಂಡು ಗುಜರಾತ್‌ ಟೈಟನ್ಸ್‌ ತಂಡವನ್ನು ಬ್ಯಾಟಿಂಗ್‌ ಮಾಡಲು ಆಹ್ವಾನಿಸಿತು. ಹೀಗೆ ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಟೈಟನ್ಸ್‌ ಡೆಲ್ಲಿ ಬೌಲಿಂಗ್‌ ಮುಂದೆ ಮಂಕಾಯಿತು. 17.3 ಓವರ್‌ಗಳಲ್ಲಿ ಕೇವಲ 89 ರನ್‌ಗಳಿಗೆ ಆಲ್‌ಔಟ್‌ ಆಗಿ ಡೆಲ್ಲಿಗೆ 90 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌ 8.5 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 92 ರನ್‌ ಬಾರಿಸಿ ಜಯ ಗಳಿಸಿದೆ.

ಗುಜರಾತ್‌ ಟೈಟನ್ಸ್‌ ಇನ್ನಿಂಗ್ಸ್:‌ ಡೆಲ್ಲಿ ಬೌಲಿಂಗ್‌ ಎದುರು ತವರಿನಲ್ಲಿಯೇ ಹೀನಾಯವಾಗಿ ಆಲ್‌ಔಟ್‌ ಆದ ಗುಜರಾತ್‌ ಪರ ರಶೀದ್‌ ಖಾನ್‌ ಹೊರತುಪಡಿಸಿ ಇನ್ಯಾವ ಆಟಗಾರನೂ ಸಹ ಇಪ್ಪತ್ತರ ಗಡಿ ದಾಟುವಲ್ಲಿ ಯಶಸ್ವಿಯಾಗಲಿಲ್ಲ. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ವೃದ್ಧಿಮಾನ್‌ ಸಹಾ 2 (10) ರನ್‌ ಹಾಗೂ ಶುಭ್‌ಮನ್‌ ಗಿಲ್‌ 8 (6) ರನ್‌ ಗಳಿಸಿ ಔಟ್‌ ಆದರು. ಆರಂಭದಲ್ಲಿಯೇ ಕುಸಿತ ಕಂಡ ಗುಜರಾತ್‌ ಟೈಟನ್ಸ್‌ ಎಲ್ಲಿಯೂ ಸುಧಾರಿಸಿಕೊಳ್ಳಲಿಲ್ಲ. ಇನ್ನುಳಿದಂತೆ ಸಾಯಿ ಸುದರ್ಶನ್‌ 12 (9) ರನ್‌, ಡೇವಿಡ್‌ ಮಿಲ್ಲರ್‌ 2 (6) ರನ್‌, ಅಭಿನವ್‌ ಮನೋಹರ್‌ 8 (14) ರನ್‌, ರಾಹುಲ್‌ ತೆವಾಟಿಯಾ 10 (15) ರನ್‌, ಶಾರುಖ್‌ ಖಾನ್‌ ಗೋಲ್ಡನ್‌ ಡಕ್‌ಔಟ್‌, ರಶೀದ್‌ ಖಾನ್‌ 31 (24) ರನ್‌, ಮೋಹಿತ್‌ ಶರ್ಮಾ 2 (14) ರನ್‌, ನೂರ್‌ ಅಹ್ಮದ್‌ 1 (7) ರನ್‌ ಮತ್ತು ಸ್ಪೆನ್ಸರ್‌ ಜಾನ್‌ಸನ್‌ ಅಜೇಯ 1 (1) ರನ್‌ ಗಳಿಸಿದರು.

ಡೆಲ್ಲಿ ಕ್ಯಾಪಿಟಲ್ಸ್‌ ಪರ ಮುಕೇಶ್‌ ಕುಮಾರ್‌ 3 ವಿಕೆಟ್‌, ಇಶಾಂತ್‌ ಶರ್ಮಾ ಹಾಗೂ ಟ್ರಿಸ್ಟನ್‌ ಸ್ಟಬ್ಸ್‌ ತಲಾ ಎರಡೆರಡು ವಿಕೆಟ್‌, ಖಲೀಲ್‌ ಅಹ್ಮದ್‌ ಹಾಗೂ ಅಕ್ಷರ್‌ ಪಟೇಲ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ಡೆಲ್ಲಿ ಕ್ಯಾಪಿಟಲ್ಸ್‌ ಇನ್ನಿಂಗ್ಸ್:‌ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಪೃಥ್ವಿ ಶಾ 7 (6) ರನ್‌ ಹಾಗೂ ಜೇಕ್‌ ಫ್ರೇಸರ್‌ ಮೆಕ್‌ಗುರ್ಕ್‌ 20 (10) ರನ್‌ ಕಲೆಹಾಕಿದರು. ಇನ್ನುಳಿದಂತೆ ಅಭಿಷೇಕ್‌ ಪೊರೆಲ್‌ 15 (7) ರನ್‌, ಶಾಯ್‌ ಹೋಪ್‌ 19 (10) ರನ್‌, ನಾಯಕ ರಿಷಭ್‌ ಪಂತ್‌ ಅಜೇಯ 16 (11) ರನ್‌ ಮತ್ತು ಸುಮಿತ್‌ ಕುಮಾರ್‌ ಅಜೇಯ 9 (9) ರನ್‌ ಕಲೆಹಾಕಿದರು.

ಗುಜರಾತ್‌ ಟೈಟನ್ಸ್‌ ಪರ ಸಂದೀಪ್‌ ವಾರಿಯರ್‌ 2 ವಿಕೆಟ್‌, ಸ್ಪೆನ್ಸರ್‌ ಜಾನ್‌ಸನ್‌ ಹಾಗೂ ರಶೀದ್‌ ಖಾನ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ಶ್ರೀನಿವಾಸ ಎ

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನನ್ನೂರು. ಡಿ ಬನುಮಯ್ಯ ಕಾಲೇಜಿನಲ್ಲಿ ಪದವಿ ಮುಗಿಸಿದ ನಾನು ಕಳೆದ ನಾಲ್ಕು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದ್ದೇನೆ. ಒನ್‌ಇಂಡಿಯಾ ಕನ್ನಡದಲ್ಲಿ ಸೋಷಿಯಲ್‌ ಮೀಡಿಯಾ ಎಕ್ಸಿಕ್ಯೂಟಿವ್‌ ಆಗಿ ಕೆಲಸ ಆರಂಭಿಸಿ ಮೈಖೇಲ್‌ ಕನ್ನಡ ಹಾಗೂ ಕನ್ನಡ ಫಿಲ್ಮಿಬೀಟ್‌ನಲ್ಲಿ ಮೂರು ವರ್ಷಗಳ ಕಾಲ ಸಬ್‌ಎಡಿಟರ್‌ ಆಗಿ ಕೆಲಸ ನಿರ್ವಹಿಸಿದ್ದೇನೆ. ಪ್ರಸ್ತುತ ಆಂದೋಲನ ದಿನಪತ್ರಿಕೆಯ ಡಿಜಿಟಲ್‌ ಟೀಮ್‌ ಲೀಡ್‌ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಕ್ರೀಡೆ ಹಾಗೂ ಸಿನಿಮಾ ನನ್ನ ಆಸಕ್ತಿ ಕ್ಷೇತ್ರಗಳಾಗಿದ್ದು, ಪ್ರವಾಸ ಮತ್ತು ಫೋಟೋಗ್ರಫಿ ನೆಚ್ಚಿನ ಹವ್ಯಾಸಗಳಾಗಿವೆ.

Recent Posts

ಸಿಲಿಂಡರ್ ಸ್ಪೋಟ ಪ್ರಕರಣ : ಸಾವಿನ ಸಂಖ್ಯೆ 3ಕ್ಕೆ ಏರಿಕೆ

ಮೈಸೂರು : ಮೈಸೂರು ಅರಮನೆ ಮುಂಭಾಗ ನಿನ್ನೆ ಸಂಜೆ ನಡೆದಿದ್ದ ಹೀಲಿಯಂ ಸ್ಫೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ ಇದೀಗ ಮೂರಕ್ಕೆ…

6 hours ago

ಮರ್ಯಾದೆಗೇಡು ಹತ್ಯೆ ವಿರೋಧಿಸಿ ಸಹಿ ಸಂಗ್ರಹ

ಮೈಸೂರು : ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಗೇಡು ಹತ್ಯೆ ವಿರೋಧಿಸಿ ಮತ್ತು ಮರ್ಯಾದೆಗೇಡು ಹತ್ಯೆ ತಡೆಗೆ ಕಠಿಣ ಕಾಯಿದೆ ರೂಪಿಸಬೇಕು ಎಂದು…

11 hours ago

ಕೆ.ಆರ್.ಆಸ್ಪತ್ರೆ ಶೆಡ್ ನಲ್ಲಿ ಬೆಂಕಿ : ಹಾಸಿಗೆಗಳು ಬೆಂಕಿಗಾಹುತಿ

ಮೈಸೂರು : ಇಲ್ಲಿನ ಕೆ.ಆರ್. ಆಸ್ಪತ್ರೆಯ ಶೆಡ್ ನಲ್ಲಿ ಬೆಂಕಿ ಕಾಣಿಸಿಕೊಂಡು ಆಸ್ಪತ್ರೆಯ ಹಾಸಿಗೆಗಳು ಬೆಂಕಿಗಾಹುತಿಯಾಗಿವೆ. ಆಸ್ಪತ್ರೆಯ ಚೆಲುವಾಂಬ ವಾರ್ಡ್…

11 hours ago

ಹೊಸ ವರ್ಷಾಚರಣೆಗೆ ಮುನ್ನೆಚ್ಚರಿಕೆ : ಸೂಕ್ಷ ಪ್ರದೇಶಗಳ ಬಗ್ಗೆ ಸಮೀಕ್ಷೆ ವರದಿಗೆ ಸೂಚನೆ

ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತಂತೆ ಪ್ರಶ್ನೆಗಳು ಉದ್ಭವಿಸಿರುವ ಸಂದರ್ಭದಲ್ಲಿ, ಹೊಸ ವರ್ಷಾಚರಣೆಯ ವೇಳೆ ಯಾವುದೇ ಅವಘಡ ನಡೆಯದಂತೆ…

12 hours ago

ಸಿಲಿಂಡರ್‌ ಸ್ಪೋಟ ಪ್ರಕರಣ : ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಮಂಜುಳ ಸಾವು

ಮೈಸೂರು : ಮೈಸೂರಿನ ವಿಶ್ವ ವಿಖ್ಯಾತ ಅರಮನೆ ಸಮೀಪ ಸಂಭವಿಸಿದ್ದ ಹೀಲಿಯಂ ಗ್ಯಾಸ್ ಸಿಲೆಂಡರ್ ಸ್ಫೋಟ ದುರಂತದಲ್ಲಿ ಸಾವಿನ ಸಂಖ್ಯೆ…

13 hours ago

ಇತಿಹಾಸ ಸೃಷ್ಟಿಸಿದ ಬಿಜೆಪಿ : ತಿರುವನಂತಪುರಂನ ಮೇಯರ್ ಆಗಿ ವಿ.ವಿ.ರಾಜೇಶ್ ಆಯ್ಕೆ

ತಿರುವನಂತಪುರಂ : ಬಿಜೆಪಿಯಿಂದ ಮೊದಲ ಬಾರಿಗೆ ತಿರುವನಂತಪುರಂ ನಗರ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ವಿ.ವಿ.ರಾಜೇಶ್ ಇತಿಹಾಸ ನಿರ್ಮಿಸಿದ್ದಾರೆ. 49…

13 hours ago