ಕ್ರೀಡೆ

ಐಪಿಎಲ್ 2023: ಮುಂಬೈ ಇಂಡಿಯನ್ಸ್‌ಗೆ ಸೋಲುಣಿಸಿ ಶುಭಾರಂಭ ಮಾಡಿದ ಆರ್‌ಸಿಬಿ

ಬೆಂಗಳೂರು: ಮೂರು ವರ್ಷಗಳ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯವು ’ಮಾಯಾಲೋಕ‘ ಸೃಷ್ಟಿಸಿತು.

ಭಾನುವಾರ ರಾತ್ರಿ ಇಲ್ಲಿ ಪ್ರತಿಧ್ವನಿಸಿದ ಡಿಜೆ ಸಂಗೀತ, ಚಿಯರ್ ಲೀಡರ್‌ಗಳ ನೃತ್ಯ ಮತ್ತು ಹೊನಲು ಬೆಳಕಿನ ರಂಗಿನಿಂದಾಗಿ ಕ್ರೀಡಾಂಗಣ ಮನಮೋಹಕವಾಗಿತ್ತು. ಇದೆಲ್ಲಕ್ಕೂ ಕಳಶವಿಟ್ಟಂತೆ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 8 ವಿಕೆಟ್‌ಗಳಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದಿತು. 16ನೇ ಆವೃತ್ತಿಯ ಐಪಿಎಲ್‌ನಲ್ಲಿ ಶುಭಾರಂಭ ಮಾಡಿತು.

ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್‌ ತಂಡವು, ತಿಲಕ್ ವರ್ಮಾ ಅರ್ಧಶತಕದ ಬಲದಿಂದ 171 ರನ್‌ ಗಳಿಸಿತ್ತು. ಆರ್‌ಸಿಬಿಯು ಈ ಗುರಿಯನ್ನು ಸುಲಭವಾಗಿ ಮುಟ್ಟಲು ಫಫ್ ಡುಪ್ಲೆಸಿ ಹಾಗೂ ವಿರಾಟ್ ಕೊಹ್ಲಿಯ ಅಬ್ಬರದ ಬ್ಯಾಟಿಂಗ್ ಕಾರಣವಾಯಿತು. ಕೊಹ್ಲಿ ಅಜೇಯ 82 ರನ್‌ ಗಳಿಸಿದರು. ತಂಡದ ನಾಯಕ ಫಫ್ ಡುಪ್ಲೆಸಿಯೂ ಹಿಂದೆ ಬೀಳಲಿಲ್ಲ. 43 ಎಸೆತಗಳಲ್ಲಿ 73 ರನ್ ಗಳಿಸಿದ್ದಲ್ಲದೇ ಮೊದಲ ವಿಕೆಟ್‌ಗೆ ಕೊಹ್ಲಿಯೊಂದಿಗೆ 148 ರನ್ ಸೇರಿಸಿದರು. ಕೊಹ್ಲಿ ಐದು ಮತ್ತು ಫಫ್ ಅರ್ಧ ಡಜನ್ ಸಿಕ್ಸರ್‌ ಬಾರಿಸಿದರು.

ದುಬಾರಿಯಾದ ಜೀವದಾನ: ಮುಂಬೈ ಇಂಡಿಯನ್ಸ್ ತಂಡದ ಸೋಲಿಗೆ ಅದರ ಆಟಗಾರರ ಕಳಪೆ ದರ್ಜೆಯ ಫೀಲ್ಡಿಂಗ್ ಕೂಡ ಕಾರಣವಾಯಿತು. ನಾಲ್ಕನೇ ಓವರ್‌ ಬೌಲಿಂಗ್ ಮಾಡಿದ ಜೋಫ್ರಾ ಆರ್ಚರ್ ಅವರು ವಿರಾಟ್ ಕೊಹ್ಲಿ ಕ್ಯಾಚ್ ಕೈಬಿಟ್ಟು ಪರಿತಪಿಸಿದರು. ಇದರ ಲಾಭವೆತ್ತಿದ ವಿರಾಟ್ ರನ್‌ಗಳನ್ನು ಸೂರೆ ಮಾಡಿದರು. ಅವರು 68 ರನ್‌ ಗಳಿಸಿದ್ದಾಗಲೂ ಫೀಲ್ಡರ್‌ ಹೃತಿಕ್ ಶೋಕಿನ್ ಸುಲಭ ಕ್ಯಾಚ್ ನೆಲಕ್ಕೆ ಚೆಲ್ಲಿದರು.

ಬ್ಯಾಟರ್‌ಗಳನ್ನು ರನ್‌ಔಟ್ ಮಾಡುವ ಕೆಲವು ಅವಕಾಶಗಳನ್ನೂ ರೋಹಿತ್ ಬಳಗ ಕೈಚೆಲ್ಲಿತು. ಓವರ್‌ ಥ್ರೋಗಳಿಂದಲೂ ರನ್‌ಗಳು ಸೋರಿದವು.

ಜೋಫ್ರಾ ಸೇರಿದಂತೆ ಆರು ಬೌಲರ್‌ಗಳನ್ನು ಫಫ್ ಮತ್ತು ಕೊಹ್ಲಿ ದಂಡಿಸಿದರು. ಸೂರ್ಯಕುಮಾರ್ ಯಾದವ್ ಬದಲಿಗೆ ಇಂಪ್ಯಾಕ್ಟ್ ಪ್ಲೆಯರ್ ಆಗಿ ಕಣಕ್ಕಿಳಿದ ಜೇಸನ್ ಬೆಹ್ರನ್ ಡಾರ್ಫ್ ಕೂಡ ವಿಕೆಟ್ ಪಡೆಯಲಿಲ್ಲ.

15ನೇ ಓವರ್‌ನಲ್ಲಿ ಡುಪ್ಲೆಸಿಯ ವಿಕೆಟ್ ಪಡೆಯುವಲ್ಲಿ ಅರ್ಷದ್ ಖಾನ್ ಸಫಲರಾದರು. ಕ್ರೀಸ್‌ಗೆ ಬಂದ ದಿನೇಶ್ ಕಾರ್ತಿಕ್ ಖಾತೆ ತೆರೆಯದೆ ಔಟಾದರು. ವಿರಾಟ್ ಜೊತೆಗೂಡಿದ ಗ್ಲೆನ್ ಮ್ಯಾಕ್ಸ್‌ವೆಲ್ ಎರಡು ಸಿಕ್ಸರ್ ಸಿಡಿಸಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂತಸದ ಅಲೆ ಎಬ್ಬಿಸಿದರು.

ತಿಲಕ್ ಆಸರೆ: ಟಾಸ್ ಗೆದ್ದ ಆರ್‌ಸಿಬಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆತಿಥೇಯ ಬೌಲರ್‌ಗಳು ಆರಂಭದಲ್ಲಿಯೇ ಮುಂಬೈಗೆ ಪೆಟ್ಟುಕೊಟ್ಟರು. ಸಿರಾಜ್ ಹಾಗೂ ಕರಣ್ ಶರ್ಮಾ ಉತ್ತಮ ಬೌಲಿಂಗ್ ಮಾಡಿದರು. ಇದರಿಂದಾಗಿ ಮುಂಬೈ ತಂಡವು 48 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.

ಆದರೆ ಏಕಾಂಗಿ ಹೋರಾಟ ನಡೆಸಿದ ತಿಲಕ್ ವರ್ಮಾ 46 ಎಸೆತಗಳಲ್ಲಿ 84 ರನ್‌ ಗಳಿಸಿದರು. ಇದರ ಫಲವಾಗಿ ಮುಂಬೈ ಸ್ಪರ್ಧಾತ್ಮಕ ಮೊತ್ತ ಗಳಿಸಿತು.

 

ಸ್ಕೋರ್‌ ಕಾರ್ಡ್‌

ಮುಂಬೈ ಇಂಡಿಯನ್ಸ್: 7ಕ್ಕೆ171

(20 ಓವರ್‌)

ರೋಹಿತ್ ಸಿ ದಿನೇಶ್ ಬಿ ಆಕಾಶ್ 1 (10ಎ)

ಇಶಾನ್ ಸಿ ಪಟೇಲ್ ಬಿ ಸಿರಾಜ್ 10 (13ಎ, 4X2)

ಕೆಮರಾನ್‌ ಬಿ ಟಾಪ್ಲಿ 5 (4 ಎ., 4X1)

ಸೂರ್ಯಕುಮಾರ್ ಸಿ ಶಾಬಾಜ್ ಬಿ ಬ್ರೇಸ್‌ವೆಲ್ 15 (16ಎ, 4X1)

ವರ್ಮಾ ಔಟಾಗದೆ 84 (46ಎ, 4X9, 6X4)

ನೇಹಲ್ ಸಿ ಕೊಹ್ಲಿ ಬಿ ಶರ್ಮಾ 21 (13ಎ, 4X1, 6X2)

ಟಿಮ್ ಬಿ ಶರ್ಮಾ 4 (7ಎ)

ಹೃತಿಕ್ ಸಿ ಡುಪ್ಲೆಸಿ ಬಿ ಪಟೇಲ್ 5 (3ಎ, 4X1)

ಅರ್ಷದ್ ಔಟಾಗದೆ 15 (9ಎ, 6X1))

ಇತರೆ 11 (ನೋಬಾಲ್ 1, ವೈಡ್ 10)

ವಿಕೆಟ್ ಪತನ: 1–11 (ಇಶಾನ್ ಕಿಶನ್; 2.3), 2–16 (ಕ್ಯಾಮರಾನ್ ಗ್ರೀನ್; 3.3), 3–20 (ರೋಹಿತ್ ಶರ್ಮಾ; 5.2), 4–48 (ಸೂರ್ಯಕುಮಾರ್ ಯಾದವ್; 8.5), 5–98 (ನೇಹಲ್ ವಡೇರಾ; 13.5), 6–105 (ಟಿಮ್ ಡೇವಿಡ್; 15.3), 7–123 (ಹೃತಿಕ್ ಶೊಕೀನ್; 17.1)

ಬೌಲಿಂಗ್‌: ಮೊಹಮ್ಮದ್ ಸಿರಾಜ್ 4–0–21–1, ರೀಸ್ ಟಾಪ್ಲಿ 2–0–14–1, ಆಕಾಶ್ ದೀಪ್ 3–0–29–1, ಹರ್ಷಲ್ ಪಟೇಲ್ 4–0–43–1, ಕರ್ಣ ಶರ್ಮಾ 4–0–32–2, ಮಿಚೆಲ್ ಬ್ರೇಸ್‌ವೆಲ್ 2–0–16–1, ಗ್ಲೆನ್ ಮ್ಯಾಕ್ಸ್‌ವೆಲ್ 1–0–16–0

ರಾಯಲ್‌ ಚಾಲೆಂಜರ್ಸ್ ಬೆಂಗಳೂರು 2ಕ್ಕೆ 172 (16.2 ಓವರ್‌)

ವಿರಾಟ್‌ ಔಟಾಗದೆ 82 (49ಎ, 4X6, 6X5)

ಫಫ್‌ ಸಿ ಡೇವಿಡ್‌ ಬಿ ಅರ್ಷದ್‌ 73 (43ಎ, 4X5, 6X6)

ದಿನೇಶ್‌ ಸಿ ವರ್ಮಾ ಬಿ ಗ್ರೀನ್‌ 0 (3ಎ)

ಮ್ಯಾಕ್ಸ್‌ವೆಲ್‌ ಔಟಾಗದೆ 12 (3ಎ, 6X2)

ಇತರೆ 5 (ಲೆಗ್‌ಬೈ 1, ವೈಡ್‌ 4)

ವಿಕೆಟ್ ಪತನ: 1–148 (ಫಫ್‌ ಡುಪ್ಲೆಸಿ, 14.5), 2–149 (ದಿನೇಶ್ ಕಾರ್ತಿಕ್‌, 15.3)

ಬೌಲಿಂಗ್‌: ಜೇಸನ್‌ ಬೆಹ್ರೆನ್‌ಡಾರ್ಫ್‌ 3–0–37–0, ಅರ್ಷದ್‌ ಖಾನ್‌ 2.2–0–28–1, ಜೋಫ್ರಾ ಆರ್ಚರ್ 4–0–33–0, ಪಿಯೂಷ್ ಚಾವ್ಲಾ 4–0–26–0, ಕ್ಯಾಮರಾನ್ ಗ್ರೀನ್‌ 2–0–30–1, ಹೃತಿಕ್ ಶೊಕೀನ್‌ 1–0–17–0

andolanait

Recent Posts

ಮಹಾಪಂಚ್ ಕಾರ್ಟೂನ್

ಮಹಾಪಂಚ್ ಕಾರ್ಟೂನ್ | ಡಿಸೆಂಬರ್ 13 ಶನಿವಾರ  

10 mins ago

ಕಳಪೆ ಪ್ರಗತಿ ಸಾಧಿಸಿದ 5 ಪಿಡಿಒಗಳಿಗೆ ಕಾರಣ ಕೇಳಿ ನೋಟಿಸ್ ನೀಡಿದ ಸಿಇಒ ನಂದಿನಿ

ಮಂಡ್ಯ : ಜಲ ಶಕ್ತಿ ಜನ ಭಾಗೀದಾರಿ, ಮಹಾತ್ಮ ಗಾಂಧಿ ನರೇಗಾ, ತೆರಿಗೆ ವಸೂಲಾತಿ ಸೇರಿದಂತೆ ಇತರೆ ಯೋಜನೆ ಮತ್ತು…

13 hours ago

ಅಕ್ರಮ ನಾಟ ಸಾಗಾಟ : ಲಾರಿ ಸಮೇತ ಮೂವರ ಬಂಧನ

ಸೋಮವಾರಪೇಟೆ : ಮರದ ನಾಟಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹೊಸಳ್ಳಿ ಗ್ರಾಮದಲ್ಲಿ ವಶಪಡಿಸಿಕೊಂಡಿದ್ದಾರೆ. ಹುದುಗೂರು…

13 hours ago

ಡೆವಿಲ್‌ ಅಬ್ಬರ | ಮೊದಲ ದಿನದ ಗಳಿಗೆ ಎಷ್ಟು?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿ ಇದ್ರೂ ಗುರುವಾರ ಬಿಡುಗಡೆಯಾದ ಅವರ ಅಭಿನಯದ ಡೆವಿಲ್…

14 hours ago

ಮಳವಳ್ಳಿ | ವಿದ್ಯುತ್‌ ಸ್ಪರ್ಶ ; ಕಾರ್ಮಿಕ ಸಾವು

ಮಳವಳ್ಳಿ : ವಿದ್ಯುತ್ ಸ್ಪರ್ಶಿಸಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ತಾಲ್ಲೂಕಿನ ಕಲ್ಕುಣಿ ಗ್ರಾಮದ ಬಳಿ ನಡೆದಿದ್ದು, ಸೆಸ್ಕ್ ಅಧಿಕಾರಿಗಳ…

14 hours ago

2027ರ ಜನಗಣತಿ | 11,718 ಕೋಟಿ ನೀಡಲು ಕೇಂದ್ರ ಸಂಪುಟ ಅನುಮೋದನೆ

ಹೊಸದಿಲ್ಲಿ : ದೇಶದಾದ್ಯಂತ ನಡೆಸಲು ಉದ್ದೇಶಿಸಿರುವ ೨೦೨೭ರ ಜನಗಣತಿಗೆ ರೂ. ೧೧,೭೧೮ ಕೋಟಿ ಅನುದಾನ ನೀಡಲು ಕೇಂದ್ರ ಸಚಿವ ಸಂಪುಟವು…

14 hours ago