ಅಹಮದಾಬಾದ್: ಲಖನೌ ಸೂಪರ್ ಜಯಂಟ್ಸ್ ವಿರುದ್ಧ 2023ರ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಎಲಿಮಿನೇಟರ್ ಪಂದ್ಯದಲ್ಲಿ 5 ವಿಕೆಟ್ ಸಾಧನೆ ಮಾಡುವ ಎಲ್ಲರ ಗಮನ ಸೆಳೆದಿದ್ದ ಮುಂಬೈ ಇಂಡಿಯನ್ಸ್ ತಂಡ ಆಕಾಶ್ ಮಧ್ವಾಲ್ ಹಲವು ಮಹತ್ತರವಾದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಬುಧವಾರ ಚೆನ್ನೈನಲ್ಲಿ ನಡೆದಿದ್ದ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನೀಡಿದ್ದ 183 ರನ್ ಗುರಿ ಹಿಂಬಾಲಿಸಿದ್ದ ಲಖನೌ ಸೂಪರ್ ಜಯಂಟ್ಸ್ ತಂಡವನ್ನು ಆಕಾಶ್ ಮಧ್ವಾಲ್ ಅವರು ತಮ್ಮ ಮಾರಕ ಬೌಲಿಂಗ್ ದಾಳಿಯಿಂದ ಕಟ್ಟಿಹಾಕಿದ್ದರು. ಬೌಲ್ ಮಾಡಿದ ಕೇವಲ 3.3 ಓವರ್‌ಗಳಲ್ಲಿ ಕೇವಲ 5 ರನ್ ನೀಡಿ 5 ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಕಾಶ್ ಮಧ್ವಾಲ್ ಅವರು, ತಮ್ಮ ಐಪಿಎಲ್ ವೃತ್ತಿ ಜೀವನದ ಪಯಣವನ್ನು ಬಹಿರಂಗಪಡಿಸಿದ್ದಾರೆ. 2019ರಲ್ಲಿ ಆರ್‌ಸಿಬಿಗೆ ನೆಟ್ ಬೌಲರ್ ಆಗಿದ್ದ ಮಧ್ವಾಲ್, 2022ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದರು.
“2019ರಲ್ಲಿ ಆರ್‌ಸಿಬಿ ತಂಡಕ್ಕೆ ನೆಟ್ ಬೌಲರ್ ಆಗಿದ್ದೆ. ಈ ವರ್ಷದಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಅವಕಾಶ ಪಡೆದುಕೊಳ್ಳುತ್ತಿದ್ದೇನೆ. ಸ್ಕೌಟಿಂಗ್ ತಂಡ ನನ್ನನ್ನು ಮೊದಲಿಗೆ ನೆಟ್ ಬೌಲರ್ ಆಗಿ ಮುಂಬೈ ಇಂಡಿಯನ್ಸ್‌ಗೆ ಆಯ್ಕೆ ಮಾಡಿತ್ತು ಹಾಗೂ ಆರಂಭದಲ್ಲಿ ನಡೆದಿದ್ದ ಅಭ್ಯಾಸ ಪಂದ್ಯಗಳಲ್ಲಿ ಅವಕಾಶ ನೀಡಿತ್ತು. ಈ ವೇಳೆ ನೀವು ನಿಮ್ಮ ಸಾಮರ್ಥ್ಯ ಏನೆಂಬುದನ್ನು ಸಾಬೀತು ಪಡಿಸಬೇಕಾಗುತ್ತದೆ. ಅಭ್ಯಾಸದ ಪಂದ್ಯಗಳಲ್ಲಿ ತಂಡ ನನ್ನನ್ನು ಅತ್ಯಂತ ಹತ್ತಿರದಿಂದ ನೋಡಿತ್ತು ಹಾಗೂ ನನ್ನ ಮೇಲೆ ಹೆಚ್ಚಿನ ಕಾಳಜಿ ವಹಿಸಿತ್ತು,”ಎಂದು ಮಧ್ವಾಲ್ ತಿಳಿಸಿದ್ದಾರೆ.
“ಕಳೆದ ವರ್ಷ ಮುಂಬೈ ಇಂಡಿಯನ್ಸ್ ಪರ ಎರಡು ಪಂದ್ಯಗಳಲ್ಲಿ ಆಡಿದ್ದೆ. ಮುಂದಿನ ವರ್ಷ ನನಗೆ ತಂಡದಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿವೆ ಎಂ ಬಗ್ಗೆ ನನಗೆ ಕಳೆದ ವರ್ಷವೇ ಖಚಿತವಾಗಿತ್ತು,” ಎಂದು ಮುಂಬೈ ಇಂಡಿಯನ್ಸ್ ವೇಗಿ ಹೇಳಿದ್ದಾರೆ.
ಜಸ್‌ಪ್ರೀತ್ ಬುಮ್ರಾ ಸಂಪೂರ್ಣ ಫಿಟ್ ಇಲ್ಲದ ಕಾರಣ 2023ರ ಐಪಿಎಲ್ ಟೂರ್ನಿಯಿಂದ ಸಂಪೂರ್ಣವಾಗಿ ಹೊರ ಬಿದ್ದಿದ್ದರು. ಮತ್ತೊಂದೆಡೆ ಜೋಫ್ರಾ ಆರ್ಚರ್ ಅವರು ಗಾಯದಿಂದಾಗಿ ಪೂರ್ಣ ಪ್ರಮಾಣದಲ್ಲಿ ಮುಂಬೈ ಇಂಡಿಯನ್ಸ್‌ಗೆ ಲಭ್ಯರಾಗಲಿಲ್ಲ. ಅವರು ಕೆಲ ಪಂದ್ಯಗಳನ್ನು ಆಡಿದ ಬಳಿಕ ತವರಿಗೆ ಮರಳಿದ್ದಾರೆ.
“ತಂಡ ನನಗೆ ಯಾವ ಜವಾಬ್ದಾರಿ ನೀಡಿದೆ, ಅದನ್ನು ಪರಿಪೂರ್ಣಗೊಳಿಸಲು ಪ್ರಯತ್ನಿಸುತ್ತದ್ದೇನೆ. ಅಂದ ಹಾಗೆ ಜಸ್‌ಪ್ರೀತ್ ಬುಮ್ರಾ ಅವರ ಸ್ಥಾನದಲ್ಲಿ ನಾನು ಆಡುತ್ತಿಲ್ಲ. ಆದರೆ, ನನ್ನಿಂದ ಸಾಧ್ಯವಾದಷ್ಟು ಉತ್ತಮ ಪ್ರದರ್ಶನ ತೋರಲು ಪ್ರಯತ್ನಿಸುತ್ತಿದ್ದೇನೆ ಅಷ್ಟೆ,” ಎಂದು ಆಕಾಶ್ ಮಧ್ವಾಲ್ ತಿಳಿಸಿದ್ದಾರೆ.
“ಯಾರ್ಕರ್‌ಗಳು ನನ್ನ ಬೌಲಿಂಗ್‌ನಲ್ಲಿ ಪ್ರಮುಖ ಅಸ್ತ್ರ ಎಂಬುದು ರೋಹಿತ್ ಭಾಯ್‌ಗೆ ತಿಳಿದಿದೆ. ನೆಟ್ಸ್ ಹಾಗೂ ಅಭ್ಯಾಸ ಪಂದ್ಯಗಳಲ್ಲಿ ನನ್ನ ಬೌಲಿಂಗ್ ನೋಡಿದ್ದ ಅವರು, ನಾನು ಹೊಸ ಚೆಂಡಿನಲ್ಲಿಯೂ ಬೌಲ್ ಮಾಡಬಲ್ಲೆ ಎಂಬುದನ್ನು ಅವರು ಅರಿತ್ತಿದ್ದರು. ಹಾಗಾಗಿ ಸನ್ನಿವೇಶ ತಕ್ಕಂತೆ ನನ್ನನ್ನು ಹೇಗೆ ಬದಲಾಯಿಸಿಕೊಳ್ಳಬೇಕೆಂದು ಅವರಿಗೆ ತಿಳಿದಿದೆ,” ಎಂದು ಉತ್ತರಾಖಂಡ ಮೂಲದ ವೇಗಿ ಹೇಳಿದ್ದಾರೆ.
ಮಂಡ್ಯ: ರಾಜಕಾರಣಿಗಳನ್ನು ಹೆದರಿಸ ಬಲ್ಲಂತಹ ಶಕ್ತಿ ಸಾಹಿತ್ಯಕ್ಕಿದೆ. ಹಾಗಾಗಿ ರಾಜ ಕಾರಣಿಗಳು ಹಾದಿ ತಪ್ಪದಂತೆ ಸಾಹಿತಿಗಳು ಎಚ್ಚರಿಸಬೇಕು ಎಂದು ಕಾನೂನು…
ಮಂಡ್ಯ: ಪಾರ್ಸೆಲ್ ಕೊಡುವ ನೆಪದಲ್ಲಿ ಬಂದು ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯದ ಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ. ರಮೇಶ್…
ಬೆಂಗಳೂರು: ನಿವೃತ್ತ ಸಾರಿಗೆ ನೌಕರರಿಗೆ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಗ್ರಾಚ್ಯುಟಿ ಹಣವನ್ನು ಬಿಡುಗಡೆ ಮಾಡಿದೆ. ಗ್ರಾಚ್ಯುಟಿ ಮತ್ತು ಗಳಿಕೆ…
ಬೆಂಗಳೂರು: ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವೇದಿಕೆಯನ್ನು ಸಿಎಂ ಸಿದ್ದರಾಮಯ್ಯ ದುರುಪಯೋಗಪಡಿಸಿಕೊಂಡಿದ್ದಾರೆ…
ಹೈದರಾಬಾದ್: ಡಿಸೆಂಬರ್.4ರಂದು ಸಂಧ್ಯಾ ಥಿಯೇಟರ್ ಬಳಿ ನಡೆದ ಕಾಲ್ತುಳಿತದಲ್ಲಿ ಮಹಿಳೆಯೋರ್ವರು ಮೃತಪಟ್ಟಿದ್ದು ದುರದೃಷ್ಟಕರ ಎಂದು ನಟ ಅಲ್ಲು ಅರ್ಜುನ್ ಬೇಸರ…