ಲಖನೌ: ಕನ್ನಡಿಗ ಕೆ.ಎಲ್. ರಾಹುಲ್ ನಾಯಕತ್ವದ ಲಖನೌ ಸೂಪರ್ ಜೈಂಟ್ಸ್ ತಂಡವು ಶುಕ್ರವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.
ಲಖನೌ ತಂಡಕ್ಕೆ ಇದು ಮೂರನೇ ಪಂದ್ಯ. ಆಡಿರುವ ಎರಡರಲ್ಲಿ ಒಂದು ಗೆದ್ದು ಇನ್ನೊಂದರಲ್ಲಿ ಸೋತಿದೆ. ಆದರೆ, ಸನ್‌ರೈಸರ್ಸ್ ತಂಡವು ಆಡಿರುವ ಒಂದು ಪಂದ್ಯದಲ್ಲಿ ಪರಾಭವಗೊಂಡಿದೆ. ಆ ಪಂದ್ಯಕ್ಕೆ ಅಲಭ್ಯರಾಗಿದ್ದ ದಕ್ಷಿಣ ಆಫ್ರಿಕಾದ ಏಡನ್ ಮರ್ಕರಂ, ಮಾರ್ಕೊ ಜೆನ್ಸನ್ ಮತ್ತು ಹೆನ್ರಿಚ್ ಕ್ಲಾಸೆನ್ ಅವರು ಇಲ್ಲಿ ಕಣಕ್ಕಿಳಿಯಲಿದ್ದಾರೆ. ಇದರಿಂದಾಗಿ ಸನ್‌ರೈಸರ್ಸ್ ತಂಡದಲ್ಲಿ ಉತ್ಸಾಹ ಗರಿಗೆದರಿದೆ.
2021ರ ಆವೃತ್ತಿಯಲ್ಲಿ ಹೈದರಾಬಾದ್ ತಂಡವು ಎಂಟನೇ ಸ್ಥಾನ ಪಡೆದಿತ್ತು. ಈ ಬಾರಿ ಬ್ಯಾಟರ್ ಏಡನ್ ಮರ್ಕರಂ ಅವರ ನಾಯಕತ್ವದ ಬಗ್ಗೆ ಹೆಚ್ಚಿನ ನಿರೀಕ್ಷೆಗಳು ಮೂಡಿವೆ.
ಬ್ಯಾಟಿಂಗ್ ವಿಭಾಗದಲ್ಲಿ ಮಯಂಕ್ ಅಗರವಾಲ್ ಉತ್ತಮ ಲಯದಲ್ಲಿದ್ದಾರೆ. ಆದರೆ ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಹ್ಯಾರಿ ಬ್ರೂಕ್ ಮತ್ತು ಗ್ಲೆನ್ ಫಿಲಿಪ್ ಪ್ರಮುಖ ಶಕ್ತಿಯಾಗಿದ್ದಾರೆ. ಆಲ್‌ರೌಂಡರ್ ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್ ಅವರು ಮಧ್ಯಮ ಕ್ರಮಾಂಕದಲ್ಲಿ ಬಲ ತುಂಬಬಲ್ಲರು.
ಲಖನೌ ತಂಡದಲ್ಲಿ ಅನುಭವಿ ಬ್ಯಾಟರ್‌ಗಳ ದಂಡು ಇದೆ. ರಾಹುಲ್ ಮತ್ತು ಕೈಲ್ ಮೇಯರ್ಸ್ ಉತ್ತಮ ಆರಂಭ ನೀಡಿದರೆ, ದೀಪಕ್ ಹೂಡಾ, ಆಯುಷ್ ಬಡೋಣಿ, ಮಾರ್ಕಸ್ ಸ್ಟೊಯಿನಿಸ್ ಹಾಗೂ ನಿಕೊಲಸ್ ಪೂರನ್ ಅಂತಿಮ ಹಂತದ ಓವರ್‌ಗಳಲ್ಲಿ ರನ್‌ಗಳನ್ನು ಸೂರೆ ಮಾಡಬಲ್ಲರು. ಇದರಿಂದಾಗಿ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗುವುದು.
ಇಲ್ಲಿಯ ಏಕನಾ ಕ್ರೀಡಾಂಗಣವು ಬ್ಯಾಟಿಂಗ್‌ಗೆ ಉತ್ತಮವಾದ ಪಿಚ್. ಇದರಲ್ಲಿ ರನ್‌ಗಳ ಹೊಳೆ ಹರಿಯುವ ಸಾಧ್ಯತೆ ಇದೆ.
ತಂಡಗಳು
ಸನ್‌ರೈಸರ್ಸ್ ಹೈದರಾಬಾದ್: ಏಡನ್ ಮರ್ಕರಂ (ನಾಯಕ), ಭುವನೇಶ್ವರ್ ಕುಮಾರ್, ಮಯಂಕ್ ಅಗರವಾಲ್, ಅಬ್ದುಲ್ ಸಮದ್, ಅಭಿಷೇಕ್ ಶರ್ಮಾ, ಅನ್ಮೋಲ್‌ಪ್ರೀತ್ ಸಿಂಗ್, ಹ್ಯಾರಿ ಬ್ರೂಕ್ಸ್, ಮಯಂಕ್ ಡಾಗರ್, ಫಜಲ್‌ಹಕ್ ಫಾರೂಕಿ, ಅಕೀಲ್ ಹುಸೇನ್, ಕಾರ್ತಿಕ್ ತ್ಯಾಗಿ, ಹೆನ್ರಿಚ್ ಕ್ಲಾಸನ್, ಟಿ. ನಟರಾಜನ್, ನಿತೀಶ್ ಕುಮಾರ್ ರೆಡ್ಡಿ, ಗ್ಲೆನ್ ಫಿಲಿಪ್ಸ್, ಆದಿಲ್ ರಶೀದ್, ಸನ್ವೀರ್ ಸಿಂಗ್, ರಾಹುಲ್ ತ್ರಿಪಾಠಿ, ಉಮ್ರಾನ್ ಮಲಿಕ್, ವಿವ್ರಾಂತ್ ಶರ್ಮಾ, ಸಮರ್ಥ್ ವ್ಯಾಸ್, ವಾಷಿಂಗ್ಟನ್ ಸುಂದರ್, ಉಪೇಂದ್ರ ಯಾದವ್.
ಲಖನೌ ಸೂಪರ್‌ಜೈಂಟ್ಸ್: ಕೆ.ಎಲ್. ರಾಹುಲ್ (ನಾಯಕ/ವಿಕೆಟ್‌ಕೀಪರ್), ಕೈಲ್ ಮೇಯರ್ಸ್, ದೀಪಕ್ ಹೂಡಾ, ಕೃಣಾಲ್ ಪಾಂಡ್ಯ, ಅಮಿತ್ ಮಿಶ್ರಾ, ನಿಕೊಲಸ್ ಪೂರನ್ (ವಿಕೆಟ್‌ಕೀಪರ್), ಆಯುಷ್ ಬಡೋನಿ, ಆವೇಶ್ ಖಾನ್, ಕರಣ್ ಶರ್ಮಾ, ಯುಧವಿರ್ ಚರಕ್, ಯಶ್ ಠಾಕೂರ್, ರೊಮೆರಿಯೊ ಶೆಫರ್ಡ್, ಮಾರ್ಕ್ ವುಡ್, ಸ್ವಪ್ನಿಲ್ ಸಿಂಗ್, ಮನನ್ ವೊಹ್ರಾ, ಡೇನಿಯಲ್ ಸ್ಯಾಮ್ಸ್, ಪ್ರೇರಕ್ ಮಂಕಡ್, ಕೃಷ್ಣಪ್ಪ ಗೌತಮ್, ಜಯದೇವ್ ಉನದ್ಕತ್, ಮಾರ್ಕಸ್ ಸ್ಟೊಯಿನಿಸ್, ರವಿ ಬಿಷ್ಣೋಯಿ, ಮಯಂಕ್ ಯಾದವ್.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಜಿಯೊ ಸಿನೆಮಾ ಆ್ಯಪ್.
ಮೈಸೂರು: ಹೊಸ ವರ್ಷ 2025ರ ಆಗಮನಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜನತೆ ಸಂಭ್ರಮಾಚರಣೆ ಮಾಡಲು…
ಹಾಸನ/ಸಕಲೇಶಪುರ: ಕೇಂದ್ರ ಸರ್ಕಾರದ ನೆರವಿನೊಂದಿಗೆ ಕಾಫಿ ಬೆಳೆಗಾರರಿಗೆ ಪರಿಹಾರಗಳನ್ನು ಒದಗಿಸಲಾಗುವುದು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಶ್ವಾಸನೆ ನೀಡಿದ್ದಾರೆ. ಹಾಸನ…
ಬೆಂಗಳೂರು: ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿಯು ಬೆಳಗಾವಿ ಚಲೋ ನಡೆಸಲು ಮುಂದಾಗಿದೆ. ಈ ಬಗ್ಗೆ…
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರ ನಿಯೋಗದೊಂದಿಗೆ ಸಭೆ ನಡೆಸಿ ಕಾಂಗ್ರೆಸ್ ಸರ್ಕಾರ ರೈತರ…
ಹಾಸನ: ಈ ಜಿಲ್ಲೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ನೀಡಿದ ಕೊಡುಗೆ ಏನು ಎಂದು ಕೇಳಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ…
ಮೈಸೂರು: ಎಂಎಲ್‌ಸಿ ಸಿ.ಟಿ.ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಫೇಕ್ ಎನ್‌ಕೌಂಟರ್ ಮಾಡಲು ಯತ್ನಿಸಿದ್ದರು ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ…