ಬೆಂಗಳೂರು: ಐಪಿಎಲ್ 2023 ಟೂರ್ನಿಯಲ್ಲಿ ಆರ್‌ಸಿಬಿ ಗ್ರೀನ್ ಜರ್ಸಿಯಲ್ಲಿ ಕಾಣಿಸಿಕೊಂಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಡಕೌಟ್ ಆಗಿದ್ದಾರೆ.
ಟ್ರೆಂಟ್ ಬೋಲ್ಟ್ ಮೊದಲ ಎಸೆತದಲ್ಲಿ ವಿಕೆಟ್ ಕೈಚೆಲ್ಲಿದ್ದಾರೆ. ಈ ಮೂಲಕ ಖಾತೆ ತೆರೆಯುವ ಮುನ್ನವೇ ಕೊಹ್ಲಿ ಪೆವಿಲಿಯನ್ ಸೇರಿದ್ದಾರೆ. ಕೊಹ್ಲಿ ಫಾರ್ಮ್ ಕುರಿತು ಅಭಿಮಾನಿಗಳು ಆತಂಕ ಪಡಬೇಕಿಲ್ಲ. ಕಾರಣ ಏಪ್ರಿಲ್ 23 ರಂದು ವಿರಾಟ್ ಕೊಹ್ಲಿ ರನ್ ಸಿಡಿಸಿಲ್ಲ. ಶೂನ್ಯಕ್ಕೆ ಔಟಾಗಿದ್ದಾರೆ ಈ ಹಿಂದಿನ ಆವೃತ್ತಿಗಳಲ್ಲೂ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗಿದ್ದಾರ.
ವಿರಾಟ್ ಕೊಹ್ಲಿಗೂ ಏಪ್ರಿಲ್ 23 ಆಗಿಬರಲ್ಲ. ಈ ದಿನ ಕೊಹ್ಲಿ ಕರಿಯರ್‌ನಲ್ಲಿ ನೆನಪಿಸಿಕೊಳ್ಳಲು ಬಯಸದ ದಿನವಾಗಿದೆ. ಐಪಿಎಲ್ ಟೂರ್ನಿಯಲ್ಲಿ ಏಪ್ರಿಲ್ 23 ರಂದು ಆಡಿದ ಪ್ರತಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಡಕೌಟ್ ಆಗಿದ್ದಾರೆ. ಈ ಸಂಪ್ರದಾಯ ಇಂದು ಕೂಡ ಮುಂದುವರಿದಿದೆ.
ಏಪ್ರಿಲ್ 23 ರಂದು ವಿರಾಟ್ ಕೊಹ್ಲಿ
2017, ಎಪ್ರಿಲ್ 23, 0(1)
2022, ಎಪ್ರಿಲ್ 23, 0(1)
2023, ಎಪ್ರಿಲ್ 23, 0(1)
ಏಪ್ರಿಲ್ 23 ರಂದು ವಿರಾಟ್ ಕೊಹ್ಲಿ ರನ್ ಖಾತೆ ತೆರೆದಿಲ್ಲ. ಇಷ್ಟೇ ಅಲ್ಲ ಆರ್‌ಸಿಬಿಗೂ ಸಂಕಷ್ಟ ತಪ್ಪಿಲ್ಲ, ಕಳೆದ ಎರಡು ಬಾರಿ ಏಪ್ರಿಲ್ 23ರ ಪಂದ್ಯದಲ್ಲಿ ಆರ್‌ಸಿಸಿಬಿ ಮುಗ್ಗರಿಸಿದೆ. 2017ರಲ್ಲಿ ಎಪ್ರಿಲ್ 23 ರಂದು ಆರ್‌ಸಿಬಿ , ಕೋಲ್ಕತಾ ನೈಟ್ ರೈಡರ್ಸ್ ವಿರುದ್ದ ಕಣಕ್ಕಿಳಿದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕೋಲ್ಕತಾ ನೈಟ್ ರೈಡರ್ಸ್ 19.3 ಓವರ್‌ಗಳಲ್ಲಿ 131 ರನ್‌ಗೆ ಆಲೌಟ್ ಆಗಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸುಲಭ ಟಾರ್ಗೆಟ್ ಪಡೆದಿತ್ತು.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮೊದಲ ಓವರ್‌ನ ಆರಂಭಿಕ ಎರಡು ಎಸೆತ ಕ್ರಿಸ್ ಗೇಲ್ ಎದುರಿಸಿದ್ದರೆ, 3ನೇ ಎಸೆತವನ್ನು ಕೊಹ್ಲಿ ಎದುರಿಸಿದ್ದರು. ಕೊಹ್ಲಿ ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಕೈಚೆಲ್ಲಿದರು. ಕೊಹ್ಲಿ 1 ಎಸೆತದಲ್ಲಿ ಶೂನ್ಯಕ್ಕೆ ಔಟಾದರು. ಇತ್ತ ಆರ್‌ಸಿಬಿ 49 ರನ್‌ಗೆ ಆಲೌಟ್ ಆಗಿ ಹೀನಾಯ ಸೋಲು ಕಂಡಿತ್ತು.
ಎಪ್ರಿಲ್ 23, 2022ರಲ್ಲಿ ಆರ್‌ಸಿಬಿ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ಹೋರಾಟ ನಡೆಸಿತ್ತು. ಮೊದಲ ಕ್ರಮಾಂಕದಲ್ಲಿ ಕಣಕ್ಕಿಳಿದಿತ್ತು ವಿರಾಟ್ ಕೊಹ್ಲಿ ಮೊದಲ ಎಸೆತದಲ್ಲಿ ಔಟಾದರು. ಇಲ್ಲೂ ಕೂಡ ಕೊಹ್ಲಿ ಒಂದು ಎಸೆತ ಎದುರಿಸಿ ಶೂನ್ಯಕ್ಕೆ ಔಟಾಗಿದ್ದರು. ಈ ಪಂದ್ಯದಲ್ಲಿ ಆರ್‌ಸಿಬಿ 16.1 ಓವರ್‌ಗಳಲ್ಲಿ ಕೇವಲ 68 ರನ್‌ಗೆ ಆಲೌಟ್ ಆಗಿತ್ತು. ಸುಲಭ ಟಾರ್ಗೆಟ್‌ನ್ನು ಹೈದರಾಬಾದ್ 8 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗುರಿ ತಲುಪಿತ್ತು.
ಇಂದು ರಾಜಸ್ಥಾನ ರಾಯಲ್ಸ್ ವಿರುದ್ಧ ವಿರಾಟ್ ಕೊಹ್ಲಿ ಮೊದಲ ಎಸೆತದಲ್ಲೇ ವಿಕೆಟ್ ಕೈಚೆಲ್ಲಿದ್ದಾರೆ. ಆದರೆ ಫಾಫ್ ಡುಪ್ಲೆಸಿಸ್ ಹಾಗೂ ಮ್ಯಾಕ್ಸ್‌ವೆಲ್ ಹೋರಾಟದಿಂದ ಆರ್‌ಸಿಬಿ ಚೇತರಿಸಿಕೊಂಡಿದೆ. ಏಪ್ರಿಲ್ 23 ರಂದು ಆರ್‌ಸಿಬಿ ಆಡಿದ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ. ಆದರೆ ಈ ಬಾರಿ ಈ ಸಂಪ್ರದಾಯ ಬದಲಾಗುತ್ತಾ ಅನ್ನೋ ಕುತೂಹಲ ಮನೆ ಮಾಡಿದೆ.
‘ಸ್ಯಾಂಡಲ್ ವುಡ್’ ಎಂದೇ ಹೆಸರಾಗಿರುವ ಕನ್ನಡ ಚಿತ್ರರಂಗ ಇಂದು ಭಾರತದ ಒಂದು ಪ್ರಮುಖ ಚಿತ್ರೋದ್ಯಮವಾಗಿ ಬೆಳೆದಿದೆ. ಈ ಮೊದಲು ಪ್ರತಿ…
ಲಕ್ಷ್ಮಿಕಾಂತ್ ಕೊಮಾರಪ್ಪ ೨೦೨೩ರ ಡಿ.೪ರಂದು ಕಾಡಾನೆ ಕಾರ್ಯಾಚರಣೆ ವೇಳೆ ಮೃತಪಟ್ಟಿದ್ದ ಅರ್ಜುನ; ೨ ವರ್ಷ ಕಳೆದರೂ ಅರ್ಜುನನ ಸ್ಮಾರಕ, ಪ್ರತಿಮೆಗಿಲ್ಲ…
ಮೈಸೂರು: ಸಂಭ್ರಮ, ಸಡಗರ, ವಿಶೇಷ ಪ್ರಾರ್ಥನೆಯೊಂದಿಗೆ ಕ್ರೈಸ್ತ ಧರ್ಮದ ದೈವ ಬಾಲಏಸುವಿನ ಜಯಂತಿಯ ಸ್ಮರಣೆಯು ಅದ್ಧೂರಿಯಾಗಿ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ…
ಪ್ರಶಾಂತ್ ಎಸ್. ಗ್ರಾಮೀಣ ಭಾಗದ ರಸ್ತೆಗಳಲ್ಲಿ ಸಮಸ್ಯೆ ಕಣ್ಣಿಗೆ ದೂಳು ಬಿದ್ದರೆ ಅನಾಹುತ ಸಾಧ್ಯತೆ ವಾಹನ ಸವಾರರಿಗೆ ಸವಾಲು; ಎಚ್ಚರ…
ಹೊಸದಿಲ್ಲಿ : ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ಸಂಪರ್ಕ ಬ್ಯೂರೋ…
ಹೊಸದಿಲ್ಲಿ : ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮತ್ತು ಆಕೆಯ ತಾಯಿ ಬುಧವಾರ ಸಂಜೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರನ್ನು…