ಕ್ರೀಡೆ

ಟಿ20 ವಿಶ್ವಕಪ್‌ ಟೂರ್ನಿ ಕುರಿತು ನೀವು ತಿಳಿದುಕೊಳ್ಳಬೇಕಿರುವ ಅಂಕಿ ಅಂಶ ಇಲ್ಲಿದೆ!

ಅಮೇರಿಕಾ ಹಾಗೂ ವೆಸ್ಟ್‌ ಇಂಡೀಸ್‌ ಸಹಭಾಗಿತ್ವದಲ್ಲಿ ಮೊದಲ ಬಾರಿಗೆ ಕ್ರಿಕೆಟ್‌ ಟೂರ್ನಿಯೊಂದು ಅಮೇರಿಕಾದಲ್ಲಿ ಆಯೋಜನೆಯಾಗುತ್ತಿದೆ. ಐಸಿಸಿ ಪುರುಷರ ಟಿ20 ವಿಶ್ವಕಪ್‌ ಟೂರ್ನಿಯನ್ನು ಇದೇ ಮೊದಲ ಬಾರಿಗೆ ಅಮೇರಿಕಾ ನಡೆಸುತ್ತಿದ್ದು, ಒಂದು ತಿಂಗಳ ಕಾಲ ನಡೆಯುವ ಈ ಟೂರ್ನಿಗೆ ಅಮೇರಿಕಾ ಹಾಗೂ ವೆಸ್ಟ್‌ ಇಂಡೀಸ್‌ ಆತಿಥ್ಯ ವಹಿಸಿದೆ.

ವಿಶ್ವಕಪ್‌ ಎಂದಾಕ್ಷಣ ನಮಗೆ ಮೊದಲಿಗೆ ನೆನೆಪಿಗೆ ಬರುವುದು ಪಂದ್ಯ ಗೆದ್ದವರು, ಸೋತವರು, ಟೂರ್ನಿಯಲ್ಲಿ ಹೆಚ್ಚು ರನ್‌, ಹೆಚ್ಚಿನ ವಿಕೆಟ್‌, ಸರಣಿ ಶ್ರೇಷ್ಠ ಹೀಗೆ ಹಲವಾರು ವಿಷಯಗಳು. ಇವುಗಳೆಲ್ಲದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಈವರೆಗೆ ವಿಶ್ವಕಪ್‌ ಗೆದ್ದ ತಂಡಗಳಾವುವು?

ಪ್ರಸಕ್ತ 9 ನೇ ವಿಶ್ವಕಪ್‌ ಟೂರ್ನಿ ಇದಾಗಿದ್ದು, ಇದರಲ್ಲಿ ಅತಿಹೆಚ್ಚು ಬಾರಿ ವಿಶ್ವಕಪ್‌ ಗೆದ್ದು, ಇವುಗಳೆಲ್ಲದರ ನಡುವೆ ಪಾರುಪತ್ಯ ಮೆರೆದಿರುವ ತಂಡಗಳೆಂದರೆ ಇಂಗ್ಲೆಂಡ್‌ ಹಾಗೂ ವೆಸ್ಟ್‌ ಇಂಡೀಸ್‌. ಮೊದಲ ಬಾರಿಗೆ ನಡೆದ ಚುಟುಕು ಸಮರವನ್ನು ಎಂ.ಎಸ್‌ ಧೋನಿ ನೇತೃತ್ವದ ಟೀಂ ಇಂಡಿಯಾ ಮೊಲದ ಬಾರಿಗೆ ಬದ್ಧ ವೈರಿ ಪಾಕಿಸ್ತಾನವನ್ನು ಮಣಿಸಿ ಕಪ್‌ ಎತ್ತಿ ಹಿಡಿದಿತ್ತು.

ಈ ಹಿಂದಿನ ಅವಧಿಯಲ್ಲಿ ಕಪ್‌ ಗೆದ್ದ ತಂಡಗಳಿವು.

1. ಭಾರತ (2007, ಪಾಕಿಸ್ತಾನ ವಿರುದ್ಧ)
2. ಪಾಕಿಸ್ತಾನ್‌ (2009, ಶ್ರೀಲಂಕಾ ವಿರುದ್ಧ)
3. ಇಂಗ್ಲೆಂಡ್‌ (2010, ಆಸ್ಟ್ರೇಲಿಯಾ ವಿರುದ್ಧ)
4. ವೆಸ್ಟ್‌ ಇಂಡೀಸ್‌ (2012, ಶ್ರೀಲಂಕಾ ವಿರುದ್ಧ)
5. ಶ್ರೀಲಂಕಾ (2014, ಭಾರತ ವಿರುದ್ಧ)
6. ವೆಸ್ಟ್‌ ಇಂಡೀಸ್‌ (2016, ಇಂಗ್ಲೆಂಡ್‌)
7. ಆಸ್ಟ್ರೇಲಿಯಾ (2021, ನ್ಯೂಜಿಲೆಂಡ್ಸ್‌ ವಿರುದ್ಧ)
8. ಇಂಗ್ಲೆಂಡ್‌ (2022, ಪಾಕಿಸ್ತಾನ ವಿರುದ್ಧ)

ಈ ಟಿ20 ವಿಶ್ವಕಪ್‌ನಲ್ಲಿ ಅತಿಹೆಚ್ಚು ರನ್‌ ಗಳಿಸಿದವರಿವರು! : ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರು ಕ್ರಿಕೆಟ್‌ನ ಎಲ್ಲಾ ಮೂರು ಮಾದರಿಯಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದವರು. ಏಕದಿನ ವಿಶ್ವಕಪ್‌ನಲ್ಲಿ ಈವರೆಗೆ ಅತಿಹೆಚ್ಚು ರನ್‌ಗಳಿಸಿದವರ ಪಟ್ಟಿಯಲ್ಲಿ ಟಾಪ್‌ ಮೂರರಲ್ಲಿ ಸ್ಥಾನ ಪಡೆದಿರುವ ಅವರು, ಚುಟುಕು ಸಮರದಲ್ಲಿ ಮೊದಲನೇ ಸ್ಥಾನ ಪಡೆದು ಎಲ್ಲರು ಹುಬ್ಬೇರುವಂತೆ ಮಾಡಿದ್ದಾರೆ. ಕೊಹ್ಲಿ ವೈಯಕ್ತಿಕವಾಗಿ ವಿಶ್ವಕಪ್‌ ಟೂರ್ನಿಯಲ್ಲಿ ಈವರೆಗೆ ಸಾವಿರಕ್ಕೂ ಅಧಿಕ ರನ್‌ ಬಾರಿಸಿ ಮೊದಲಿಗರಾಗಿದ್ದಾರೆ. ಉಳಿದಂತೆ ವೆಸ್ಟ್‌ ಇಂಡೀಸ್‌ ದೈತ್ಯ ಕ್ರಿಸ್‌ಗೇಲ್‌, ರೋಹಿತ್‌ ಶರ್ಮಾ ಅವರು ಸಹ ಸ್ಥಾನ ಪಡೆದಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಅತಿಹೆಚ್ಚು ರನ್‌ಗಳಿಸಿದ ಟಾಪ್‌ 5 ಬ್ಯಾಟರ್ಸ್‌.

1. ವಿರಾಟ್‌ ಕೊಹ್ಲಿ (ಭಾರತ) 1141 ರನ್‌
2. ಮಹೇಲಾ ಜಯವರ್ಧನೆ (ಶ್ರೀಲಂಕಾ) 1016 ರನ್‌
3. ಕ್ರಿಸ್‌ ಗೇಲ್‌ (ವೆಸ್ಟ್‌ ಇಂಡೀಸ್‌) 965 ರನ್‌
4. ರೋಹಿತ್‌ ಶರ್ಮಾ (ಭಾರತ) 963 ರನ್‌
5. ತಿಲಕರತ್ನೆ ದಿಲ್ಶಾನ್‌ (ಶ್ರೀಲಂಕಾ) 897 ರನ್‌

ಟಿ20 ವಿಶ್ವಕಪ್‌ನಲ್ಲಿ ಅತಿಹೆಚ್ಚು ವಿಕೆಟ್‌ ಪಡೆದವರಾರು: ಚುಟುಕು ವಿಶ್ವಕಪ್‌ನಲ್ಲಿ ಭಾರತ ತಂಡ ಬ್ಯಾಟಿಂಗ್‌ನಲ್ಲಿ ಪ್ರಾಬಲ್ಯ ಮೆರೆದಿದ್ದರೇ, ಬೌಲಿಂಗ್‌ನಲ್ಲಿ ಈವರೆಗೆ ನಿರೀಕ್ಷಿತ ಸಾಧನೆ ಮಾಡಿಲ್ಲ. ಟೀಂ ಇಂಡಿಯಾದ ಯಾವೊಬ್ಬ ಆಟಗಾರನು ಸಹಾ ಬೌಲಿಂಗ್‌ನಲ್ಲಿ ಅಗ್ರ 5ರಲ್ಲಿ ಸ್ಥಾನ ಪಡೆದಿಲ್ಲ.

ಟಿ20 ವಿಶ್ವಕಪ್‌ನಲ್ಲಿ ಅತಿಹೆಚ್ಚು ವಿಕೆಟ್‌ ಕಬಳಿಸಿದ ಟಾಪ್‌ 5 ಬೌಲರ್ಸ್‌

1. ಶಕೀಬ್‌ ಹಲ್‌-ಹಸನ್‌ (ಬಾಂಗ್ಲಾದೇಶ) 47 ವಿಕೆಟ್‌
2. ಶಾಹೀದ್‌ ಅಫ್ರಿದಿ (ಪಾಕಿಸ್ತಾನ್‌) 39 ವಿಕೆಟ್‌
3. ಲಸಿತ್‌ ಮಲಿಂಗಾ (ಶ್ರೀಲಂಕಾ) 38 ವಿಕೆಟ್‌
4. ಸಾಹಿದ್‌ ಅಜ್ಮಲ್‌ (ಪಾಕಿಸ್ತಾನ್‌) 36 ವಿಕೆಟ್‌
5. ಅಜಂತಾ ಮೆಂಡೀಸ್‌ (ಶ್ರೀಲಂಕಾ) ಹಾಗೂ ಉಮರ್‌ ಗುಲ್‌ (ಪಾಕಿಸ್ತಾನ್) ಜಂಟಿಯಾಗಿ 35 ವಿಕೆಟ್‌‌

ಟಿ20 ವಿಶ್ವಕಪ್‌ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರರಿವರು:

1. ಶಾಹೀದ್‌ ಅಫ್ರಿದಿ (2007, ಪಾಕಿಸ್ತಾನ)
2. ತಿಲಕರತ್ನೆ ದಿಲ್ಶಾನ್‌ (2009, ಶ್ರೀಲಂಕಾ)
3. ಕೆವಿನ್‌ ಪೀಟರ್‌ಸನ್‌ (2010, ಇಂಗ್ಲೆಂಡ್‌)
4. ಶೇನ್‌ ವ್ಯಾಟ್ಸನ್‌ (2012, ಆಸ್ಟ್ರೇಲಿಯಾ)
5. ವಿರಾಟ್‌ ಕೊಹ್ಲಿ (2014, ಭಾರತ)
6. ವಿರಾಟ್‌ ಕೊಹ್ಲಿ (2016, ಭಾರತ)
7. ಮಿಚೆಲ್‌ ಮಾರ್ಷ್‌ (2021, ಆಸ್ಟ್ರೇಲಿಯಾ)
8. ಸ್ಯಾಮ್‌ ಕರನ್‌( 2022, ಇಂಗ್ಲೆಂಡ್‌,

ಟಿ20 ವಿಶ್ವಕಪ್‌ನ ಟೂರ್ನಿಯೊಂದರಲ್ಲಿ ಅತಿಹೆಚ್ಚು ರನ್‌ಗಳಿಸಿದ ಆಟಗಾರರಿವರು:

1. ಮ್ಯಾಥ್ಯೂ ಹೈಡೆನ್‌ (2007, ಆಸ್ಟ್ರೇಲಿಯಾ)
2. ತಿಲಕರತ್ನೆ ದಿಲ್ಶಾನ್‌ (2009, ಶ್ರೀಲಂಕಾ)
3. ಮಹೇಲಾ ಜಯವರ್ಧನೆ (2010, ಶ್ರೀಲಂಕಾ)
4. ಶೇನ್‌ ವ್ಯಾಟ್ಸನ್‌ (2012, ಆಸ್ಟ್ರೇಲಿಯಾ)
5. ವಿರಾಟ್‌ ಕೊಹ್ಲಿ (2014, ಭಾರತ)
6. ತಮೀಮ್‌ ಇಕ್ಬಾಲ್‌ (2016, ಬಾಂಗ್ಲಾದೇಶ)
7. ಬಾಬರ್‌ ಅಜಂ (2021, ಪಾಕಿಸ್ತಾನ)
8. ವಿರಾಟ್‌ ಕೊಹ್ಲಿ (2022, ಭಾರತ)

ವಿಶೇಷ: ಕಳೆದ 8 ಸೀಸನ್‌ ವಿಶ್ವಕಪ್‌ ಆಡಿರುವ ಇಬ್ಬರು ಆಟಗಾರರು ಈ ಬಾರಿಯ ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಇಬ್ಬರು ಆಟಗಾರರು ಏಷ್ಯಾ ಖಂಡಕ್ಕೆ ಸೇರಿದವರಾಗಿದ್ದಾರೆ. ಮತ್ತು ಅತಿಹೆಚ್ಚು ವಿಶ್ವಕಪ್‌ ಆಡಿದ ಆಟಗಾರರು ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ. ಟೀಂ ಇಂಡಿಯಾ ಕಪ್ತಾನ್‌ ರೋಹಿತ್‌ ಶರ್ಮಾ ಹಾಗೂ ಬಾಂಗ್ಲಾದೇಶದ ಶಕೀಬ್‌ ಹಲ್‌-ಹಸನ್‌ ಅವರು ಕಳೆದ 8 ಸೀಸನ್‌ಗಳಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಿದ್ದು, ಈ ಇಬ್ಬರು ಆಟಗಾರರಿಗೆ ಇದು 9ನೇ ಟೂರ್ನಿಯಾಗಿದೆ.

ವಾಸು ವಿ ಹೊಂಗನೂರು

ಮೂಲತಃ ಚಾಮರಾಜನಗರ ಜಿಲ್ಲೆಯ ಹೊಂಗನೂರು ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಪದವಿಯಲ್ಲಿ ಪತ್ರಿಕೋದ್ಯಮ ವಿಭಾಗ ಆಯ್ದುಕೊಂಡು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2020ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಪತ್ರಿಕೋದ್ಯಮದಲ್ಲಿ 3 ವರ್ಷಗಳ ಅನುಭವವಿದ್ದು, ಕಳೆದ ಒಂದು ವರ್ಷದಿಂದ ಆಂದೋಲನ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ 6 ತಿಂಗಳಿನಿಂದ ಆಂದೋಲನ ಡಿಜಿಟಲ್‌ ವಿಭಾಗದಲ್ಲಿ ತೊಡಗಿಸಿಕೊಂಡಿದ್ದೇನೆ. ಕ್ರಿಕೆಟ್‌ ಮೇಲೆ ಎಲ್ಲಿಲ್ಲದ ಪ್ರೀತಿಯಿದ್ದು, ಪ್ರವಾಸ, ಇತಿಹಾಸ ಅಧ್ಯಯನ ಕಡೆ ಒಲವು ಹೆಚ್ಚು. ಪತ್ರಿಕಾ ರಂಗದಲ್ಲಿ ಕ್ರೀಡಾ ವಿಭಾಗದಲ್ಲಿ ಹೆಚ್ಚು ಆಸಕ್ತಿ ಇದೆ‌. ಮೊಬೈಲ್‌ ನಂಬರ್:‌ 9620318288

Recent Posts

ನಂಜನಗೂಡು | ಲೋಕಾ ಬಲೆಗೆ ಬಿದ್ದ ಸರ್ವೆಯರ್‌

ನಂಜನಗೂಡು : ಜಮೀನಿನ ಪೋಡಿ ಹಾಗೂ ದುರಸ್ತಿಪಡಿಸಲು ಲಂಚ ಪಡೆಯುತ್ತಿದ್ದ ಸರ್ವೆಯರ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ವರದಿಯಾಗಿದೆ. ತಾಲ್ಲೂಕಿನ…

3 hours ago

ಅನೈತಿಕ ಸಂಬಂಧದ ಶಂಕೆ : ರಾಡ್‌ನಿಂದ ಹೊಡೆದು ಪತ್ನಿ ಕೊಂದ ಪತಿ

ಶ್ರೀರಂಗಪಟ್ಟಣ : ಅನೈತಿಕ ಸಂಬಂಧದ ಶಂಕೆಯಿಂದ ಪತಿಯೇ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಆಲಗೂಡು ಗ್ರಾಮದಲ್ಲಿ ನಡೆದಿದೆ. ಗ್ರಾಮದ…

4 hours ago

ರಾಮನಗರ: ಕಲ್ಲು ಕ್ವಾರಿಯಲ್ಲಿ ದುರಂತ: ಬಂಡೆ ಕುಸಿದು 7 ಮಂದಿ ಕಾರ್ಮಿಕರು ಸಾವು

ರಾಮನಗರ: ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು 7 ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ಮಾದಾಪಟ್ಟಣ ಬಳಿ…

11 hours ago

ಕೊಡಗಿನಲ್ಲಿ ಸಾಧಾರಣ ಮಳೆ: ಹಾರಂಗಿ ಜಲಾಶಯದ ಒಳಹರಿವು ಹೆಚ್ಚಳ

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಸಾಧಾರಣ ಮಳೆಯಾಗುತ್ತಿರುವ ಪರಿಣಾಮ ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಜಲಾಶಯಕ್ಕೆ…

11 hours ago

ಓದುಗರ ಪತ್ರ: ಮುತ್ತತ್ತಿ ನದಿ ಬಳಿ ಪೊಲೀಸರನ್ನು ನಿಯೋಜಿಸಿ

ಮಂಡ್ಯ ಜಿಲ್ಲೆಯ ಮುತ್ತತ್ತಿಯಲ್ಲಿ ಕಾವೇರಿ ನದಿ ನೀರಿಗೆ ಇಳಿದು ಸೆಲ್ಛಿ ತೆಗೆದುಕೊಳ್ಳಲು ಹೋದ ಒಂದೇ ಕುಟುಂಬದ ನಾಲ್ವರು ಹಾಗೂ ಕಾರು…

16 hours ago

ಓದುಗರ ಪತ್ರ: ಚಪ್ಪಲಿ ಎಸೆತ ಪ್ರಕರಣ ಎಳೆದಾಡುವುದು ಬೇಡ

ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್ ಅವರ ಮೇಲೆ ಜಾ.ದಳ ಕಾರ್ಯಕರ್ತರೊಬ್ಬರು ಚಪ್ಪಲಿಯನ್ನು ಎಸೆದಿದ್ದು, ಈಗಾಗಲೇ ಆ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.…

16 hours ago