ಕ್ರೀಡೆ

ಕೆನಡಾ ಓಪನ್‌ ಮುಡಿಗೇರಿಸಿಕೊಂಡ ಭಾರತದ ಲಕ್ಷ್ಯಸೇನ್‌!

ನವದೆಹಲಿ: ಭಾರತೀಯ ಬ್ಯಾಡ್ಮಿಂಟನ್ ತಾರೆ ಹಾಗೂ ಕಾಮನ್‌ವೆಲ್ತ್‌ ಗೇಮ್ಸ್ ಚಾಂಪಿಯನ್ ಲಕ್ಷ್ಯಸೇನ್ ಅವರು ಕೆನಾಡ ಓಪನ್‌ ಮುಡಿಗೇರಿಸಿಕೊಂಡಿದ್ದಾರೆ. ಕೆನಡಾ ಓಪನ್ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್ ಚೀನಾದ ಶಿ ಫೆಂಗ್ ವಿರುದ್ಧ 21-18 ಹಾಗೂ 22-20 ಅಂತರದಲ್ಲಿ ನೇರ ಗೇಮ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದರು. ಇದು ಲಕ್ಷ್ಯಸೇನ್ ಅವರ ಎರಡನೇ ಬಿಡಬ್ಲ್ಯುಎಫ್‌ ಸೂಪರ್ 500 ಪ್ರಶಸ್ತಿಯಾಗಿದೆ.

ವಿಶ್ವ ಶ್ರೇಯಾಂಕದಲ್ಲಿ 19ನೇ ಸ್ಥಾನದಲ್ಲಿರುವ ಲಕ್ಷ್ಯಸೇನ್ ವಿಶ್ವದ 10ನೇ ಸ್ಥಾನದಲ್ಲಿರುವ ಶಿ ಫೆಂಗ್ ವಿರುದ್ಧ ಅಸಾಧಾರಣ ಪ್ರದರ್ಶನ ತೋರಿದರು. ಇದರ ಫಲವಾಗಿ ಕೆನಡಾ ಓಪನ್ ಪ್ರಶಸ್ತಿ ಗೆದ್ದುಕೊಂಡರು. ಈ ಪಂದ್ಯವನ್ನು ಗೆಲ್ಲುವ ಮೂಲಕ ಅವರು ತಮ್ಮ ದಾಖಲೆಯನ್ನು 4-2 ರಿಂದ 5-2ರೊಂದಿಗೆ ಉತ್ತಮ ಪಡಿಸಿಕೊಂಡರು.

ಕೆನಾಡ ಓಪನ್‌ ಫೈನಲ್‌ ಪಂದ್ಯಕ್ಕೂ ಮುನ್ನ ಶಿ ಫೆಂಗ್ ಅವರನ್ನು ಆರು ಬಾರಿ ಎದುರಿಸಿದ್ದ ಲಕ್ಷ್ಯಸೇನ್ 4 ಬಾರಿ ಗೆದ್ದಿದ್ದರು. ಈ ಪಂದ್ಯದ ಗೆಲುವಿನೊಂದಿಗೆ ತಮ್ಮ ಮುನ್ನಡೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಪ್ರಸಕ್ತ ವರ್ಷದಲ್ಲಿ21ರ ಹರೆಯದ ಲಕ್ಷ್ಯ ಸೇನ್‌ಗೆ ಇದು ಮೊದಲ ಪ್ರಶಸ್ತಿ ಎಂಬುದು ಗಮನಾರ್ಹ ಸಂಗತಿ.

2022ರ ಜನವರಿಯಲ್ಲಿ ಇಂಡಿಯಾ ಓಪನ್ ಗೆದ್ದ ನಂತರ ಲಕ್ಷ್ಯಸೇನ್‌ಗೆ ಇದು ಎರಡನೇ ಬಿಡಬ್ಲ್ಯುಎಫ್‌ ವರ್ಲ್ಡ್ ಟೂರ್ ಪ್ರಶಸ್ತಿಯಾಗಿದೆ. ತೀವ್ರ ಒತ್ತಡದಲ್ಲೂ ಲಕ್ಷ್ಯಸೇನ್ ಅದ್ಭುತ ಪ್ರದರ್ಶನ ತೋರಿದ್ದಾರೆ. ಫೈನಲ್‌ನಲ್ಲಿ ಅಸಾಮಾನ್ಯ ಪ್ರದರ್ಶನ ತೋರಿ ಚಾಂಪಿಯನ್‌ ಆಗಿ ಹೊರ ಹೊಮ್ಮಿದ್ದಾರೆ.

ಈ ಟೂರ್ನಿಯಲ್ಲಿ ಲಕ್ಷ್ಯಸೇನ್ ಅದ್ಭುತ ಆಟದ ಶೈಲಿಯನ್ನು ಪ್ರದರ್ಶಿಸಿದರು. ನಾಲ್ಕನೇ ಶ್ರೇಯಾಂಕದ ಆಟಗಾರ ಕುನ್ಲಾವುಡ್ ವಿಟಿಡ್ಸರ್ನ್ ಅವರನ್ನು ಸೋಲಿಸುವ ಮೂಲಕ ಲಕ್ಷ್ಯಸೇನ್‌ ಟೂರ್ನಿಯಲ್ಲಿ ಶುಭಾರಂಭ ಕಂಡಿದ್ದರು. ಸೆಮಿಫೈನಲ್‌ ಪಂದ್ಯದಲ್ಲಿ ತಮಗಿಂತ ಮೇಲಿನ ಶ್ರೇಯಾಂಕದ ಜಪಾನ್‌ನ ನಿಶಿಮೊಟೊ ಅವರನ್ನು ಸೋಲಿಸಿದರು. ಅವರು ಕೇವಲ 44 ನಿಮಿಷಗಳಲ್ಲಿ 21-17, 21-14 ನೇರ ಗೇಮ್‌ಗಳಿಂದ ಜಪಾನ್‌ ಆಟಗಾರನನ್ನು ಮಣಿಸಿದ್ದರು.

ಸೆಮಿಫೈನಲ್‌ನಲ್ಲಿ ಪಿವಿ ಸಿಂಧೂಗೆ ಸೋಲು

ಇನ್ನು ಒಲಿಂಪಿಕ್ಸ್ ಪದಕ ವಿಜೇತ ಹಾಗೂ ಭಾರತದ ಸ್ಟಾರ್‌ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿವಿ ಸಿಂಧೂ ಅವರು ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಜಪಾನ್‌ನ ಅಕನೆ ಯಮಗುಚಿ ವಿರುದ್ದ 14-21 ಹಾಗೂ 15-21 ನೇರ ಗೇಮ್‌ಗಳಿಂದ ಸೋತಿದ್ದರು. ಆ ಮೂಲಕ ನಾಲ್ಕರ ಘಟ್ಟದಲ್ಲಿಯೇ ತಮ್ಮ ಅಭಿಯಾನವನ್ನು ಮುಗಿಸಿ ಹೊರಬಂದರು.

andolanait

Recent Posts

ದಕ್ಷಿಣ ಕಾಶಿಯ ಪಂಚ ಮಹಾರಥೋತ್ಸವಕ್ಕೆ ಭಾರಿ ಸಿದ್ಧತೆ

ಯಶಸ್ವಿಯಾಗಿ ಜಾತ್ರೆ ನಡೆಸಲು ಶಾಸಕ, ಡಿಸಿ ಪಣ; ರಥೋತ್ಸವದ ನಂತರ ವಿವಿಧೆಡೆ ಅರವಟ್ಟಿಗೆಗಳ ಸೇವೆ  ನಂಜನಗೂಡು: ಇಲ್ಲಿನ ಶ್ರೀಕಂಠೇಶ್ವರಸ್ವಾಮಿ ಜಾತ್ರೆಗೆ…

3 mins ago

ಆಕಾಶನನ್ನು ಬಾನಿನಲ್ಲಿ ಹಾರಾಡಲು ಕಲಿಸಿದ ಮೈಸೂರಿನ ವಾಕ್- ಶ್ರವಣ ಸಂಸ್ಥೆ

ಅಕ್ಷತಾ ಹೆಣ್ಣಿನ ತಾಯ್ತನ ಆಕೆ ಗರ್ಭವತಿಯೆಂದು ತಿಳಿದಾಗಿನಿಂದಲೇ ಜಾಗೃತವಾಗುತ್ತದೆ. ತನಗೆ ಹುಟ್ಟಲಿರುವ ಮಗುವಿನ ಬಗ್ಗೆ ಅಂದಿನಿಂದಲೇ ಬಣ್ಣಬಣ್ಣದ ಕನಸುಗಳನ್ನು ಕಾಣಲಾರಂಭಿಸುತ್ತಾಳೆ.…

3 hours ago

ವೀರಗಾಸೆಯೇ ಜೀವವಾಗಿರುವ ಕಿರಾಳು ಮಹೇಶ್

ಸಿರಿ ಮೈಸೂರು ಮುಖಕ್ಕೆ ಪ್ರಸಾದನ ಮಾಡಿಕೊಂಡು, ಭಾರೀ ವಸ್ತ್ರ ಧರಿಸಿ, ಕತ್ತಿ ಹಿಡಿದು, ವೀರಭದ್ರನ ಧ್ಯಾನ ಮಾಡಿ ವೇದಿಕೆ ಏರಿ…

3 hours ago

ಕಾಡ ನೋಡಹೋಗಿ ಲಂಟಾನ ಕಂಡು ಬಂದೆ

ಸ್ವಾಮಿ ಪೊನ್ನಾಚಿ ಮಹದೇಶ್ವರನ ಬೆಟ್ಟದ ಪೋಡಿನಿಂದ ಬಂದು ನಮ್ಮ ಮನೆಯಲ್ಲಿ ದನ ಮೇಯಿಸುತ್ತಿದ್ದ ಬೊಮ್ಮ ನನ್ನು ಕಂಡರೆ ನನಗೆ ಅಸಾಧ್ಯ…

3 hours ago

‘ಜನರ ಸೇವೆಗೆ ಎಟುಕದ ಅರಕೆರೆ ನಾಡಕಚೇರಿ’

ಸಿದ್ದೇಗೌಡ ಕೊಡಿಯಾಲ ಸಮಯಕ್ಕೆ ಬಾರದ ಅಧಿಕಾರಿ-ಸಿಬ್ಬಂದಿ:ಜನತೆ ಹೈರಾಣ ಶ್ರೀರಂಗಪಟ್ಟಣ: ತಾಲ್ಲೂಕಿನ ಅರಕೆರೆ ನಾಡಕಚೇರಿಯು ಅವ್ಯವಸ್ಥೆಯ ಗೂಡಾಗಿ ಮಾರ್ಪಟ್ಟಿದೆ. ಈ ನಾಡಕಚೇರಿಯಲ್ಲಿ…

4 hours ago

ಗಣಗೂರು ವ್ಯಾಪ್ತಿಯಲ್ಲಿ ಹೆಚ್ಚಿದ ಕಾಡಾನೆಗಳ ಹಾವಳಿ

ಲಕ್ಷ್ಮೀಕಾಂತ್ ಕೋಮಾರಪ್ಪ ಫಸಲು ನಾಶ, ಕಂಗಾಲಾದ ಕೃಷಿಕರು; ಸೂಕ್ತ ಕ್ರಮಕ್ಕೆ ಬೆಳೆಗಾರರ ಒತ್ತಾಯ ಸೋಮವಾರಪೇಟೆ: ತಾಲ್ಲೂಕಿನ ಗಣಗೂರು ಗ್ರಾಮ ಪಂಚಾಯಿತಿ…

4 hours ago