ವರ್ಲ್ಡ್ ಕಪ್ 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲು ಕಂಡಿದ್ದರಿಂದ ಮನನೊಂದ ಅಭಿಮಾನಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರು ಘಟನೆ ಎರಡು ಪ್ರತ್ಯೇಕ ಸ್ಥಳಗಳಲ್ಲಿ ನಡೆದಿದೆ.
ಒಡಿಶಾದ ಜಾಜ್ಪುರ್ ಹಾಗೂ ಪಶ್ಚಿಮ ಬಂಗಾಳದ ಬಂಕುರಾದಲ್ಲಿ ಇಂಡಿಯಾ ಸೋಲುಂಡಿದ್ದಕ್ಕೆ ಬೇಸರಗೊಂಡಿದ್ದ ಅಭಿಮಾನಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಒಡಿಶಾದ ಜಾಜ್ ಪುರದ ನಿವಾಸಿ, ದೇವರಂಜನ್ ದಾಸ್ ಹಾಗೂ ಪಶ್ಚಿಮ ಬಂಗಾಳದ ಬಂಕುರಾ ನಿವಾಸಿ ರಾಹುಲ್ ಲೋಹರ್ ಮೃತ ದುರ್ದೈವಿಗಳು.
ಮೃತ ಅಭಿಮಾನಿಗಳಿಬ್ಬರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಂಕುರಾ ಸಮ್ಮಿಲಾನಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿದೆ. ಎಂದು ಪೊಲೀಸ್ ಅಧಿಕಾರಿಯೋಬ್ಬರು ತಿಳಿಸಿದ್ದಾರೆ.ಇನ್ನು ಈ ಬಗ್ಗೆ ಅಸಹಜ ಸಾವಿನ ಪ್ರಕರಣ ದಾಖಲಾಗಿದೆ.
ಘಟನೆಯ ಕುರಿತು ಮಾತನಾಡಿರುವ ಪೊಲೀಸ್ ಅಧಿಕಾರಿಗಳು ಒಡಿಶಾದ ಜಾಜ್ಪುರದಲ್ಲಿ ಭಾನುವಾರ ಪಂದ್ಯ ಮುಗಿದ ನಂತರ ದೇವರಂಜನ್ ದಾಸ್ ಎಂಬ 23 ವರ್ಷದ ಯುವಕನ ಮೃತ ದೇಹ ಆತನ ಮನೆಯ ಟೆರೆಸ್ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಹೇಳಿದ್ದಾರೆ. ಮತ್ತೊಬ್ಬ ಯುವಕ ರಾಹುಲ್ ಲೋಹರ್ ನ ಸಾವಿನ ಬಗೆಗಿನ ಮಾಹಿತಿಯನ್ನು ಪೊಲೀಸರು ಬಹಿರಂಗ ಪಡಿಸಿಲ್ಲ.
ಭಾನುವಾರ ಅಹಮದಾಬಾದ್ನ ನರೇಂದ್ರಮೋದಿ ಸ್ಟೇಡಿಯಂ ನಲ್ಲಿ ನಡೆದ ವರ್ಲ್ಡ್ಕಪ್ ಏಕದಿನ ಕ್ರಿಕೇಟ್ನ ಅಂತಿಮ ಪಂದ್ಯಾವಳಿಯಲ್ಲಿ ಭಾರತ ಮತ್ತೊಮ್ಮೆ ಮುಗ್ಗರಿಸಿದ್ದು,ತವರಿನಲ್ಲಿ ಎರಡನೇ ಬಾರಿಗೆ ಹಾಗೂ ವರ್ಲ್ಡ್ಕಪ್ ನಲ್ಲಿ ಮೂರನೇ ಬಾರಿಗೆ ಟ್ರೋಫಿ ಗೆಲ್ಲುವ ಅವಕಾಶದಿಂದ ವಂಚಿತವಾಯಿತು.ವಿಶ್ವಕಪ್ ಪಂದ್ಯಾವಳಿಯ ನಾಕ್ ಔಟ್ ವರೆಗೂ ಅತ್ಯುತ್ತಮ ಪ್ರದರ್ಶನ ನೀಡಿದ್ದ ಭಾರತ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು.ಆದರೇ ಭಾರತದಷ್ಟೇ ಪ್ರಭಲ ತಂಡವಾಗಿದ್ದ ಆಸ್ಟ್ರೇಲಿಯಾ ಆರನೇ ಬಾರಿಗೆ ವರ್ಲ್ಡ್ ಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.