ಕ್ರೀಡೆ

ಭಾರತ-ವೆಸ್ಟ್‌ ಇಂಡೀಸ್‌ ಟೆಸ್ಟ್‌: ಕ್ರೇಗ್‌ ಬ್ರಾಥ್‌ವೇಟ್‌ ಫಿಫ್ಟಿ, ವೆಸ್ಟ್ ಇಂಡೀಸ್‌ ಕಠಿಣ ಹೋರಾಟ!

ಟ್ರಿನಿಡಾಡ್‌ (ವೆಸ್ಟ್ ಇಂಡೀಸ್‌): ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಪ್ರಾಬಲ್ಯ ಮೆರೆದಿದ್ದ ಭಾರತ ತಂಡದ ಬೌಲರ್‌ಗಳು ಎರಡನೇ ಟೆಸ್ಟ್‌ ಪಂದ್ಯದಲ್ಲಿ ಮಖಾಗಿದ್ದಾರೆ. ಇಲ್ಲಿನ ಕ್ವೀನ್ಸ್‌ ಪಾರ್ಕ್‌ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್‌ ತಂಡ ಪ್ರವಾಸಿ ಭಾರತ ತಂಡಕ್ಕೆ ಕಠಿಣ ಸವಾಲು ನೀಡುತ್ತಿದೆ.

ಶನಿವಾರ ಒಂದು ವಿಕೆಟ್‌ ನಷ್ಟಕ್ಕೆ 86 ರನ್‌ಗಳಿಗೆ ಪ್ರಥಮ ಇನಿಂಗ್ಸ್ ಮುಂದುರಿಸಿದ ವೆಸ್ಟ್ ಇಂಡೀಸ್‌ ತಂಡ 108 ಓವರ್‌ಗಳಿಗೆ ಐದು ವಿಕೆಟ್‌ ನಷ್ಟಕ್ಕೆ 229 ರನ್‌ ಗಳಿಸಿದೆ. ಆ ಮೂಲಕ ರೋಹಿತ್‌ ಶರ್ಮಾ ನಾಯಕತ್ವದ ಭಾರತ ತಂಡಕ್ಕೆ ತಿರುಗೇಟು ನೀಡಿದೆ. ತಮ್ಮ ಚೊಚ್ಚಲ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಕಿರ್ಕ್‌ ಮೆಕಂಜಿ ಅವರು 32 ರನ್‌ ಗಳಿಸಿ ಉತ್ತಮ ಆರಂಭ ಪಡೆದಿದ್ದರು. ಆದರೂ ಡೆಬ್ಯೂಟಂಟ್‌ ಮುಖೇಶ್‌ ಕುಮಾರ್‌ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು.

ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡುತ್ತಿರುವ ನಾಯಕ ಕ್ರೇಗ್‌ ಬ್ರಾಥ್‌ವೇಟ್‌ ಭಾರತೀಯ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದಾರೆ. 75 ರನ್‌ ಗಳಿಸಿ ಅಶ್ವಿನ್‌ಗೆ ವಿಕೆಟ್‌ ಒಪ್ಪಿಸಿದರು. ಬ್ರಾಥ್‌ವೇಟ್‌ ಇನಿಂಗ್ಸ್‌ನಲ್ಲಿ 5 ಬೌಂಡರಿಗಳು ಹಾಗೂ ಒಂದು ಸಿಕ್ಸರ್‌ ಒಳಗೊಂಡಿದೆ. ಮತ್ತೊಂದು ತುದಿಯಲ್ಲಿ ಅಲಿಕ್ ಅಥಾನಾಜೆ 37 (111) ಇದ್ದಾರೆ.

ಭಾರತ: ಪ್ರಥಮ ಇನಿಂಗ್ಸ್‌ 438-10

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಭಾರತ ತಂಡ, 128 ಓವರ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 428 ರನ್‌ಗಳನ್ನು ಗಳಿಸಿತ್ತು. ಭಾರತ ತಂಡದ ಪರ ವಿರಾಟ್‌ ಕೊಹ್ಲಿ 121 ರನ್‌ ಗಳಿಸಿದ್ದರೆ, ನಾಯಕ ರೋಹಿತ್ ಶರ್ಮಾ (80), ಯಶಸ್ವಿ ಜೈಸ್ವಾಲ್‌ (57), ರವೀಂದ್ರ ಜಡೇಜಾ (61) ಹಾಗೂ ಆರ್‌ ಅಶ್ವಿನ್‌ (56) ಅರ್ಧಶತಕಗಳನ್ನು ಸಿಡಿಸಿದ್ದರು.

ಸ್ಕೋರ್ ವಿವರ (ಮೂರನೇ ದಿನದಾಟದ 69ನೇ ಓವರ್‌ ಅಂತ್ಯಕ್ಕೆ)


ಭಾರತ: 
ಪ್ರಥಮ ಇನಿಂಗ್ಸ್‌ನಲ್ಲಿ 128 ಓವರ್‌ಗಳಿಗೆ 438-10 (ವಿರಾಟ್‌ ಕೊಹ್ಲಿ 121, ರೋಹಿತ್‌ ಶರ್ಮಾ 80, ರವೀಂದ್ರ ಜಡೇಜಾ 61, ಯಶಸ್ವಿ ಜೈಸ್ವಾಲ್‌ 57, ಆರ್‌ ಅಶ್ವಿನ್‌ 56; ಕೆಮರ್‌ ರೋಚ್‌ 104ಕ್ಕೆ 3, ಜೊಮೆಲ್‌ ವಾರಿಕನ್‌ 89ಕ್ಕೆ 3, ಜೇಸನ್‌ ಹೋಲ್ಡರ್‌ 57ಕ್ಕೆ 2

ವೆಸ್ಟ್ ಇಂಡೀಸ್‌: ಪ್ರಥಮ ಇನಿಂಗ್ಸ್‌ನಲ್ಲಿ 108 ಓವರ್‌ಗಳಿಗೆ 229-5 (ಕ್ರೇಗ್‌ ಬ್ರಾಥ್‌ವೇಟ್‌ 75, ತ್ಯಾಗಿ ನಾರಾಯಣ್‌ ಚಂದ್ರಪಾಲ್ 33,  ಕಿರ್ಕ್‌ ಮೆಕಂಜಿ 32; ರವೀಂದ್ರ ಜಡೇಜಾ 37ಕ್ಕೆ 2, ಮುಖೇಶ್‌ ಕುಮಾರ್‌ 35ಕ್ಕೆ 1, ಆರ್‌ ಅಶ್ವಿನ್‌ 61 ಕ್ಕೆ 1)

andolanait

Recent Posts

ಓದುಗರ ಪತ್ರ: ‘ಪ್ರತಾಪ’ಕ್ಕೆ ಸವಾಲು ಈ ನೀಲಿ

‘ಪ್ರತಾಪ’ಕ್ಕೆ ಸವಾಲು ಈ ನೀಲಿ ಇದು ನಮ್ಮ ಸೂರು ಆಕಾಶದ ನೀಲಿ ಇದು ನನ್ನವ್ವ ಸುತ್ತಿಕೊಂಡ ಸೀರೆಯ ನೀಲಿ ನನಗೆ…

4 hours ago

ಓದುಗರ ಪತ್ರ: ಟೆಲಿಕಾಂ ಕಂಪೆನಿಗಳ ಹಗಲು ದರೋಡೆ ನಿಯಂತ್ರಿಸಿ

ಪ್ರಸ್ತುತ ಆಂಡ್ರಾಯ್ಡ ಮೊಬೈಲ್‌ನಿಂದಲೇ ದಿನನಿತ್ಯದ ಕೆಲಸಗಳು ಆರಂಭವಾಗಿ ಅವುಗಳಿಂದಲೇ ದಿನ ಮುಕ್ತಾಯ ಅನ್ನುವಷ್ಟರ ಮಟ್ಟಿಗೆ ಅನಿವಾರ್ಯತೆ ನಿರ್ಮಾಣವಾಗಿದೆ. ಮೊಬೈಲ್ ಇಲ್ಲದೆ…

4 hours ago

ಓದುಗರ ಪತ್ರ: ಸರ್ಕಾರಿ ಕಚೇರಿಗಳ ಅನಗತ್ಯ ಬಾಡಿಗೆ ವೆಚ್ಚಗಳನ್ನು ತಪ್ಪಿಸಿ

ಹೆಚ್. ಡಿ. ಕೋಟೆ ತಾಲ್ಲೂಕು ಕೇಂದ್ರ ಸ್ಥಳದಲ್ಲಿ ಕೆಲವು ಸರ್ಕಾರಿ ಇಲಾಖೆಗಳು ಹಾಗೂ ಹಾಸ್ಟೆಲ್‌ಗಳು ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಣೆ ಮಾಡುತ್ತಿವೆ.…

4 hours ago

ರಂಗದ ಮೇಲೆ ಜಿನುಗಿದ ಜೀವಸೆಲೆ

ಜಿ.ಪಿ.ಬಸವರಾಜು ಯಾಂತ್ರಿಕ ಬದುಕಿನ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ತೋರಿಸುವ ನಾಟಕ ‘ಅಮೃತಬಳ್ಳಿ ಕಷಾಯ’ ಮಾಯಾ ನಗರಿಯಂತೆ ಕಾಣುವ ಮುಂಬೈ ನಗರ…

4 hours ago

ಸಮವಸ್ತ್ರದ ಆತ್ಮಸಾಕ್ಷಿ ಮತ್ತು ಮೂರು ಪ್ರಜ್ಞೆಗಳು

ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು ಕರ್ನಾಟಕ ಪೊಲೀಸ್‌ ಅಕಾಡೆಮಿ ಮೈಸೂರು  ಸದಾ ಜಾಗೃತವಾಗಿರುವ ಸಮಯಪಾಲನೆಯ ವಿವೇಚನೆ ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು…

4 hours ago

ದಸರಾ ಕಾರ್ಯಕ್ರಮಕ್ಕೆ ಸವಾಲಾದ ಬಸ್ ಸೇವೆ

ಕೆ.ಬಿ.ರಮೇಶನಾಯಕ ಉತ್ತನಹಳ್ಳಿ ಗ್ರಾಮದ ಬಳಿ ಯುವ ದಸರಾ, ಸಾತಗಳ್ಳಿ ವಿಟಿಯು ಸಮೀಪ ಕಂಬಳ ಕ್ರೀಡೆ ಆಯೋಜನೆ; ವೀಕ್ಷಕರ ಬೇಡಿಕೆಗೆ ತಕ್ಕಂತೆ…

4 hours ago