ಕ್ರೀಡೆ

IND vs SA 1st Test: ಮೊದಲ ದಿನ ಮಳೆ ಅಡ್ಡಿ, ಎಡವಿದ ಭಾರತಕ್ಕೆ ರಾಹುಲ್‌ ಆಸರೆ

ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡು ಏಕದಿನ ಸರಣಿಯನ್ನು ಗೆದ್ದಿರುವ ಭಾರತ ಕ್ರಿಕೆಟ್‌ ತಂಡ ಸದ್ಯ ಮೊದಲ ಟೆಸ್ಟ್‌ ಪಂದ್ಯದಲ್ಲಿ ಸೆಣಸಾಟ ನಡೆಸುತ್ತಿದೆ. ಇಂದಿನಿಂದ ( ಡಿಸೆಂಬರ್‌ 26 ) ಸೆಂಚುರಿಯನ್‌ನ ಸೂಪರ್‌ ಸ್ಪೋರ್ಟ್‌ ಪಾರ್ಕ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೊದಲ ಟೆಸ್ಟ್‌ ಪಂದ್ಯ ಆರಂಭಗೊಂಡಿದ್ದು, ಭಾರತ ಮೊದಲು ಬ್ಯಾಟಿಂಗ್‌ ಮಾಡಿದೆ.

ದಿನದಾಟ ಸಂಪೂರ್ಣವಾಗಿ ಮುಗಿಯುವ ಮುನ್ನವೇ ಮಳೆ ಬಂದ ಕಾರಣ 59 ಓವರ್‌ಗಳು ಮಾತ್ರ ನಡೆದಿದ್ದು ಟೀಮ್‌ ಇಂಡಿಯಾ 8 ವಿಕೆಟ್‌ ನಷ್ಟಕ್ಕೆ 208 ರನ್‌ ಕಲೆಹಾಕಿದೆ.

ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಎಲ್ಲಾ ಬ್ಯಾಟ್ಸ್‌ಮನ್‌ಗಳೂ ಕೈಕೊಟ್ಟಿದ್ದು ಕೆಎಲ್‌ ರಾಹುಲ್‌ ತಂಡಕ್ಕೆ ಆಪದ್ಬಾಂಧವನಾಗಿ ನಿಂತಿದ್ದಾರೆ. 105 ಎಸೆತಗಳನ್ನು ಎದುರಿಸಿದ ಕೆಎಲ್‌ ರಾಹುಲ್‌ 70 ರನ್‌ ಬಾರಿಸಿದ್ದು ಮೊದಲ ದಿನದಾಟದಂತ್ಯಕ್ಕೆ ಅಜೇಯರಾಗಿ ಉಳಿದಿದ್ದಾರೆ ಹಾಗೂ 10 ಎಸೆತಗಳನ್ನು ಆಡಿ ಯಾವುದೇ ರನ್‌ ಗಳಿಸದಿರುವ ಮೊಹಮ್ಮದ್‌ ಸಿರಾಜ್‌ ಸಹ ಅಜೇಯರಾಗಿ ಉಳಿದುಕೊಂಡಿದ್ದಾರೆ.

ಭಾರತದ ಪರ ಆರಂಭಿಕರಾಗಿ ಯಶಸ್ವಿ ಜೈಸ್ವಾಲ್‌ ಹಾಗೂ ರೋಹಿತ್‌ ಶರ್ಮಾ ಕಣಕ್ಕಿಳಿದರು. ಜೈಸ್ವಾಲ್‌ 17 ರನ್‌ ಗಳಿಸಿದರೆ, ನಾಯಕ ರೋಹಿತ್‌ ಶರ್ಮಾ ಕೇವಲ 5 ರನ್‌ಗಳಿಗೆ ಔಟ್‌ ಆದರು. ಇನ್ನುಳಿದಂತೆ ಶುಭ್‌ಮನ್‌ ಗಿಲ್‌ 2, ವಿರಾಟ್‌ ಕೊಹ್ಲಿ 38, ಶ್ರೇಯಸ್‌ ಅಯ್ಯರ್‌ 31, ರವಿಚಂದ್ರನ್‌ ಅಶ್ವಿನ್‌ 8, ಶಾರ್ದೂಲ್‌ ಠಾಕೂರ್‌ 24 ಹಾಗೂ ಜಸ್‌ಪ್ರೀತ್‌ ಬುಮ್ರಾ ಕೇವಲ 1 ರನ್‌ ಕಲೆಹಾಕಿದರು.

ಸೌತ್‌ ಆಫ್ರಿಕಾ ಪರ ಕಗಿಸೊ ರಬಾಡಾ 5 ವಿಕೆಟ್‌ ಪಡೆದು ಮಿಂಚಿದರೆ, ನಾಂದ್ರೆ ಬರ್ಗರ್‌ ಹಾಗೂ ಮಾರ್ಕೊ ಯಾನ್‌ಸೆನ್‌ ಒಂದು ವಿಕೆಟ್‌ ಪಡೆದರು.

andolana

Recent Posts

ಹನೂರು ತಾಲ್ಲೂಕಿನಲ್ಲಿ ಕೇಂದ್ರ ಬರ ಅಧ್ಯಯನ ತಂಡದಿಂದ ಎರಡನೇ ದಿನದ ಸಮಗ್ರ ಪರಿಶೀಲನೆ

ಹನೂರು: ತಾಲ್ಲೂಕಿನಾದ್ಯಂತ ತೀವ್ರ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡವು ಎರಡನೇ ದಿನವಾದ ಇಂದು ಹನೂರು…

14 hours ago

ಬಿರುಗಾಳಿ ಮಳೆಗೆ ಬಾಳೆ ಬೆಳೆ ನೆಲಕಚ್ಚಿ:ರೈತರಿಗೆ ಲಕ್ಷಾಂತರ ರೂ. ನಷ್ಟ!

ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಕಟಾವಿಗೆ ಬಂದಿದ್ದ ಬಾಳೆ ಬೆಳೆ ಸಂಪೂರ್ಣ…

14 hours ago

ಕಾಡುಪ್ರಾಣಿಗಳ ಹಾವಳಿ ತಡೆಗೆ ಸ್ಟೀಲ್ ರೋಪ್ ಬ್ಯಾರಿಕೇಡ್

ಮಂಜು ಕೋಟೆ ಕೋಟೆ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಿಂದ ಅಳವಡಿಕೆ  ಎಚ್.ಡಿ.ಕೋಟೆ: ತಾಲ್ಲೂಕಿನ ಕಾಡಂಚಿನಲ್ಲಿ ಕಾಡು ಪ್ರಾಣಿಗಳು…

15 hours ago

ದಸರೆಯಲ್ಲಿ ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆದ ಮುಖ್ಯಮಂತ್ರಿ

ಮುಂದಿನ ಭಾನುವಾರದಿಂದ ನವರಾತ್ರಿ ಆರಂಭ. ಐತಿಹಾಸಿಕ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ. ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಈ ಬಾರಿ…

15 hours ago

ಪೌರಕಾರ್ಮಿಕರಿಗೆ ಉಚಿತ ಸಾಬೂನು ಗ್ಯಾರಂಟಿ ಕೊಡಿ

ವಸಂತಕುಮಾರ್ ಮೈಸೂರು ಮಠ ಮೈಸೂರಿನ ಸ್ವಚ್ಛತೆ ಜವಾಬ್ದಾರಿ ಪೌರಕಾರ್ಮಿಕರ ಹೆಗಲ ಮೇಲಿದೆ ಇದು ನಮ್ಮ ಕಸ, ಇದರ ನಿರ್ವಹಣೆ ನಮ್ಮ…

15 hours ago

ಅಸ್ತ್ರಗಳು, ಅಂಧಕಾರ, ಆತಂಕ

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ   ಪ್ರಯೋಗಕೆ ಸಜ್ಜಾಗುತ್ತಿರುವ ರಾಜಕೀಯ ಪಕ್ಷಗಳು ಕರ್ನಾಟಕದ ರಾಜಕಾರಣ ಎಷ್ಟು ಆತಂಕದ ಮಟ್ಟಕ್ಕೆ…

15 hours ago