ಪೋರ್ಟ್ ಆಫ್ ಸ್ಪೇನ್ : 2023-25ನೇ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಭಾಗವಾಗಿ ಭಾರತ-ವೆಸ್ಟ್ ಇಂಡೀಸ್ ವಿರುದ್ಧ ನಡೆದ 2ನೇ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಇದರಿಂದ ಭಾರತ 1-0 ಅಂತರದಲ್ಲಿ ಗೆಲುವು ಸಾಧಿಸಿದರೂ ವೆಸ್ಟ್ ಇಂಡೀಸ್ ತಂಡವನ್ನು ತವರಿನಲ್ಲೇ ವೈಟ್‌ವಾಶ್ ಮಾಡುವ ಕನಸು ಭಗ್ನಗೊಂಡಿತು. ಅಲ್ಲದೇ ವೆಸ್ಟ್ ಇಂಡೀಸ್ ವಿರುದ್ಧ ಕ್ಲೀನ್ ಸ್ವೀಪ್ ಮಾಡುವಲ್ಲಿ ಮಳೆ ಅಡ್ಡಿಯಾದ ಕಾರಣ ಪೂರ್ಣ ಪಾಯಿಂಟ್ಸ್ ಪಡೆಯುವ ಅವಕಾಶ ಕಳೆದುಕೊಂಡಿತು.
ವಿಂಡೀಸ್ ದ್ವಿತೀಯ ಸರಣಿ ಡ್ರಾನಲ್ಲಿ ಅಂತ್ಯಗೊಂಡ ಬಳಿಕ 24 ಅಂಕ ಪಡೆಯಬೇಕಿದ್ದ ಭಾರತ ತಂಡಕ್ಕೆ 16 ಅಂಕವಷ್ಟೇ ಲಭ್ಯವಾಯಿತು. ಇದರಿಂದ ಪಿಸಿಟಿ (Percentage Of Points Earned -ಗೆದ್ದ ಶೇಕಡಾವಾರು ಅಂಕ) 66.67ಕ್ಕೆ ಕುಸಿದು 2ನೇ ಸ್ಥಾನಕ್ಕೆ ಇಳಿಯಿತು. ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆದ್ದ ನಂತರ 12 ಅಂಕ ಪಡೆದ ಪಾಕಿಸ್ತಾನ 100 ಪಿಸಿಟಿಯೊಂದಿಗೆ ಅಗ್ರಸ್ಥಾನಕ್ಕೇರಿತು. ಹಾಲಿ ವಿಶ್ವ ಟೆಸ್ಟ್ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ 54.17 ಅಂಕ ಪಡೆದು 3ನೇ ಸ್ಥಾನ, 29.17 ಅಂಕ ಗಳಿಸಿರುವ ಇಂಗ್ಲೆಂಡ್ 4ನೇ ಸ್ಥಾನ, 16.67 ಅಂಕ ಪಡೆದ ವೆಸ್ಟ್ ಇಂಡೀಸ್ 5ನೇ ಸ್ಥಾನದಲ್ಲಿವೆ.
ವಿಶ್ವಕಪ್ ಟೂರ್ನಿ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಟೆಸ್ಟ್ ಸರಣಿಯನ್ನ ಆಡಲಿರುವ ಭಾರತ, ನಂತರ ಇಂಗ್ಲೆಂಡ್ ವಿರುದ್ಧ ಸ್ವದೇಶಿ ಸರಣಿಯನ್ನಾಡಲಿದೆ.
ವಿಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ 141 ರನ್‌ಗಳ ಭರ್ಜರಿ ಜಯ ಸಾಧಿಸಿದ್ದ ಭಾರತ 2ನೇ ಟೆಸ್ಟ್ ನಲ್ಲೂ ಯಶಸ್ವಿ ಪ್ರದರ್ಶನವನ್ನೇ ನೀಡಿತ್ತು. 4ನೇ ದಿನದಾಟದಲ್ಲಿ ಸ್ಫೋಟಕ ಆರಂಭ ಪಡೆದ ಟೀಂ ಇಂಡಿಯಾ 181 ರನ್ ಗಳಿಸುವ ಮೂಲಕ ವೆಸ್ಟ್ ಇಂಡೀಸ್‌ಗೆ 365 ರನ್‌ಗಳ ಗುರಿ ನೀಡಿತ್ತು. ಆದ್ರೆ 4ನೇ ದಿನದ ಅಂತ್ಯಕ್ಕೆ 76 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ವಿಂಡೀಸ್ 5ನೇ ದಿನದಲ್ಲಿ ಭಾರತದ ಎದುರು ವೈಟ್‌ವಾಶ್ ಆಗುವ ಸಾಧ್ಯತೆ ಹೊಂದಿತ್ತು. ಮಳೆ ಹಿನ್ನೆಲೆಯಲ್ಲಿ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು.
ಸಂಕ್ಷಿಪ್ತ ಸ್ಕೋರ್
ಭಾರತ : ಮೊದಲ ಟೆಸ್ಟ್ ಮೊದಲ ಇನ್ನಿಂಗ್ಸ್ – 421/5 ಡಿಕ್ಲೇರ್
ವೆಸ್ಟ್ ಇಂಡೀಸ್ : ಮೊದಲ ಟೆಸ್ಟ್ ಮೊದಲ ಇನ್ನಿಂಗ್ಸ್ – 150/10
ವೆಸ್ಟ್ ಇಂಡೀಸ್ ಮೊದಲ ಟೆಸ್ಟ್ 2ನೇ ಇನ್ನಿಂಗ್ಸ್ – 130
ಭಾರತ : 2ನೇ ಟೆಸ್ಟ್ ಮೊದಲ ಇನ್ನಿಂಗ್ಸ್ – 438
ವೆಸ್ಟ್ ಇಂಡೀಸ್: 2ನೇ ಟೆಸ್ಟ್ ಮೊದಲ ಇನ್ನಿಂಗ್ಸ್ – 255
ಭಾರತ: 2ನೇ ಟೆಸ್ಟ್ 2ನೇ ಇನ್ನಿಂಗ್ಸ್ – 181/2 ಡಿಕ್ಲೇರ್
ವೆಸ್ಟ್ ಇಂಡೀಸ್ 2ನೇ ಟೆಸ್ಟ್ ಮೊದಲ ಇನ್ನಿಂಗ್ಸ್ – 76/2 ಡ್ರಾ
ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದ ರಸ್ತೆ ಹಾಳಾಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಹರ ಸಾಹಸ ಮಾಡಬೇಕಾಗಿದೆ. ರಸ್ತೆಯ…
ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ಆವರಣದಲ್ಲಿ ಜ್ಯೂಸ್ ಸೆಂಟರ್, ಕಾಫಿ, ಟೀ ಅಂಗಡಿಗಳು ಪ್ಲಾಸ್ಟಿಕ್ ಕವರ್, ನೀರಿನ ಬಾಟಲಿ, ಪ್ಲಾಸ್ಟಿಕ್ ಕಪ್‌ಗಳನ್ನು…
ಭಾರತದ ಹೆಚ್ಚಿನ ಕುಟುಂಬಗಳಿಗೆ ಅಡುಗೆ ಅನಿಲ ಅಥವಾ ಎಲ್‌ಪಿಜಿ ಎಂಬುದು ದಿನಚರಿಯ ಅವಿಭಾಜ್ಯ ಅಂಗವಾಗಿದೆ. ಸಿಲಿಂಡರ್ ಯಾವಾಗ ಖಾಲಿಯಾಗುತ್ತದೆ ಎನ್ನುವುದರತ್ತ…
ಗ್ರಾಮದಲ್ಲಿ ಆತಂಕ ಸೃಷ್ಟಿಸಿದ ಆನೆಗಳ ಹಿಂಡು; ಶಾಶ್ವತ ಪರಿಹಾರಕ್ಕೆ ಗ್ರಾಮಸ್ಥರ ಒತ್ತಾಯ ಕಾಂಗೀರ ಬೋಪಣ್ಣ ವಿರಾಜಪೇಟೆ: ಸಮೀಪದ ಅರಣ್ಯ ಪ್ರದೇಶದಿಂದ…
ಒಂದು ವರ್ಷದಲ್ಲಿ ಹತ್ತಕ್ಕೂ ಹೆಚ್ಚು ಅಪಘಾತ; ಗಣಿಗಾರಿಕೆ ಹಗಲು-ರಾತ್ರಿ ನಡೆಯುವುದರಿಂದ ಟಿಪ್ಪರ್‌ಗಳ ಸಂಚಾರ ಹೆಚ್ಚಳ ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ…