ಪರ್ತ್: ಭಾರತದ ವಿರುದ್ಧದ ಪ್ರಮುಖ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 5 ವಿಕೆಟ್ಗಳ ಜಯ ಸಾಧಿಸುವ ಮೂಲಕ ಸೆಮಿಫೈನಲ್ ಸ್ಥಾನಕ್ಕೆ ಹತ್ತಿರವಾಗಿದೆ.
ಡೆನ್ ಮಾಕ್ರಮ್ ಮತ್ತು ಡೇವಿಡ್ ಮಿಲ್ಲರ್ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತದ ವಿರುದ್ಧ ಹರಿಣಗಳು ಜಯ ದಾಖಲಿಸಿವೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತಕ್ಕೆ ದಕ್ಷಿಣ ಆಫ್ರಿಕಾ ಬೌಲರ್ ಗಳು ಆರಂಭದಲ್ಲಿಯೇ ಶಾಕ್ ನೀಡಿದರು. ಆರಂಭಿಕರಾದ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಮತ್ತೊಮ್ಮೆ ರನ್ ಗಳಿಸುವಲ್ಲಿ ವಿಫಲರಾದರು. ಒಂಬತ್ತು ರನ್ ಗಳಿಸಿ ರಾಹುಲ್ ನಿರ್ಗಮಿಸಿದರೆ ರೋಹಿತ್ ಶರ್ಮಾ15 ರನ್ಗೆ ಲುಂಗಿ ಎನ್ಗಿಡಿ ಎಸೆತಕ್ಕೆ ಕ್ಯಾಚ್ ನೀಡಿ ಔಟ್ ಆದರು.
ಕಳೆದ ಎರಡು ಪಂದ್ಯಗಳಲ್ಲಿ ಅರ್ಧಶತಕ ಗಳಿಸಿದ್ದ ವಿರಾಟ್ ಕೊಹ್ಲಿ ಕೂಡ ದಕ್ಷಿಣ ಆಫ್ರಿಕಾ ವಿರುದ್ಧ ಮಿಂಚಲಿಲ್ಲ. ಕೇವಲ 12 ರನ್ ಗಳಿಗೆ ಕೋಹ್ಲಿ ನಿರ್ಗಮಿಸಿದರೆ ಅಕ್ಷರ್ ಪಟೇಲ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ದೀಪಕ್ ಹೂಡಾ ಕೂಡ ಶೂನ್ಯಕ್ಕೆ ಔಟಾದರು. ಸೂರ್ಯಕುಮಾರ್ ಯಾದವ್ (68) ಒಬ್ಬರೇ ಏಕಾಂಗಿಯಾಗಿ ಹೋರಾಡಿದರು. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ ಸಹಿತ ನಂತರ ಬಂದ ಯಾರೊಬ್ಬರೂ ಎರಡಂಕಿ ದಾಟಲಿಲ್ಲ.
ಡೇವಿಡ್ ಮಿಲ್ಲರ್ ಮತ್ತುಏಡೆನ್ ಮಕ್ರಮ್ ಅರ್ಧ ಶತಕ ಬಾರಿಸಿ ದ. ಆಫ್ರಿಕಾದ ಗೆಲುವನ್ನು ಸುಗಮವಾಗಿಸಿದರು. ದಕ್ಷಿಣ ಆಫ್ರಿಕಾ ಪರವಾಗಿ ಲುಂಗಿ ಎಂಗಿಡಿ 4 ವಿಕೆಟ್ ಪಡೆದು ಮಿಂಚಿದರು. ಎಡಗೈ ವೇಗಿ ವ್ಯಾಯ್ನೆ ಪಾರ್ನೆಲ್ ಕೂಡ 3 ವಿಕೆಟ್ ಕಬಳಿಸುವ ಮೂಲಕ ಭಾರತಕ್ಕೆ ಶಾಕ್ ಕೊಟ್ಟರು. ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ಗೆಲುವಿನಿಂದ ಪಾಕಿಸ್ತಾನದ ಸೆಮಿಫೈನಲ್ ಹಾದಿ ಮತ್ತಷ್ಟು ಕಠಿಣವಾಗಿದೆ.
ಕೊಳ್ಳೇಗಾಲ: ರಾತ್ರಿ ಕಂಠಪೂರ್ತಿ ಕುಡಿದ ಇಬ್ಬರ ನಡುವೆ ಹಳೇ ವೈಷಮ್ಯದಿಂದ ಕಲಹ ನಡೆದು ಓರ್ವನನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿರುವ…
ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ಆರ್ಭಟ ಜೋರಾಗಿರುವ ಬೆನ್ನಲ್ಲೇ ಮುಂದಿನ ಒಂದು ವಾರದವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ…
ಬೆಂಗಳೂರು: ಕಳೆದ ಹಲವು ದಿನಗಳಿಂದ ರಾಜ್ಯಾದ್ಯಂತ ತಾಪಮಾನ ಹೆಚ್ಚಾಗಿದ್ದು, ಜನರು ಹೈರಾಣಾಗಿದ್ದಾರೆ. ಸುಡು ಬಿಸಿಲು ಹಾಗೂ ಸೆಖೆಯಿಂದಾಗಿ ಕರುನಾಡ ಜನರು…
ಮುತ್ತತ್ತಿಯಲ್ಲಿ ನೀರಿಗಿಳಿದ ಯುವಕ ಸಾವು ಹಲಗೂರು: ಇಲ್ಲಿಗೆ ಸಮೀಪದ ಮುತ್ತತ್ತಿಯ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ವೇಳೆ ನೀರಿನ ತೀವ್ರ ಸೆಳೆತಕ್ಕೆ…
ರಾಯ್ಪುರ: ಛತ್ತೀಸ್‌ಗಢದಲ್ಲಿ ಖಾಸಗಿ ವಿಮಾನವೊಂದು ಪತನವಾಗಿದ್ದು, ಪೈಲಟ್ ಹಾಗೂ ಸಹ ಪೈಲಟರ್ ಇಬ್ಬರೂ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಛತ್ತೀಸ್‌ಗಢದ…
ಚೆನ್ನೈ: ಇರಾನ್-ಇಸ್ರೇಲ್ ಯುದ್ಧ ಶುರುವಾಗುವ ಮೊದಲು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದನ್ನು ಪಾಲಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ…