ಪ್ಯಾರಿಸ್: ವಿಶ್ವವಿಖ್ಯಾತ ಕ್ರೀಡಾಕೂಟ 2024ರ ಪ್ಯಾರಿಸ್ ಒಲಂಪಿಕ್ಸ್ ಅಂತಿಮಘಟ್ಟಕ್ಕೆ ತುಲುಪಿದೆ. ಜುಲೈ 26 ರಿಂದ ಆಗಸ್ಟ್ 11 ವರೆಗೆ ಒಟ್ಟು 17 ದಿನಗಳ ಕಾಲ ನಡೆದ ಈ ಒಲಂಪಿಕ್ಸ್‌ಗೆ ಇಂದು ಅಂತಿಮ ದಿನವಾಗಿದೆ.
ಭಾರತೀಯ ಕಾಲಮಾನ ಮಧ್ಯರಾತ್ರಿ 12.30ಕ್ಕೆ ನೇರ ಪ್ರಸಾರ ಆಗಲಿದೆ. ಈ ಮುಕ್ತಾಯ ಸಮಾರಂಭದಲ್ಲಿ ಭಾರತ ಪರವಾಗಿ ಕಂಚು ಗೆದ್ದ ಶೂಟರ್ ಮನು ಭಾಕರ್ ಹಾಗೂ ಗೋಲ್ ಕೀಪರ್ ಶ್ರೀಜೇಶ್ ವಾರು ಧ್ವಜಧಾರಿಯಾಗಿರಲಿದ್ದಾರೆ.
ಈ ಮುಕ್ತಾಯ ಸಮಾರಂಭದಲ್ಲಿ ನೃತ್ಯ ಪ್ರದರ್ಶಕರು, ಅಕ್ರೋಬ್ಯಾಟ್‌ಗಳು, ಸರ್ಕಸ್ ಹಾಗೂ ಸೃತ್ಯಗಾರರು ಮನರಂಜನಾ ಕಾರ್ಯಕ್ರಮ ನೀಡಲಿದ್ದಾರೆ. ಇದರೊಂದಿಗೆ ಸಂಗೀತ ರಸಸಂಜೆಯೂ ಇರಲಿದೆ ಎಂದು ಮಾಹಿತಿ ಲಭ್ಯವಾಗಿದೆ.
ಇನ್ನು ಈ ಕಾರ್ಯಕ್ರಮದ ನೇರ ಪ್ರಸಾರವನ್ನು ಸ್ಪೋರ್ಟ್ 18 ನೆಟ್ವರ್ಕ್ ಚಾನೆಲ್‌ಗಳಲ್ಲಿ ಹಾಗೂ ಜಿಯೋ ಆಪ್ ಮೂಲಕ ಉಚಿತವಾಗಿ ವೀಕ್ಷಣೆ ಮಾಡಬಹುದಾಗಿದೆ.
ಭಾರತದ ಸಾಧನೆ: ಈ ಬಾರಿಯ ಒಲಂಪಿಕ್ಸ್‌ನಲ್ಲಿ ಭಾರತ ತಂಡ ನಿರೀಕ್ಷಿತಾ ಸಾಧನೆ ಮಾಡುವಲ್ಲಿ ವಿಫಲವಾಗಿದೆ. ಚಿನ್ನದ ಹುಡುಗ ನೀರಜ್ ಚೋಪ್ರಾ ಬೆಳ್ಳಿಗೆ ತಮ್ಮ ಅಭಿಯಾನ ಮುಗಿಸಿದರೇ, ಇತ್ತ ಚಿನ್ನದ ಭರವಸೆ ನೀಡಿದ್ದ ಕುಸ್ತಿಪಟು ವಿನೇಶ್ ಫೋಗಟ್ ಅವರು ತೂಕ ಏರಿಕೆ ವಿವಾದದ ಮೂಲಕ ಟೂರ್ನಿಯಿಂದಲೇ ಬ್ಯಾನ್ ಆಗಿ ಹೊರನಡೆದಿದ್ದಾರೆ.
ಮನು ಭಾಕರ್ ಅವರು ಶೂಟಿಂಗ್‌ನಲ್ಲಿ ಎರಡು ಚಿನ್ನ ಗೆದ್ದ ಸಾಧನೆ ಮಾಡಿದರೇ, ನೀರಜ್ ಬೆಳ್ಳಿ ಗೆದ್ದದ್ದೇ ಈ ಬಾರಿಯ ಒಲಂಪಿಕ್ಸ್‌ನ ಶ್ರೇಷ್ಠ ಸಾಧನೆಯಾಗಿದೆ. ಒಂದು ಬೆಳ್ಳಿ ಹಾಗೂ ಐದು ಕಂಚು ಸಹಿತ ಭಾರತ ಪ್ಯಾರಿಸ್ ಒಲಂಪಿಕ್ಸ್‌ನಲ್ಲಿ ಕೇವಲ 6 ಪದಕಗಳನ್ನು ಗೆಲ್ಲುವ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ 69ನೇ ಸ್ಥಾನ ಪಡೆದಿದೆ.
ಭಾರತ ಪರವಾಗಿ ಪದಕ ಗೆದ್ದವರಿವರು:
ನೀರಜ್ ಚೋಪ್ರಾ: ಜಾವೆಲಿನ್ ಥ್ರೋ- ಬೆಳ್ಳಿ
ಮನು ಭಾಕರ್: ಏರ್ ಪಿಸ್ತೂಲ್ (10 ಮೀ)- ಕಂಚು
ಪುರುಷರ ಹಾಕಿ ತಂಡ– ಕಂಚು
ಸ್ವಪ್ನಿಲ್ ಕುಸಾಲೆ: ಏರ್ ಪಿಸ್ತೂಲ್ (50 ಮೀ)- ಕಂಚು
ಅಮನ್ ಸೆಹ್ರಾವತ್: ಕುಸ್ತಿ (ಫ್ರೀಸ್ಟೈಲ್ 57ಕೆಜಿ)- ಕಂಚು
ಮನು ಭಾಕರ್, ಸರಬ್ಜೋತ್ ಸಿಂಗ್: ಏರ್ ಪಿಸ್ತೂಲ್ (10 ಮೀ, ಮಿಶ್ರತಂಡ)- ಕಂಚು
ಮೈಸೂರು : ಮೈಸೂರು ಅರಮನೆ ಮಂಡಳಿ ವತಿಯಿಂದ ಕ್ರಿಸ್‌ಮಸ್ ಹಾಗೂ ಹೊಸವರ್ಷದ ಪ್ರಯುಕ್ತ 10 ದಿನಗಳ ‘ಅರಮನೆ ಫಲಪುಷ್ಪ ಪ್ರದರ್ಶನ’…
ಹಲಗೂರು : ಎತ್ತಿನ ಗಾಡಿ ತೆರಳುತ್ತಿದ್ದ ವೇಳೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಎತ್ತು ಸ್ಥಳದಲ್ಲೇ ಮೃತಪಟ್ಟ ಘಟನೆ…
ಹಲಗೂರು : ಇಲ್ಲಿಗೆ ಸಮೀಪದ ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟಿರುವ ಘಟನೆ…
ಭಾರತೀನಗರ : ಇಲ್ಲಿಗೆ ಸಮೀಪದ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ಪೊಲೀಸರ ಭದ್ರತೆಯೊಂದಿಗೆ ಗ್ರಾಮದ ಪರಿಶಿಷ್ಟ ಜಾನಾಂಗದ ಮಹಿಳೆಯರು, ಪುರುಷರು ದೇವಾಲಯಗಳಿಗೆ ಪ್ರವೇಶಿಸಿದರು.…
ಮೈಸೂರು : ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿರುವ ಸಂಬಂಧ ಯಶಸ್ವಿ ಕಾರ್ಯಾಚರಣೆ ನಡೆಸಿದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಚಾವಿಸನಿನಿ)…
ಬೆಂಗಳೂರು : ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ನಡೆಸುವ ಕುರಿತಂತೆ ಪರಿಶೀಲಿಸಲು ಸಮಿತಿ ರಚಿಸಲಾಗಿದೆ ಎಂದು ಗೃಹ ಸಚಿವರಾದ…