ಕ್ರೀಡೆ

IND vs RSA 1st ODI: ಹರಿಣಗಳ ವಿರುದ್ಧ ರಾಹುಲ್‌ ಪಡೆಗೆ ಭರ್ಜರಿ ಜಯ

ಜೋಹಾನ್ಸ್‌ಬರ್ಗ್: ಇಂದು ನಡೆದ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ೮ ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಇಲ್ಲಿನ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡದ ಉತ್ತಮ ಬೌಲಿಂಗ್‌ ಮುಂದೆ ಮಂಕಾದ ಅತಿಥೇಯ ಸೌತ್‌ ಆಫ್ರಿಕಾ ತಂಡ 116 ರನ್‌ಗಳಿಸಿ ಆಲೌಟ್‌ ಆಯಿತು. ಸಾಧಾರಣ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಕೇವಲ ೨ ವಿಕೆಟ್‌ ಕಳೆದುಕೊಂಡು ಗೆಲುವಿನ ನಗೆ ಬೀರಿತು.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ತಂಡ ಆರಂಭದಿಂದಲೇ ಕುಸಿತ ಕಂಡಿತು. ಟೀಂ ಇಂಡಿಯಾದ ಚುರುಕನ ಬೌಲಿಂಗ್‌ ಮುಂದೆ ಒದ್ದಾಡಿದ ದಕ್ಷಿಣ ಆಫ್ರಿಕಾ ತಂಡ ಎರಡನೇ ಓವರ್‌ನಲ್ಲಿಯೇ ವಿಕೆಟ್‌ ಕಳೆದುಕೊಂಡಿತು. ಆರಂಭದಿಂದಲೇ ಮಾರಕ ಬೌಲಿಂಗ್‌ ದಾಳಿ ನಡೆಸಿದ ಆರ್ಶ್‌ದೀಪ್‌ ಸಿಂಗ್‌ ತಮ್ಮ ಮೊಲದನೇ ಓವರ್‌ನಲ್ಲಿಯೇ ದ. ಆಫ್ರಿಕಾದ ಆರಂಭಿಕ ದಾಂಡಿಗ ರೀಝಾ ಹೆಂಡ್ರಿಕ್ಸ್‌ ಶೂನ್ಯಕ್ಕೆ ಔಟ್‌ ಮಾಡಿದರು.

ನಂತರ ಬಂದ ವ್ಯಾನ್‌ ಡುಸೆನ್‌ ಕೂಡಾ ಸೊನ್ನೆ ಸುತ್ತಿದರು. ಟೋನಿ ಡಿ ಜೋರ್ಜಿ 28 ರನ್‌ ಗಳಿಸಿದರು. ನಾಯಕ ಮಾರ್ಕ್ರಮ್‌ 12 ರನ್‌ ಗಳಿಸಿ ನಿರ್ಗಮಿಸಿದರು. ಭರವಸೆಯ ಆಟಗಾರ ಡೆವಿಡ್‌ ಮಿಲ್ಲರ್‌ ಎರಡು ರನ್‌ ಗಳಿಸಿ ಆವೇಶ್‌ ಖಾನ್‌ಗೆ ವಿಕೆಟ್‌ ಒಪ್ಪಿಸಿದರು. ಆಂಡಿಲೆ ಫೆಲುಕ್ವಾಯೊ 33 ರನ್‌ ಗಳಿಸಿದ್ದೇ ತಂಡದ ರ ವಯಕ್ತಿಕ ಗರಿಷ್ಠ ರನ್‌ ಆಗಿತ್ತು. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡ 27.3 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು 116 ರನ್‌ಗಳ ಸಾಧಾರಣ ಗುರಿ ನೀಡಿತು.

ಟೀಂ ಇಂಡಿಯಾ ಪರ ಅಮೋಘ ಬೌಲಿಂಗ್‌ ದಾಳಿ ಮಾಡಿದ ಆರ್ಶ್‌ದೀಪ್‌ ಸಿಂಗ್‌ 10 ಓವರ್‌ಗಳಲ್ಲಿ 37 ರನ್‌ ನೀಡಿ 5 ವಿಕೆಟ್‌ ಪಡೆದರು. ಇವರಿಗೆ ಸಾಥ್‌ ನೀಡಿದ ಆವೇಶ್‌ ಖಾನ್‌ 27/4 ಮತ್ತು ಕಲ್ದೀಪ್‌ ಯಾದವ್‌ 3/1 ವಿಕೆಟ್‌ ಪಡೆದರು.

ಸಾಧಾರಣ ಮೊತ್ತ ಚೇಸ್‌ ಮಾಡಿದ ಟೀಂ ಇಂಡಿಯಾ ಆರಂಭಿಕ ಬ್ಯಾಟರ್‌ ಋತುರಾಜ್‌ (೫) ಬೇಗನೆ ಕಳೆದುಕೊಂಡಿತು. ಪಾದಾರ್ಪಣೆ ಪಂದ್ಯ ಆಡಿದ ಸಾಯ್‌ ಸುದರ್ಶನ್‌ ಅವರು ನಿರ್ಭೀತಿಯಿಂದ ಇನ್ನಿಂಗ್ಸ್‌ ಕಟ್ಟಿದರು.೪೩ ಎಸೆತಗಳನ್ನು ಎದುರಿಸಿದ ಅವರು ೯ ಬೌಂಡರಿ ಮೂಲಕ ೫೫ ರನ್‌ ಕಲೆಹಾಕಿದರು. ಇವರಿಗೆ ಜೊತೆಯಾಗಿ ಶ್ರೇಯಸ್‌ ಅಯ್ಯರ್‌ ೫೨ ರನ್‌ ಬಾರಿಸಿ ತಂಡದ ಗೆಲುವಿಗೆ ಕಾರಣರಾದರು.

ಅಂತಿಮವಾಗಿ ಭಾರತ ತಂಡ ೧೬.೪ ಓವರ್‌ಗಳಲ್ಲಿ ೨ ವಿಕೆಟ್‌ ಕಳೆದುಕೊಂಡು ೧೧೭ ರನ್‌ ಗಳಿಸಿ ಸೀರಿಸ್‌ನ ಮೊಲದ ಜಯ ದಾಖಲಿಸಿತು.

ದಕ್ಷಿಣ ಆಫ್ರಿಕಾ ಪರ ಮುಲ್ಡರ್‌ ಮತ್ತು ಫೆಲುಕ್ವಾಯೊ ತಲಾ ಒಂದು ವಿಕೆಟ್‌ ಪಡೆದರು.

ಪಂದ್ಯ ಶ್ರೇಷ್ಠ: ಆರ್ಶದೀಪ್‌ ಸಿಂಗ್

andolanait

Recent Posts

ಮುಡಾ ಕೇಸನ್ನು ಸಿಬಿಐ ತನಿಖೆಗೆ ಕೊಡಬೇಕು: ಶಾಸಕ ಶ್ರೀವತ್ಸ ಆಗ್ರಹ

ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ದಾಖಲೆ ಪರಿಶೀಲನೆಯ ಅವಶ್ಯಕತೆಯಿದೆ. ಈ ಹಿನ್ನೆಲೆಯಲ್ಲಿ ಈ ಕೇಸನ್ನು ಸಿಬಿಐ ತನಿಖೆಗೆ…

43 mins ago

ಮುಡಾ ಪ್ರಕರಣ ಸಿವಿಲ್ ಮ್ಯಾಟ್ರೂ ಎಂದ ಗೃಹ ಸಚಿವ ಜಿ.ಪರಮೇಶ್ವರ್

ತುಮಕೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಮೈಸೂರು ಮುಡಾ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಹೀಗಾಗಿ ಈ ವಿಚಾರ…

1 hour ago

ಸಿಎಂ ವಿರುದ್ಧ ಅವಹೇಳನಕಾರಿ ಹೇಳಿಕೆ: ಶಾಸಕ ಯತ್ನಾಳ್ ವಿರುದ್ಧ ಎಫ್ಐಆರ್ ದಾಖಲು

ವಿಜಯಪುರ: ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಜಮೀರ್‌ ಅಹಮದ್‌ ಖಾನ್‌ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪದಡಿ ಬಿಜೆಪಿ…

2 hours ago

ಮುಡಾ ಕಚೇರಿಯಲ್ಲಿ ಇಂದು ಕೂಡ ಸಾರ್ವಜನಿಕರ ಕೆಲಸಗಳಿಗೆ ಬ್ರೇಕ್

ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ. ಅಧಿಕಾರಿಗಳು ಇಂದು ಕೂಡ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದು, ಸಾರ್ವಜನಿಕರ ಕೆಲಸಗಳಿಗೆ ಬ್ರೇಕ್‌ ಹಾಕಲಾಗಿದೆ.…

2 hours ago

ಬಿಜೆಪಿ ಮುಖಂಡ ರಘು ಕೌಟಿಲ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು

ಮೈಸೂರು: ಕಾನೂನು ಬಾಹಿರವಾಗಿ ಸಿ.ಎ ನಿವೇಶನ ಪಡೆದಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ರಘು ಕೌಟಿಲ್ಯ ವಿರುದ್ಧ ನಾಗೇಂದ್ರ ಎಂಬುವವರು…

2 hours ago

ಕಪಿಲಾ ನದಿಗೆ ಮತ್ತೊಂದು ಸೇತುವೆ

ನಂಜನಗೂಡು: ವರುಣ ಕ್ಷೇತ್ರ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರವನ್ನು ಸಂಪರ್ಕಿಸಲು ಕಪಿಲಾ ನದಿಗೆ ಮತ್ತೊಂದು ಸೇತುವೆ ಮಂಜೂರಾಗಿದೆ. ತಾಲ್ಲೂಕಿನ ನಂಜನಗೂಡು-ಹುಲ್ಲಹಳ್ಳಿ…

2 hours ago