ಕ್ರೀಡೆ

IND vs ENG 2nd test: ಜೈಸ್ವಾಲ್‌ ದ್ವಿಶತಕ; 396ಕ್ಕೆ ಟೀಂ ಇಂಡಿಯಾ ಆಲ್‌ಔಟ್‌

ಆಂಧ್ರ ಪ್ರದೇಶ: ಇಲ್ಲಿನ ವಿಶಾಖಪಟ್ಟಣಂನ ವೈ.ಎಸ್‌ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಜೈಸ್ವಾಲ್‌ ಅವರ ದ್ವಿಶತಕ ಬಲದಿಂದ ಟೀಮ್ ಇಂಡಿಯಾ 396 ರನ್‌ ಕಲೆ ಹಾಕಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಮ್ ಇಂಡಿಯಾಗೆ ಯುವ ಎಡಗೈ ದಾಂಡಿಗ ಯಶಸ್ವಿ ಜೈಸ್ವಾಲ್ ಭರ್ಜರಿ ಆರಂಭ ಒದಗಿಸಿದ್ದರು. ಭಾರತ ತಂಡ ನಾಯಕನ ಜೊತೆಗೂಡಿ ಇನಿಂಗ್ಸ್​ ಆರಂಭಿಸಿದ ಜೈಸ್ವಾಲ್ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ್ದರು. ಆದರೆ ಮತ್ತೊಂದೆಡೆ ಕೇವಲ 14 ರನ್​ಗಳಿಸಿ ರೋಹಿತ್ ಶರ್ಮಾ ಔಟಾದರು.

ಆ ಬಳಿಕ ಬಂದ ಶುಭ್​ಮನ್ ಗಿಲ್ 34 ರನ್ ಬಾರಿಸಿದರೆ, ಶ್ರೇಯಸ್ ಅಯ್ಯರ್ 27 ರನ್ ಕಲೆಹಾಕಿದರು. ಇನ್ನು ರಜತ್ ಪಾಟಿದಾರ್ 32, ಅಕ್ಷರ್ ಪಟೇಲ್ 27 ರನ್​ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿದರು. ಇದರ ಬೆನ್ನಲ್ಲೇ ಶ್ರೀಕರ್ ಭರತ್ (17) ಕೂಡ ವಿಕೆಟ್ ಒಪ್ಪಿಸಿದರು.

ಇದಾಗ್ಯೂ ಮತ್ತೊಂದೆಡೆ ಕ್ರೀಸ್ ಕಚ್ಚಿ ನಿಂತಿದ್ದ ಯಶಸ್ವಿ ಜೈಸ್ವಾಲ್ 151 ಎಸೆತಗಳಲ್ಲಿ ಭರ್ಜರಿ ಶತಕ ಪೂರೈಸಿ ಟೀಮ್ ಇಂಡಿಯಾಗೆ ಆಸರೆಯಾಗಿ ನಿಂತರು. ಅಲ್ಲದೆ ಮೊದಲ ದಿನದಾಟದ ಅಂತ್ಯಕ್ಕೆ ಜೈಸ್ವಾಲ್ 179 ರನ್ ಬಾರಿಸಿ ಭಾರತ ತಂಡ ಮೊತ್ತವನ್ನು 6 ವಿಕೆಟ್ ನಷ್ಟಕ್ಕೆ 336 ಕ್ಕೆ ತಂದು ನಿಲ್ಲಿಸಿದರು.

ಇಂದು ತಮ್ಮ ಅದೇ ಫಾರ್ಮ್‌ ಮುಂದುವರಿಸಿದ ಜೈಸ್ವಾಲ್‌ 290 ಎಸೆತಗಳಲ್ಲಿ 19 ಬೌಂಡರಿ ಮತ್ತು 7 ಸಿಕ್ಸರ್‌ ಸಹಿತ 209 ಬಾರಿಸಿ ತಂಡಕ್ಕೆ ಆಸರೆಯಾದರು. ಅಶ್ವಿನ್ (20) ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಜಸ್​ಪ್ರೀತ್ ಬುಮ್ರಾ 6 ರನ್​ಗಳಿಸಿ ರೆಹಾನ್ ಅಹ್ಮದ್ ಎಸೆತದಲ್ಲಿ ಕ್ಯಾಚ್ ನೀಡಿದರು. ಇನ್ನು ಕೊನೆಯ ವಿಕೆಟ್​ ಆಗಿ ಮುಖೇಶ್ ಕುಮಾರ್ (0) ಔಟಾದರು. ಈ ಮೂಲಕ ಟೀಮ್ ಇಂಡಿಯಾ ತನ್ನ ಮೊದಲ ಇನಿಂಗ್ಸ್​ನಲ್ಲಿ ಬರೋಬ್ಬರಿ​ 396 ರನ್​ ಕಲೆಹಾಕಿ ಆಲೌಟ್ ಆಯಿತು.

ಇತ್ತ ಇಂಗ್ಲೆಂಡ್‌ ಪರ ಆಂಡರ್‌ಸನ್‌ 47/3, ಬಷೀರ್‌ 138/3 ಮತ್ತು ರೆಹನ್‌ ಅಹ್ಮದ್‌ 65/3 ವಿಕೆಟ್‌ ಪಡೆದು ಮಿಂಚಿದರು.

andolanait

Recent Posts

ಕಾಂಗ್ರೆಸ್‌ ಸರ್ಕಾರ ರೈತರ ಪರವಾಗಿದೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರ ನಿಯೋಗದೊಂದಿಗೆ ಸಭೆ ನಡೆಸಿ ಕಾಂಗ್ರೆಸ್‌ ಸರ್ಕಾರ ರೈತರ…

4 mins ago

ಹಾಸನಕ್ಕೆ ಎಚ್‌ಡಿಡಿ ಕುಟುಂಬ ನೀಡಿದ ಕೊಡುಗೆ ಏನೆಂಬ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ ಎಚ್‌ಡಿಕೆ

ಹಾಸನ: ಈ ಜಿಲ್ಲೆಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬ ನೀಡಿದ ಕೊಡುಗೆ ಏನು ಎಂದು ಕೇಳಿದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ…

38 mins ago

ಫೇಕ್‌ ಎನ್‌ಕೌಂಟರ್‌: ಪ್ರಹ್ಲಾದ್‌ ಜೋಶಿ ಹೇಳಿಕೆಗೆ ಎಚ್.ಸಿ.ಮಹದೇವಪ್ಪ ತಿರುಗೇಟು

ಮೈಸೂರು: ಎಂಎಲ್‌ಸಿ ಸಿ.ಟಿ.ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಫೇಕ್‌ ಎನ್‌ಕೌಂಟರ್‌ ಮಾಡಲು ಯತ್ನಿಸಿದ್ದರು ಎಂಬ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ…

1 hour ago

ಗ್ರೇಟರ್ ಮೈಸೂರು ಯೋಜನೆಗೆ ನವೀನ ಕಾರ್ಯತಂತ್ರ ಅಗತ್ಯ

50 ವರ್ಷಗಳ ದೂರದೃಷ್ಟಿಯ ಡಿಪಿಆರ್ ಸಿದ್ಧ ಆಗಬೇಕು • ಭಾಮಿ ವಿ ಶೆಣೈ, ಮೈಸೂರು ಗ್ರಾಹಕರ ಪರಿಷತ್ ಮೈಸೂರು ಜಿಲ್ಲಾ…

2 hours ago

ಸಿ.ಟಿ.ರವಿ ಪ್ರಕರಣ; ಬಿಜೆಪಿಗೆ ಮಹತ್ವದ ಸಲಹೆ ಕೊಟ್ಟ ಎಚ್.ಡಿ.ಕುಮಾರಸ್ವಾಮಿ

ಹಾಸನ: ಸಿ.ಟಿ.ರವಿ ಪ್ರಕರಣದಲ್ಲಿ ಬೆಳಗಾವಿ ಪೊಲೀಸರು ನಡೆದುಕೊಂಡ ರೀತಿಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು;…

2 hours ago

ಕೈಗಾರಿಕಾ ವಲಯದ ಪ್ರಸ್ತಾವನೆಗಳಿಗೆ ಸಿಎಂ ಅನುಮೋದನೆ

ಬೆಂಗಳೂರು:  ರಾಜ್ಯದ ವಿವಿಧ ಕೈಗಾರಿಕಾ ವಲಯಗಳಲ್ಲಿ ಒಟ್ಟು ರೂ. 9,823 ಕೋಟಿ ರೂ. ಮೊತ್ತದ 10 ಪ್ರಸ್ತಾವನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ…

2 hours ago