ಕ್ರೀಡೆ

ಟಿ20 ವಿಶ್ವಕಪ್‌: ಸ್ಟಾಪ್ ಕ್ಲಾಕ್ ಕಡ್ಡಾಯ ಸೇರಿ ಹೊಸ ನಿಯಮಗಳು ಜಾರಿ

ದುಬೈ: ಟಿ20 ವಿಶ್ವಕಪ್ ಟೂರ್ನಿಗೆ ಸಿದ್ಧತೆ ಆರಂಭಿಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಸೀಮಿತ ಓವರ್ ಕ್ರಿಕೆಟ್ ಮಾದರಿಯಲ್ಲಿ ಮಹತ್ತರ ಬದಲಾವಣೆಗಳನ್ನು ಜಾರಿಗೆ ತಂದಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಐಸಿಸಿ ಶುಕ್ರವಾರ ದುಬೈನಲ್ಲಿ ನಡೆದ ವಾರ್ಷಿಕ ಮಂಡಳಿ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಅವುಗಳಲ್ಲಿ ಒಂದಾದ ವಿಶ್ವಕಪ್ ಪಂದ್ಯಾವಳಿಗೆ ಜಂಟಿ ವಿಜೇತರನ್ನು ಘೋಷಿಸುವುದನ್ನು ತಪ್ಪಿಸಲು ಸೆಮಿಫೈನಲ್ ಮತ್ತು ಫೈನಲ್‌ಗೆ ಮೀಸಲು ದಿನಗಳನ್ನು ಇರಿಸಲು ನಿರ್ಧರಿಸಿದೆ.

ಐಸಿಸಿ ಸಭೆಯಲ್ಲಿ ಮಹತ್ವದ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಜೊತೆಗೆ ೨೦೨೪ರಿಂದ ಪ್ರಾರಂಭವಾಗುವ ಟಿ-೨೦ ವಿಶ್ವಕಪ್ ಸೀಮಿತ-ಓವರ್‌ಗಳ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಓವರ್‌ಗಳ ನಡುವೆ ಸ್ಟಾಪ್-ಕ್ಲಾಕ್ ಅನ್ನು ಬಳಸುವುದನ್ನು ಕಡ್ಡಾಯಗೊಳಿಸಿದೆ.

ಡಿಸೆಂಬರ್ ೨೦೨೩ರಲ್ಲಿ ಪುರುಷರ ಸೀಮಿತ-ಓವರ್‌ಗಳ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಐಸಿಸಿ ಸ್ಟಾಪ್ ಕ್ಲಾಕ್ ನಿಯಮವನ್ನು ಪ್ರಾಯೋಗಿಕ ಆಧಾರದ ಮೇಲೆ ಪರಿಚಯಿಸಿತ್ತು. ಈ ನಿಯಮದಿಂದಾಗಿ ಪ್ರತಿ ಪಂದ್ಯಕ್ಕೆ ಸರಿಸುಮಾರು ೨೦ ನಿಮಿಷಗಳನ್ನು ಉಳಿಸಿದಂತಾಗುತ್ತದೆ ಎಂದು ದತ್ತಾಂಶಗಳು ತೋರಿಸಿದೆ.

ಇದೀಗ ಈ ಸ್ಟಾಪ್ ಕ್ಲಾಕ್ ನಿಯಮವನ್ನು ಐಸಿಸಿ ಅಧಿಕೃತವಾಗಿ ಜಾರಿಗೆ ತಂದಿದ್ದು, ಟಿ೨೦ ವಿಶ್ವಕಪ್‌ನಿಂದಲೇ ಇದು ಜಾರಿಯಾಗಲಿದೆ.

ಈ ನಿಯಮಕ್ಕೆ ಕೆಲವು ವಿನಾಯಿತಿಗಳಿದ್ದು, ಗಡಿಯಾರವು ಮೊದಲೇ ಪ್ರಾರಂಭಿಸಿದ್ದರೆ ಕೆಲವು ಸಂದರ್ಭಗಳಲ್ಲಿ ರದ್ದುಗೊಳಿಸಬಹುದು. ಅವುಗಳೆಂದರೆ ಓವರ್‌ನ ಸಮಯದಲ್ಲಿ ಹೊಸ ಬ್ಯಾಟರ್ ಕ್ರೀಸ್‌ಗೆ ಬಂದಾಗ, ಪಾನೀಯಗಳ ವಿರಾಮದ ವೇಳೆ, ಬ್ಯಾಟರ್ ಅಥವಾ ಫೀಲ್ಡರ್‌ಗೆ ಗಾಯವಾದ ವೇಳೆ ಕ್ರೀಸ್‌ಗೆ ವೈದ್ಯರು ಬಂದಾಗ, ಅಂಪೈರ್‌ಗಳು ಅಧಿಕೃತಗೊಳಿಸಿದಾಗ ಮತ್ತು ಫೀಲ್ಡಿಂಗ್ ತಂಡದ ನಿಯಂತ್ರಣಕ್ಕೆ ಮೀರಿದ ಯಾವುದೇ ಸ್ಥಿತಿಯಾದರೆ ಅಂದರೆ ಚೆಂಡು ಬದಲಾವಣೆಯಂತಹ ಸಮಯದಲ್ಲಿ ಈ ನಿಯಮ ಅನ್ವಯವಾಗುವುದಿಲ್ಲ.

ಸ್ಟಾಪ್ ಕ್ಲಾಕ್ ಹೇಗೆ ಕಾರ್ಯ ನಿರ್ವಹಿಸುತ್ತದೆ: ಸ್ಟಾಪ್ ಕ್ಲಾಕ್ ನಿಯಮದ ಪ್ರಕಾರ, ಫೀಲ್ಡಿಂಗ್ ತಂಡವು ಹಿಂದಿನ ಓವರ್‌ನ ಅಂತ್ಯದ ನಂತರ ೬೦ ಸೆಕೆಂಡುಗಳಲ್ಲಿ ಹೊಸ ಓವರ್ ಅನ್ನು ಪ್ರಾರಂಭಿಸಬೇಕು. ಇದು ೬೦ ಸೆಕೆಂಡ್‌ನಿಂದ ಶೂನ್ಯಕ್ಕೆ ಎಣಿಸುವ ಎಲೆಕ್ಟ್ರಾನಿಕ್ ಗಡಿಯಾರವನ್ನು ಓವರ್ ಬಳಿಕ ಡಿಸ್‌ಪ್ಲೇ ಮೇಲೆ ಹಾಕಲಾಗುತ್ತದೆ. ಗಡಿಯಾರದ ಪ್ರಾರಂಭವನ್ನು ನಿರ್ಧರಿಸುವ ಜವಾಬ್ದಾರಿಯನ್ನು ಮೂರನೇ ಅಂಪೈರ್ ಹೊಂದಿರುತ್ತಾರೆ. ಹಿಂದಿನ ಓವರ್‌ನ ಅಂತ್ಯದ ನಂತರ ನಿಗದಿತ ೬೦ ಸೆಕೆಂಡ್‌ಗಳ ಒಳಗೆ ತಮ್ಮ ಮುಂದಿನ ಓವರ್‌ನ ಮೊದಲ ಎಸೆತವನ್ನು ಬೌಲ್ ಮಾಡಲು ಸಿದ್ಧರಾಗಬೇಕಾಗುತ್ತದೆ.

ಒಂದು ವೇಳೆ ೬೦ ಸೆಕೆಂಡ್ ಒಳಗೆ ಬೌಲಿಂಗ್ ಮಾಡದಿದ್ದಲ್ಲಿ ಪ್ರತಿ ವಿಳಂಬಕ್ಕೂ ಸಹ ಐದು ರನ್‌ಗಳ ಪೆನಾಲ್ಟಿ ಹೊರೆ ಬೀಳಲಿದೆ. ಈ ಸ್ಟಾಪ್ ಕ್ಲಾಕ್ ನಿಯಮ ಟಿ೨೦ ವಿಶ್ವಕಪ್‌ನಿಂದ ಜಾರಿಗೆ ಬರಲಿದೆ. ಅಲ್ಲದೇ ಈ ನಿಯಮವನ್ನು ಶಾಶ್ವತಗೊಳಿಸಲಾಗಿದ್ದು, ಮುಂಬರುವ ಟಿ-೨೦ ಮತ್ತು ಏಕದಿನ ಮಾದರಿ ಕ್ರಿಕೆಟ್‌ಗೆ ಇದು ಅನ್ವಯವಾಗುತ್ತದೆ ಎಂದು ಐಸಿಸಿ ತಿಳಿಸಿದೆ.

ವಾಸು ವಿ ಹೊಂಗನೂರು

ಮೂಲತಃ ಚಾಮರಾಜನಗರ ಜಿಲ್ಲೆಯ ಹೊಂಗನೂರು ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಪದವಿಯಲ್ಲಿ ಪತ್ರಿಕೋದ್ಯಮ ವಿಭಾಗ ಆಯ್ದುಕೊಂಡು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2020ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಪತ್ರಿಕೋದ್ಯಮದಲ್ಲಿ 3 ವರ್ಷಗಳ ಅನುಭವವಿದ್ದು, ಕಳೆದ ಒಂದು ವರ್ಷದಿಂದ ಆಂದೋಲನ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ 6 ತಿಂಗಳಿನಿಂದ ಆಂದೋಲನ ಡಿಜಿಟಲ್‌ ವಿಭಾಗದಲ್ಲಿ ತೊಡಗಿಸಿಕೊಂಡಿದ್ದೇನೆ. ಕ್ರಿಕೆಟ್‌ ಮೇಲೆ ಎಲ್ಲಿಲ್ಲದ ಪ್ರೀತಿಯಿದ್ದು, ಪ್ರವಾಸ, ಇತಿಹಾಸ ಅಧ್ಯಯನ ಕಡೆ ಒಲವು ಹೆಚ್ಚು. ಪತ್ರಿಕಾ ರಂಗದಲ್ಲಿ ಕ್ರೀಡಾ ವಿಭಾಗದಲ್ಲಿ ಹೆಚ್ಚು ಆಸಕ್ತಿ ಇದೆ‌. ಮೊಬೈಲ್‌ ನಂಬರ್:‌ 9620318288

Recent Posts

ಶಿವಾನಂದಪುರಿ ಶ್ರೀಗಳಿಗೆ ಕನಕ ಭವನ ನಿರ್ವಹಣೆ ಹೊಣೆ

ಮಂಜು ಕೋಟೆ ಕುರುಬ ಸಮಾಜದ ಎರಡು ಬಣಗಳ ನಡುವೆ ಉಂಟಾಗಿದ್ದ ಗೊಂದಲ; ಸಿಎಂ ಸಿದ್ದರಾಮಯ್ಯ ಸೂಚನೆಯಂತೆ ಕ್ರಮ ಎಚ್.ಡಿ.ಕೋಟೆ: ಮುಖ್ಯಮಂತ್ರಿ…

58 mins ago

ರಿಂಗ್ ರಸ್ತೆಯಲ್ಲಿ ಸಿಗ್ನಲ್ ಲೈಟ್‌ಗಳ ಅಳವಡಿಕೆ

೩೫ ಕಡೆಗಳಲ್ಲಿ ಹೈಬ್ರಿಡ್ ಸಿಗ್ನಲ್ ಲೈಟ್; ವಾಹನ ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸ್ ಇಲಾಖೆ ಕ್ರಮ ಮೈಸೂರು: ಭವಿಷ್ಯದಲ್ಲಿ ರಿಂಗ್…

1 hour ago

ಹುಲಿ ಸೆರೆಗೆ ಬಂತು ಥರ್ಮಲ್ ಡ್ರೋನ್‌

ಕಾಡಂಚಿನ ವ್ಯಾಘ್ರ ಸೆರೆಗೆ ಹಗಲು-ರಾತ್ರಿ ಕಾರ್ಯಾಚರಣೆ ಚಿರತೆ ಸೆರೆಗೆ ತಂತ್ರಜ್ಞಾನ ಬಳಕೆ ಮಾಡಿದ್ದ ಅರಣ್ಯ ಇಲಾS ಮೈಸೂರು: ಕಳೆದ ಎರಡು…

1 hour ago

ಕೃಷಿ ಮೇಳಕ್ಕೆ 10 ಲಕ್ಷ ಜನ ಭೇಟಿ

ಹೇಮಂತ್‌ಕುಮಾರ್ ದಾಖಲೆ ಸೃಷ್ಟಿ ; ಹಲವು ಅಚ್ಚರಿಗಳ ತಾಣವಾದ ಮೂರು ದಿನಗಳ ಮೇಳ  ಮಂಡ್ಯ: ಮೂರು ದಿನಗಳ ಕಾಲ ವಿ.ಸಿ.ಫಾರಂನಲ್ಲಿ…

1 hour ago

ಸೆಲ್ಫಿ ವಿಡಿಯೋ ಮಾಡಿ ಆಟೋ ಚಾಲಕ ಆತ್ಮಹತ್ಯೆಗೆ ಯತ್ನ

ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…

11 hours ago