ಕ್ರೀಡೆ

ನಾನು ಯಾರಿಗೂ ಅಗೌರವ ತೋರಿಲ್ಲ : ಮಿಚೆಲ್‌ ಸ್ಪಷ್ಟನೆ

ನವದೆಹಲಿ : 2023 ರ ವರ್ಲ್ಡ್‌ ಕಪ್‌ ಟ್ರೋಫಿ ಮೇಲೆ ಕಾಲಿಟ್ಟು ಕ್ರಿಕೆಟ್‌ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದ ಆಸ್ಟ್ರೇಲಿಯಾ ತಂಡದ ಆಟಗಾರ ಮಿಚೆಲ್‌ ಮಾರ್ಷ್‌ ಇದೀಗ ಸ್ಪಷ್ಟನೆ ನೀಡಿದ್ದಾರೆ.

ನಾನು ಯಾರಿಗೂ ಕೂಡ ಅಗೌರವ ತೋರಿಲ್ಲ, ಅದರ ಬಗ್ಗೆ ಹೆಚ್ಚಿಗೆ ಯೋಚನೆ ಮಾಡಿಲ್ಲ. ಸಾಕಷ್ಟು ಜನ ಆ ಫೋಟೊ ವೈರಲ್‌ ಆಗಿರುವ ವಿಚಾರವನ್ನು ನನ್ನ ಗಮನಕ್ಕೆ ತಂದಿದ್ದರು. ನಾನು ಅದನ್ನು ನೋಡಿರಲಿಲ್ಲ. ಅದರಲ್ಲಿ ಟೀಕಿಸುವ ವಿಚಾರ ಇಲ್ಲವೇ ಇಲ್ಲ ಎಂದಿದ್ದಾರೆ.

ಆರ್ ಟಿಐ ಕಾರ್ಯಕರ್ತ ಪಂಡಿತ್‌ ಕೇಶವ್‌ ಅವರು, ಮಿಚೆಲ್‌ ಮಾರ್ಷ್‌ ಅವರು ವರ್ಲ್ಡ್‌ ಕಪ್‌ ಟ್ರೋಫಿ ಮೇಲೆ ಕಾಲಿಟ್ಟು ಕುಳಿತದ್ದು ಭಾರತೀಯ ಕ್ರಿಕೆಟ್‌ ತಂಡದ ಅಭಿಮಾನಿಗಳ ಭಾವನೆಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಉತ್ತರ ಪ್ರದೇಶದ ಆಲಿಗಢದಲ್ಲಿ ಎಫ್‌ಐಆರ್‌ ದಾಖಲಿಸಿದ್ದರು.

ನವೆಂಬರ್‌ 19 ರಂದು ನಡೆದ ವರ್ಲ್ಡ್‌ ಕಪ್‌ 2023ರಲ್ಲಿ ಆಸ್ಟ್ರೇಲಿಯಾ ತಂಡ ಭಾರತವನ್ನು ಬಗ್ಗುಬಡಿದು ಗೆಲುವಿನ ನಗೆ ಬೀರಿತ್ತು. ವರ್ಲ್ಡ್‌ ಕಪ್‌ಗೆ ಆಸ್ಟ್ರೇಲಿಯಾ ಗೆಲುವಿನ ಮುತ್ತಿಟ್ಟ ಬೆನ್ನಲ್ಲೇ ತಂಡದ ಆಟಗಾರ ಮಿಚೆಲ್‌ ಮಾರ್ಷ್‌, ವರ್ಲ್ಡ್‌ ಕಪ್‌ ಟ್ರೋಫಿ ಮೇಲೆ ಕಾಲಿಟ್ಟು ಕುಳಿತಿದ್ದದ್ದು ಜನರ ಗೆಂಗಣ್ಣಿಗೆ ಗುರಿಯಾಗಿತ್ತು. ಟ್ರೋಫಿ ಮೇಲೆ ಕಾಲಿಟ್ಟು ಕುಳಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ, ಮಿಚೆಲ್‌ ಅವರ ನಡೆಯನ್ನು ಜನ ತೀವ್ರವಾಗಿ ಖಂಡಿಸಿ, ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು.

ವೈರಲ್‌ ಆಗಿದ್ದ ಫೋಟೋದಲ್ಲಿ ಮಿಚೆಲ್‌ ಅವರು ಎರಡೂ ಕಾಲುಗಳನ್ನು ವರ್ಲ್ಡ್‌ಕಪ್‌ ಟ್ರೋಫಿಯ ಮೇಲಿಟ್ಟು ಯಾವುದೋ ಪಾನೀಯವನ್ನು ಕೈಯಲ್ಲಿ ಹಿಡಿದುಕೊಂಡಿದ್ದರು. ಫೋಟೋವನ್ನು ತಂಡದ ನಾಯಕ ಕಮ್ಮಿನ್ಸ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದರು. ಇದನ್ನು ಗಮನಿಸಿದ ನೆಟ್ಟಿಗರು ಮಿಚೆಲ್‌ ಅವರು ವರ್ಲ್ಡ್‌ಕಪ್‌ ಗೆ ಅಗೌರವ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಫೋಟೋ ಬಗ್ಗೆ ಸಾರ್ವಜನಿಕ ವಲಯದಲ್ಲಿ ಖಂಡನೆ ವ್ಯಕ್ತವಾಗುತ್ತಿದ್ದಂತೆ ಕಮ್ಮಿನ್ಸ್‌ ಅವರು ತಮ್ಮ ಪೊಸ್ಟನ್ನು ಡಿಲೀಟ್‌ ಮಾಡಿದ್ದರು.

lokesh

Recent Posts

ಬೋನಿಗೆ ಬಿದ್ದ ಗಂಡು ಚಿರತೆ : ಗ್ರಾಮಸ್ಥರ ಆತಂಕ ದೂರ

ತಿ.ನರಸೀಪುರ : ತಾಲ್ಲೂಕಿನ ಬೂದಹಳ್ಳಿ ಗ್ರಾಮದಲ್ಲಿ ಗುರುವಾರ 6 ವರ್ಷದ ಗಂಡು ಚಿರತೆಯೊಂದು ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಸಿಕ್ಕಿ ಬಿದ್ದಿದೆ.…

2 mins ago

ಗೋವಾ ಅವಘಡ : ಭಾರತದಿಂದ ಪರಾರಿಯಾದ ಲುತ್ರಾ ಸೋದರರು ಥಾಯ್ಲೆಂಡ್‌ನಲ್ಲಿ ವಶಕ್ಕೆ

ಪಣಜಿ : ಗೋವಾ ಬೆಂಕಿ ಅವಘಡ ಪ್ರಕರಣದಲ್ಲಿ ಭಾರತದಿಂದ ಪರಾರಿಯಾಗಿದ್ದ ನೈಟ್ ಕ್ಲಬ್ ಮಾಲೀಕರಾದ ಸೌರಭ್ ಲುತ್ರಾ ಮತ್ತು ಗೌರವ್…

41 mins ago

ಡೀಮ್ಡ್‌ ಅರಣ್ಯ ಪ್ರದೇಶ ಗುರುತಿಸುವಿಕೆಗೆ ಸಮಿತಿ ರಚನೆ : ಈಶ್ವರ ಖಂಡ್ರೆ

ಬೆಳಗಾವಿ : ಸರ್ಕಾರ ರಾಜ್ಯದಲ್ಲಿ 2022ರಲ್ಲಿ ಒಟ್ಟು 3,30,000 ಹೆಕ್ಟೇರ್ ಪರಿಭಾವಿತ (ಡೀಮ್ಡ್) ಅರಣ್ಯ ಪ್ರದೇಶ ಇರುವುದಾಗಿ ಸರ್ವೋಚ್ಛ ನ್ಯಾಯಾಲಯಕ್ಕೆ…

1 hour ago

ಕೆಪಿಟಿಸಿಎಲ್ : 448 ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್‌ಗಳ ನೇಮಕ

ಬೆಂಗಳೂರು : ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್ ಹುದ್ದೆಗಳಿಗೆ ಪಾರದರ್ಶಕವಾಗಿ ಕೌನ್ಸೆಲಿಂಗ್ ನಡೆಸಿ ಕರ್ನಾಟಕ ವಿದ್ಯುತ್ ಪ್ರಸರಣ…

1 hour ago

ಕ್ರೀಡಾ ನೇಮಕಾತಿ ಮೀಸಲಾತಿ ಅನುಷ್ಠಾನ : ಸಿಎಂ ಘೋಷಣೆ

ಬೆಳಗಾವಿ : ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ದಿಸೆಯಲ್ಲಿ ಅರಣ್ಯ ಇಲಾಖೆಯಲ್ಲಿ ಶೇ. 3 ಪೊಲೀಸ್ ಇಲಾಖೆಯಲ್ಲಿ ಶೇ.3 ಹಾಗೂ ವಿವಿಧ…

1 hour ago

ಹಂತ ಹಂತವಾಗಿ ಖಾಲಿ ಹುದ್ದೆಗಳ ಭರ್ತಿ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಳಗಾವಿ : ಆರ್ಥಿಕ ಇಲಾಖೆಯ ಅನುಮತಿ ಪಡೆದು ಖಾಲಿ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.…

1 hour ago