ಕ್ರೀಡೆ

ಇನ್‍ಸ್ಪೈರ್ ಇನ್‍ಸ್ಟಿಟ್ಯೂಟ್ ಆಫ್ ಸ್ಪೋರ್ಟ್ ವತಿಯಿಂದ ‘‘ಐಐಎಸ್ ಸಿಖಾಯೇಗ’ ಆರಂಭ

ಬೆಂಗಳೂರು : ಭಾರತದ ಮುಂದಿನ ಒಲಿಂಪಿಕ್‌ ಚಾಂಪಿಯನ್ನರನ್ನು ಬೆಳೆಸುವ ಉದ್ದೇಶದಿಂದ ನಿರ್ಮಿಸಲಾದ ವಿಶ್ವಮಟ್ಟದ ಹೈ-ಪರ್ಫಾರ್ಮೆನ್ಸ್ ಕೇಂದ್ರವಾದ ಇನ್‍ಸ್ಪೈರ್ ಇನ್‍ಸ್ಟಿಟ್ಯೂಟ್ ಆಫ್ ಸ್ಪೋರ್ಟ್ (IIS) ಇಂದು ತನ್ನ ಹೊಸ ಡಿಜಿಟಲ್ ಕಲಿಕಾ ವೇದಿಕೆಯನ್ನು ‘IIS Sikhaega’ ಎಂಬ ಹೆಸರಿನಲ್ಲಿ ಪ್ರಾರಂಭಿಸಿದೆ. ಈ ಯೋಜನೆಯ ಮೂಲಕ ಕ್ರೀಡಾಪಟುಗಳು ತಮ್ಮ ಕೈಬೆರಳ ತುದಿಯಲ್ಲಿ ವಿಶ್ವಮಟ್ಟದ ಕ್ರೀಡಾ ಜ್ಞಾನವನ್ನು ಪಡೆಯಲು ಸಾಧ್ಯವಾಗುತ್ತದೆ.

ಸುಲಭವಾಗಿ ಅರ್ಥವಾಗುವ ಚಿಕ್ಕ-ಚಿಕ್ಕ ವೀಡಿಯೊಗಳ ಮೂಲಕ IIS ನ ತರಬೇತುದಾರರು, ಕೋಚ್‌ಗಳು, ತಜ್ಞರು ಹಾಗೂ ಯುವ ಕ್ರೀಡಾಪಟುಗಳ ಅನುಭವವನ್ನು ಹಂಚಿಕೊಳ್ಳುತ್ತಾರೆ. ಫಿಟ್‍ನೆಸ್‌ನ ಮೂಲಭೂತಗಳಿಂದ ಹಿಡಿದು ಹೈ-ಪರ್ಫಾರ್ಮೆನ್ಸ್ ಕ್ರೀಡೆಯ ಸೂಕ್ಷ್ಮ ಅಂಶಗಳವರೆಗೂ ತಿಳಿಯಲು IIS Sikhaega ಕ್ರೀಡಾಪಟುಗಳಿಗೆ ಮಾರ್ಗದರ್ಶನ ಒದಗಿಸುತ್ತದೆ.ತಿ ತಿಂಗಳು ಮೂರು ವೀಡಿಯೊಗಳನ್ನು ಇನ್‍ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು, ಕ್ರೀಡಾಪಟಗಳಿಗೆ ಇದು ಉಪಯುಕ್ತವಾಗಲಿದೆ.
ಈ ಬಗ್ಗೆ ಮಾತನಾಡಿದ ಇನ್‍ಸ್ಪೈರ್ ಇನ್‍ಸ್ಟಿಟ್ಯೂಟ್ ಆಫ್ ಸ್ಪೋರ್ಟ್ ಅಧ್ಯಕ್ಷೆ ಮನೀಷಾ ಮಲ್ಹೋತ್ರಾ “ಭಾರತದ ಎಲ್ಲಾ ಕ್ರೀಡಾಪಟುಗಳಿಗೆ IIS ನ ಪರಿಣಿತಿ ಮತ್ತು ತರಬೇತಿ ತಲುಪುವುದು ನಮ್ಮ ಧ್ಯೇಯದ ಒಂದು ಭಾಗ. IIS Sikhaega ಮೂಲಕ, ನಮ್ಮ ಕೋಚ್‌ಗಳು, ಸೌಲಭ್ಯಗಳು ಹಾಗೂ ತಾಂತ್ರಿಕ ತಿಳುವಳಿಕೆಯನ್ನು IIS ಹೊರಗಿನ ಯುವಕರಿಗೂ ತಲುಪಿಸಲು ಬಯಸುತ್ತೇವೆ ಎಂದರು’
ಈ ಯೋಜನೆಯ ಮೂಲಕ IIS, ತಂತ್ರಜ್ಞಾನ, ಪರಿಣಿತಿ ಮತ್ತು ಲಭ್ಯತೆಯನ್ನು ಒಟ್ಟುಗೂಡಿಸಿ ಭಾರತದ ಮುಂದಿನ ತಲೆಮಾರಿನ ಕ್ರೀಡಾಪಟುಗಳನ್ನು ಬೆಳೆಸುವ ತನ್ನ ಧ್ಯೇಯವನ್ನು ಮತ್ತಷ್ಟು ಬಲಪಡಿಸುತ್ತಿದೆ. IIS Sikhaega ಕೇವಲ ಡಿಜಿಟಲ್ ಪ್ರಾರಂಭವಲ್ಲ – ಇದು ಭಾರತದ ಕ್ರೀಡಾ ಸಂಸ್ಕೃತಿಯನ್ನು ಬಲಪಡಿಸುವತ್ತ ಒಂದು ಹೆಜ್ಜೆ ಆಗಿರಲಿದೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಕಾಲೇಜು ವಿದ್ಯಾರ್ಥಿನಿಯರಿಗೆ ಬಿಸಿಯೂಟ ಶ್ಲಾಘನೀಯ

ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ಇಸ್ಕಾನ್ ಸಂಸ್ಥೆಯ ಅಕ್ಷಯಪಾತ್ರೆ ಫೌಂಡೇಶನ್ ಸಹಯೋಗದೊಂದಿಗೆ…

36 mins ago

ಓದುಗರ ಪತ್ರ: ಪೊಲೀಸ್ ಅಧಿಕಾರಿಯ ಅಸಭ್ಯ ವರ್ತನೆ ಅಕ್ಷಮ್ಯ

ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅವರ ಕಚೇರಿಯಲ್ಲಿ ಸಮವಸ್ತ್ರದಲ್ಲಿದ್ದಾಗಲೇ ಮಹಿಳೆಯೊಂದಿಗೆ ನಡೆಸಿದ್ದಾರೆ ಎನ್ನಲಾದ ರಾಸಲೀಲೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್…

38 mins ago

ಓದುಗರ ಪತ್ರ: ಅಮೆರಿಕ ಅಧ್ಯಕ್ಷರ ಹುಚ್ಚುತನ

ಉತ್ತರ ಅಟ್ಲಾಂಟಿಕ್ ಸಮುದ್ರದಲ್ಲಿ ಇರುವ ವಿಶ್ವದ ಅತಿದೊಡ್ಡ ದ್ವೀಪವಾಗಿರುವ ಹಾಗೂ ಡೆನ್ಮಾರ್ಕ್ ದೇಶದ ನಿಯಂತ್ರಣದಲ್ಲಿರುವ ‘ಗ್ರೀನ್ ಲ್ಯಾಂಡ್’ ದ್ವೀಪವನ್ನು ತನ್ನ…

41 mins ago

ಕಾಡ್ಗಿಚ್ಚು ತಡೆಗೆ ನಾನಾ ಮುಂಜಾಗ್ರತಾ ಕ್ರಮ

ನವೀನ್ ಡಿಸೋಜ ಅರಣ್ಯ ಇಲಾಖೆಯಿಂದ ಬೆಂಕಿ ರೇಖೆ ನಿರ್ಮಾಣ ಕಾರ್ಯ ಚುರುಕು; ಜನರಲ್ಲಿ ಜಾಗೃತಿ ಮೂಡಿಸಲು ಚಿಂತ ಮಡಿಕೇರಿ: ಬೇಸಿಗೆ…

44 mins ago

ಬಾಚಳ್ಳಿ ಆಂಜನೇಯಸ್ವಾಮಿ ಜಾತ್ರೋತ್ಸವಕ್ಕೆ ಸಕಲ ಸಿದ್ಧತೆ

ಎಂ ಯೋಗಾನಂದ್ ಜ.೨೩ರಿಂದ ೨೬ರವರೆಗೆ ಜಾತ್ರಾ ಮಹೋತ್ಸವ; ಮೆರುಗು ನೀಡಲಿರುವ ಗಾಡಿ ಓಡಿಸುವ ಸ್ಪರ್ಧೆ ಹುಣಸೂರು: ತಾಲ್ಲೂಕಿನ ಬಾಚಳ್ಳಿ ಗ್ರಾಮದಲ್ಲಿ…

49 mins ago